Just In
- 10 hrs ago
ಹೊಸ ಫೀಚರ್ಸ್ಗಳನ್ನು ಪಡೆಯಲಿದೆ ನ್ಯೂ ಜನರೇಷನ್ ಫೋಕ್ಸ್ವ್ಯಾಗನ್ ಪೊಲೊ
- 13 hrs ago
ಫೋರ್ಡ್ ಮುಸ್ಟಾಂಗ್ ಕಾರಿನಂತೆ ಮಾಡಿಫೈಗೊಂಡ ಬಲೆನೊ ಸೆಡಾನ್ ಕಾರು
- 15 hrs ago
ವಾರದ ಸುದ್ದಿ: ಸಿಟ್ರನ್ ಕಾರು ಬಿಡುಗಡೆ, ಹೊಸ ವಾಹನ ಬೆಲೆ ಹೆಚ್ಚಳ, ಅಲ್ಕಾಜರ್ ಅನಾವರಣ, ಯುಗಾದಿ ಆಫರ್ ಘೋಷಣೆ!
- 24 hrs ago
ಎಕ್ಸ್ಯುವಿ700 ಎಸ್ಯುವಿ ಕಾರಿನ ಮತ್ತಷ್ಟು ಹೊಸ ಮಾಹಿತಿ ಹಂಚಿಕೊಂಡ ಮಹೀಂದ್ರಾ
Don't Miss!
- Sports
ಐಪಿಎಲ್ 2021: ಕೊಲ್ಕತ್ತಾ ವಿರುದ್ಧದ ಸೋಲಿಗೆ ಕಾರಣ ಹೇಳಿದ ಡೇವಿಡ್ ವಾರ್ನರ್
- News
ಕರ್ಫ್ಯೂ ನಡುವೆಯೂ ಮೋಜು ಮಸ್ತಿ! ಪಾರ್ಟಿ ಮಾಡುತ್ತಿದ್ದ ಗ್ಯಾಂಗ್ ಕಂಬಿ ಹಿಂದೆ..!
- Movies
ಸೋನು ಸೂದ್ಗೆ ವಿಶೇಷ ಗೌರವ ನೀಡಿದ ಪಂಜಾಬ್ ಸರ್ಕಾರ
- Finance
ಟಾಪ್ 10ರಲ್ಲಿ 4 ಕಂಪನಿಗಳ ಮೌಲ್ಯ 1.14 ಲಕ್ಷ ಕೋಟಿ ರುಗೇರಿಕೆ
- Lifestyle
ವಾರ ಭವಿಷ್ಯ:ಈ ವಾರ 12 ರಾಶಿಗಳ ರಾಶಿಫಲ ಹೇಗಿದೆ?
- Education
Bank Of Baroda Recruitment 2021: 512 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಅನಾವರಣವಾಯ್ತು 2021ರ ಹ್ಯುಂಡೈ ಸೊನಾಟಾ ಎನ್ ಲೈನ್ ಪರ್ಫಾಮೆನ್ಸ್ ಕಾರು
ಹ್ಯುಂಡೈ ಕಂಪನಿಯು 2021ರ ಸೊನಾಟಾ ಎನ್ ಲೈನ್ ಕಾರನ್ನು ಆಸ್ಟ್ರೇಲಿಯಾದಲ್ಲಿ ಮಾರುಕಟ್ಟೆಯಲ್ಲಿ ಅಧಿಕೃತವಾಗಿ ಅನಾವರಣಗೊಳಿಸಿದೆ. ಈ ವರ್ಷದ ಮಧ್ಯಂತರ ಅವಧಿಯಲ್ಲಿ 2021ರ ಹ್ಯುಂಡೈ ಸೊನಾಟಾ ಎನ್ ಲೈನ್ ಕಾರು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬಿಡುಗಡೆಯಾಗಲಿದೆ.

ಈ ಹೊಸ ಹ್ಯುಂಡೈ ಸೊನಾಟಾ ಎನ್ ಲೈನ್ ಪರ್ಫಾಮೆನ್ಸ್ ಮಾದರಿಯಾಗಿದೆ. ದಕ್ಷಿಣ ಕೊರಿಯಾದ ಕಾರು ತಯಾರಕ ಮೊದಲ ಬಾರಿಗೆ ಮಧ್ಯಮ ಗಾತ್ರದ ಸೆಡಾನ್ನಲ್ಲಿ ಎನ್ ಲೈನ್ ಟ್ರಿಮ್ ಅನ್ನು ಪರಿಚಯಿಸಿದೆ. ಇದಲ್ಲದೆ ಎನ್ ಲೈನ್ ಹ್ಯುಂಡೈನ ಮೂಲ ಮಾದರಿಗಳಿಗೆ ಟ್ರಿಮ್ ಅಪ್ಗ್ರೇಡ್ ಆಗಿದೆ, ಶೀಘ್ರದಲ್ಲೇ ಅಮೆರಿಕಾದ ಹಲವು ಹ್ಯುಂಡೈ ಶೋರೂಂಗಳಲ್ಲಿ 2021ರ ಸೊನಾಟಾ ಎನ್ ಲೈನ್ ಕಾರು ಲಭ್ಯವಿರಲಿದೆ ಎಂದು ಹೇಳಲಾಗುತ್ತಿದೆ.

ಹೊಸ ಸೊನಾಟಾ ಎನ್ ಲೈನ್ ಬ್ರ್ಯಾಂಡ್ನ ಸೆನ್ಸೂಯಸ್ ಸ್ಪೋರ್ಟಿನೆಸ್ ವಿನ್ಯಾಸವನ್ನು ಆಧರಿಸಿದೆ. ಈ ಹೊಸ ಹ್ಯುಂಡೈ ಸೊನಾಟಾ ಎನ್ ಲೈನ್ ಕಾರಿನ ಹೊರಭಾಗದ ವಿನ್ಯಾಸದ ಬಗ್ಗೆ ಹೇಳುವುದಾದರೆ, ಪ್ಯಾರಮೆಟ್ರಿಕ್ ಜ್ಯುವೆಲ್ ಪ್ಯಾಟರ್ನ್ ಗ್ರಿಲ್, ಬೋಲ್ಡ್ ಫ್ರಂಟ್ ಫಾಸಿಕ, ವೈಡ್ ಏರ್ ಇಂಟೆಕ್ಸ್ ಮತ್ತು ಎನ್ ಲೈನ್ ಬ್ಯಾಡ್ಜಿಂಗ್ ಅನ್ನು ಹೊಂದಿದೆ.
MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್ಯುವಿ300

ಇದರೊಂದಿಗೆ ಫುಲ್ ಎಲ್ಇಡಿ ಟೈಲ್ ಲೈಟ್ಸ್, 19 ಇಂಚಿನ ಅಲಾಯ್ ವ್ಹೀಲ್ ಗಳು, ಪನೋರಮಿಕ್ ಸನ್ರೂಫ್ ಮತ್ತು ಕ್ವಾಡ್ ಟಿಪ್ಸ್ ಹೊಂದಿರುವ ಎನ್ ಡ್ಯುಯಲ್ ಎಕ್ಸಾಸ್ಟ್ ಅನ್ನು ಹೊಂದಿದೆ. ಈ ಹೊಸ ಸೊನಾಟಾ ಎನ್ ಲೈನ್ ಕಾರು ಹೆಚ್ಚು ಸ್ಪೋರ್ಟಿ ಲುಕ್ ಅನ್ನು ಹೊಂದಿದೆ.

ಹೊಸ ಸೊನಾಟಾ ಎನ್ ಲೈನ್ ಕಾರಿನ ಇಂಟಿರಿಯರ್ ಫೀಚರ್ ಬಗ್ಗೆ ಹೇಳುವುದಾದರೆ, ಸ್ಟೀಯರಿಂಗ್ ವೀಲ್, ಕಾಂಟ್ರಾಸ್ಟ್ ರೆಡ್ ಸ್ಟಿಚಿಂಗ್ ಮತ್ತು ಎನ್ ಲೈನ್ ಬ್ಯಾಡ್ಜಿಂಗ್ ಹೊಂದಿರುವ ಸ್ಪೋರ್ಟಿ ಸೀಟುಗಳು, 10.25-ಇಂಚಿನ ಇನ್ಫೋಟೈನ್ಮೆಂಟ್ ಸಿಸ್ಟಂ ಮತ್ತು ಬ್ಲೂಲಿಂಕ್ ತಂತ್ರಜ್ಞಾನವನ್ನು ಹೊಂದಿದೆ.
MOST READ: ಜನವರಿ ತಿಂಗಳಿನಲ್ಲಿ ಮಾರುತಿ ಎಕ್ಸ್ಎಲ್6 ಕಾರು ಮಾರಾಟದಲ್ಲಿ ಶೇ.305ರಷ್ಟು ಹೆಚ್ಚಳ

ಇದರೊಂದಿಗೆ ಹನ್ನೆರಡು ಸ್ಪೀಕರ್ ಗಳೊಂದಿಗೆ ಬೋಸ್ ಆಡಿಯೊ ಸಿಸ್ಟಂ ಮತ್ತು 12.3-ಇಂಚಿನ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ. ಇನ್ನು ಪಾರ್ಕಿಂಗ್ ಅಸಿಸ್ಟ್, ಹೊರಗಿನ ಬಾಗಿಲಿನ ಹ್ಯಾಂಡಲ್ಗಳಲ್ಲಿ ಟಚ್ ಸೆನ್ಸರ್ಗಳು, ರಿಮೋಟ್ ಸ್ಟಾರ್ಟ್, ವೈರ್ಲೆಸ್ ಚಾರ್ಜಿಂಗ್, ಡಿಜಿಟಲ್ ಕೀ ಮತ್ತು ಇತ್ಯಾದಿ ಫೀಚರ್ ಗಳನ್ನು ಹೊಂದಿವೆ.

ಇನ್ನು ಹೊಸ ಹ್ಯುಂಡೈ ಸೊನಾಟಾ ಎನ್ ಲೈನ್ ಪರ್ಫಾಮೆನ್ಸ್ ಕಾರಿನಲ್ಲಿ 2.5-ಲೀಟರ್ ಟರ್ಬೋಚಾರ್ಜ್ಡ್ ಜಿಡಿ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 290 ಬಿಹೆಚ್ಪಿ ಪವರ್ ಮತ್ತು 448 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ.
MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಇದು ಇದುವರೆಗಿನ ಅತ್ಯಂತ ಪವರ್ ಫುಲ್ ಸೊನಾಟಾ ಮಾದರಿ ಇದಾಗಿದೆ. ಇನ್ನು ಇದರ ಎಂಜಿನ್ ಅನ್ನು 8-ಸ್ಪೀಡ್ ವೆಟ್ ಡ್ಯುಯಲ್-ಕ್ಲಚ್ ಟ್ರಾನ್ಸ್ಮಿಷನ್ (ಎನ್ ಡಿಸಿಟಿ) ಯೊಂದಿಗೆ ಸಂಯೋಜಿಸಲ್ಪಟ್ಟಿದೆ.

ಹೊಸ ಹ್ಯುಂಡೈ ಸೊನಾಟಾ ಎನ್ ಲೈನ್ ಪವರ್ ಫುಲ್ ಟರ್ಬೋಚಾರ್ಜ್ಡ್ ಎಂಜಿನ್ ಹೊಂದಿರುವುದರಿಂದ ಹೆಚ್ಚಿನ ಫನ್ ಡ್ರೈವಿಂಗ್ ಅನುಭವನ್ನು ನೀಡುವುದರಲ್ಲಿ ನೋ ಡೌಟ್. ಹೊಸ ಹೊಸ ಹ್ಯುಂಡೈ ಸೊನಾಟಾ ಎನ್ ಲೈನ್ ಪವರ್ ಫುಲ್ ಎಂಜಿನ್ ನೊಂದಿಗೆ ಹೆಚ್ಚು ಸ್ಪೋರ್ಟಿ ಲುಕ್ ಮತ್ತು ಆಕರ್ಷಕವಾಗಿದೆ.