ಹೆಚ್‌ಡಿಎಫ್‌ಸಿ ಜೊತೆಗೂಡಿ ಹೊಸ ವಾಹನ ಸಾಲ ಸೌಲಭ್ಯ ಪರಿಚಯಿಸಿದ ವೊಲ್ವೊ

ಲಾಕ್‌ಡೌನ್ ಸಡಿಲಿಕೆ ನಂತರ ಹೆಚ್ಚುತ್ತಿರುವ ವಾಹನ ಮಾರಾಟವು ಆಟೋ ಕಂಪನಿಗಳಿಗೆ ಹೊಸ ಕಳೆ ಬಂದಂತಾಗಿದ್ದು, ಗ್ರಾಹಕರನ್ನು ಸೆಳೆಯಲು ಬಹುತೇಕ ಆಟೋ ಕಂಪನಿಗಳು ವಿವಿಧ ಆಕರ್ಷಕ ಆಫರ್‌ಗಳೊಂದಿಗೆ ಸರಳ ಸಾಲ ಸೌಲಭ್ಯಗಳನ್ನು ಘೋಷಣೆ ಮಾಡುತ್ತಿವೆ.

ಹೆಚ್‌ಡಿಎಫ್‌ಸಿ ಜೊತೆಗೂಡಿ ಹೊಸ ವಾಹನ ಸಾಲ ಸೌಲಭ್ಯ ಪರಿಚಯಿಸಿದ ವೊಲ್ವೊ

ಐಷಾರಾಮಿ ಕಾರು ಉತ್ಪಾದನಾ ಕಂಪನಿಯಾದ ವೊಲ್ವೊ ಕೂಡಾ ಭಾರತದಲ್ಲಿನ ಕಾರು ಮಾರಾಟ ಹೆಚ್ಚಳಕ್ಕಾಗಿ ಹೆಚ್‌ಡಿಎಫ್‌ಸಿ ಬ್ಯಾಂಕ್ ಜೊತೆಗೂಡಿ ವಿಶೇಷ ಸರಳ ಸಾಲ ಸೌಲಭ್ಯಗಳನ್ನು ಘೋಷಣೆ ಮಾಡಿದ್ದು, ಎಕ್ಸ್‌ಶೋರೂಂ ದರದ ಮೇಲೆ ಶೇ.100 ರಷ್ಟು ಸಾಲ ನೀಡುತ್ತಿದೆ. ಜೊತೆಗೆ ಸಾಲ ಮರುಪಾವತಿಗಾಗಿ ಗರಿಷ್ಠ 7 ವರ್ಷಗಳ ಕಾಲಾವಕಾಶ ನೀಡಲಾಗಿದ್ದು, ವಿಮಾ ಕಂತುಗಳಿಗೂ ಸಹ ಸಾಲ ಸೌಲಭ್ಯ ಒದಗಿಸುತ್ತಿದೆ.

ಹೆಚ್‌ಡಿಎಫ್‌ಸಿ ಜೊತೆಗೂಡಿ ಹೊಸ ವಾಹನ ಸಾಲ ಸೌಲಭ್ಯ ಪರಿಚಯಿಸಿದ ವೊಲ್ವೊ

ಕರೋನಾದಿಂದಾಗಿ ತಾತ್ಕಾಲಿಕವಾಗಿ ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಿರುವ ಗ್ರಾಹಕರಿಗೆ ಈ ವಿಶೇಷ ಸಾಲ ಸೌಲಭ್ಯಗಳು ಉಪಯುಕ್ತವಾಗಿದ್ದು, ಸ್ಟೆಪ್ ಅಪ್, ಬುಲೆಟ್ ಮತ್ತು ಬಲೂನ್ ಸಾಲ ಯೋಜನೆಗಳನ್ನು ಸಹ ಪರಿಚಯಿಸಲಾಗಿದೆ.

ಹೆಚ್‌ಡಿಎಫ್‌ಸಿ ಜೊತೆಗೂಡಿ ಹೊಸ ವಾಹನ ಸಾಲ ಸೌಲಭ್ಯ ಪರಿಚಯಿಸಿದ ವೊಲ್ವೊ

ವಿಶೇಷ ಸಾಲ ಸೌಲಭ್ಯದಡಿ ಲೋನ್ ಪಡೆಯುವ ಗ್ರಾಹಕರಿಗೆ ನಿಗದಿತ ಅವಧಿಯಲ್ಲಿ ಸಾಲ ಮರುಪಾವತಿ ಮಾಡಿದ್ದಲ್ಲಿ ಹೆಚ್ಚುವರಿ ಶುಲ್ಕಗಳ ವಿಧಿಸದಿರಲು ನಿರ್ಧರಿಸಲಾಗಿದ್ದು, ವಿಶೇಷ ಸಾಲ ವಿಭಾಗದಲ್ಲಿ ಅತಿ ಸುಲಭವಾಗಿ ಮತ್ತು ತ್ವರಿತವಾಗಿ ಸಾಲ ಪಡೆಯಲು ಸಾಧ್ಯವಾಗುತ್ತದೆ.

ಹೆಚ್‌ಡಿಎಫ್‌ಸಿ ಜೊತೆಗೂಡಿ ಹೊಸ ವಾಹನ ಸಾಲ ಸೌಲಭ್ಯ ಪರಿಚಯಿಸಿದ ವೊಲ್ವೊ

ಇನ್ನು ಕೋವಿಡ್-19 ಪರಿಣಾಮ ನೆಲಕಚ್ಚಿದ್ದ ದೇಶಿಯ ಆಟೋ ಉದ್ಯಮವು ಇದೀಗ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದು, ಮೇ, ಜೂನ್ ಮತ್ತು ಜುಲೈ ಅವಧಿಗಿಂತಲೂ ಅಗಸ್ಟ್ ಅವಧಿಯಲ್ಲಿನ ಹೊಸ ವಾಹನ ಮಾರಾಟವು ಸಾಕಷ್ಟು ಸುಧಾರಣೆ ಕಾಣುತ್ತಿದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಹೆಚ್‌ಡಿಎಫ್‌ಸಿ ಜೊತೆಗೂಡಿ ಹೊಸ ವಾಹನ ಸಾಲ ಸೌಲಭ್ಯ ಪರಿಚಯಿಸಿದ ವೊಲ್ವೊ

ಹೊಸ ವಾಹನಗಳ ನೋಂದಣಿಯು 2020ರ ಅಗಸ್ಟ್ ಅವಧಿಯಲ್ಲಿ ಸುಮಾರು ಶೇ. 26.81ರಷ್ಟು ಕುಸಿತ ಕಂಡುಬಂದಿದ್ದು, ಪ್ಯಾಸೆಂಜರ್ ಕಾರುಗಳು, ದ್ವಿಚಕ್ರ ವಾಹನಗಳು, ತ್ರಿ ಚಕ್ರ ವಾಹನಗಳು, ವಾಣಿಜ್ಯ ವಾಹನಗಳು ಮತ್ತು ಟ್ರ್ಯಾಕ್ಟರ್ ಮಾರಾಟವು ಒಟ್ಟಾರೆಯಾಗಿ 11,88,087 ಯುನಿಟ್ ಮಾರಾಟ ದಾಖಲಿಸಿವೆ. ಇದರಲ್ಲಿ ಟ್ರ್ಯಾಕ್ಟರ್ ಮಾರಾಟವನ್ನು ಹೊರತುಪಡಿಸಿ ಇನ್ನುಳಿದ ಎಲ್ಲಾ ಮಾದರಿಯ ವಾಹನಗಳ ಮಾರಾಟದಲ್ಲೂ ಕುಸಿತ ಕಂಡುಬಂದಿದೆ.

ಹೆಚ್‌ಡಿಎಫ್‌ಸಿ ಜೊತೆಗೂಡಿ ಹೊಸ ವಾಹನ ಸಾಲ ಸೌಲಭ್ಯ ಪರಿಚಯಿಸಿದ ವೊಲ್ವೊ

2019ರ ಅಗಸ್ಟ್ ಅವಧಿಯಲ್ಲಿ ಒಟ್ಟು 16,23,218 ಯುನಿಟ್ ವಾಹನಗಳನ್ನು ಮಾರಾಟ ಮಾಡಿದ್ದ ವಿವಿಧ ಆಟೋ ಉತ್ಪಾದನಾ ಕಂಪನಿಗಳು ಈ ಬಾರಿ ಶೇ.26.81ರಷ್ಟು ಕುಸಿತ ಅನುಭವಿಸಿದ್ದು, ಮೇ, ಜೂನ್ ಮತ್ತು ಜುಲೈ ಅವಧಿಗಿಂತಲೂ ಅಗಸ್ಟ್ ಅವಧಿಯಲ್ಲಿನ ವಾಹನ ಮಾರಾಟವು ತುಸು ಹೆಚ್ಚಳವಾಗಿದೆ ಎನ್ನಬಹುದು.

MOST READ: ಬಿಡುಗಡೆಗೆ ಸಿದ್ದವಾದ ಹೋಂಡಾದ ಮೊದಲ ಎಲೆಕ್ಟ್ರಿಕ್ ಕಾರು

ಹೆಚ್‌ಡಿಎಫ್‌ಸಿ ಜೊತೆಗೂಡಿ ಹೊಸ ವಾಹನ ಸಾಲ ಸೌಲಭ್ಯ ಪರಿಚಯಿಸಿದ ವೊಲ್ವೊ

ಮೇ, ಜೂನ್ ಮತ್ತು ಜುಲೈ ಅವಧಿಯಲ್ಲಿ ಶೇ. 40ರಿಂದ ಶೇ.65ರಷ್ಟು ಅನುಭವಿಸಿದ್ದ ಆಟೋ ಕಂಪನಿಗಳು ಇದೀಗ ಹೊಸ ವಾಹನ ಮಾರಾಟದಲ್ಲಿ ಬೆಳವಣಿಗೆ ಕಾಣುತ್ತಿದ್ದು, ಗ್ರಾಹಕರನ್ನು ಸೆಳೆಯಲು ವಿವಿಧ ಆಫರ್‌ಗಳು ಮತ್ತು ಸರಳ ಸಾಲ ಸೌಲಭ್ಯಗಳು ಪ್ರಮುಖ ಆಕರ್ಷಣೆಯಾಗುತ್ತಿವೆ.

Most Read Articles

Kannada
Read more on ವೊಲ್ವೊ volvo
English summary
Volvo Car India has collaborated with HDFC Bank to facilitate easy car loans. Read in Kannada.
Story first published: Friday, September 18, 2020, 8:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X