ಪೆಟ್ರೋಲ್ ಕಾರುಗಳಿಗಿಂತ ಡೀಸೆಲ್ ಕಾರುಗಳ ಬೆಲೆ ಹೆಚ್ಚು ಏಕೆ ಗೊತ್ತಾ?

ಯಾರಾದರೂ ಕಾರ್ ಅನ್ನು ಖರೀದಿಸುವ ಮುನ್ನ ಪೆಟ್ರೋಲ್ ಕಾರ್ ಖರೀದಿಸುವುದೋ ಅಥವಾ ಡೀಸೆಲ್ ಕಾರ್ ಖರೀದಿಸುವುದೋ ಎಂಬ ಪ್ರಶ್ನೆ ಮೂಡುವುದು ಸಹಜ. ಇದು ನೀವು ಕಾರ್ ಅನ್ನು ದಿನ ಬಳಸುತ್ತಿರೋ, ಇಲ್ಲವೋ ಎಂಬುದರ ಮೇಲೆ ಹಾಗೂ ಬಳಸಿದರೆ ಎಷ್ಟು ಪ್ರಮಾಣದಲ್ಲಿ ಬಳಸುತ್ತೀರಾ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ.

ಪೆಟ್ರೋಲ್ ಕಾರುಗಳಿಗಿಂತ ಡೀಸೆಲ್ ಕಾರುಗಳ ಬೆಲೆ ಹೆಚ್ಚು ಏಕೆ ಗೊತ್ತಾ?

ಸಾಮಾನ್ಯವಾಗಿ ಜನರು ಪೆಟ್ರೋಲ್ ಕಾರುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಖರೀದಿಸುತ್ತಾರೆ. ಪೆಟ್ರೋಲ್ ಕಾರುಗಳ ಮೆಂಟೆನೆನ್ಸ್ ಡೀಸೆಲ್ ಕಾರುಗಳಿಗಿಂತ ಕಡಿಮೆ ಎಂಬುದು ಇದಕ್ಕೆ ಮುಖ್ಯ ಕಾರಣ. ಇದರ ಜೊತೆಗೆ ಡೀಸೆಲ್ ಕಾರುಗಳ ಬೆಲೆ ಪೆಟ್ರೋಲ್ ಕಾರುಗಳ ಬೆಲೆಗಿಂತ ಹೆಚ್ಚು.

ಪೆಟ್ರೋಲ್ ಕಾರುಗಳಿಗಿಂತ ಡೀಸೆಲ್ ಕಾರುಗಳ ಬೆಲೆ ಹೆಚ್ಚು ಏಕೆ ಗೊತ್ತಾ?

ಪೆಟ್ರೋಲ್ ಎಂಜಿನ್ ಕಾರುಗಳಿಗಿಂತ ಡೀಸೆಲ್ ಎಂಜಿನ್ ಕಾರುಗಳ ಮೆಂಟೆನೆನ್ಸ್ ಏಕೆ ಹೆಚ್ಚು ಎಂಬುದನ್ನು ಈ ಲೇಖನದಲ್ಲಿ ನೋಡೋಣ. ಇದನ್ನು ಹೇಳುವುದಕ್ಕೆ ಮುಂಚೆ, ಪೆಟ್ರೋಲ್ ಹಾಗೂ ಡೀಸೆಲ್‍‍ಗಳಲ್ಲಿರುವ ವ್ಯತ್ಯಾಸವನ್ನು ತಿಳಿಯೋಣ.

ಪೆಟ್ರೋಲ್ ಕಾರುಗಳಿಗಿಂತ ಡೀಸೆಲ್ ಕಾರುಗಳ ಬೆಲೆ ಹೆಚ್ಚು ಏಕೆ ಗೊತ್ತಾ?

ಡೀಸೆಲ್ ಹೊತ್ತಿಕೊಳ್ಳಲು ಹೆಚ್ಚು ಸಮಯವನ್ನು ತೆಗೆದುಕೊಳ್ಳುತ್ತದೆ. ಆದರೆ ಪೆಟ್ರೋಲ್ ಸುಲಭವಾಗಿ ಬೆಂಕಿಗೆ ಹೊತ್ತಿಕೊಳ್ಳುತ್ತದೆ. ಚಿಕ್ಕ ಕಿಡಿ ಬಿದ್ದರೂ ಹೊತ್ತಿಕೊಳ್ಳುತ್ತದೆ. ಡೀಸೆಲ್ ಎಂಜಿನ್‍‍ನಲ್ಲಿ ಡೀಸೆಲ್ ಹಾಕಿದಾಗ ಅದು ಆನ್ ಆಗಲು ಹೆಚ್ಚಿನ ಪ್ರೆಷರ್ ಬೇಕಾಗುತ್ತದೆ.

ಪೆಟ್ರೋಲ್ ಕಾರುಗಳಿಗಿಂತ ಡೀಸೆಲ್ ಕಾರುಗಳ ಬೆಲೆ ಹೆಚ್ಚು ಏಕೆ ಗೊತ್ತಾ?

ಡೀಸೆಲ್ ಎಂಜಿನ್‍‍ನಲ್ಲಿ ಅಳವಡಿಸಲಾಗಿರುವ ವಿಶೇಷವಾದ ಡಿವೈಸ್‍‍ನ ಸಹಾಯದಿಂದ ಡೀಸೆಲ್ ಹೊತ್ತಿಕೊಳ್ಳುತ್ತದೆ. ಡೀಸೆಲ್ ಮೇಲೆ ಒತ್ತಡ ಹೇರಲು ಪಂಪ್ ಅನ್ನು ಬಳಸಲಾಗುತ್ತದೆ. ಇದನ್ನು ಫ್ಯೂಯಲ್‍‍ನಿಂದ ಪಂಪ್ ಮಾಡಲಾಗುತ್ತದೆ. ಇದರ ಜೊತೆಗೆ ಡೀಸೆಲ್ ಅನ್ನು ಎಂಜಿನ್‌ಗೆ ಹಾಕಲು ಫ್ಯೂಯಲ್ ಇಂಜೆಕ್ಟರ್‌ಗಳನ್ನು ಬಳಸಲಾಗುತ್ತದೆ.

ಪೆಟ್ರೋಲ್ ಕಾರುಗಳಿಗಿಂತ ಡೀಸೆಲ್ ಕಾರುಗಳ ಬೆಲೆ ಹೆಚ್ಚು ಏಕೆ ಗೊತ್ತಾ?

ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಎಂಜಿನ್‌ಗೆ ಹೆಚ್ಚಿನ ಪ್ರೆಷರ್ ಅನ್ನು ನೀಡುವುದರಿಂದ ಫ್ಯೂಯಲ್ ಪಂಪ್‌ ಹಾಗೂ ಫ್ಯೂಯಲ್ ಇಂಜೆಕ್ಟರ್‌ಗಳು ಬೇಗನೆ ಹಾಳಾಗುತ್ತವೆ. ಈ ಕಾರಣಕ್ಕೆ ಅವುಗಳಿಗೆ ಹೆಚ್ಚಿನ ಮೆಂಟೆನೆನ್ಸ್ ಅಗತ್ಯವಿರುತ್ತದೆ.

ಪೆಟ್ರೋಲ್ ಕಾರುಗಳಿಗಿಂತ ಡೀಸೆಲ್ ಕಾರುಗಳ ಬೆಲೆ ಹೆಚ್ಚು ಏಕೆ ಗೊತ್ತಾ?

ಇನ್ನು ಪೆಟ್ರೋಲ್ ಎಂಜಿನ್ ಬಗ್ಗೆ ಹೇಳುವುದಾದರೆ, ಪೆಟ್ರೋಲ್ ಹಾಗೂ ಗಾಳಿಯ ಮಿಶ್ರಣವನ್ನು ಲೋ ಪ್ರೆಷರ್‍‍ನಲ್ಲಿ ಇಡಲಾಗುತ್ತದೆ. ಇವುಗಳನ್ನು ಸ್ಪಾರ್ಕ್ ಪ್ಲಗ್‌ಗಳ ಸಹಾಯದಿಂದ ಸುಡಲಾಗುತ್ತದೆ. ಈ ಸ್ಪಾರ್ಕ್ ಪ್ಲಗ್‍‍ಗಳನ್ನು ರಿಪೇರಿ ಮಾಡಲಾಗುವುದಿಲ್ಲ.

ಪೆಟ್ರೋಲ್ ಕಾರುಗಳಿಗಿಂತ ಡೀಸೆಲ್ ಕಾರುಗಳ ಬೆಲೆ ಹೆಚ್ಚು ಏಕೆ ಗೊತ್ತಾ?

ಡೀಸೆಲ್ ಎಂಜಿನ್‌ಗೆ ಹೆಚ್ಚಿನ ಮೆಂಟೆನೆನ್ಸ್ ಬೇಕಾಗಲು ಮತ್ತೊಂದು ಕಾರಣವೆಂದರೆ ಪೆಟ್ರೋಲ್ ಎಂಜಿನ್‍‍ಗಿಂತ ಡೀಸೆಲ್ ಎಂಜಿನ್ ತಯಾರಿಸಲು ಹೆಚ್ಚಿನ ಸಾಧನಗಳನ್ನು ಬಳಸಲಾಗುತ್ತದೆ. ಎಲ್ಲಿ ಹೆಚ್ಚಿನ ವಸ್ತುಗಳನ್ನು ಬಳಸಲಾಗುತ್ತದೋ ಅಲ್ಲಿ ಹೆಚ್ಚಿನ ಮೆಂಟೆನೆನ್ಸ್ ಬೇಕಾಗುತ್ತದೆ.

ಪೆಟ್ರೋಲ್ ಕಾರುಗಳಿಗಿಂತ ಡೀಸೆಲ್ ಕಾರುಗಳ ಬೆಲೆ ಹೆಚ್ಚು ಏಕೆ ಗೊತ್ತಾ?

ಹೆಚ್ಚಿನ ಮೆಂಟೆನೆನ್ಸ್ ಗೆ ಹೆಚ್ಚು ಖರ್ಚಾಗುತ್ತದೆ. ಆದರೆ, ಈ ಖರ್ಚನ್ನು ಫ್ಯೂಯಲ್ ರೂಪದಲ್ಲಿ ಕಡಿಮೆ ಮಾಡಲಾಗುತ್ತದೆ. ಏಕೆಂದರೆ ಡೀಸೆಲ್ ಬೆಲೆಯು ಪೆಟ್ರೋಲ್‌ಗಿಂತ ಕಡಿಮೆಯಾಗಿದೆ. ಪ್ರತಿದಿನ ಡೀಸೆಲ್ ಕಾರನ್ನು ಬಳಸಿದರೆ ಮಾತ್ರ ಇದರಿಂದ ಅನುಕೂಲವಾಗಲಿದೆ.

Most Read Articles

Kannada
English summary
Why Diesel engine car maintenance is more than petrol engine car. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X