ಹೊಸ ಫೀಚರ್ಸ್‌ಗಳನ್ನು ಪಡೆಯಲಿದೆ 2021ರ ಹ್ಯುಂಡೈ ಕ್ರೆಟಾ ಎಸ್‌ಯುವಿ

ಜನಪ್ರಿಯ ವಾಹನ ತಯಾರಕ ಕಂಪನಿಯಾದ ಹ್ಯುಂಡೈ ಭಾರತೀಯ ಮಾರುಕಟ್ಟೆಗೆ ಹೊಸ ಕ್ರೆಟಾ ಕೆಲವು ಅಪ್ಡೇಟ್ ಗಳನ್ನು ಪಡೆಯಲಿವೆ ಎಂದು ವರದಿಯಾಗಿದೆ. 2021ರ ಹ್ಯುಂಡೈ ಕ್ರೆಟಾ ಎಸ್‌ಯುವಿ ಶೀಘ್ರದಲ್ಲೇ ಹಲವಾರು ಹೊಸ ಫೀಚರ್ಸ್ ಗಳನ್ನು ಪಡೆಯಲಿವೆ.

ಹೊಸ ಫೀಚರ್ಸ್‌ಗಳನ್ನು ಪಡೆಯಲಿದೆ 2021ರ ಹ್ಯುಂಡೈ ಕ್ರೆಟಾ ಎಸ್‌ಯುವಿ

ವರದಿಗಳ ಪ್ರಕಾರ, ಎಂಟ್ರಿ ಲೆವೆಲ್ ಹ್ಯುಂಡೈ ಕ್ರೆಟಾ ಇ ವೆರಿಯೆಂಟ್ ಕೆಲವು ಫೀಚರ್ಸ್ ಗಳನ್ನು ತೆಗೆದುಹಕಲಾಗುತ್ತದೆ. ಆದರೆ ಇತರ ರೂಪಾಂತರಗಳು ಹೊಸ ಫೀಚರ್ಸ್‌ಗಳನ್ನು ಪಡೆಯುತ್ತವೆ. ಕ್ರೆಟಾದ ಟಾಪ್-ಎಂಡ್ ಸ್‌ಎಕ್ಸ್ ಮತ್ತು ಎಸ್‌ಎಕ್ಸ್ (ಒ) ವೆರಿಯೆಂಟ್ ಗಳು ಹೊಸ ಕನೆಕ್ಟಿವಿಟೀ ಫೀಚರ್ಸ್‌ಗಳನ್ನು ಸ್ವೀಕರಿಸುತ್ತವೆ. ಹೊಸ ಫೀಚರ್ಸ್‌ಗಳು ಇನ್ಫೋಟೈನ್ಮೆಂಟ್ ಸಿಸ್ಟಂಗಾಗಿ ಓವರ್-ದಿ-ಏರ್ (ಒಟಿಎ) ನವೀಕರಣಗಳನ್ನು ಸೇರಿಸುವುದನ್ನು ನೋಡುತ್ತದೆ. ವಾಯ್ಸ್ ಕಮಾಂಡ್ ಮೂಲಕ ಪವರ್ ವಿಂಡೋ ಕಂಟ್ರೋಲ್, ಕನೆಕ್ಟಿವಿಟಿ ವಿವರಗಳನ್ನು ಹಿಂಪಡೆಯುವುದು, ಮುಂತಾದ ಆಕರ್ಷಕ ವಾಯ್ಸ್ ಕಾಮೆಂಟ್ ಫೀಚರ್ಸ್‌ಗಳನ್ನು ಪಡೆಯಲಿವೆ.

ಹೊಸ ಫೀಚರ್ಸ್‌ಗಳನ್ನು ಪಡೆಯಲಿದೆ 2021ರ ಹ್ಯುಂಡೈ ಕ್ರೆಟಾ ಎಸ್‌ಯುವಿ

ಇನ್ನು ಟಾಪ್-ಎಂಡ್ ರೂಪಾಂತರಗಳು ರಿಮೋಟ್ ಎಂಜಿನ್ ಸ್ಟಾರ್ಟ್ ಮತ್ತು ಡ್ಯಾಶ್‌ಬೋರ್ಡ್‌ನಲ್ಲಿ ಸಾಫ್ಟ್ ಪೇಂಟ್ ಫಿನಿಶ್‌ನೊಂದಿಗೆ ಹೊಸ ಸ್ಮಾರ್ಟ್ ಕೀಯನ್ನು ಸಹ ಪಡೆಯುತ್ತದೆ. ಇನ್ನು ಮಿಡ್ ವೆರಿಯೆಂಟ್ ಇಎಕ್ಸ್ ಮತ್ತು ಎಸ್ ಮಾದರಿಗಳು ಇನ್ಫೋಟೈನ್ಮೆಂಟ್ ಸಿಸ್ಟಂ ವೈರ್ ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ ಕನೆಕ್ಟಿವಿಟಿಯನ್ನು ಹೊಂದಿರುತ್ತದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಹೊಸ ಫೀಚರ್ಸ್‌ಗಳನ್ನು ಪಡೆಯಲಿದೆ 2021ರ ಹ್ಯುಂಡೈ ಕ್ರೆಟಾ ಎಸ್‌ಯುವಿ

ಕ್ರೆಟಾದ ಬೇಸ್ ಇ ವೆರಿಯೆಂಟ್ ಲಗೇಜ್ ಲ್ಯಾಂಪ್ ಮತ್ತು ಪ್ಯಾಸೆಂಜರ್ ಸೀಟ್-ಬ್ಯಾಕ್ ಪಾಕೆಟ್ ಅನ್ನು ಸಹ ಕಳೆದುಕೊಳ್ಳುತ್ತದೆ. ಮುಂಭಾಗದಲ್ಲಿ ಫೆಂಡರರ್ ಗಳಲ್ಲಿ ಟರ್ನ್ ಇಂಡಿಕೇಟರ್ ಗಳನ್ನು ಇರಿಸಲಾಗುತ್ತದೆ.

ಹೊಸ ಫೀಚರ್ಸ್‌ಗಳನ್ನು ಪಡೆಯಲಿದೆ 2021ರ ಹ್ಯುಂಡೈ ಕ್ರೆಟಾ ಎಸ್‌ಯುವಿ

ಹ್ಯುಂಡೈ ಕ್ರೆಟಾ ಕಂಪ್ಯಾಕ್ಟ್ ಎಸ್‌ಯವಿ ಮಾದರಿಯು ಇತ್ತೀಚಿನ ಬೆಲೆ ಹೆಚ್ಚಳದೊಂದಿಗೆ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕ ಬೆಲೆಯು ರೂ.9.99 ಲಕ್ಷದಿಂದ ಟಾಪ್ ಎಂಡ್ ವೆರಿಯೆಂಟ್ ಬೆಲೆಯು ರೂ.17.62 ಲಕ್ಷಕ್ಕೆ ಏರಿಕೆಯಾಗಿದೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಹೊಸ ಫೀಚರ್ಸ್‌ಗಳನ್ನು ಪಡೆಯಲಿದೆ 2021ರ ಹ್ಯುಂಡೈ ಕ್ರೆಟಾ ಎಸ್‌ಯುವಿ

ಸದ್ಯ ಮಾರುಕಟ್ಟೆಯಲ್ಲಿ ಮಾರಟವಾಗುತ್ತಿರುವ ಹೊಸ ಕ್ರೆಟಾ ಕಾರು ಗ್ರಾಹಕರ ಬೇಡಿಕೆಯೆಂತೆ ಒಟ್ಟು 5 ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದೆ. ಈ ಕ್ರೆಟಾ ಎಸ್‍ಯುವಿಯಲ್ಲಿ 1.5-ಲೀಟರ್ ಪೆಟ್ರೋಲ್, 1.5-ಲೀಟರ್ ಡೀಸೆಲ್ ಮತ್ತು ಪರ್ಫಾಮೆನ್ಸ್ ಪ್ರಿಯರಿಗಾಗಿ 1.4-ಲೀಟರ್ ಟರ್ಬೋ ಪೆಟ್ರೋಲ್ ಆವೃತ್ತಿಯನ್ನು ಒಳಗೊಂಡಿದೆ.

ಹೊಸ ಫೀಚರ್ಸ್‌ಗಳನ್ನು ಪಡೆಯಲಿದೆ 2021ರ ಹ್ಯುಂಡೈ ಕ್ರೆಟಾ ಎಸ್‌ಯುವಿ

ಕ್ರೆಟಾ ಎಸ್‍ಯುವಿಯ ಈ ಹಿಂದೆ ನೀಡಲಾಗುತ್ತಿದ್ದ 1.6-ಲೀಟರ್ ಮತ್ತು 1.4-ಲೀಟರ್ ಡೀಸೆಲ್ ಎಂಜಿನ್ ಅನ್ನು ತೆಗೆದುಹಾಕಲಾಗಿದ್ದು, ಸಾಮಾನ್ಯ ಮಾದರಿಯಲ್ಲಿ 1.5-ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಹಾಗೂ ಪರ್ಫಾಮೆನ್ಸ್ ಪ್ರಿಯರಿಗಾಗಿ 1.4-ಲೀಟರ್ ಟರ್ಬೋ ಪೆಟ್ರೋಲ್ ಖರೀದಿಸಬಹುದಾಗಿದೆ.

MOST READ: ಫೆಬ್ರವರಿ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-10 ಡೀಸೆಲ್ ಕಾರುಗಳಿವು

ಹೊಸ ಫೀಚರ್ಸ್‌ಗಳನ್ನು ಪಡೆಯಲಿದೆ 2021ರ ಹ್ಯುಂಡೈ ಕ್ರೆಟಾ ಎಸ್‌ಯುವಿ

1.5-ಲೀಟರ್ ಪೆಟ್ರೋಲ್ ಮಾದರಿಯೊಂದಿಗೆ 6-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 115 ಬಿಎಚ್‌ಪಿ ಪವರ್ ಮತ್ತು 144 ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದ್ದಲ್ಲಿ 1.5-ಲೀಟರ್ ಡೀಸೆಲ್ ಮಾದರಿಯು ಸಹ 6-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 115-ಬಿಎಚ್‌ಪಿ ಪವರ್ ಮತ್ತು 250-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

ಹೊಸ ಫೀಚರ್ಸ್‌ಗಳನ್ನು ಪಡೆಯಲಿದೆ 2021ರ ಹ್ಯುಂಡೈ ಕ್ರೆಟಾ ಎಸ್‌ಯುವಿ

ಹೊಸ ನವೀಕರಣಗಳೊಂದಿಗೆ ಹ್ಯುಂಡೈ ಕ್ರೆಟಾ ಎಸ್‍ಯುವಿಯು ಪ್ರತಿಸ್ಪರ್ಧಿಗಳಿಗೆ ಭರ್ಜರಿ ಪೈಪೋಟಿಯನ್ನು ನೀಡುತ್ತದೆ. ಹ್ಯುಂಡೈ ಕ್ರೆಟಾ ಭಾರತೀಯ ಮಾರುಕಟ್ಟೆಯಲ್ಲಿ ಕಿಯಾ ಸೆಲ್ಟೋಸ್, ರೆನಾಲ್ಟ್ ಡಸ್ಟರ್, ಎಂಜಿ ಹೆಕ್ಟರ್ ಹಾಗೂ ಟಾಟಾ ಹ್ಯಾರಿಯರ್‍ ಎಸ್‍ಯುವಿಗಳಿಗೆ ಪೈಪೋಟಿಯನ್ನು ನೀಡುತ್ತದೆ.

Most Read Articles

Kannada
English summary
2021 Hyundai Creta To Be Updated With New Features. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X