Just In
- 20 min ago ಭೂಮಿಯ ಸ್ವರ್ಗ: 1.50 ಕೋಟಿಯ ಟೊಯೊಟಾ ವೆಲ್ಫೈರ್ಗೆ ಮನಸೋತ ಖ್ಯಾತ ನಟ.. ಈ ಕಾರಿನಲ್ಲಿ ಏನಿದೆ?
- 20 min ago ಬರಲಿದೆ ಮತ್ತೊಂದು ಫ್ಯಾಮಿಲಿ ಎಲೆಕ್ಟ್ರಿಕ್ ಸ್ಕೂಟರ್: ಕಡಿಮೆ ಖರ್ಚಿನಲ್ಲಿ ಓಡಾಡಬಹುದು!
- 36 min ago ಮಾರುತಿ ಸ್ವಿಫ್ಟ್ ಖರೀದಿಸುತ್ತಿದ್ದೀರಾ? ಸ್ವಲ್ಪ ಕಾಯಿರಿ... ಹೊಸ ಸ್ವಿಫ್ಟ್ ಬರುತ್ತಿದೆ! 35 ಕಿ.ಮೀ ಮೈಲೇಜ್
- 1 hr ago ನಟಿ ಶಿಲ್ಪಾ ಶೆಟ್ಟಿಗೆ ಮತ್ತೊಂದು ಸಮಸ್ಯೆ ತಂದಿಟ್ಟ ಪತಿ: ಐಷಾರಾಮಿ ಕಾರುಗಳು ಸೀಜ್!
Don't Miss!
- Technology OnePlus: ಒನ್ಪ್ಲಸ್ 13 ಸ್ಮಾರ್ಟ್ಫೋನ್ ಡಿಸ್ಪ್ಲೇ, ವಿನ್ಯಾಸ ಲೀಕ್!..ಯಾವಾಗ ಲಾಂಚ್?
- News ಬಿಜೆಪಿ ತೊರೆದ ಕಾಂಗ್ರೆಸ್ ಸೇರ್ಪಡೆಯಾದ ಬಿಎಸ್ ಯಡಿಯೂರಪ್ಪ ಆಪ್ತ
- Movies ತಾತನಿಗೆ ಧನ್ಯಾ ರಾಮ್ಕುಮಾರ್ ಟ್ರಿಬ್ಯೂಟ್; ಕಿಶನ್ ಜೊತೆ ಡ್ಯುಯೆಟ್
- Sports RCB: ಯುಜ್ವೇಂದ್ರ ಚಹಾಲ್ ಮರಳಿ ಬರುವಂತೆ ಬೇಡಿಕೊಳ್ಳಿ; ಆರ್ಸಿಬಿಗೆ ಸಲಹೆ ನೀಡಿದ ರಾಬಿನ್ ಉತ್ತಪ್ಪ
- Lifestyle ಗರಿ ಗರಿಯಾದ ಕೋಡುಬಳೆ ಮನೆಯಲ್ಲೇ ಮಾಡಿ.! 4 ವಸ್ತು ಇದ್ದರೆ ಸಾಕು
- Finance ಝಿಲಿಂಗೋನ ಸಹ-ಸಂಸ್ಥಾಪಕ ಹಾಗೂ ಮಾಜಿ ಸಿಒಒ ವಿರುದ್ಧ ಲೈಂಗಿಕ ಕಿರುಕುಳ ಕೇಸ್ ದಾಖಲಿಸಿದ ಅಂಕಿತಿ ಬೋಸ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬ್ಲೂ ಅರ್ಥ್ ಸರಣಿಯ ಟಯರ್ಗಳನ್ನು ಬಿಡುಗಡೆಗೊಳಿಸಿದ ಯೊಕೊಹಾಮಾ
ಯೊಕೊಹಾಮಾ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಯು ಬ್ಲೂ ಅರ್ಥ್ ಸರಣಿಯ ಟಯರ್ಗಳನ್ನು ಬಿಡುಗಡೆಗೊಳಿಸಿದೆ. ಬ್ಲೂ ಅರ್ಥ್ ಜಿಟಿ ಎಂಬ ಹೆಸರಿನ ಈ ಟಯರ್ ಶೀಘ್ರದಲ್ಲೇ ಮಾರುಕಟ್ಟೆಗೆ ಬರಲಿದೆ ಎಂದು ವರದಿಯಾಗಿದೆ.
ಗ್ರ್ಯಾಂಡ್ ಟೂರಿಂಗ್ ಪರಿಕಲ್ಪನೆಯನ್ನು ಗಮನದಲ್ಲಿಟ್ಟುಕೊಂಡು ಈ ಟಯರ್ ಸರಣಿಯನ್ನು ವಿನ್ಯಾಸಗೊಳಿಸಲಾಗಿದೆ. ಈ ಕಾರಣಕ್ಕೆ ಈ ಟಯರ್ನಲ್ಲಿ ಪರ್ಫಾಮೆನ್ಸ್ ಹಾಗೂ ಆರಾಮದಾಯಕತೆಗೆ ಆದ್ಯತೆ ನೀಡಲಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. ಹರಿಯಾಣದ ಬಹದ್ದೂರ್ಗಢ ಯೊಕೊಹಾಮಾ ಉತ್ಪಾದನಾ ಘಟಕದಲ್ಲಿ ಈ ಬ್ಲೂ ಅರ್ಥ್ ಟಯರ್ಗಳನ್ನು ಉತ್ಪಾದಿಸಲಾಗುತ್ತದೆ.
ಇತ್ತೀಚಿನ ದಿನಗಳಲ್ಲಿ ರಸ್ತೆ ಮೂಲಸೌಕರ್ಯದಲ್ಲಿ ಗಮನಾರ್ಹ ಸುಧಾರಣೆ ಕಂಡು ಬರುತ್ತಿದೆ. ಗುಣಮಟ್ಟದ ಕಾರುಗಳಿಗೆ ಬೇಡಿಕೆ ಹೆಚ್ಚುತ್ತಿದ್ದು, ಹೆಚ್ಚಿನ ಗಾತ್ರದ ರಿಮ್ ಗಳು ಬೇಕಾಗುತ್ತವೆ. ಈ ಎಲ್ಲಾ ಅವಶ್ಯಕತೆಗಳಿಗೆ ತಕ್ಕಂತೆ ಬ್ಲೂ ಅರ್ಥ್ ಜಿಟಿ ಟಯರ್ಗಳನ್ನು ವಿನ್ಯಾಸಗೊಳಿಸಲಾಗಿದೆ ಎಂದು ಯೊಕೊಹಾಮಾ ಕಂಪನಿಯ ವಕ್ತಾರರು ತಿಳಿಸಿದ್ದಾರೆ.
MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್
ಬ್ಲೂ ಅರ್ಥ್ ಜಿಟಿ ಅಸಿಮೆಟ್ರಿಕಲ್ ವಿನ್ಯಾಸವನ್ನು ಹೊಂದಿದ್ದು, ಲೈಟ್ನಿಂಗ್ ಗ್ರೋವ್, ಬ್ಲೇಡ್ ಕಟ್ ಸೈಪ್ರೆಸ್ ನಂತಹ ಫೀಚರ್ ಗಳನ್ನು ಒಳಗೊಂಡಿದೆ.ಜೊತೆಗೆ ಪರ್ಫಾಮೆನ್ಸ್ ಹೆಚ್ಚಿಸಲು ಮೌಂಟ್ ಪ್ರೊಫೈಲ್, ಡಿಂಪಲ್ ಶೋಲ್ದರ್ಸ್ ಹಾಗೂ ಹೆಚ್ಚಿನ ಪಿಚ್ ನಂಬರ್ ಗಳನ್ನು ಹೊಂದಿದೆ.
ಈ ವರ್ಷದ ಅಂತ್ಯದ ವೇಳೆಗೆ 14 ಇಂಚಿನಿಂದ 26 ಇಂಚಿನ ಟಯರ್ಗಳು ಲಭ್ಯವಾಗಲಿವೆ ಎಂದು ಕಂಪನಿ ತಿಳಿಸಿದೆ. ಪ್ರೀಮಿಯಂ ಹ್ಯಾಚ್ಬ್ಯಾಕ್ ಹಾಗೂ ಹೈ ಎಂಡ್ ಕಾರುಗಳಿಗೆ ಬ್ಲೂ ಅರ್ಥ್ ಜಿಟಿ ಟಯರ್ಗಳು ಸೂಕ್ತವಾಗಿವೆ.
MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ
ಟ್ರಿಪಲ್ ಸೆಂಟರ್ ರಿಬ್, ಸಿಲಿಕಾ ಆಧಾರಿತ ಕಾಂಪೋಸಿಟ್ ಹಾಗೂ ಹೊಸ ಸೈಡ್ ಪ್ರೊಫೈಲ್ ಗಳು ಟಯರ್ ಅನ್ನು ಹೆಚ್ಚು ಬಾಳಿಕೆ ಬರುವಂತೆ ಮಾಡುತ್ತವೆ. ಈ ಟಯರ್ ಲಾಂಗ್ ಡ್ರೈವ್ಗಳಿಗೆ ಸೂಕ್ತವಾಗಿದೆ ಎಂದು ಯೊಕೊಹಾಮಾ ಕಂಪನಿ ಹೇಳಿದೆ.
ಟಯರ್ ವ್ಯವಹಾರದ ಜೊತೆಗೆ ಯೊಕೊಹಾಮಾ ಕಂಪನಿಯು ಆಡಿ, ಹೋಂಡಾ, ಮರ್ಸಿಡಿಸ್ ಬೆಂಝ್, ಮಿಟ್ಸುಬಿಷಿ, ನಿಸ್ಸಾನ್, ಪೋರ್ಷೆ, ಸುಜುಕಿ ಹಾಗೂ ಟೊಯೊಟಾ ಸೇರಿದಂತೆ ಹಲವು ವಾಹನ ತಯಾರಕ ಕಂಪನಿಗಳಿಗೆ ಜಾಗತಿಕವಾಗಿ ಬಿಡಿಭಾಗಗಳನ್ನು ಪೂರೈಸುತ್ತದೆ.