ಕರೋನಾ ಎಫೆಕ್ಟ್- ಟಿ-ರಾಕ್ ಕಾರು ಬಿಡುಗಡೆಗೆ ಹೊಸ ಪ್ಲ್ಯಾನ್ ಮಾಡಿದ ಫೋಕ್ಸ್‌ವ್ಯಾಗನ್

ಚೀನಾ ಮಾತ್ರವಲ್ಲದೆ ಭಾರತದಲ್ಲೂ ತನ್ನ ಅಟ್ಟಹಾಸ ಮೆರೆಯುತ್ತಿರುವ ಕರೋನಾ ವೈರಸ್‌ನಿಂದಾಗಿ ಭಾರೀ ಪ್ರಮಾಣದ ಆರ್ಥಿಕ ಸಂಕಷ್ಟ ಎದುರಾಗುತ್ತಿದ್ದು, ಕಾರು ಉತ್ಪಾದನಾ ಕಂಪನಿಗಳು ತಮ್ಮ ಹೊಸ ವಾಹನಗಳ ಬಿಡುಗಡೆ ಮಾಡಲು ಸಾಧ್ಯವಾಗದೆ ಪರಿತಪಿಸುತ್ತಿವೆ.

ಕರೋನಾ ಎಫೆಕ್ಟ್- ಟಿ-ರಾಕ್ ಕಾರು ಬಿಡುಗಡೆಗೆ ಹೊಸ ಪ್ಲ್ಯಾನ್ ಮಾಡಿದ ಫೋಕ್ಸ್‌ವ್ಯಾಗನ್

ಹೊಸ ವಾಹನಗಳ ಬಿಡುಗಡೆಯ ಸಂದರ್ಭಗಳಲ್ಲಿ ಬೇರೆ ಬೇರೆ ಕಡೆಗಳಿಂದ ಸಾವಿರರಾರು ಜನ ಒಂದೇ ಜಾಗದಲ್ಲಿ ಗುಂಪುಗೂಡುವುದರಿಂದ ಕರೋನಾ ವೈರಸ್ ಹರಡುವಿಕೆಯ ಭೀತಿ ಎದುರಾಗಿದ್ದು, ಈ ಹಿನ್ನಲೆಯಲ್ಲಿ ಬಹುತೇಕ ಕಾರು ಕಂಪನಿಗಳು ಹೊಸ ವಾಹನಗಳ ಬಿಡುಗಡೆಯನ್ನು ಮುಂದೂಡಿಕೆ ಮಾಡುತ್ತಿವೆ. ಆದರೆ ಏಪ್ರಿಲ್ 1ರಿಂದ ಬಿಎಸ್-6 ನಿಯಮ ಕಡ್ಡಾಯವಾಗಿ ಜಾರಿಗೆ ಬರುತ್ತಿರುವುದರಿಂದ ಕೆಲವು ಹೊಸ ವಾಹನಗಳನ್ನು ನಿಗದಿತ ಅವಧಿಯಲ್ಲೇ ಬಿಡುಗಡೆ ಮಾಡಬೇಕಿದ್ದು, ಈ ಹಿನ್ನಲೆಯಲ್ಲಿ ಫೋಕ್ಸ್‌ವ್ಯಾಗನ್ ಸಂಸ್ಥೆಯು ತನ್ನ ಬಹುನೀರಿಕ್ಷಿತ ಟಿ-ರಾಕ್ ಕಾರು ಬಿಡುಗಡೆ ಮಾಡಲು ಹೊಸ ಪ್ಲ್ಯಾನ್ ಮಾಡಿದೆ.

ಕರೋನಾ ಎಫೆಕ್ಟ್- ಟಿ-ರಾಕ್ ಕಾರು ಬಿಡುಗಡೆಗೆ ಹೊಸ ಪ್ಲ್ಯಾನ್ ಮಾಡಿದ ಫೋಕ್ಸ್‌ವ್ಯಾಗನ್

ಇದೇ ತಿಂಗಳು 18ರಂದು ಟಿ-ರಾಕ್ ಬಿಡುಗಡೆಯ ಕಾರ್ಯಕ್ರಮಕ್ಕೆ ಈಗಾಗಲೇ ಸಾವಿರಾರು ಪತ್ರಕರ್ತರಿಗೆ ಆಹ್ವಾನ ನೀಡಿದ್ದ ಫೋಕ್ಸ್‌ವ್ಯಾಗನ್ ಸಂಸ್ಥೆಯು ಕರೋನಾ ಭೀತಿ ಹಿನ್ನಲೆಯಲ್ಲಿ ಬಿಡುಗಡೆ ಕಾರ್ಯಕ್ರಮವನ್ನು ಅತ್ಯಂತ ಸರಳ ರೀತಿಯಲ್ಲಿ ಬಿಡುಗಡೆಗೆ ನಿರ್ಧರಿಸಿದ್ದು, ಕಂಪನಿಯ ಕೆಲವೇ ಕೆಲವು ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಡಿಜಿಟಲ್ ಪ್ಲ್ಯಾಟ್‌ಫಾರ್ಮ್‌ಗಳ ಮೂಲಕ ಹೊಸ ಕಾರಿನ ಬೆಲೆಗಳನ್ನು ಬಹಿರಂಗ ಪಡಿಸಲಿದೆ.

ಕರೋನಾ ಎಫೆಕ್ಟ್- ಟಿ-ರಾಕ್ ಕಾರು ಬಿಡುಗಡೆಗೆ ಹೊಸ ಪ್ಲ್ಯಾನ್ ಮಾಡಿದ ಫೋಕ್ಸ್‌ವ್ಯಾಗನ್

ಇನ್ನು ಫೋಕ್ಸ್‌ವ್ಯಾಗನ್ ಸಂಸ್ಥೆಯು ಸ್ಕೋಡಾ ಜೊತೆಗೂಡಿ ಕಾರು ಉತ್ಪಾದನೆ ಮಹತ್ವದ ಬದಲಾವಣೆ ತರುತ್ತಿರುವುದಲ್ಲದೇ ಇಂಡಿಯಾ 2.0 ಪ್ರೊಜೆಕ್ಟ್ ಯೋಜನೆ ಅಡಿ ಹಲವು ಹೊಸ ಕಾರುಗಳನ್ನು ಭಾರತದಲ್ಲಿ ಬಿಡುಗಡೆ ಮಾಡಲು ಉದ್ದೇಶಿಸಿದೆ.

ಕರೋನಾ ಎಫೆಕ್ಟ್- ಟಿ-ರಾಕ್ ಕಾರು ಬಿಡುಗಡೆಗೆ ಹೊಸ ಪ್ಲ್ಯಾನ್ ಮಾಡಿದ ಫೋಕ್ಸ್‌ವ್ಯಾಗನ್

ಟಿ-ರಾಕ್ ಕಾರು ಐಷಾರಾಮಿ ಫೀಚರ್ಸ್‌ಗಳೊಂದಿಗೆ ಪೆಟ್ರೋಲ್ ಎಂಜಿನ್‌ನಲ್ಲಿ ಮಾತ್ರವೇ ಮಾರಾಟಗೊಳ್ಳಲಿದ್ದು, ಟಾಪ್ ಎಂಡ್ ಕಂಪ್ಯಾಕ್ಟ್ ಎಸ್‌ಯುವಿ ಆವೃತ್ತಿಗಳಿಗೆ ಈ ಹೊಸ ಕಾರು ಪ್ರಬಲ ಪೈಪೋಟಿಯಾಗಲಿದೆ. ಹೊಸ ಕಾರಿನಲ್ಲಿ ಫುಲ್ ಎಲ್ಇಡಿ ಹೆಡ್‌ಲ್ಯಾಂಪ್, ಎಲ್ಇಡಿ ಟೈಲ್ ಲ್ಯಾಂಪ್, 8-ಇಂಚಿನ ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ, ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಡ್ಯುಯಲ್ ಜೋನ್ ಕ್ಲೈಮೆಟ್ ಕಂಟ್ರೋಲ್, ಪನೊರಮಿಕ್ ಸನ್‌ರೂಫ್ ಸೌಲಭ್ಯಗಳಿವೆ.

ಕರೋನಾ ಎಫೆಕ್ಟ್- ಟಿ-ರಾಕ್ ಕಾರು ಬಿಡುಗಡೆಗೆ ಹೊಸ ಪ್ಲ್ಯಾನ್ ಮಾಡಿದ ಫೋಕ್ಸ್‌ವ್ಯಾಗನ್

ಹಾಗೆಯೇ ಹೊಸ ಕಾರಿನಲ್ಲಿ ಪ್ರೀಮಿಯಂ ಫೀಚರ್ಸ್‌ಗಳಾದ ಡ್ಯುಯಲ್ ಟೋನ್ ಅಲಾಯ್ ವೀಲ್ಹ್, ವೆನ್ನಾ ಲೆದರ್ ಸೀಟುಗಳು, ಫ್ರಂಟ್ ಆ್ಯಂಡ್ ರಿಯರ್ ಪಾರ್ಕಿಂಗ್ ಸೆನ್ಸಾರ್ ಸೌಲಭ್ಯಗಳಿದ್ದು, ಇದು ಕಾರಿನ ಬೆಲೆ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ.

ಕರೋನಾ ಎಫೆಕ್ಟ್- ಟಿ-ರಾಕ್ ಕಾರು ಬಿಡುಗಡೆಗೆ ಹೊಸ ಪ್ಲ್ಯಾನ್ ಮಾಡಿದ ಫೋಕ್ಸ್‌ವ್ಯಾಗನ್

ಪ್ರಯಾಣಿಕರ ಸುರಕ್ಷತೆಗಾಗಿ ಹೊಸ ಕಾರಿನಲ್ಲಿ ಎಬಿಎಸ್ ಜೊತೆ ಇಬಿಡಿ, 6 ಏರ್‌ಬ್ಯಾಗ್‌ಗಳು, ಟ್ರಾಕ್ಷನ್ ಕಂಟ್ರೋಲ್ ಸಿಸ್ಟಂ, ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ, ಇಎಸ್‌ಪಿ(ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಕಂಟ್ರೋಲ್), ಹಿಲ್ ಸ್ಟಾರ್ಟ್ ಅಸಿಸ್, ರಿಯರ್ ಪಾರ್ಕಿಂಗ್ ಕ್ಯಾಮೆರಾ ಸೇರಿದಂತೆ ಹಲವು ಪ್ರೀಮಿಯಂ ಸೌಲಭ್ಯಗಳನ್ನು ನೀಡಲಾಗಿದೆ.

ಕರೋನಾ ಎಫೆಕ್ಟ್- ಟಿ-ರಾಕ್ ಕಾರು ಬಿಡುಗಡೆಗೆ ಹೊಸ ಪ್ಲ್ಯಾನ್ ಮಾಡಿದ ಫೋಕ್ಸ್‌ವ್ಯಾಗನ್

ಹಾಗೆಯೇ ಹೊಸ ಕಾರು ಗ್ರಾಹಕರ ಬೇಡಿಕೆಯೆಂತೆ ಡೀಪ್ ಬ್ಲ್ಯಾಕ್ ಪರ್ಲ್, ಕರ್ಕ್ಯುಮಾ ಯೆಲ್ಲೋ/ಬ್ಲ್ಯಾಕ್, ಎನೆರ್ಜಿಟಿಕ್ ಆರೇಂಜ್/ಬ್ಲ್ಯಾಕ್, ಪ್ಯೂರ್ ವೈಟ್/ಬ್ಲ್ಯಾಕ್, ರವೆನಾ ಬ್ಲ್ಯೂ/ಬ್ಲ್ಯಾಕ್ ಮತ್ತು ಇಂಡಿಯಂ ಗ್ರೇ/ಬ್ಲ್ಯಾಕ್ ಬಣ್ಣಗಳಲ್ಲಿ ಖರೀದಿಸಬಹುದಾಗಿದೆ.

ಕರೋನಾ ಎಫೆಕ್ಟ್- ಟಿ-ರಾಕ್ ಕಾರು ಬಿಡುಗಡೆಗೆ ಹೊಸ ಪ್ಲ್ಯಾನ್ ಮಾಡಿದ ಫೋಕ್ಸ್‌ವ್ಯಾಗನ್

ಎಂಜಿನ್ ಸಾಮರ್ಥ್ಯ

ಹೊಸ ಟಿ-ರಾಕ್ ಕಾರು 1.5-ಲೀಟರ್ ಫೋರ್ ಸಿಲಿಂಡರ್ ಟರ್ಬೋ ಪೆಟ್ರೋಲ್ ಎಂಜಿನ್ ಪಡೆದುಕೊಂಡಿದ್ದು, 7-ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ 150-ಬಿಎಚ್‌ಪಿ ಮತ್ತು 340-ಎನ್ಎಂ ಟಾರ್ಕ್ ಉತ್ಪಾದನೆ ಮಾಡಲಿದೆ.

ಕರೋನಾ ಎಫೆಕ್ಟ್- ಟಿ-ರಾಕ್ ಕಾರು ಬಿಡುಗಡೆಗೆ ಹೊಸ ಪ್ಲ್ಯಾನ್ ಮಾಡಿದ ಫೋಕ್ಸ್‌ವ್ಯಾಗನ್

ಇನ್ನು ಹೊಸ ಟಿ-ರಾಕ್ ಕಾರು ಫೋಕ್ಸ್‌ವ್ಯಾಗನ್ ಸಂಸ್ಥೆಯ ಎಂಕ್ಯೂಬಿ ಕಾರು ಉತ್ಪಾದನಾ ಪ್ಲ್ಯಾ‌ಟ್‌ಫಾರ್ಮ್ ಮೇಲೆ ಅಭಿವೃದ್ದಿಗೊಂಡಿದ್ದು, ಗುಣಮಟ್ಟ ಮತ್ತು ಅತ್ಯಧಿಕ ಪ್ರೀಮಿಯಂ ಫೀಚರ್ಸ್‌ಗಳಿಂದಾಗಿ ಹೊಸ ಕಾರು ಐಷಾರಾಮಿ ಕಾರುಗಳ ವಿಭಾಗದಲ್ಲಿ ಗುರುತಿಸಿಕೊಂಡಿದೆ.

ಕರೋನಾ ಎಫೆಕ್ಟ್- ಟಿ-ರಾಕ್ ಕಾರು ಬಿಡುಗಡೆಗೆ ಹೊಸ ಪ್ಲ್ಯಾನ್ ಮಾಡಿದ ಫೋಕ್ಸ್‌ವ್ಯಾಗನ್

ಟಿ-ರಾಕ್ ಬೆಲೆ(ಅಂದಾಜು)

ವಿದೇಶಿ ಮಾರುಕಟ್ಟೆಯಿಂದ ಆಮದು ಮಾಡಿಕೊಳ್ಳಲಾಗುವ ಹೊಸ ಟಿ-ರಾಕ್ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.20 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.23 ಲಕ್ಷ ಹೊಂದಿರಬಹುದೆಂದು ಅಂದಾಜಿಸಲಾಗಿದೆ.

Most Read Articles

Kannada
English summary
Volkswagen has announced that the company is called of press event for T Roc SUV launch and organise an online launch due to corona outbreak. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X