ಹೊಸ ಕಾರುಗಳನ್ನು 30 ಮೀಟರ್ ಎತ್ತರದಿಂದ ಕೆಳಕ್ಕೆ ಬೀಳಿಸಿದ್ದು ಈ ಕಾರಣಕ್ಕೆ...

ವೊಲ್ವೋ ಕಾರ್ಸ್ ಕಂಪನಿಯು ಇತ್ತೀಚೆಗೆ ಕ್ರೇನ್ ಬಳಸಿ ಎತ್ತರದಿಂದ ಹಲವಾರು ಹೊಸ ಕಾರುಗಳನ್ನು ಕೆಳಕ್ಕೆ ಬೀಳಿಸುತ್ತಿರುವ ವೀಡಿಯೊವನ್ನು ಬಿಡುಗಡೆಗೊಳಿಸಿದೆ. ಕಂಪನಿಯು ಈ ರೀತಿಯಲ್ಲಿ ಹೊಸ ಕಾರುಗಳ ಅಪಘಾತ ಪರೀಕ್ಷೆಗಳನ್ನು ನಡೆಸಿದೆ.

ಹೊಸ ಕಾರುಗಳನ್ನು 30 ಮೀಟರ್ ಎತ್ತರದಿಂದ ಕೆಳಕ್ಕೆ ಬೀಳಿಸಿದ್ದು ಈ ಕಾರಣಕ್ಕೆ...

ಫಸ್ಟ್ ರೆಸ್ಪಾಂಡರ್ ಗಳು ಹಾನಿಯನ್ನು ನಿರ್ಣಯಿಸುವುದರ ಜೊತೆಗೆ ಕಾರಿನಲ್ಲಿ ಗಾಯಗೊಂಡವರನ್ನು ಕಾರಿನಿಂದ ಹೊರಗೆ ಕರೆದೊಯ್ಯುವ ಕೌಶಲ್ಯವನ್ನು ಸುಧಾರಿಸುವ ಉದ್ದೇಶದಿಂದ ಈ ಅಪಘಾತಗಳನ್ನು ನಡೆಸಲಾಯಿತು. ಇದಕ್ಕಾಗಿ ವೊಲ್ವೋ ಕಂಪನಿಯು ಹಲವಾರು ಸಂಭವನೀಯ ಅಪಘಾತ ಸನ್ನಿವೇಶಗಳನ್ನು ಮರುಸೃಷ್ಟಿಸಿದೆ.

ಹೊಸ ಕಾರುಗಳನ್ನು 30 ಮೀಟರ್ ಎತ್ತರದಿಂದ ಕೆಳಕ್ಕೆ ಬೀಳಿಸಿದ್ದು ಈ ಕಾರಣಕ್ಕೆ...

ಈ ಪರೀಕ್ಷೆಯಲ್ಲಿದ್ದ ಅತ್ಯಂತ ಅಪಾಯಕಾರಿ ಸಂಗತಿಯೆಂದರೆ ಸ್ಫೋಟಕಗಳ ಬಳಕೆ. ಮೂಲಗಳ ಪ್ರಕಾರ, ಈ ಹೊಸ ಕಾರುಗಳನ್ನು 30 ಮೀಟರ್ ಎತ್ತರದಿಂದ ಕೈಬಿಡಲಾಯಿತು. ಈ ಪರೀಕ್ಷೆಯನ್ನು ಸಾಮಾನ್ಯ ಕ್ರ್ಯಾಶ್ ಪರೀಕ್ಷೆಯಂತೆಯೇ ನಡೆಸಲಾಯಿತು.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಹೊಸ ಕಾರುಗಳನ್ನು 30 ಮೀಟರ್ ಎತ್ತರದಿಂದ ಕೆಳಕ್ಕೆ ಬೀಳಿಸಿದ್ದು ಈ ಕಾರಣಕ್ಕೆ...

ವೊಲ್ವೋ ಕಂಪನಿಯು ಅಪಘಾತದ ಎಲ್ಲಾ ಸನ್ನಿವೇಶಗಳನ್ನು ಪರಿಗಣಿಸಿತ್ತು. ಆದ್ದರಿಂದ ಈ ಪರೀಕ್ಷೆಗಳನ್ನು ನಿಜವಾದ ಕಾರು ಅಪಘಾತಗಳ ರೀತಿಯಲ್ಲಿಯೇ ನಡೆಸಲಾಯಿತು.

ಹೊಸ ಕಾರುಗಳನ್ನು 30 ಮೀಟರ್ ಎತ್ತರದಿಂದ ಕೆಳಕ್ಕೆ ಬೀಳಿಸಿದ್ದು ಈ ಕಾರಣಕ್ಕೆ...

ಇದರಿಂದಾಗಿ ಫಸ್ಟ್ ರೆಸ್ಪಾಂಡರ್ ಗಳು ಈ ಪರಿಸ್ಥಿತಿಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬಹುದು. ಈ ಪರೀಕ್ಷೆಯು ಜಾಯ್ ಆಫ್ ಲೈಫ್ ಎಂದು ಕರೆಯಲ್ಪಡುವ ಒಂದು ರೀತಿಯ ಹೈಡ್ರಾಲಿಕ್ ರೆಸ್ಕ್ಯು ಸಾಧನಗಳನ್ನು ಒಳಗೊಂಡಿರುತ್ತದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಹೊಸ ಕಾರುಗಳನ್ನು 30 ಮೀಟರ್ ಎತ್ತರದಿಂದ ಕೆಳಕ್ಕೆ ಬೀಳಿಸಿದ್ದು ಈ ಕಾರಣಕ್ಕೆ...

ಈ ಬಗ್ಗೆ ಮಾತನಾಡಿರುವ ವೊಲ್ವೋ ಕಾರ್ಸ್ ಟ್ರಾಫಿಕ್ ಆಕ್ಸಿಡೆಂಟ್ ರಿಸರ್ಚ್ ಟೀಂನ ಹಿರಿಯ ಅಧಿಕಾರಿ ಹಕನ್ ಗುಸ್ಟಾಫ್ಸನ್, ನಾವು ಹಲವಾರು ವರ್ಷಗಳಿಂದ ಸ್ವೀಡಿಷ್ ರೆಸ್ಕ್ಯು ಸೇವೆಗಳೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದ್ದೇವೆ. ನಾವು, ಎಲ್ಲರೂ ರಸ್ತೆಯಲ್ಲಿ ಸುರಕ್ಷಿತವಾಗಿ ಸಾಗಬೇಕೆಂಬ ಗುರಿಯನ್ನು ಹೊಂದಿದ್ದೇವೆ.

ಹೊಸ ಕಾರುಗಳನ್ನು 30 ಮೀಟರ್ ಎತ್ತರದಿಂದ ಕೆಳಕ್ಕೆ ಬೀಳಿಸಿದ್ದು ಈ ಕಾರಣಕ್ಕೆ...

ಯಾರೂ ಗಂಭೀರವಾದ ಅಪಘಾತಗಳನ್ನು ಅನುಭವಿಸಬೇಕಾಗಿಲ್ಲ. ಆದರೆ ಎಲ್ಲಾ ಅಪಘಾತಗಳನ್ನು ತಪ್ಪಿಸಲು ಸಾಧ್ಯವಿಲ್ಲ. ಗಂಭೀರವಾದ ಅಪಘಾತಗಳು ಸಂಭವಿಸಿದಾಗ ಜೀವಗಳನ್ನು ಉಳಿಸಲು ಸಹಾಯ ಮಾಡುವ ಮಾರ್ಗಗಳು ಇರಬೇಕು ಎಂದು ಅವರು ಹೇಳಿದರು.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಹೊಸ ಕಾರುಗಳನ್ನು 30 ಮೀಟರ್ ಎತ್ತರದಿಂದ ಕೆಳಕ್ಕೆ ಬೀಳಿಸಿದ್ದು ಈ ಕಾರಣಕ್ಕೆ...

ಮಾಹಿತಿಯ ಪ್ರಕಾರ ಈ ತರಬೇತಿ ಕಾರ್ಯಕ್ರಮದಲ್ಲಿ ವೊಲ್ವೋ ಕ್ರೇನ್‌ನಿಂದ ಒಟ್ಟು ಹತ್ತು ಕಾರುಗಳನ್ನು ಕೆಳಕ್ಕೆ ಬೀಳಿಸಲಾಗಿದೆ. ಆ ಹತ್ತು ಕಾರುಗಳು ವಿಭಿನ್ನ ಗಾತ್ರ, ಆಕಾರ ಹಾಗೂ ವಿಭಿನ್ನ ಸೆಗ್ ಮೆಂಟ್ ಗಳಿಗೆ ಸೇರಿದವು.

ಹೊಸ ಕಾರುಗಳನ್ನು 30 ಮೀಟರ್ ಎತ್ತರದಿಂದ ಕೆಳಕ್ಕೆ ಬೀಳಿಸಿದ್ದು ಈ ಕಾರಣಕ್ಕೆ...

ಇದರ ಜೊತೆಗೆ ವೊಲ್ವೋದ ಸೆಫ್ಟಿ ಎಂಜಿನಿಯರ್‌ಗಳು ಪ್ರತಿ ಕಾರುಗಳು ನಿರೀಕ್ಷೆಯನ್ನು ತಲುಪಲು ಎಷ್ಟು ಒತ್ತಡ ಹಾಗೂ ಬಲವನ್ನು ಅನ್ವಯಿಸಬೇಕು ಎಂಬುದನ್ನು ಪರಿಗಣಿಸಿದ್ದರು.

Most Read Articles

Kannada
Read more on ವೊಲ್ವೋ volvo
English summary
Volvo drops new cars from 30 meters height through crane. Read in Kannada.
Story first published: Tuesday, November 17, 2020, 17:57 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X