ಮೊದಲ ಬಾರಿಗೆ ಈ ಫೀಚರ್ ಹೊಂದಲಿದೆ ಹೊಸ ಮರ್ಸಿಡಿಸ್ ಎಸ್-ಕ್ಲಾಸ್

ಮರ್ಸಿಡಿಸ್ ಬೆಂಝ್ ಕಂಪನಿಯು ತನ್ನ ಹೊಸ ಐಷಾರಾಮಿ ಎಸ್-ಕ್ಲಾಸ್ ಸೆಡಾನ್ ಅನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಈ ಹೊಸ ಮರ್ಸಿಡಿಸ್ ಎಸ್-ಕ್ರಾಸ್ ಕಾರಿನಲ್ಲಿ ಮೊದಲ ಬಾರಿಗೆ ರೇರ್ ಸೀಟ್ ಏರ್‌ಬ್ಯಾಗ್‌ಗಳನ್ನು ಹೊಂದಿರಲಿದೆ.

ಮೊದಲ ಬಾರಿಗೆ ಈ ಫೀಚರ್ ಹೊಂದಲಿದೆ ಹೊಸ ಮರ್ಸಿಡಿಸ್ ಎಸ್-ಕ್ಲಾಸ್

ಈ ಹೊಸ ಮರ್ಸಿಡಿಸ್ ಎಸ್-ಕ್ರಾಸ್ ಕಾರಿನಲ್ಲಿ ಅಪಘಾತಗಳು ಸಂಭವಿಸಿದ ವೇಳೆಯಲ್ಲಿ ಹಿಂಬದಿಯ ಪ್ರಯಾಣಿಕರ ರಕ್ಷಣೆಗಾಗಿ ಏರ್‌ಬ್ಯಾಗ್‌ಗಳನ್ನು ಅಳವಡಿಸಲಾಗುತ್ತದೆ. ಹಿಂಬದಿ ಸೀಟಿನಲ್ಲಿ ಏರ್‌ಬ್ಯಾಗ್‌ಗಳನ್ನು ಹೊಂದಿರುವ ವಿಶ್ವದ ಮೊದಲ ಕಾರು ಎಂಬ ಹೆಗ್ಗಳಿಕೆ ಈ ಹೊಸ ಮರ್ಸಿಡಿಸ್ ಎಸ್-ಕ್ರಾಸ್ ಪಾತ್ರವಾಗುತ್ತದೆ. ಈ ಹೊಸ ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್ ಕಾರನ್ನು ಸೆಪ್ಟೆಂಬರ್ 2ರಂದು ಅಧಿಕೃತವಾಗಿ ಅನಾವರಣಗೊಳಿಸಲಿದೆ.

ಮೊದಲ ಬಾರಿಗೆ ಈ ಫೀಚರ್ ಹೊಂದಲಿದೆ ಹೊಸ ಮರ್ಸಿಡಿಸ್ ಎಸ್-ಕ್ಲಾಸ್

ಮರ್ಸಿಡಿಸ್ ಬೆಂಝ್ ಎಸ್-ಕ್ರಾಸ್ ಕಾರಿನ ಹಿಂಭಾಗದ ಸೀಟಿನಲ್ಲಿ ಏರ್‌ಬ್ಯಾಗ್‌ಗಳು ಹೊಂದಿರುವುದರಿಂದ ಅಪಘಾತಾಗಳು ಸಂಭವಿಸಿದಾಗ ಹಿಂಭಾಗದ ಪ್ರಯಾಣಿಕರಿಗೆ ಹೆಚ್ಚಿನ ರಕ್ಷಣೆಯನ್ನು ಒದಗಿಸುತ್ತದೆ. ಇದರೊಂದಿಗೆ ಈ ಕಾರಿನಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಹೊಸ ಪ್ರಿ-ಸೇಫ್ ಇಂಪಲ್ಸ್ ಸೈಡ್ ಫಂಕ್ಷನ್ ಸಿಸ್ಟಂ ಅನ್ನು ಕೂಡ ಹೊಂದಿದೆ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಮೊದಲ ಬಾರಿಗೆ ಈ ಫೀಚರ್ ಹೊಂದಲಿದೆ ಹೊಸ ಮರ್ಸಿಡಿಸ್ ಎಸ್-ಕ್ಲಾಸ್

ಕಂಪನಿಯು 50 ವರ್ಷಗಳಿಗಿಂತ ಹೆಚ್ಚು ಕಾಲ ನಡೆಸುತ್ತಿರುವ ಅಪಘಾತ ಸುರಕ್ಷತೆಯ ಬಗ್ಗೆ ಸಂಶೋಧನೆಯಿಂದ ಪಡೆದ ಜ್ಞಾನದಿಂದ ಎಲ್ಲಾ ಸುರಕ್ಷತಾ ಕಾರ್ಯಗಳನ್ನು ಅಭಿವೃದ್ಧಿಪಡಿಸಿದೆ ಎಂದು ಮರ್ಸಿಡಿಸ್ ಬೆಂಝ್ ಕಂಪನಿ ಹೇಳಿದೆ.

ಮೊದಲ ಬಾರಿಗೆ ಈ ಫೀಚರ್ ಹೊಂದಲಿದೆ ಹೊಸ ಮರ್ಸಿಡಿಸ್ ಎಸ್-ಕ್ಲಾಸ್

ಈ ಹೊಸ ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್ ಕಾರಿನಲ್ಲಿ ಅತ್ಯಾಕರ್ಷಕ ಹೈಟಕ್ ಫೀಚರುಗಳನ್ನು ಹೊಂದಿರಲಿದೆ. ಈ ಹೊಸ ಮರ್ಸಿಡಿಸ್ ಬೆಂಝ್ ಕಾರಿನಲ್ಲಿ ಎಂಬಿಯುಎಕ್ಸ್ ಇನ್ಫೋಟೇನೆಮೆಂಟ್ ಸಿಸ್ಟಂ ಅನ್ನು ಹೊಂದಿದೆ.

MOST READ: ಅನಾವರಣವಾಯ್ತು ಬಿಎಂಡಬ್ಲ್ಯು ಎಕ್ಸ್7 ಡಾರ್ಕ್ ಶ್ಯಾಡೋ ಎಸ್‍ಯುವಿ

ಮೊದಲ ಬಾರಿಗೆ ಈ ಫೀಚರ್ ಹೊಂದಲಿದೆ ಹೊಸ ಮರ್ಸಿಡಿಸ್ ಎಸ್-ಕ್ಲಾಸ್

ಇನ್ನು ಈ ಹೊಸ ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್ ಮುಂದಿನ ವರ್ಷದಲ್ಲಿ ಭಾರತದಲ್ಲಿ ಬಿಡುಗಡೆಯಾಗಲಿದೆ. ಮರ್ಸಿಡಿಸ್ ಬೆಂಝ್ ಎಸ್-ಕ್ರಾಸ್ ಉನ್ನತ ಮಟ್ಟದ ಐಷಾರಾಮಿ ಮತ್ತು ಉತ್ತಮ ಕಾರ್ಯಕ್ಷಮತೆಯನ್ನು ಹೊಂದಿರುವ ಕಾರು ಇದಾಗಿದೆ.

ಮೊದಲ ಬಾರಿಗೆ ಈ ಫೀಚರ್ ಹೊಂದಲಿದೆ ಹೊಸ ಮರ್ಸಿಡಿಸ್ ಎಸ್-ಕ್ಲಾಸ್

ಪ್ರಸ್ತುತ ತಲೆಮಾರಿನ ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್ (ಡಬ್ಲ್ಯು 222) ಭಾರತದಿಂದ 2014ರಿಂದ ಮಾರಾಟವಾಗುತ್ತಿದೆ. ಈ ಹೊಸ ತಲೆಮಾರಿನ ಎಸ್-ಕ್ಲಾಸ್ ಡ್ಯಾಶ್ ಬೋರ್ಡ್ ನಲ್ಲಿ ದೊಡ್ಡ ಇನ್ಫೋಟೇನೆಮೆಂಟ್ ಡಿಸ್ ಪ್ಲೇಯನ್ನು ಹೊಂದಿದೆ.

MOST READ: ಮೊದಲ ಬಾರಿಗೆ ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್‌

ಮೊದಲ ಬಾರಿಗೆ ಈ ಫೀಚರ್ ಹೊಂದಲಿದೆ ಹೊಸ ಮರ್ಸಿಡಿಸ್ ಎಸ್-ಕ್ಲಾಸ್

ಹೊಸ ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್ ಪೆಟ್ರೋಲ್, ಡೀಸೆಲ್, ಮೈಲ್ಡ್-ಹೈಬ್ರಿಡ್ ಮತ್ತು ಪ್ಲಗ್-ಇನ್ ಹೈಬ್ರಿಡ್ ಎಂಜಿನ್ ಆಯ್ಕೆಗಳನ್ನು ಹೊಂದಿರಲಿದೆ. ಇನ್ನು ಈ ಕಾರಿನಲ್ಲಿ ರೇಡಾರ್ ಗೈಡೆಡ್ ಕ್ರೂಸ್ ಕಂಟ್ರೋಲ್, ಮಲ್ಟಿಪಲ್ ಏರ್‌ಬ್ಯಾಗ್, 360 ಡಿಗ್ರಿ ಕ್ಯಾಮೆರಾ, ನೈಟ್ ವಿಷನ್ ಕ್ಯಾಮೆರಾ ಮತ್ತು ಇತರ ಫೀಚರ್ ಗಳನ್ನು ಹೊಂದಿರಲಿದೆ.

ಮೊದಲ ಬಾರಿಗೆ ಈ ಫೀಚರ್ ಹೊಂದಲಿದೆ ಹೊಸ ಮರ್ಸಿಡಿಸ್ ಎಸ್-ಕ್ಲಾಸ್

ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್ ಕಾರು ಬಿಡುಗಡೆಯಾದ ಬಳಿಕ ಬಿಎಂಡಬ್ಲ್ಯು 7 ಸೀರಿಸ್, ಜಾಗ್ವಾರ್ ಎಕ್ಸ್‌ಜೆ, ಆಡಿ ಎ8, ಪೋರ್ಷೆ ಪನಾಮೆರಾ ಮತ್ತು ಮೆಸಾರಟಿ ಕಾರುಗಳಿಗೆ ಪೈಪೋಟಿಯನ್ನು ನೀಡುತ್ತದೆ.

Most Read Articles

Kannada
English summary
World’s First RearSeat Airbags Will Be Seen In Upcoming 2021 Mercedes S-Class. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X