ಭಾರತದಲ್ಲಿ ವಿ90 ಕ್ರಾಸ್ ಕಂಟ್ರಿ ಕಾರು ಮಾರಾಟವನ್ನು ಸ್ಥಗಿತಗೊಳಿಸಿದ ವೊಲ್ವೊ

ವೊಲ್ವೊ ಇಂಡಿಯಾ ಕಂಪನಿಯು ತನ್ನ ಐಷಾರಾಮಿ ಕಾರು ಮಾದರಿಯಾದ ವಿ90 ಕ್ರಾಸ್ ಕಂಟ್ರಿ ಕಾರನ್ನು ಮಾರಾಟದಿಂದ ಸ್ಥಗಿತಗೊಳಿಸಲಾಗಿದ್ದು, ಕಾರಿನ ಮಾಹಿತಿಯನ್ನು ಅಧಿಕೃತ ವೆಬ್‌ಸೈಟ್‌ನಿಂದ ತೆಗೆದುಹಾಕಲಾಗಿದೆ.

ಭಾರತದಲ್ಲಿ ವಿ90 ಕ್ರಾಸ್ ಕಂಟ್ರಿ ಕಾರು ಮಾರಾಟವನ್ನು ಸ್ಥಗಿತ

ವ್ಯಾಗನ್ ವರ್ಷನ್ ಎಸ್90 ಎಸ್‌ಯುವಿ ಜೊತೆಗೆ 2017ರಲ್ಲಿ ವಿ90 ಕ್ರಾಸ್ ಕಂಟ್ರಿ ಮಾದರಿಯನ್ನು ಸಹ ಬಿಡುಗಡೆ ಮಾಡಿದ್ದ ಸ್ವಿಡಿಷ್ ಕಾರು ಉತ್ಪಾದನಾ ಕಂಪನಿ ವೊಲ್ವೊ ಇದೀಗ ಗ್ರಾಹಕರ ಬೇಡಿಕೆ ಅನ್ವಯ ಸ್ಥಗಿತಗೊಳಿಸಿದ್ದು, ಭವಿಷ್ಯದಲ್ಲಿ ಮತ್ತಷ್ಟು ಹೊಸ ಕಾರು ಮಾದರಿಗಳನ್ನು ಬಿಡುಗಡೆ ಮಾಡುವ ಸಿದ್ದತೆಯಲ್ಲಿದೆ. ಸದ್ಯ ದೇಶಿಯ ಮಾರುಕಟ್ಟೆಯಲ್ಲಿ ನಾಲ್ಕು ವಿವಿಧ ಕಾರು ಮಾದರಿಗಳ ಮಾರಾಟವನ್ನು ಹೊಂದಿರುವ ವೊಲ್ವೊ ಕಂಪನಿಯು ಹೊಸ ವಾಹನಗಳ ಉತ್ಪಾದನೆ ಸಾಕಷ್ಟು ಬದಲಾವಣೆ ಪರಿಚಯಿಸುತ್ತಿದೆ.

ಭಾರತದಲ್ಲಿ ವಿ90 ಕ್ರಾಸ್ ಕಂಟ್ರಿ ಕಾರು ಮಾರಾಟವನ್ನು ಸ್ಥಗಿತ

ವೊಲ್ವೊ ಇಂಡಿಯಾ ಕಂಪನಿಯು ಸದ್ಯ ದೇಶಿಯ ಮಾರುಕಟ್ಟೆಯಲ್ಲಿ ಎಸ್90 ಸೆಡಾನ್ ಸೇರಿದಂತೆ ಎಸ್‌ಯುವಿ ಕಾರು ಮಾದರಿಗಳಾದ ಎಕ್ಸ್‌ಸಿ40, ಎಕ್ಸ್‌ಸಿ60 ಮತ್ತು ಎಕ್ಸ್‌ಸಿ90 ಕಾರುಗಳ ಮಾರಾಟವನ್ನು ಹೊಂದಿದ್ದು, ಇದೀಗ ಮಾರಾಟದಿಂದ ಸ್ಥಗಿತಗೊಳಿಸಲಾದ ವಿ90 ಕ್ರಾಸ್ ಕಂಟ್ರಿ ಮಾದರಿಯ ಎಸ್‌ಯುವಿ ಕಾರುಗಳಲ್ಲೇ ಉನ್ನತ ಮಾದರಿಯ ಆವೃತ್ತಿಯಾಗಿತ್ತು.

ಭಾರತದಲ್ಲಿ ವಿ90 ಕ್ರಾಸ್ ಕಂಟ್ರಿ ಕಾರು ಮಾರಾಟವನ್ನು ಸ್ಥಗಿತ

ಬಿಡುಗಡೆಯ ಸಂದರ್ಭದಲ್ಲಿ ಅತ್ಯುತ್ತಮ ಬೇಡಿಕೆ ಪೆಡದುಕೊಂಡರೂ ಇತ್ತೀಚೆಗೆ ಹೊಸ ಕಾರಿನ ಮಾರಾಟವು ಸಂಪೂರ್ಣವಾಗಿ ನೆಲಕಚ್ಚಿತ್ತು. ಬೇಡಿಕೆಯಿಲ್ಲದ ಹಿನ್ನಲೆಯಲ್ಲಿ ವಿ90 ಕ್ರಾಸ್ ಕಂಟ್ರಿ ಮಾರಾಟವನ್ನು ಸ್ಥಗಿತಗೊಳಸಿರುವ ಕಂಪನಿಯು ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ಉತ್ಪನ್ನಗಳ ಬಿಡುಗಡೆಗೆ ಸಿದ್ದವಾಗಿದೆ.

ಭಾರತದಲ್ಲಿ ವಿ90 ಕ್ರಾಸ್ ಕಂಟ್ರಿ ಕಾರು ಮಾರಾಟವನ್ನು ಸ್ಥಗಿತ

ವಿ90 ಕ್ರಾಸ್ ಕಂಟ್ರಿ ಕಾರು ಮಾದರಿಯು ಅತ್ಯುತ್ತಮ ಎಂಜಿನ್ ಆಯ್ಕೆಯೊಂದಿಗೆ ಐಷಾರಾಮಿ ಫೀಚರ್ಸ್ ಪಡೆದುಕೊಂಡಿದ್ದರೂ ಪ್ರತಿಸ್ಪರ್ಧಿ ಕಾರು ಮಾರಾಟದ ಮುಂದೆ ತೀವ್ರ ಹಿನ್ನಡೆ ಅನುಭವಿಸಿತ್ತು. ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 65.35 ಲಕ್ಷ ಬೆಲೆ ಹೊಂದಿದ್ದ ವಿ90 ಕ್ರಾಸ್ ಕಂಟ್ರಿ ಕಾರು ಮಾದರಿಯು 2.0-ಲೀಟರ್ ಟ್ವಿನ್ ಟರ್ಬೋ ಡೀಸೆಲ್ ಎಂಜಿನ್ ಹೊಂದಿತ್ತು.

ಭಾರತದಲ್ಲಿ ವಿ90 ಕ್ರಾಸ್ ಕಂಟ್ರಿ ಕಾರು ಮಾರಾಟವನ್ನು ಸ್ಥಗಿತ

ಆಲ್‌ವೀಲ್ಹ್ ಡ್ರೈವ್ ಸಿಸ್ಟಂ ಜೊತೆಗೆ 8-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಹೊಂದಿದ್ದ ಕ್ರಾಸ್ ಕಂಟ್ರಿ ಕಾರು ಮಾದರಿಯು 235-ಬಿಎಚ್‌ಪಿ, 480-ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಅತ್ಯುತ್ತಮ ಎಸ್‌ಯುವಿ ಮಾದರಿ ಎಂಬ ಹೆಗ್ಗಳಿಕೆ ಪಾತ್ರವಾಗಿತ್ತು.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಭಾರತದಲ್ಲಿ ವಿ90 ಕ್ರಾಸ್ ಕಂಟ್ರಿ ಕಾರು ಮಾರಾಟವನ್ನು ಸ್ಥಗಿತ

ಬಿಎಸ್-6 ನಂತರ ಡೀಸೆಲ್ ಎಂಜಿನ್ ಕಾರು ಉತ್ಪಾದನೆಯಲ್ಲಿ ಸಾಕಷ್ಟು ಬದಲಾವಣೆಗಳನ್ನು ಪರಿಚಯಿಸಿದ ವೊಲ್ವೊ ಕಂಪನಿಯು ವಿ90 ಕ್ರಾಸ್ ಕಂಟ್ರಿ ಮಾದರಿಯ ಸ್ಟಾಕ್ ಮಾದರಿಗಳನ್ನು ಪೂರ್ಣಗೊಳಿಸಿ ಇದೀಗ ಮಾರಾಟವನ್ನು ಸ್ಥಗಿತಗೊಳಿಸಿದ್ದು, ಕಂಪನಿಯು ಪೂರ್ಣ ಪ್ರಮಾಣದಲ್ಲಿ ಪೆಟ್ರೋಲ್ ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆ ಮೇಲೆ ಮಾತ್ರವೇ ಗಮನಹರಿಸುತ್ತಿದೆ.

ಭಾರತದಲ್ಲಿ ವಿ90 ಕ್ರಾಸ್ ಕಂಟ್ರಿ ಕಾರು ಮಾರಾಟವನ್ನು ಸ್ಥಗಿತ

ಯುರೋಪ್ ಒಕ್ಕೂಟದಲ್ಲಿ ಮಾಲಿನ್ಯ ತಡೆಗಾಗಿ ಜಾರಿಗೆ ತರಲಾದ ಕಠಿಣ ನಿಯಮಗಳಿಂದ ಕಾರು ಉತ್ಪಾದನೆಯಲ್ಲಿ ಮಹತ್ವದ ಬದಲಾವಣೆ ಅಳವಡಿಸಿಕೊಳ್ಳುತ್ತಿರುವ ವೊಲ್ವೊ ಕಂಪನಿಯು ಡೀಸೆಲ್ ಕಾರುಗಳ ಮಾರಾಟವನ್ನು ಶೀಘ್ರದಲ್ಲೇ ಸಂಪೂರ್ಣವಾಗಿ ಬಂದ್ ಮಾಡಲು ನಿರ್ಧರಿಸಿದ್ದು, ಪೆಟ್ರೋಲ್ ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ವಾಹನಗಳನ್ನು ಮಾತ್ರ ಉತ್ಪಾದನೆ ಮಾಡಲು ನಿರ್ಧರಿಸಿದೆ.

MOST READ: ಭಾರತದಲ್ಲಿ ಎರಡು ಹೊಸ ಎಸ್‌ಯುವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

ಭಾರತದಲ್ಲಿ ವಿ90 ಕ್ರಾಸ್ ಕಂಟ್ರಿ ಕಾರು ಮಾರಾಟವನ್ನು ಸ್ಥಗಿತ

ಹೊಸ ಎಮಿಷನ್ ಜಾರಿ ನಂತರ ಯುರೋಪಿನ ಹಲವು ವಾಹನ ಉತ್ಪಾದನಾ ಕಂಪನಿಗಳು ಡೀಸೆಲ್ ವಾಹನಗಳ ಮಾರಾಟವನ್ನೇ ಸ್ಥಗಿತಗೊಳಿಸಿದ್ದು, ಪೂರ್ಣ ಪ್ರಮಾಣದ ಪೆಟ್ರೋಲ್, ಪೆಟ್ರೋಲ್ ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ವಾಹನಗಳ ಅಭಿವೃದ್ದಿಯತ್ತ ಗಮನಹರಿಸಿವೆ.

Most Read Articles

Kannada
Read more on ವೊಲ್ವೊ volvo
English summary
Volvo V90 Cross Country Removed From India Website. Read in Kannada.
Story first published: Friday, November 6, 2020, 19:35 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X