ಹೊಸ ಫೀಚರ್‌ಗಳೊಂದಿಗೆ ಬಿಡುಗಡೆಗೊಂಡ 2021ರ ಹೋಂಡಾ ಹೆಚ್‌ಆರ್-ವಿ

ಹೋಂಡಾ ಕಂಪನಿಯು ಅಧಿಕೃತವಾಗಿ 2021ರ ಹೆಚ್‌ಆರ್-ವಿ ಕಾರನ್ನು ಮಲೇಷ್ಯಾದಲ್ಲಿ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಹೋಂಡಾ ತನ್ನ ಹೊಸ ಹೆಚ್‌ಆರ್-ವಿ ಕಾರನ್ನು ಹಿಂದಿನ ಮಾದರಿಗಿಂತ ಹೆಚ್ಚಿನ ಬದಲಾವಣಿಗಳೊಂದಿಗೆ ಪರಿಚಯಿಸಲಾಗಿದೆ,

ಹೊಸ ಫೀಚರ್‌ಗಳೊಂದಿಗೆ ಬಿಡುಗಡೆಗೊಂಡ 2021ರ ಹೋಂಡಾ ಹೆಚ್‌ಆರ್-ವಿ

ಹೊಸ ಹೋಂಡಾ ಹೆಚ್‌ಆರ್-ವಿ ಕಾರು ಈಗ 7 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಪಡೆದುಕೊಂಡಿದೆ. ಇದರಲ್ಲಿ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ ಕನೆಕ್ಟಿವಿಟಿ ಫೀಚರ್ ಅನ್ನು ಹೊಂದಿದೆ. ಇದಲ್ಲದೆ ಹೆಚ್‌ಆರ್-ವಿ ಕಾರಿನಲ್ಲಿ ಈಗ ಸೆಂಟರ್ ಕನ್ಸೋಲ್‌ನಲ್ಲಿ ಎರಡು ಹೆಚ್ಚುವರಿ ಯುಎಸ್‌ಬಿ ಪೋರ್ಟ್‌ಗಳನ್ನು ಸಹ ಪಡೆಯುತ್ತದೆ. ಇತರ ಬದಲಾವಣೆಗಳಲ್ಲಿ ಎಚ್‌ಆರ್‌-ವಿ ಹೈಬ್ರಿಡ್‌ನಲ್ಲಿ ಎಲ್‌ಇಡಿ ಹೆಡ್‌ಲೈಟ್‌ಗಳು, ಎಲ್‌ಇಡಿ ಫಾಗ್‌ಲ್ಯಾಂಪ್‌ಗಳು ಮತ್ತು ಎಲ್‌ಇಡಿ ಟೈಲ್‌ಲೈಟ್‌ಗಳ ಸೇರ್ಪಡೆ ಸೇರಿವೆ.

ಹೊಸ ಫೀಚರ್‌ಗಳೊಂದಿಗೆ ಬಿಡುಗಡೆಗೊಂಡ 2021ರ ಹೋಂಡಾ ಹೆಚ್‌ಆರ್-ವಿ

ಜೊತೆಗೆ ಹೊಸ ಮೂರು-ಸ್ಪೋಕ್ ಸ್ಟೀಯರಿಂಗ್ ವ್ಹೀಲ್ ಹೊಂದಿದ್ದು, ಇದು ಸಾಕಷ್ಟು ಸ್ಪೋರ್ಟಿ ಆಗಿ ಕಾಣುತ್ತದೆ. ಇನ್ನು ಈ ಕಾರು ‘ಪ್ಲ್ಯಾಟಿನಮ್ ವೈಟ್ ಪರ್ಲ್' ಎಂಬ ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡಿದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಹೊಸ ಫೀಚರ್‌ಗಳೊಂದಿಗೆ ಬಿಡುಗಡೆಗೊಂಡ 2021ರ ಹೋಂಡಾ ಹೆಚ್‌ಆರ್-ವಿ

ಹೊಸ ಹೋಂಡಾ ಹೆಚ್‌ಆರ್-ವಿ ಕಾರು ಇ, ಹೈಬ್ರಿಡ್ ಐ-ಡಿಸಿಡಿ, ವಿ ಮತ್ತು ಆರ್ಎಸ್ ಎಂಬ ನಾಲ್ಕು ರೂಪಾಂತರಗಳಿವೆ. ಹೋಂಡಾ ಹೆಚ್‌ಆರ್-ವಿ ಕಾರು 1.8-ಲೀಟರ್ ಐ-ವಿಟಿಇಸಿ ಪೆಟ್ರೋಲ್ ಎಂಜಿನ್‌ ಅನ್ನು ಅಳವಡಿಸಲಾಗಿದೆ.

ಹೊಸ ಫೀಚರ್‌ಗಳೊಂದಿಗೆ ಬಿಡುಗಡೆಗೊಂಡ 2021ರ ಹೋಂಡಾ ಹೆಚ್‌ಆರ್-ವಿ

ಈ ಎಂಜಿನ್ 6,500 ಆರ್‌ಪಿಎಂನಲ್ಲಿ 142 ಬಿಹೆಚ್‍ಪಿ ಪವರ್ ಮತ್ತು 4,300 ಆರ್‌ಪಿಎಂನಲ್ಲಿ 172 ಎನ್‌ಎಂ ಟಾರ್ಕ್ ಅನ್ನು ಅಭಿವೃದ್ಧಿಪಡಿಸುವ ಸಾಮರ್ಥ್ಯ ಹೊಂದಿದೆ. ಈ ಮೋಟರ್ ಸಿವಿಟಿಗೆ ಮಾತ್ರ ಜೋಡಿಸಲಾಗಿದೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಹೊಸ ಫೀಚರ್‌ಗಳೊಂದಿಗೆ ಬಿಡುಗಡೆಗೊಂಡ 2021ರ ಹೋಂಡಾ ಹೆಚ್‌ಆರ್-ವಿ

ಈ ಕಾರಿನ ಸ್ಟೀರಿಂಗ್ ವೀಲ್‌ನ ಹಿಂದೆ ಪ್ಯಾಡಲ್ ಶಿಫ್ಟರ್‌ಗಳನ್ನು ನೀಡುತ್ತದೆ. ಇದು ಇಕಾನ್ ಮೋಡ್ (ಇಂಧನ ದಕ್ಷತೆಯನ್ನು ಸುಧಾರಿಸಲು), ಪುಶ್-ಬಟನ್ ಸ್ಟಾರ್ಟ್, ಕ್ರೂಸ್ ಕಂಟ್ರೋಲ್, ಹಿಲ್-ಹೋಲ್ಡ್ ಅಸಿಸ್ಟ್, ಹೋಂಡಾ ಲೇನ್‌ವಾಚ್, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಮತ್ತು ಆರು ಏರ್‌ಬ್ಯಾಗ್‌ಗಳನ್ನು ಸಹ ಪಡೆಯುತ್ತದೆ.

ಹೊಸ ಫೀಚರ್‌ಗಳೊಂದಿಗೆ ಬಿಡುಗಡೆಗೊಂಡ 2021ರ ಹೋಂಡಾ ಹೆಚ್‌ಆರ್-ವಿ

ಈ ಹೊಸ ಹೆಚ್‌ಆರ್-ವಿ ಮಾದರಿ 4,400 ಎಂಎಂ ಉದ್ದ, 1,790 ಎಂಎಂ ಅಗಲ ಮತ್ತು 1,590 ಎಂಎಂ ಎತ್ತರವನ್ನು ಹೊಂದಿರಲಿದೆ. ಇನ್ನು 2,660 ಎಂಎಂ ವ್ಹೀಲ್ ಬೇಸ್ ಅನ್ನು ಹೊಂದಿರಲಿದೆ. ಈ ಹೊಸ ಹೆಚ್‌ಆರ್-ವಿ ಮಾದರಿಯು ಸುಮಾರು 4.4 ಮೀಟರ್ ಉದ್ದವನ್ನು ಹೊಂದಿರಲಿದೆ.

MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಹೊಸ ಫೀಚರ್‌ಗಳೊಂದಿಗೆ ಬಿಡುಗಡೆಗೊಂಡ 2021ರ ಹೋಂಡಾ ಹೆಚ್‌ಆರ್-ವಿ

ಹೊಸ ಹೋಂಡಾ ಹೆಚ್‌ಆರ್-ವಿ ಮಾದರಿಯಲ್ಲಿ ಎಲ್ಇಡಿ ಹೆಡ್‌ಲ್ಯಾಂಪ್‌ಗಳು ಮತ್ತು ಹೋಂಡಾದ ಸಿಗ್ನೇಚರ್ ವೈಡ್ ಫ್ರಂಟ್ ಗ್ರಿಲ್ ಅನ್ನು ಪಡೆದುಕೊಳ್ಳುತ್ತದೆ. ವರದಿ ಪ್ರಕಾರ ಇದು ಹ್ಯುಂಡೈ ಕ್ರೆಟಾದಂತೆ ಪ್ರೀಮಿಯಂ ಕಾಂಪ್ಯಾಕ್ಟ್ ಎಸ್‍ಯುವಿಯಾಗಿರಲಿದೆ.

ಹೊಸ ಫೀಚರ್‌ಗಳೊಂದಿಗೆ ಬಿಡುಗಡೆಗೊಂಡ 2021ರ ಹೋಂಡಾ ಹೆಚ್‌ಆರ್-ವಿ

ವರದಿಗಳ ಪ್ರಕಾರ ಹೊಸ ಹೆಚ್‌ಆರ್-ವಿ ಕಾರು ಭಾರತದಲ್ಲಿ ಈ ವರ್ಷ ಬಿಡುಗಡೆಯಾಗಲಿದೆ. ಹೊಸ ಹೋಂಡಾ ಹೆಚ್‌ಆರ್-ವಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದರೆ ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೊಸ್, ರೆನಾಲ್ಟ್ ಕ್ಯಾಪ್ಚರ್ ಮತ್ತು ಜೀಪ್ ಕಂಪಾಸ್ ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
Read more on ಹೋಂಡಾ honda
English summary
Updated 2021 Honda HR-V Debuts With New Features And Tech. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X