ಟಿಗ್ವಾನ್ ಆಲ್‍‍ಸ್ಪೇಸ್ ಎಸ್‍‍ಯುವಿ ಬಿಡುಗಡೆಗೊಳಿಸಿದ ಫೋಕ್ಸ್‌ವ್ಯಾಗನ್

ಫೋಕ್ಸ್‌ವ್ಯಾಗನ್ ಕಂಪನಿಯು ತನ್ನ ಹೊಸ ಏಳು ಸೀಟರ್‍‍ಗಳ ಟಿಗ್ವಾನ್ ಆಲ್‍‍ಸ್ಪೇಸ್ ಎಸ್‍‍ಯುವಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಹೊಸ ಟಿಗ್ವಾನ್ ಆಲ್‍‍ಸ್ಪೇಸ್ ಎಸ್‍‍ಯುವಿಯ ಆರಂಭಿಕ ಬೆಲೆ ಭಾರತದ ಎಕ್ಸ್ ಶೋರೂಂ ದರದಂತೆ ರೂ.33.12 ಲಕ್ಷಗಳಾಗಿದೆ.

ಟಿಗ್ವಾನ್ ಆಲ್‍‍ಸ್ಪೇಸ್ ಎಸ್‍‍ಯುವಿ ಬಿಡುಗಡೆಗೊಳಿಸಿದ ಫೋಕ್ಸ್‌ವ್ಯಾಗನ್

ಫೋಕ್ಸ್‌ವ್ಯಾಗನ್ ಕಂಪನಿಯ ಹೊಸ ಟಿಗ್ವಾನ್ ಆಲ್‍‍ಸ್ಪೇಸ್ ಎಸ್‍‍ಯುವಿಯ ಏಳು ಸೀಟರ್‍‍ನ ಆವೃತ್ತಿಯು ಈಗಾಗಲೇ ದೇಶಿಯ ಮಾರುಕಟ್ಟೆಯಲ್ಲಿರುವ ಐದು ಸೀಟರ್‍‍ನ ಟಿಗ್ವಾನ್ ಎಸ್‍‍ಯುವಿಯ ಸುಧಾರಿತ ಆವೃತ್ತಿಯಾಗಿದೆ. ಹೊಸ ಟಿಗ್ವಾನ್ ಆಲ್‍‍ಸ್ಪೇಸ್ ಎಸ್‍‍ಯುವಿಯನ್ನು ಭಾರತಕ್ಕೆ ಸಿಕೆಡಿ ರೂಪದಲ್ಲಿ ಆಮದು ಮಾಡಿಕೊಳ್ಳಲಾಗುವುದು.

ಟಿಗ್ವಾನ್ ಆಲ್‍‍ಸ್ಪೇಸ್ ಎಸ್‍‍ಯುವಿ ಬಿಡುಗಡೆಗೊಳಿಸಿದ ಫೋಕ್ಸ್‌ವ್ಯಾಗನ್

ಹೊಸ ಟಿಗ್ವಾನ್ ಆಲ್‌ಸ್ಪೇಸ್ ದೇಶಿಯ ಮಾರುಕಟ್ಟೆಯಲ್ಲಿ ಫೋಕ್ಸ್‌ವ್ಯಾಗನ್ ಕಂಪನಿಯು ಬಿಡುಗಡೆಗೊಳಿಸಿರುವ ಮೊದಲ ಎಸ್‌ಯುವಿಯಾಗಿದೆ. ಸ್ಕೋಡಾ ಆಟೋ ಫೋಕ್ಸ್‌ವ್ಯಾಗನ್ ಇಂಡಿಯಾ, ದೇಶಿಯ ಮಾರುಕಟ್ಟೆಯಲ್ಲಿ ಅನೇಕ ಎಸ್‍‍ಯುವಿಗಳನ್ನು ಬಿಡುಗಡೆಗೊಳಿಸಲಿದೆ.

ಟಿಗ್ವಾನ್ ಆಲ್‍‍ಸ್ಪೇಸ್ ಎಸ್‍‍ಯುವಿ ಬಿಡುಗಡೆಗೊಳಿಸಿದ ಫೋಕ್ಸ್‌ವ್ಯಾಗನ್

ಏಳು ಸೀಟುಗಳ ಈ ಎಸ್‍‍ಯುವಿ ಫೋಕ್ಸ್‌ವ್ಯಾಗನ್ ಕಂಪನಿಯ ಎಂಕ್ಯೂಬಿ ಎ0 ಐ‍ಎನ್ ಪ್ಲಾಟ್‌ಫಾರಂನ ಭಾಗವಾಗಿದೆ. ಇದು ಜಾಗತಿಕ ಮಟ್ಟದಲ್ಲಿರುವ ಎಂಕ್ಯೂಬಿ ಎ0 ಆರ್ಕಿಟೆಕ್ಚರ್‍‍ನ ಭಾರತದ ಆವೃತ್ತಿಯಾಗಿದೆ.

ಟಿಗ್ವಾನ್ ಆಲ್‍‍ಸ್ಪೇಸ್ ಎಸ್‍‍ಯುವಿ ಬಿಡುಗಡೆಗೊಳಿಸಿದ ಫೋಕ್ಸ್‌ವ್ಯಾಗನ್

ಮುಂಬರುವ ದಿನಗಳಲ್ಲಿ ಬಿಡುಗಡೆಯಾಗಲಿರುವ ಫೋಕ್ಸ್‌ವ್ಯಾಗನ್‍ ಕಂಪನಿಯ ಇತರ ವಾಹನಗಳಂತೆ ಟಿಗ್ವಾನ್ ಆಲ್‍‍ಸ್ಪೇಸ್ ಎಸ್‍‍ಯುವಿಯನ್ನು ಸಿಂಗಲ್ ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ ಮಾರಾಟ ಮಾಡಲಾಗುವುದು.

ಟಿಗ್ವಾನ್ ಆಲ್‍‍ಸ್ಪೇಸ್ ಎಸ್‍‍ಯುವಿ ಬಿಡುಗಡೆಗೊಳಿಸಿದ ಫೋಕ್ಸ್‌ವ್ಯಾಗನ್

ಈ ಎಸ್‍‍ಯುವಿಯಲ್ಲಿ 2.0 ಲೀಟರಿನ ಟರ್ಬೊ‍‍ಚಾರ್ಜ್ಡ್ ಟಿ‍ಎಸ್‍ಐ ಪೆಟ್ರೋಲ್ ಎಂಜಿನ್ ಅಳವಡಿಸಲಾಗುವುದು. ಈ ಎಂಜಿನ್ 187 ಬಿ‍‍ಹೆಚ್‍‍ಪಿ ಪವರ್ ಹಾಗೂ 370 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍‍ನಲ್ಲಿ ಸ್ಟಾಂಡರ್ಡ್ 7 ಸ್ಪೀಡ್‍‍ನ ಡಿ‍ಎಸ್‍‍ಜಿ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಜೋಡಿಸಲಾಗಿದೆ.

ಟಿಗ್ವಾನ್ ಆಲ್‍‍ಸ್ಪೇಸ್ ಎಸ್‍‍ಯುವಿ ಬಿಡುಗಡೆಗೊಳಿಸಿದ ಫೋಕ್ಸ್‌ವ್ಯಾಗನ್

ಈ ಎಂಜಿನ್ ಎಲ್ಲಾ ನಾಲ್ಕು ವ್ಹೀಲ್‍‍ಗಳಿಗೆ ಫೋಕ್ಸ್‌ವ್ಯಾಗನ್ ಕಂಪನಿಯ 4 ಮೋಷನ್ ಆಲ್ ವ್ಹೀಲ್ ಡ್ರೈವ್ (ಎ‍‍ಡಬ್ಲ್ಯು‍‍ಡಿ) ಮೂಲಕ ಪವರ್ ಕಳುಹಿಸುತ್ತದೆ. ವಿನ್ಯಾಸದ ಬಗ್ಗೆ ಹೇಳುವುದಾದರೆ, ಫೋಕ್ಸ್‌ವ್ಯಾಗನ್ ಟಿಗ್ವಾನ್ ಆಲ್‍‍ಸ್ಪೇಸ್ ಐದು ಸೀಟ್‍‍ನ ಟಿಗ್ವಾನ್ ಹೊಂದಿರುವ ವಿನ್ಯಾಸವನ್ನು ಹೊಂದಿದೆ.

ಟಿಗ್ವಾನ್ ಆಲ್‍‍ಸ್ಪೇಸ್ ಎಸ್‍‍ಯುವಿ ಬಿಡುಗಡೆಗೊಳಿಸಿದ ಫೋಕ್ಸ್‌ವ್ಯಾಗನ್

ಮೂರನೇ ಸಾಲಿನ ಸೀಟಿಂಗ್‍‍ಗಳಿಗಾಗಿ ಹೊಸ ಎಸ್‍‍ಯುವಿಯ ಗಾತ್ರ ಹಾಗೂ ವ್ಹೀಲ್‍‍ಬೇಸ್ ಅನ್ನು ಹೆಚ್ಚಿಸಲಾಗಿದೆ. ಹೊಸ ಟಿಗ್ವಾನ್ ಆಲ್‍‍ಸ್ಪೇಸ್ ಎಸ್‍ಯುವಿಯು ಇಂಟಿಗ್ರೇಟೆಡ್ ಎಲ್‍ಇ‍‍ಡಿ ಡಿ‍ಆರ್‍ಎಲ್ ಹೊಂದಿರುವ ಎಲ್‍ಇ‍‍ಡಿ ಪ್ರೊಜೆಕ್ಟರ್ ಹೆಡ್‍‍ಲ್ಯಾಂಪ್, ಟರ್ನ್ ಇಂಡಿಕೇಟರ್, ಎಲ್‍ಇ‍‍ಡಿ ಫಾಗ್ ಲ್ಯಾಂಪ್ ಹಾಗೂ ಹಿಂಭಾಗದಲ್ಲಿ ಎಲ್‍ಇ‍‍ಡಿ ಟೇಲ್‍‍ಲೈಟ್‍‍ಗಳನ್ನು ಹೊಂದಿದೆ.

ಟಿಗ್ವಾನ್ ಆಲ್‍‍ಸ್ಪೇಸ್ ಎಸ್‍‍ಯುವಿ ಬಿಡುಗಡೆಗೊಳಿಸಿದ ಫೋಕ್ಸ್‌ವ್ಯಾಗನ್

ಈ ಏಳು ಸೀಟ್‍ಗಳ ಎಸ್‍‍ಯುವಿಯಲ್ಲಿ 18 ಇಂಚಿನ ಅಲಾಯ್ ವ್ಹೀಲ್‍‍ಗಳನ್ನು ಸ್ಟಾಂಡರ್ಡ್ ಆಗಿ ನೀಡಲಾಗುವುದು. ಈ ಎಸ್‍‍ಯುವಿಯ ಇಂಟಿರಿಯರ್‍‍ನಲ್ಲಿ ಬ್ಲಾಕ್/ಬೀಜ್ ಡ್ಯುಯಲ್ ಟೋನ್ ಹೊಂದಿರುವ ಡ್ಯಾಶ್‍‍ಬೋರ್ಡ್ ನೀಡಲಾಗಿದೆ.

ಟಿಗ್ವಾನ್ ಆಲ್‍‍ಸ್ಪೇಸ್ ಎಸ್‍‍ಯುವಿ ಬಿಡುಗಡೆಗೊಳಿಸಿದ ಫೋಕ್ಸ್‌ವ್ಯಾಗನ್

ಸೆಂಟರ್ ಕಂಸೋಲ್‍‍‍ನಲ್ಲಿ ಆಪಲ್ ಕಾರ್‍‍ಪ್ಲೇ ಹಾಗೂ ಆಂಡ್ರಾಯಿಡ್ ಆಟೋಗಳಿಗೆ ಹೊಂದಿಕೊಳ್ಳುವ ದೊಡ್ಡ ಗಾತ್ರದ ಟಚ್‍‍ಸ್ಕ್ರೀನ್ ಇನ್ಫೋಟೆನ್‍‍ಮೆಂಟ್ ಸಿಸ್ಟಂ ಹಾಗೂ ಬ್ಲೂಟೂಥ್ ಕನೆಕ್ಟಿವಿಟಿ ನೀಡಲಾಗಿದೆ.

ಟಿಗ್ವಾನ್ ಆಲ್‍‍ಸ್ಪೇಸ್ ಎಸ್‍‍ಯುವಿ ಬಿಡುಗಡೆಗೊಳಿಸಿದ ಫೋಕ್ಸ್‌ವ್ಯಾಗನ್

ಹೊಸ ಫೋಕ್ಸ್‌ವ್ಯಾಗನ್ ಟಿಗ್ವಾನ್ ಆಲ್‌ಸ್ಪೇಸ್ ಪೂರ್ಣ ಪ್ರಮಾಣದ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಲೆದರ್‍‍ನಲ್ಲಿ ವ್ರಾಪ್ ಮಾಡಲಾದ ಮಲ್ಟಿಫಂಕ್ಷನಲ್ ಸ್ಟೀಯರಿಂಗ್ ವ್ಹೀಲ್, ಪ್ಯಾಡಲ್ ಶಿಫ್ಟರ್, ಪನೋರಾಮಿಕ್ ಸನ್‌ರೂಫ್, ಮೂರು ಜೋನ್ ಕ್ಲೈಮೆಟ್ ಕಂಟ್ರೋಲ್, ಒಆರ್‌ವಿಎಂಗಳಿಗೆ ಪವರ್ ಅಡ್ಜಸ್ಟಬಲ್ ಹಾಗೂ ಮೆಮೊರಿ ಫಂಕ್ಷನ್‍‍ಗಳಿವೆ.

ಟಿಗ್ವಾನ್ ಆಲ್‍‍ಸ್ಪೇಸ್ ಎಸ್‍‍ಯುವಿ ಬಿಡುಗಡೆಗೊಳಿಸಿದ ಫೋಕ್ಸ್‌ವ್ಯಾಗನ್

ಇದರ ಜೊತೆಗೆ ಪ್ರೀಮಿಯಂ ವಿಯೆನ್ನಾ ಲೆದರ್ ಅಪ್‍‍ಹೊಲೆಸ್ಟರ್, ಎಲೆಕ್ಟ್ರಿಕ್ ಪಾರ್ಕಿಂಗ್ ಬ್ರೇಕ್, ಹೀಟ್ ಇನ್ಸೂಲೇಟೆಡ್ ವಿಂಡ್‌ಶೀಲ್ಡ್, ಆಟೋ ಹೆಡ್‌ಲ್ಯಾಂಪ್‌, ರೇನ್ ಸೆನ್ಸಾರ್‌, ಪುಶ್-ಬಟನ್ ಸ್ಟಾರ್ಟ್ / ಸ್ಟಾಪ್, ಕೀಲೆಸ್ ಎಂಟ್ರಿ ಹಾಗೂ ಡ್ರೈವ್ ಮೋಡ್ ಸೆಲೆಕ್ಟರ್ ಸೇರಿದಂತೆ ಹಲವಾರು ಫೀಚರ್‍‍ಗಳನ್ನು ಹೊಂದಿದೆ.

ಟಿಗ್ವಾನ್ ಆಲ್‍‍ಸ್ಪೇಸ್ ಎಸ್‍‍ಯುವಿ ಬಿಡುಗಡೆಗೊಳಿಸಿದ ಫೋಕ್ಸ್‌ವ್ಯಾಗನ್

ಸುರಕ್ಷತೆಯ ಬಗ್ಗೆ ಹೇಳುವುದಾದರೆ, ಫೋಕ್ಸ್‌ವ್ಯಾಗನ್ ಟಿಗ್ವಾನ್ ಆಲ್‌ಸ್ಪೇಸ್ ಏಳು ಏರ್‌ಬ್ಯಾಗ್, ಸೀಟ್-ಬೆಲ್ಟ್ ಪ್ರಿ-ಟೆನ್ಷನರ್, ಹಿಲ್-ಡಿಸೆಂಟ್ ಕಂಟ್ರೋಲ್, ಹಿಲ್-ಸ್ಟಾರ್ಟ್ ಅಸಿಸ್ಟ್, ಫ್ರಂಟ್ ಹಾಗೂ ರೇರ್ ಫಾಗ್ ಲ್ಯಾಂಪ್‌, ಆಟೋ-ಹೋಲ್ಡ್ ಫಂಕ್ಷನ್, ಎಲೆಕ್ಟ್ರಾನಿಕ್ ಇಮೊಬೈಲೈಸರ್, ಐಎಸ್‌ಒಫಿಕ್ಸ್ ಚೈಲ್ಡ್ ಸೀಟ್ ಆಂಕರ್‌ ಸೇರಿದಂತೆ ಹಲವು ಫೀಚರ್‍‍ಗಳನ್ನು ಹೊಂದಿದೆ.

ಟಿಗ್ವಾನ್ ಆಲ್‍‍ಸ್ಪೇಸ್ ಎಸ್‍‍ಯುವಿ ಬಿಡುಗಡೆಗೊಳಿಸಿದ ಫೋಕ್ಸ್‌ವ್ಯಾಗನ್

ಹೊಸ ಫೋಕ್ಸ್‌ವ್ಯಾಗನ್ ಟಿಗ್ವಾನ್ ಆಲ್‌ಸ್ಪೇಸ್ ಎಸ್‍‍ಯುವಿಯನ್ನು ಹಬನೆರೊ ಆರೆಂಜ್ ಮೆಟಾಲಿಕ್, ಪ್ಯೂರ್ ವೈಟ್, ರೂಬಿ ರೆಡ್ ಮೆಟಾಲಿಕ್, ಪೆಟ್ರೋಲಿಯಂ ಬ್ಲೂ, ಪ್ಲಾಟಿನಂ ಗ್ರೇ ಮೆಟಾಲಿಕ್, ಪೈರೈಟ್ ಸಿಲ್ವರ್ ಹಾಗೂ ಡೀಪ್ ಬ್ಲ್ಯಾಕ್ ಪರ್ಲ್ ಎಂಬ ಏಳು ಬಣ್ಣಗಳಲ್ಲಿ ಮಾರಾಟ ಮಾಡಲಾಗುತ್ತದೆ.

ಟಿಗ್ವಾನ್ ಆಲ್‍‍ಸ್ಪೇಸ್ ಎಸ್‍‍ಯುವಿ ಬಿಡುಗಡೆಗೊಳಿಸಿದ ಫೋಕ್ಸ್‌ವ್ಯಾಗನ್

ಫೋಕ್ಸ್‌ವ್ಯಾಗನ್ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಟಿಗ್ವಾನ್ ಆಲ್‌ಸ್ಪೇಸ್‌ ಎಸ್‍‍ಯುವಿಯ ಬುಕ್ಕಿಂಗ್‍‍ಗಳನ್ನು ಆರಂಭಿಸಿರುವುದಾಗಿ ಹೇಳಿದೆ. ಹೊಸ ಏಳು ಸೀಟರ್‍‍ಗಳ ಎಸ್‍‍ಯುವಿಯ ವಿತರಣೆಯನ್ನು ಶೀಘ್ರದಲ್ಲಿಯೇ ಆರಂಭಿಸಲಾಗುವುದು.

ಟಿಗ್ವಾನ್ ಆಲ್‍‍ಸ್ಪೇಸ್ ಎಸ್‍‍ಯುವಿ ಬಿಡುಗಡೆಗೊಳಿಸಿದ ಫೋಕ್ಸ್‌ವ್ಯಾಗನ್

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಹೊಸ ಫೋಕ್ಸ್‌ವ್ಯಾಗನ್ ಟಿಗ್ವಾನ್ ಆಲ್‌ಸ್ಪೇಸ್ ಎಸ್‍‍ಯುವಿ ಈ ವರ್ಷ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಹಲವು ಬಹುನಿರೀಕ್ಷಿತ ಎಸ್‍ಯುವಿಗಳಲ್ಲಿ ಮೊದಲನೆಯದಾಗಿದೆ.

ಟಿಗ್ವಾನ್ ಆಲ್‍‍ಸ್ಪೇಸ್ ಎಸ್‍‍ಯುವಿ ಬಿಡುಗಡೆಗೊಳಿಸಿದ ಫೋಕ್ಸ್‌ವ್ಯಾಗನ್

ಹೊಸ ಏಳು ಸೀಟುಗಳ ಟಿಗ್ವಾನ್ ಆಲ್‌ಸ್ಪೇಸ್ ಎಸ್‍‍ಯುವಿಯು ದೇಶಿಯ ಮಾರುಕಟ್ಟೆಯಲ್ಲಿ ಸ್ಕೋಡಾ ಕೊಡಿಯಾಕ್, ಫೋರ್ಡ್ ಎಂಡೀವರ್, ಟೊಯೊಟಾ ಫಾರ್ಚೂನರ್ ಹಾಗೂ ಮಹೀಂದ್ರಾ ಅಲ್ತುರಾಸ್ ಜಿ4ಗಳಿಗೆ ಪೈಪೋಟಿ ನೀಡಲಿದೆ.

Most Read Articles

Kannada
English summary
Volkswagen Tiguan AllSpace Launched In India. Read in Kannada.
Story first published: Friday, March 6, 2020, 17:28 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X