ಫೋಕ್ಸ್‌ವ್ಯಾಗನ್ ವೆಬ್‌ಸೈಟ್‌ನಿಂದ ಮೆರೆಯಾಯ್ತು ಪೊಲೊ, ವೆಂಟೊ ಟಿಎಸ್‌ಐ ಮಾದರಿಗಳ ಹೆಸರು

ಫೋಕ್ಸ್‌ವ್ಯಾಗನ್ ಇಂಡಿಯಾ ಕಂಪನಿಯು ತನ್ನ ಟಿಎಸ್‌ಐ ಲಿಮೆಟೆಡ್ ಎಡಿಷನ್ ಪೊಲೊ ಮತ್ತು ವೆಂಟೊ ಮಾದರಿಗಳನ್ನು ಈ ವರ್ಷದ ಮೇ ತಿಂಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು. ಈ ಹೊಸ ಪೊಲೊ ಮತ್ತು ವೆಂಟೊ ಟಿಎಸ್‌ಐ ಆವೃತ್ತಿಗಳು 'ಹೈಲೈನ್ ಪ್ಲಸ್' ಟ್ರಿಮ್ ಅನ್ನು ಆಧರಿಸಿದೆ.

ಫೋಕ್ಸ್‌ವ್ಯಾಗನ್ ವೆಬ್‌ಸೈಟ್‌ನಿಂದ ಮೆರೆಯಾಯ್ತು ಪೊಲೊ, ವೆಂಟೊ ಟಿಎಸ್‌ಐ ಮಾದರಿಗಳ ಹೆಸರು

ಆದರೆ ಇದೀಗ ಫೋಕ್ಸ್‌ವ್ಯಾಗನ್ ಇಂಡಿಯಾ ಕಂಪನಿಯು ಟಿಎಸ್‌ಐ ಲಿಮೆಟೆಡ್ ಎಡಿಷನ್ ಪೊಲೊ ಮತ್ತು ವೆಂಟೊ ಮಾದರಿಗಳ ಹೆಸರನ್ನು ತನ್ನ ವೆಬ್‌ಸೈಟ್‌ನಿಂದ ತೆಗೆದುಹಾಕಿದೆ. ಬಿಡುಗಡೆಗೊಳಿಸಿದ ಕೆಲವೇ ತಿಂಗಳಲ್ಲಿ ಈ ಕಾರುಗಳ ಹೆಸರನ್ನು ತೆಗೆದು ಹಾಕಿರುವುದರ ಹಿಂದಿನ ಕಾರಣ ತಿಳಿದು ಬಂದಿಲ್ಲ. ಫೋಕ್ಸ್‌ವ್ಯಾಗನ್ ಪೋಲೊ ಟಿಎಸ್‌ಐ ಮತ್ತು ವೆಂಟೊ ಟಿಎಸ್‌ಐ ಕಾರುಗಳನ್ನು ಭಾರತದ ಎಕ್ಸ್ ಶೋರೂಂ ಪ್ರಕಾರ ಕ್ರಮವಾಗಿ ರೂ.7.89 ಲಕ್ಷ ಮತ್ತು ರೂ.10.99 ಲಕ್ಷ ಬೆಲೆಯಲ್ಲಿ ಬಿಡುಗಡೆಗೊಳಿಸಿದ್ದರು.

ಫೋಕ್ಸ್‌ವ್ಯಾಗನ್ ವೆಬ್‌ಸೈಟ್‌ನಿಂದ ಮೆರೆಯಾಯ್ತು ಪೊಲೊ, ವೆಂಟೊ ಟಿಎಸ್‌ಐ ಮಾದರಿಗಳ ಹೆಸರು

ಎರಡು ಫೋಕ್ಸ್‌ವ್ಯಾಗನ್ ಪೊಲೊ ಟಿಎಸ್‌ಐ ಮತ್ತು ವೆಂಟೊ ಟಿಎಸ್‌ಐ ಮಾದರಿಗಳು ಸೀಮಿತ ಆವೃತ್ತಿಯಾಗಿದೆ. ಎರಡು ಕಾರುಗಳು ಕಾಸ್ಮೆಟಿಕ್ ನವೀಕರಣಗಳು ಮತ್ತು ಕೆಲವು ಬದಲಾವಣೆಗಳೊಂದಿಗೆ ಬಿಡುಗಡೆಗೊಳಿಸಿದೆ. ಮ್ಯಾಕನಿಕಲ್ ಅಂಶಗಳು ಒಂದೇ ಆಗಿದ್ದು, ಯಾವುದೇ ಬದಲಾವಣೆಗಳನ್ನು ಹೊಂದಿಲ್ಲ.

MOST READ: ಇತಿಹಾಸದ ಪುಟ ಸೇರಿದ ಫೋಕ್ಸ್‌ವ್ಯಾಗನ್ ಎಮಿಯೊ ಕಾರು

ಫೋಕ್ಸ್‌ವ್ಯಾಗನ್ ವೆಬ್‌ಸೈಟ್‌ನಿಂದ ಮೆರೆಯಾಯ್ತು ಪೊಲೊ, ವೆಂಟೊ ಟಿಎಸ್‌ಐ ಮಾದರಿಗಳ ಹೆಸರು

ಕಾಸ್ಮೆಟಿಕ್ ನವೀಕರಣಗಳ ವಿಷಯದಲ್ಲಿ, ಫೋಕ್ಸ್‌ವ್ಯಾಗನ್ ಪೊಲೊ ಟಿಎಸ್‌ಐ ಮತ್ತು ವೆಂಟೊ ಟಿಎಸ್‌ಐ ಸೀಮಿತ ಮಾದರಿಗಳು ಸ್ಪೋರ್ಟಿ ಬಾಡಿ ಗ್ರಾಫಿಕ್ಸ್, ಬ್ಲ್ಯಾಕ್ಡ್-ಔಟ್, ಒಆರ್‌ವಿಎಂಗಳು, ಬ್ಲ್ಯಾಕ್ ರೂಫ್ ಮತ್ತು ಸ್ಪಾಯ್ಲರ್ಗಳು, ಸ್ಟೈಲಿಶ್ ಹನಿಕ್ಯೂಬ್ ಗ್ರಿಲ್ ಮತ್ತು ಪ್ರಯಾಣಿಕರ ಡೋರ್ ನಲ್ಲಿ ದಪ್ಪ ಟಿಎಸ್‌ಐ ಬ್ಯಾಡ್ಜ್ ಗ್ರಾಫಿಕ್ಸ್ ಅನ್ನು ಒಳಗೊಂಡಿವೆ.

ಫೋಕ್ಸ್‌ವ್ಯಾಗನ್ ವೆಬ್‌ಸೈಟ್‌ನಿಂದ ಮೆರೆಯಾಯ್ತು ಪೊಲೊ, ವೆಂಟೊ ಟಿಎಸ್‌ಐ ಮಾದರಿಗಳ ಹೆಸರು

ಹೊಸ ಫೋಕ್ಸ್‌ವ್ಯಾಗನ್ ವೆಂಟೊ ಮತ್ತು ಪೊಲೊ ಮಾದರಿಗಳಲ್ಲಿ 1.0 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 110 ಬಿ‍‍ಹೆಚ್‍‍‍ಪಿ ಪವರ್ ಮತ್ತು 175 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

MOST READ: ಬೆಂಗಳೂರಿನಲ್ಲಿ ಸ್ಪಾಟ್ ಟೆಸ್ಟ್ ನಡೆಸಿದ ನಿಸ್ಸಾನ್ ಮ್ಯಾಗ್ನೆಟ್ ಎಸ್‍ಯುವಿ

ಫೋಕ್ಸ್‌ವ್ಯಾಗನ್ ವೆಬ್‌ಸೈಟ್‌ನಿಂದ ಮೆರೆಯಾಯ್ತು ಪೊಲೊ, ವೆಂಟೊ ಟಿಎಸ್‌ಐ ಮಾದರಿಗಳ ಹೆಸರು

ಪೊಲೊ ಮತ್ತು ವೆಂಟೊ ಮಾದರಿಗಳಳಲ್ಲಿ 6 ಸ್ಫೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ. ಈ ಹಿಂದಿನ ಮಾದರಿಗಳಲ್ಲಿ ಇದ್ದ 7 ಸ್ಪೀಡ್ ಡಿ‍ಎಸ್‍‍ಜಿ ಗೇರ್‍‍ಬಾಕ್ಸ್ ಅನ್ನು ಬದಲಾಯಿಸಿದೆ.

ಫೋಕ್ಸ್‌ವ್ಯಾಗನ್ ವೆಬ್‌ಸೈಟ್‌ನಿಂದ ಮೆರೆಯಾಯ್ತು ಪೊಲೊ, ವೆಂಟೊ ಟಿಎಸ್‌ಐ ಮಾದರಿಗಳ ಹೆಸರು

ಹೊಸ ಪೊಲೊ ಮಾದರಿಯ ಎಂಜಿನ್ ಪ್ರತಿ ಲೀಟರ್ ಗೆ 18.24 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ. ಇನ್ನು ಹೊಸ ವೆಂಟೊ ಮಾದರಿಯು ಪ್ರತಿ ಲೀಟರ್ ಗೆ 17.69 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ.

MOST READ: ಭರ್ಜರಿಯಾಗಿ ಮಾರಾಟವಾಯ್ತು ಫೋಕ್ಸ್‌ವ್ಯಾಗನ್ ಟಿ-ರಾಕ್ ಎಸ್‍ಯುವಿ

ಫೋಕ್ಸ್‌ವ್ಯಾಗನ್ ವೆಬ್‌ಸೈಟ್‌ನಿಂದ ಮೆರೆಯಾಯ್ತು ಪೊಲೊ, ವೆಂಟೊ ಟಿಎಸ್‌ಐ ಮಾದರಿಗಳ ಹೆಸರು

ಇನ್ನು ಫೋಕ್ಸ್‌ವ್ಯಾಗನ್ ಕಂಪನಿಯು ತನ್ನ ಹೊಸ ಟಿಗ್ವಾನ್ ಫೇಸ್‍‍ಲಿಫ್ಟ್ ಎಸ್‍ಯುವಿಯನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಿದೆ. ಟಿಗ್ವಾನ್ ಮಾದರಿಯು ಫೋಕ್ಸ್‌ವ್ಯಾಗನ್ ಕಂಪನಿಯ ಸರಣಿಯಲ್ಲಿರುವ ಜನಪ್ರಿಯ ಎಸ್‍ಯುವಿಗಳಲ್ಲಿ ಒಂದಾಗಿದೆ.

ಫೋಕ್ಸ್‌ವ್ಯಾಗನ್ ವೆಬ್‌ಸೈಟ್‌ನಿಂದ ಮೆರೆಯಾಯ್ತು ಪೊಲೊ, ವೆಂಟೊ ಟಿಎಸ್‌ಐ ಮಾದರಿಗಳ ಹೆಸರು

ಫೋಕ್ಸ್‌ವ್ಯಾಗನ್ ಪೋಲೊ ಟಿಎಸ್‌ಐ ಮತ್ತು ವೆಂಟೊ ಟಿಎಸ್‌ಐ ಕಾರುಗಳು ಕೇವಲ ಕಾಸ್ಮೆಟಿಕ್ ನವೀಕರಣವನ್ನು ಮಾತ್ರ ಹೊಂದಿದೆ. ಪೊಲೊ ಮತ್ತು ವೆಂಟೊ ಜರ್ಮನ್ ಬ್ರಾಂಡ್‌ನ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾದ ಮಾದರಿಗಳಾಗಿವೆ.

Most Read Articles

Kannada
English summary
Volkswagen Polo & Vento TSI Limited-Edition Models Removed From The Company Website. Read In kannada.
Story first published: Saturday, July 11, 2020, 19:07 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X