ಆಟೋ ಎಕ್ಸ್‌ಪೋ 2020: ಬಹುನೀರಿಕ್ಷಿತ ಫೋಕ್ಸ್‌ವ್ಯಾಗನ್ ಟಿ-ರಾಕ್ ಅನಾವರಣ

ಫೋಕ್ಸ್‌ವ್ಯಾಗನ್ ಸಂಸ್ಥೆಯು ಭಾರತೀಯ ಮಾರುಕಟ್ಟೆಯಲ್ಲಿನ ಕಾರು ಮಾರಾಟದಲ್ಲಿ ಭಾರೀ ಬದಲಾವಣೆ ಪರಿಚಯಿಸುತ್ತಿದ್ದು, ಇಂಡಿಯಾ 2.0 ಪ್ರೋಜೆಕ್ಟ್ ಯೋಜನೆಯಡಿ ಸ್ಕೋಡಾ ಜೊತೆಗೂಡಿ ವಿವಿಧ ಮಾದರಿಯ ಹಲವು ಹೊಸ ಕಾರುಗಳನ್ನು ಪರಿಚಯಿಸುತ್ತಿದೆ.

ಆಟೋ ಎಕ್ಸ್‌ಪೋ 2020: ಬಹುನೀರಿಕ್ಷಿತ ಫೋಕ್ಸ್‌ವ್ಯಾಗನ್ ಟಿ-ರಾಕ್ ಅನಾವರಣ

ಹೊಸ ಕಾರುಗಳ ಬಿಡುಗಡೆಗಾಗಿ ಸ್ಕೋಡಾ ಜೊತೆಗೂಡಿರುವ ಫೋಕ್ಸ್‌ವ್ಯಾಗನ್ ಸಂಸ್ಥೆಯು ಭಾರತೀಯ ಮಾರುಕಟ್ಟೆಯಲ್ಲಿ ಬರೋಬ್ಬರಿ ರೂ. 7,800 ಕೋಟಿ ಬಂಡವಾಳದೊಂದಿಗೆ ಹೊಸ ಕಾರು ಉತ್ಪಾದನಾ ಘಟಕ ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ದಿ ಯೋಜನೆಗಳಿಗೆ ಚಾಲನೆ ನೀಡಿದ್ದು, ಹೊಸ ಯೋಜನೆಯ ಭಾಗವಾಗಿ ಹತ್ತಕ್ಕೂ ಹೆಚ್ಚು ಕಾರು ಮಾದರಿಗಳು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿವೆ. ಇದರಲ್ಲಿ ಟಿ-ರಾಕ್ ಕೂಡಾ ಒಂದಾಗಿದ್ದು, ದೆಹಲಿ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಳಿಸಿದೆ.

ಆಟೋ ಎಕ್ಸ್‌ಪೋ 2020: ಬಹುನೀರಿಕ್ಷಿತ ಫೋಕ್ಸ್‌ವ್ಯಾಗನ್ ಟಿ-ರಾಕ್ ಅನಾವರಣ

ಮಾಹಿತಿಗಳ ಪ್ರಕಾರ, ಫೋಕ್ಸ್‌ವ್ಯಾಗನ್ ಸಂಸ್ಥೆಯು ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಳಿಸಿರುವ ಪ್ರಮುಖ ಕಾರುಗಳಲ್ಲಿ ಕೆಲವು ಕಾರು ಮಾದರಿಗಳನ್ನು ಭಾರತದಲ್ಲೇ ಉತ್ಪಾದನೆ ಮಾಡಲಿದ್ದರೆ ಇನ್ನು ಕೆಲವು ಕಾರು ಮಾದರಿಗಳನ್ನು ವಿದೇಶಿ ಮಾರುಕಟ್ಟೆಗಳಿಂದ ಆಮದು ಮಾಡಿಕೊಳ್ಳಲಿದೆ.

ಆಟೋ ಎಕ್ಸ್‌ಪೋ 2020: ಬಹುನೀರಿಕ್ಷಿತ ಫೋಕ್ಸ್‌ವ್ಯಾಗನ್ ಟಿ-ರಾಕ್ ಅನಾವರಣ

ಇದೀಗ ಅನಾವರಣಗೊಳಿಸಲಾಗಿರುವ ಟಿ-ರಾಕ್ ಕೂಡಾ ಮಧ್ಯಮ ಐಷಾರಾಮಿ ಕಂಪ್ಯಾಕ್ಟ್ ಎಸ್‌ಯುವಿ ಆವೃತ್ತಿಯಾಗಿ ಮಾರಾಟವಾಗಲಿದ್ದು, ಇದು ವಿದೇಶಿ ಮಾರುಕಟ್ಟೆಗಳಿಂದ ಸಿಕೆಡಿ ಆಮದು ನೀತಿ ಅಡಿ ಭಾರತದಲ್ಲಿ ಮಾರಾಟವಾಗಲಿದೆ.

ಆಟೋ ಎಕ್ಸ್‌ಪೋ 2020: ಬಹುನೀರಿಕ್ಷಿತ ಫೋಕ್ಸ್‌ವ್ಯಾಗನ್ ಟಿ-ರಾಕ್ ಅನಾವರಣ

ಕೇಂದ್ರ ಸರ್ಕಾರವು ಘೋಷಣೆ ಮಾಡಿರುವ ಹೊಸ ಆಮದು ನೀತಿ ಅಡಿಯಲ್ಲಿ ವಿದೇಶಿ ಮಾರುಕಟ್ಟೆಗಳಿಂದ ಆಮದು ಮಾಡಿಕೊಂಡು ಟಿ-ರಾಕ್ ಕಾರನ್ನು ಮಾರಾಟ ಮಾಡಲು ನಿರ್ಧರಿಸಲಾಗಿದ್ದು, ಕೇಂದ್ರ ಸರ್ಕಾರವು ಕಳೆದ ವರ್ಷ ಆಮದು ನೀತಿಯಲ್ಲಿ ಕೆಲವು ಬದಲಾವಣೆಗಳನ್ನು ತಂದಿದೆ. ಹೊಸ ನಿಯಮದಡಿ ಆಟೋ ಉತ್ಪಾದನಾ ಸಂಸ್ಥೆಗಳಿಗೆ ಕೆಲವು ವಿನಾಯ್ತಿಗಳನ್ನು ನೀಡಲಾಗಿದ್ದು, ಭಾರತದಲ್ಲಿರುವ ವಿದೇಶಿ ಸಂಸ್ಥೆಗಳಿಗೆ ಯಾವುದೇ ಷರತ್ತುಗಳಿಲ್ಲದೇ 2,500 ಕಾರುಗಳನ್ನು ಆಮದು ಮಾಡಿಕೊಂಡು ಮಾರಾಟಮಾಡಬಹುದಾಗಿದೆ.

ಆಟೋ ಎಕ್ಸ್‌ಪೋ 2020: ಬಹುನೀರಿಕ್ಷಿತ ಫೋಕ್ಸ್‌ವ್ಯಾಗನ್ ಟಿ-ರಾಕ್ ಅನಾವರಣ

ಈ ಹಿನ್ನಲೆ ಫೋಕ್ಸ್‌ವ್ಯಾಗನ್ ಸಂಸ್ಥೆಯು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅತ್ಯತ್ತಮ ಬೇಡಿಕೆ ಹೊಂದಿರುವ ಟಿ-ರಾಕ್ ಕಾರನ್ನು ಭಾರತದಲ್ಲೂ ಬಿಡುಗಡೆ ಮಾಡುತ್ತಿದ್ದು, 1.5-ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್‌ನೊಂದಿಗೆ ರಸ್ತೆಗಿಳಿಯುವುದು ಬಹುತೇಕ ಖಚಿತವಾಗಿದೆ.

ಆಟೋ ಎಕ್ಸ್‌ಪೋ 2020: ಬಹುನೀರಿಕ್ಷಿತ ಫೋಕ್ಸ್‌ವ್ಯಾಗನ್ ಟಿ-ರಾಕ್ ಅನಾವರಣ

ಪ್ರಸ್ತುತ ಮಾರುಕಟ್ಟೆಯಲ್ಲಿರುವ ಟಾಟಾ ಹ್ಯಾರಿಯರ್, ಜೀಪ್ ಕಂಪಾಸ್ ಮತ್ತು ಕಿಯಾ ಸೆಲ್ಟೊಸ್ ಕಾರಿಗೆ ಸರಿಸಮನಾದ ವೀಲ್ಹ್‌ಬೆಸ್ ಮತ್ತು ಉದ್ದಳತೆಯನ್ನು ಹೊಂದಿರುವ ಟಿ-ರಾಕ್ ಕಾರು ಹಲವಾರು ಪ್ರೀಮಿಯಂ ಫೀಚರ್ಸ್ ಹೊಂದಿದ್ದು, ಪೆಟ್ರೋಲ್ ಎಂಜಿನ್‌ನಲ್ಲಿ ಮಾತ್ರವೇ ಮಾರಾಟಗೊಳ್ಳಲಿದೆ.

ಆಟೋ ಎಕ್ಸ್‌ಪೋ 2020: ಬಹುನೀರಿಕ್ಷಿತ ಫೋಕ್ಸ್‌ವ್ಯಾಗನ್ ಟಿ-ರಾಕ್ ಅನಾವರಣ

ಟಿ-ರಾಕ್ ಕಾರು ಪೆಟ್ರೋಲ್ ಎಂಜಿನ್‌ನೊಂದಿಗೆ ಅತ್ಯುತ್ತಮ ಡ್ರೈವ್ ಟೆಕ್ನಾಲಜಿ ಹೊಂದಿರಲಿದ್ದು, 7-ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ 4x4 ಡ್ರೈವ್ ಟ್ರೈನ್ ಸೇರಿದಂತೆ ಹಲವಾರು ಪ್ರೀಮಿಯಂ ಫಿಚರ್ಸ್‌ಗಳನ್ನು ಹೊಂದಿರಲಿದೆ.

ಆಟೋ ಎಕ್ಸ್‌ಪೋ 2020: ಬಹುನೀರಿಕ್ಷಿತ ಫೋಕ್ಸ್‌ವ್ಯಾಗನ್ ಟಿ-ರಾಕ್ ಅನಾವರಣ

4.2-ಮೀಟರ್ ಉದ್ದಳತೆ ಹೊಂದಿರುವ ಟಿ-ರಾಕ್ ಕಾರು ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೊಲ್, ಆರು ಏರ್‌ಬ್ಯಾಗ್, ರಿಯರ್ ಪಾರ್ಕಿಂಗ್ ಕ್ಯಾಮೆರಾ, ಅಡಾಪ್ಟಿವ್ ಕ್ರೂಸ್ ಕಂಟ್ರೊಲರ್, 8-ಇಂಚಿನ ಇನ್ಪೋಟೈನ್‌ಮೆಂಟ್ ಸಿಸ್ಟಂನೊಂದಿಗೆ ಬೆಲೆಯಲ್ಲ ದುಬಾರಿಯಾಗಲಿದೆ.

ಆಟೋ ಎಕ್ಸ್‌ಪೋ 2020: ಬಹುನೀರಿಕ್ಷಿತ ಫೋಕ್ಸ್‌ವ್ಯಾಗನ್ ಟಿ-ರಾಕ್ ಅನಾವರಣ

ಮಾಹಿತಿಗಳ ಪ್ರಕಾರ, ಟಿ-ರಾಕ್ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 19 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 22 ಲಕ್ಷ ಬೆಲೆ ಹೊಂದಬಹುದು ಎಂದು ನೀರಿಕ್ಷಿಸಲಾಗಿದ್ದು, 2020ರ ಮಧ್ಯಂತರದಲ್ಲಿ ಗ್ರಾಹಕರ ಕೈಸೇರಲಿದೆ.

Most Read Articles

Kannada
English summary
Volkswagen T-Roc SUV unveiled at Auto Expo 2020. Read in Kannada.
Story first published: Wednesday, February 5, 2020, 19:05 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X