2022ರಿಂದ ಡೀಸೆಲ್ ಕಾರುಗಳ ಮಾರಾಟವನ್ನು ಸಂಪೂರ್ಣವಾಗಿ ಬಂದ್ ಮಾಡಲಿದೆ ವೊಲ್ವೊ

ಸ್ವಿಡಿಷ್ ಆಟೋ ಕಂಪನಿಯು ಭವಿಷ್ಯ ಯೋಜನೆಗಳಿಗೆ ಚಾಲನೆ ನೀಡುವ ಮೂಲಕ ವಾಹನ ಉತ್ಪಾದನೆಯಲ್ಲಿ ಮಹತ್ವದ ಬದಲಾವಣೆ ತರುತ್ತಿದ್ದು, ಶೀಘ್ರದಲ್ಲೇ ತನ್ನ ಪ್ರಮುಖ ಕಾರು ಮಾದರಿಗಳಲ್ಲಿನ ಡೀಸೆಲ್ ಎಂಜಿನ್ ಮಾದರಿಗಳ ಮಾರಾಟವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲು ನಿರ್ಧರಿಸಿದೆ.

ಡೀಸೆಲ್ ಕಾರುಗಳ ಮಾರಾಟವನ್ನು ಸಂಪೂರ್ಣವಾಗಿ ಬಂದ್ ಮಾಡಲಿದೆ ವೊಲ್ವೊ

ಮಾಲಿನ್ಯ ತಡೆಗಾಗಿ ಈಗಾಗಲೇ ಮುಂದುವರಿದ ಹಲವು ರಾಷ್ಟ್ರಗಳು ಡೀಸೆಲ್ ಎಂಜಿನ್ ವಾಹನಗಳ ಬಳಕೆ ಮೇಲೆ ಹಲವಾರು ನಿರ್ಬಂಧಗಳನ್ನು ವಿಧಿಸುತ್ತಿದ್ದು, ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಉತ್ತೇಜನ ನೀಡುತ್ತಿವೆ. ಇದಕ್ಕೆ ಪೂರಕವಾಗಿ ಭವಿಷ್ಯದ ವಾಹನ ಮಾದರಿಗಳ ಮೇಲೆ ಗಮನಹರಿಸಿರುವ ಆಟೋ ಉತ್ಪಾದನಾ ಕಂಪನಿಗಳು ಕೂಡಾ ಡೀಸೆಲ್ ವಾಹನಗಳ ಉತ್ಪಾದನೆಯನ್ನು ತಗ್ಗಿಸುವ ಮೂಲಕ ಎಲೆಕ್ಟ್ರಿಕ್ ವಾಹನಗಳ ಸಂಖ್ಯೆಯನ್ನು ಹೆಚ್ಚಿಸುತ್ತಿವೆ.

ಡೀಸೆಲ್ ಕಾರುಗಳ ಮಾರಾಟವನ್ನು ಸಂಪೂರ್ಣವಾಗಿ ಬಂದ್ ಮಾಡಲಿದೆ ವೊಲ್ವೊ

ವೊಲ್ವೊ ಕಂಪನಿಯು ಕೂಡಾ ಈಗಾಗಲೇ ತನ್ನ ಪ್ರಮುಖ ಕಾರು ಮಾದರಿಗಳಲ್ಲಿ ಡೀಸೆಲ್ ಎಂಜಿನ್ ಸ್ಥಗಿತಗೊಳಿಸಿ ಪೂರ್ಣ ಪ್ರಮಾಣದಲ್ಲಿ ಪೆಟ್ರೋಲ್ ಮತ್ತು ಹೈಬ್ರಿಡ್ ಮಾದರಿಗಳನ್ನು ಮಾತ್ರ ಮಾರಾಟ ಮಾಡುತ್ತಿದ್ದು, 2022ರಿಂದ ಇನ್ನುಳಿದ ಕಾರು ಮಾದರಿಗಳಲ್ಲಿನ ಡೀಸೆಲ್ ಎಂಜಿನ್ ಆಯ್ಕೆಯನ್ನು ಸಹ ಸಂಪೂರ್ಣವಾಗಿ ಸ್ಥಗಿತಗೊಳಿಸಲಿದೆ.

ಡೀಸೆಲ್ ಕಾರುಗಳ ಮಾರಾಟವನ್ನು ಸಂಪೂರ್ಣವಾಗಿ ಬಂದ್ ಮಾಡಲಿದೆ ವೊಲ್ವೊ

ಹೈಬ್ರಿಡ್ ಎಂಜಿನ್ ವಾಹನ ಉತ್ಪಾದನೆಯಲ್ಲಿ ಈಗಾಗಲೇ ಮುಂಚೂಣಿ ಹೊಂದಿರುವ ವೊಲ್ವೊ ಕಂಪನಿಯು 2023ರ ವೇಳೆಗೆ ಒಟ್ಟು 6 ಕಾರು ಮಾದರಿಗಳನ್ನು ಎಲೆಕ್ಟ್ರಿಕ್ ರೂಪಾಂತರದಲ್ಲಿ ಮಾರಾಟಮಾಡುವ ಗುರಿಹೊಂದಿದ್ದು, 2021ರ ಮಧ್ಯಂತರ ಎಕ್ಸ್‌ಸಿ40 ಎಲೆಕ್ಟ್ರಿಕ್ ಮಾದರಿಯ ಬಿಡುಗಡೆಗೆ ಸಿದ್ದವಾಗಿದೆ.

ಡೀಸೆಲ್ ಕಾರುಗಳ ಮಾರಾಟವನ್ನು ಸಂಪೂರ್ಣವಾಗಿ ಬಂದ್ ಮಾಡಲಿದೆ ವೊಲ್ವೊ

ತದನಂತರ ಹಂತ ಹಂತವಾಗಿ ಇನ್ನುಳಿದ ಪ್ರಮುಖ ಕಾರು ಮಾದರಿಗಳಲ್ಲೂ ಎಲೆಕ್ಟ್ರಿಕ್ ಮಾದರಿಯನ್ನು ಬಿಡುಗಡೆ ಮಾಡಲಿದ್ದು, 2022ರ ವೇಳೆಗೆ ಡೀಸೆಲ್ ಎಂಜಿನ್ ಕಾರುಗಳ ಮಾರಾಟವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಿದೆ. ಡೀಸೆಲ್ ಎಂಜಿನ್ ಸ್ಥಗಿತದ ನಂತರ ಪೆಟ್ರೋಲ್, ಪೆಟ್ರೋಲ್ ಹೈಬ್ರಿಡ್ ಮತ್ತು ಪೂರ್ಣ ಪ್ರಮಾಣದ ಎಲೆಕ್ಟ್ರಿಕ್ ಕಾರುಗಳನ್ನು ಮಾರಾಟ ಮಾಡಲಿದ್ದು, 2030ರ ವೇಳೆಗೆ ಪೆಟ್ರೋಲ್ ಕಾರುಗಳ ಮಾರಾಟವನ್ನು ಸಹ ಸ್ಥಗಿತ ಮಾಡಲಾಗುತ್ತದೆ.

ಡೀಸೆಲ್ ಕಾರುಗಳ ಮಾರಾಟವನ್ನು ಸಂಪೂರ್ಣವಾಗಿ ಬಂದ್ ಮಾಡಲಿದೆ ವೊಲ್ವೊ

ಭಾರತ ಸೇರಿ ವಿಶ್ವದ ಪ್ರಮುಖ ರಾಷ್ಟ್ರಗಳು 2030ರ ವೇಳೆ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಚಾಲಿತ ವಾಹನ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಗೊಳಿಸುವ ಸಿದ್ದತೆಯಲ್ಲಿದ್ದು, ಡೀಸೆಲ್ ಮತ್ತು ಪೆಟ್ರೋಲ್ ವಾಹನಗಳಿಗೆ ಪರ್ಯಾಯವಾಗಿ ಎಲೆಕ್ಟ್ರಿಕ್ ವಾಹನ ಬಳಕೆಯನ್ನು ಹೆಚ್ಚಿಸಲು ಹಲವಾರು ಯೋಜನೆಗಳನ್ನು ಜಾರಿಗೆ ತರವಾಗಿದೆ.

ಡೀಸೆಲ್ ಕಾರುಗಳ ಮಾರಾಟವನ್ನು ಸಂಪೂರ್ಣವಾಗಿ ಬಂದ್ ಮಾಡಲಿದೆ ವೊಲ್ವೊ

ಡೀಸೆಲ್ ಎಂಜಿನ್ ವಾಹನಗಳ ಬಳಕೆಗೆ ನಿರ್ಬಂಧ ವಿಧಿಸುವ ಮೂಲಕ ಎಲೆಕ್ಟ್ರಿಕ್ ವಾಹನಗಳ ಖರೀದಿ ಉತ್ತೇಜಿಸಲು ತೆರಿಗೆ ವಿನಾಯ್ತಿ, ಜಿಎಸ್‌ಟಿ ವಿನಾಯ್ತಿಗಳನ್ನು ನೀಡಲಾಗುತ್ತಿದ್ದು, ಆಟೋ ಉತ್ಪಾದನಾ ಕಂಪನಿಗಳಿಗೂ ಕೂಡಾ ಸಬ್ಸಡಿ ನೀಡುವ ಮೂಲಕ ಹೊಸ ಬದಲಾವಣೆಗೆ ಯೋಜನೆ ಜಾರಿಗೊಳಿಸಿದೆ.

ಡೀಸೆಲ್ ಕಾರುಗಳ ಮಾರಾಟವನ್ನು ಸಂಪೂರ್ಣವಾಗಿ ಬಂದ್ ಮಾಡಲಿದೆ ವೊಲ್ವೊ

ಇನ್ನು ವೊಲ್ವೊ ಕಂಪನಿಯು ಭಾರತ ಸೇರಿದಂತೆ ವಿಶ್ವದ ಪ್ರಮುಖ ಮಾರುಕಟ್ಟೆಗಳಲ್ಲಿ ತನ್ನ ಮೊದಲ ಎಲೆಕ್ಟ್ರಿಕ್ ಕಾರು ಮಾದರಿಯಾದ ಎಕ್ಸ್‌ಸಿ40 ಆವೃತ್ತಿಯ ಬಿಡುಗಡೆಗೆ ಭರ್ಜರಿ ಸಿದ್ದತೆ ನಡೆಸಿದ್ದು, ವಿಶೇಷ ತಾಂತ್ರಿಕ ಅಂಶಗಳನ್ನು ಒಳಗೊಂಡಿರುವ ಹೊಸ ಕಾರಿನ ಉತ್ಪಾದನೆಗೆ ಈಗಾಗಲೇ ಚಾಲನೆ ಕೂಡಾ ನೀಡಲಾಗಿದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಡೀಸೆಲ್ ಕಾರುಗಳ ಮಾರಾಟವನ್ನು ಸಂಪೂರ್ಣವಾಗಿ ಬಂದ್ ಮಾಡಲಿದೆ ವೊಲ್ವೊ

ಹೊಸ ಕಾರು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ 150kW ಎಲೆಕ್ಟ್ರಿಕ್ ಮೋಟಾರ್‌ನೊಂದಿಗೆ 78kWh ಲೀಥಿಯಂ ಅಯಾನ್ ಬ್ಯಾಟರಿಯನ್ನು ಪಡೆದುಕೊಳ್ಳುವ ಸಾಧ್ಯತೆಗಳಿದ್ದು, 150kW ಎಲೆಕ್ಟ್ರಿಕ್ ಮೋಟಾರ್‌ ಸೌಲಭ್ಯದೊಂದಿಗೆ 402-ಬಿಎಚ್‌ಪಿ ಮತ್ತು 659-ಎನ್ಎಂ ಟಾರ್ಕ್ ಉತ್ಪಾದನೆ ಮಾಡಲಿದೆ.

ಡೀಸೆಲ್ ಕಾರುಗಳ ಮಾರಾಟವನ್ನು ಸಂಪೂರ್ಣವಾಗಿ ಬಂದ್ ಮಾಡಲಿದೆ ವೊಲ್ವೊ

ಎಕ್ಸ್‌ಸಿ40 ಎಲೆಕ್ಟ್ರಿಕ್ ಕಾರು ಎಲೆಕ್ಟ್ರಿಕ್ ಕಾರು ಮಾದರಿಯಲ್ಲೇ ಉತ್ತಮ ಪರ್ಫಾಮೆನ್ಸ್‌ನೊಂದಿಗೆ ಅಧಿಕ ಮೈಲೇಜ್ ಪ್ರೇರಣೆ ಪಡೆದುಕೊಳ್ಳಲಿದ್ದು, ಪ್ರತಿ ಚಾರ್ಜ್‌ಗೆ ಗರಿಷ್ಠ 418 ಕಿ.ಮೀ ಮೈಲೇಜ್ ಹಿಂದಿರುಗಿಸಲಿದೆ.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಡೀಸೆಲ್ ಕಾರುಗಳ ಮಾರಾಟವನ್ನು ಸಂಪೂರ್ಣವಾಗಿ ಬಂದ್ ಮಾಡಲಿದೆ ವೊಲ್ವೊ

78kWh ಲೀಥಿಯಂ ಅಯಾನ್ ಬ್ಯಾಟರಿಯನ್ನು ಫಾಸ್ಟ್ ಚಾರ್ಜರ್ ಮೂಲಕ ಕೇವಲ 40 ನಿಮಿಷಗಳಲ್ಲಿ ಶೇ.80 ರಷ್ಟು ರೀಚಾರ್ಜ್ ಮಾಡಬಹುದಾಗಿದ್ದು, ಹಲವಾರು ಐಷಾರಾಮಿ ಫೀಚರ್ಸ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ.

Most Read Articles

Kannada
Read more on ವೊಲ್ವೊ volvo
English summary
Volvo to discontinue diesel models in India by 2022. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X