ತಾಂತ್ರಿಕ ದೋಷ ಸರಿಪಡಿಸಲು ಕಾರುಗಳನ್ನು ರಿಕಾಲ್ ಮಾಡಿದ ವೊಲ್ವೊ

ಆಟೋಮ್ಯಾಟಿಕ್ ಬ್ರೇಕ್ ಸಿಸ್ಟಂನಲ್ಲಿ ಉಂಟಾಗಿರುವ ಸಮಸ್ಯೆಯನ್ನು ಸರಿಪಡಿಸಲು ವೊಲ್ವೊ ಐಷಾರಾಮಿ ಕಾರುಗಳನ್ನು ವಿಶ್ವಾದ್ಯಂತ ರಿಕಾಲ್ ಮಾಡಲಾಗಿದೆ. ಇದರಲ್ಲಿ ಭಾರತದಲ್ಲಿರುವ ವೊಲ್ವೊ ಕಾರುಗಳೂ ಸಹ ಸೇರಿವೆ.

ತಾಂತ್ರಿಕ ದೋಷ ಸರಿಪಡಿಸಲು ಕಾರುಗಳನ್ನು ರಿಕಾಲ್ ಮಾಡಿದ ವೊಲ್ವೊ

ವೊಲ್ವೊ ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆಯಲ್ಲಿ, ಕಾಲಕಾಲಕ್ಕೆ ತಯಾರಿಸಿದ ಐಷಾರಾಮಿ ಕಾರುಗಳಲ್ಲಿರುವ ಆಟೋಮ್ಯಾಟಿಕ್ ಬ್ರೇಕ್ ಸಿಸ್ಟಂ ಕಂಟ್ರೋಲರ್ ಸಾಫ್ಟ್‌ವೇರ್‌ನಲ್ಲಿ ಈ ತಾಂತ್ರಿಕ ಸಮಸ್ಯೆ ಕಂಡುಬರುತ್ತದೆ ಎಂದು ಹೇಳಲಾಗಿದೆ.

ತಾಂತ್ರಿಕ ದೋಷ ಸರಿಪಡಿಸಲು ಕಾರುಗಳನ್ನು ರಿಕಾಲ್ ಮಾಡಿದ ವೊಲ್ವೊ

ಕೆಲವು ಟೆಂಪರೆಚರ್ ಗಳಲ್ಲಿ , ಈ ಆಟೋಮ್ಯಾಟಿಕ್ ಬ್ರೇಕ್ ಸಿಸ್ಟಂ ಅನ್ನು ಕಂಟ್ರೋಲ್ ಮಾಡುವ ಸಾಧನವು ಅಸಮರ್ಪಕವಾಗಿ ಕಾರ್ಯ ನಿರ್ವಹಿಸುವುದರಿಂದ ಕಂಟ್ರೋಲರ್ ಸಾಫ್ಟ್‌ವೇರ್ ಕಾರ್ಯನಿರ್ವಹಿಸದಂತೆ ಆಗುತ್ತದೆ.

ತಾಂತ್ರಿಕ ದೋಷ ಸರಿಪಡಿಸಲು ಕಾರುಗಳನ್ನು ರಿಕಾಲ್ ಮಾಡಿದ ವೊಲ್ವೊ

ವೊಲ್ವೊ ಕಂಪನಿಯ ಎಕ್ಸ್‌ಸಿ 40, ಎಕ್ಸ್‌ಸಿ 60, ಎಕ್ಸ್‌ಸಿ 90, ಎಸ್ 60, ಎಸ್ 90 ಹಾಗೂ ವಿ ಸರಣಿಯ ಕಾರುಗಳು ಈ ಸಮಸ್ಯೆಯನ್ನು ಹೊಂದಿವೆ ಎಂದು ವರದಿಯಾಗಿದೆ.

ತಾಂತ್ರಿಕ ದೋಷ ಸರಿಪಡಿಸಲು ಕಾರುಗಳನ್ನು ರಿಕಾಲ್ ಮಾಡಿದ ವೊಲ್ವೊ

2018ರ ನವೆಂಬರ್‌ನಿಂದ ಈ ತಿಂಗಳವರೆಗೆ 7.5 ಲಕ್ಷ ಕಾರುಗಳನ್ನು ವಿಶ್ವದ ವಿವಿಧ ದೇಶಗಳಲ್ಲಿ ಮಾರಾಟ ಮಾಡಲಾಗಿದೆ ಎಂದು ಹೇಳಲಾಗಿದೆ.

ತಾಂತ್ರಿಕ ದೋಷ ಸರಿಪಡಿಸಲು ಕಾರುಗಳನ್ನು ರಿಕಾಲ್ ಮಾಡಿದ ವೊಲ್ವೊ

ಈ ಕಾರಣಕ್ಕೆ ಈ ಕಾರುಗಳು ಅಪಘಾತಕ್ಕೆ ಒಳಗಾಗುವ ಸಾಧ್ಯತೆಗಳಿರುತ್ತವೆ. ಆದ್ದರಿಂದ ಈ ಕಾರುಗಳಲ್ಲಿರುವ ಆಟೋಮ್ಯಾಟಿಕ್ ಬ್ರೇಕ್ ಸಿಸ್ಟಂ ಅನ್ನು ಕಂಟ್ರೋಲ್ ಮಾಡುವ ಸಾಫ್ಟ್‌ವೇರ್ ಅನ್ನು ಪರೀಕ್ಷಿಸಲು ಹಾಗೂ ಸರಿಪಡಿಸಲು ಮುಂದಾಗಿದ್ದೇವೆ ಎಂದು ವೊಲ್ವೊ ಕಂಪನಿ ಹೇಳಿದೆ.

ತಾಂತ್ರಿಕ ದೋಷ ಸರಿಪಡಿಸಲು ಕಾರುಗಳನ್ನು ರಿಕಾಲ್ ಮಾಡಿದ ವೊಲ್ವೊ

ಭಾರತದಲ್ಲಿ 1,891 ವೊಲ್ವೊ ಕಾರುಗಳನ್ನು ರಿಕಾಲ್ ಮಾಡಲಾಗುತ್ತಿದ್ದು, ತೊಂದರೆ ಏನು ಎಂಬುದನ್ನು ಪರೀಕ್ಷಿಸಬೇಕಾಗಿದೆ. ಈ ಸಂಬಂಧ, ಡೀಲರ್ ಗಳು ಸಂಬಂಧಪಟ್ಟ ಗ್ರಾಹಕರಿಗೆ ಮಾಹಿತಿ ನೀಡಿದ್ದಾರೆ.

ತಾಂತ್ರಿಕ ದೋಷ ಸರಿಪಡಿಸಲು ಕಾರುಗಳನ್ನು ರಿಕಾಲ್ ಮಾಡಿದ ವೊಲ್ವೊ

ಆದರೆ, ಕರೋನಾ ವೈರಸ್ ನಿಂದಾಗಿ, ಗ್ರಾಹಕರು ಬರುವುದು ತಡವಾಗಲಿದೆ ಎಂದು ಹೇಳಲಾಗಿದೆ. ವೊಲ್ವೊ ಡೀಲರ್ ಗಳ ಪ್ರಕಾರ, ಸಾಫ್ಟ್‌ವೇರ್ ಅನ್ನು ಶೀಘ್ರದಲ್ಲೇ ಅಪ್ ಡೇಟ್ ಮಾಡಿ, ಸಮಸ್ಯೆಯನ್ನು ಪರಿಹರಿಸಲಾಗುವುದು.

ತಾಂತ್ರಿಕ ದೋಷ ಸರಿಪಡಿಸಲು ಕಾರುಗಳನ್ನು ರಿಕಾಲ್ ಮಾಡಿದ ವೊಲ್ವೊ

ವೊಲ್ವೊ ಕಾರುಗಳು ವಿಶ್ವದ ಪ್ರಮುಖ ಕಾರು ಮಾದರಿಗಳಾಗಿವೆ. ಆದರೆ, ಈ ಕಾರುಗಳಲ್ಲಿ ಉಂಟಾಗಿರುವ ಸುರಕ್ಷಾ ಫೀಚರ್ ಗಳ ಕೊರತೆಯು ಗ್ರಾಹಕರಲ್ಲಿ ನಿರಾಶೆಯನ್ನು ಉಂಟು ಮಾಡಿದೆ. ಈಗ ವೊಲ್ವೊ ಕಂಪನಿಯು ಸಮಸ್ಯೆಯನ್ನು ಬಗೆಹರಿಸಲು ತಾನೇ ಮುಂದಾಗಿದೆ.

Most Read Articles

Kannada
Read more on ವೊಲ್ವೊ volvo
English summary
Volvo cars recalled in India over emergency braking issue. Read in Kannada.
Story first published: Sunday, March 22, 2020, 11:17 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X