ಅನಾವರಣವಾಯ್ತು 2021ರ ಹ್ಯುಂಡೈ ಟ್ಯುಸಾನ್ ಎನ್ ಲೈನ್ ಎಸ್‍ಯುವಿ

ಹ್ಯುಂಡೈ ಕಂಪನಿಯು ತನ್ನ ಟ್ಯುಸಾನ್ ಎನ್ ಲೈನ್ ಎಸ್‍ಯುವಿಯನ್ನು ಅಧಿಕೃತವಾಗಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಿದೆ. 2021ರ ಹ್ಯುಂಡೈ ಟ್ಯುಸಾನ್ ಎನ್ ಲೈನ್ ಎಸ್‍ಯುವಿಯು ಶೀಘ್ರದಲ್ಲೇ ಯುರೋಪಿನ ಮಾರುಕಟ್ಟೆಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿದೆ.

ಅನಾವರಣವಾಯ್ತು 2021ರ ಹ್ಯುಂಡೈ ಟ್ಯುಸಾನ್ ಎನ್ ಲೈನ್ ಎಸ್‍ಯುವಿ

ಹ್ಯುಂಡೈ ಟ್ಯುಸಾನ್ ಸ್ಟ್ಯಾಂಡರ್ಡ್ ಮತ್ತು ಎನ್ ಲೈನ್ ಮಾದರಿಗಳ ನಡುವೆ ಹೊರಭಾಗದಲ್ಲಿ ಮತ್ತು ಒಳಭಾಗದಲ್ಲಿ ಹಲವಾರು ಬದಲಾವಣೆಗಳಿದೆ. ಎನ್ ಲೈನ್ ಎಸ್‍ಯುವಿ ಪರ್ಫಾಮೆನ್ಸ್ ಮಾದರಿಯಾಗಿದೆ. ಟ್ಯುಸಾನ್ ಸ್ಟ್ಯಾಂಡರ್ಡ್ ಮಾದರಿಯ ನಿರ್ವಹಣೆಯಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲವಾದರೂ, ಎನ್ ಲೈನ್ ಮಾದರಿಯು ಎಲೆಕ್ಟ್ರಿಕ್ ನಿಯಂತ್ರಿತ ಸಸ್ಪೆಂಕ್ಷನ್ ಸಿಸ್ಟಂ ಅನ್ನು ಒಂದು ಆಯ್ಕೆಯಾಗಿ ಪಡೆಯುತ್ತದೆ, ಇದು ಎಸ್‍ಯುವಿಯನ್ನು ಅಡಾಪ್ಟಿವ್ ಡ್ಯಾಂಪರ್‌ಗಳೊಂದಿಗೆ ಸಜ್ಜುಗೊಳಿಸುತ್ತದೆ. ಈ ಸಿಸ್ಟಂ ಎನ್ ಲೈನ್ ಗ್ರಾಹಕರಿಗೆ ಇನ್ನಷ್ಟು ಡ್ರೈವಿಂಗ್ ಫನ್ ನೀಡುತ್ತದೆ.

ಅನಾವರಣವಾಯ್ತು 2021ರ ಹ್ಯುಂಡೈ ಟ್ಯುಸಾನ್ ಎನ್ ಲೈನ್ ಎಸ್‍ಯುವಿ

ಈ ಹ್ಯುಂಡೈ ಟ್ಯುಸಾನ್ ಎನ್ ಲೈನ್ ಎಸ್‍ಯುವಿಯು ಸ್ಪೋರ್ಟಿ ಲುಕ್ ಅನ್ನು ಹೊಂದಿದೆ. ಇನ್ನು ಈ ಪರ್ಫಾಮೆನ್ಸ್ ಎಸ್‍ಯುವಿಯಲ್ಲಿ ನವೀಕರಿಸಿದ ಇಂಟೆಕ್‌ಗಳೊಂದಿಗೆ ಅಗ್ರೇಸಿವ್ ಬಂಪರ್, ಎನ್ ಲೈನ್ ಬ್ಯಾಡ್ಜ್‌ನೊಂದಿಗೆ ಸ್ವಲ್ಪ ದೊಡ್ಡದಾದ ಬ್ಲ್ಯಾಕ್ 'ಪ್ಯಾರಮೆಟ್ರಿಕ್ ಜ್ಯುವೆಲ್' ಗ್ರಿಲ್ ಅನ್ನು ಹೊಂದಿದೆ.

MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್‌ಯುವಿ300

ಅನಾವರಣವಾಯ್ತು 2021ರ ಹ್ಯುಂಡೈ ಟ್ಯುಸಾನ್ ಎನ್ ಲೈನ್ ಎಸ್‍ಯುವಿ

ಇನ್ನು ಈ ಹ್ಯುಂಡೈ ಟ್ಯುಸಾನ್ ಎನ್ ಲೈನ್ ಎಸ್‍ಯುವಿ ದೇಹ-ಬಣ್ಣದ ಕ್ಲಾಡಿಂಗ್‌ಗಳು, ಹೆಡ್‌ಲೈಟ್‌ಗಳಿಗಾಗಿ ಬ್ಲ್ಯಾಕ್ ಬೆಝಲ್ ಮತ್ತು ಬ್ಲ್ಯಾಕ್ ಒಆರ್‌ವಿಎಂಗಳನ್ನು ಒಳಗೊಂಡಿದೆ. ಟ್ಯುಸಾನ್ ಎನ್ ಲೈನ್ ದೊಡ್ಡ ಮತ್ತು ಸ್ಪೋರ್ಟಿಯರ್ 19-ಇಂಚಿನ ಡ್ಯುಯಲ್-ಟೋನ್ ಅಲಾಯ್ ವ್ಹೀಲ್ ಗಳನ್ನು ಹೊಂದಿವೆ.

ಅನಾವರಣವಾಯ್ತು 2021ರ ಹ್ಯುಂಡೈ ಟ್ಯುಸಾನ್ ಎನ್ ಲೈನ್ ಎಸ್‍ಯುವಿ

ಟ್ಯುಸಾನ್ ಎನ್ ಲೈನ್ ಎಸ್‍ಯುವಿಯ ಹಿಂಭಾಗದಲ್ಲಿ ಇಂಟಿಗ್ರೇಟೆಡ್ ಫಿನ್ಸ್ ಗಳೊಂದಿಗೆ ದೊಡ್ಡ ಏರೋಡೈನಾಮಿಕ್ ಸ್ಪಾಯ್ಲರ್, ಕೆಳ ಬಂಪರ್ ಮೇಲೆ ರೆಡ್ ರಿಫೆಲಕ್ಡರ್, ಡಿಫ್ಯೂಸರ್ ಮತ್ತು ಟ್ವಿನ್ ಎಕ್ಸಾಸ್ಟ್ ಅನ್ನು ಪಡೆಯುತ್ತದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಅನಾವರಣವಾಯ್ತು 2021ರ ಹ್ಯುಂಡೈ ಟ್ಯುಸಾನ್ ಎನ್ ಲೈನ್ ಎಸ್‍ಯುವಿ

ಹೊಸ ಹ್ಯುಂಡೈ ಟ್ಯುಸಾನ್ ಎನ್ ಲೈನ್ ಎಸ್‍ಯುವಿಯು ಶ್ಯಾಡೋ ಗ್ರೇ, ಪೋಲಾರ್ ವೈಟ್, ಎಂಜಿನ್ ರೆಡ್, ಸನ್ಸೆಟ್ ರೆಡ್, ಡಾರ್ಕ್ ನೈಟ್, ಮಿನುಗುವ ಸಿಲ್ವರ್ ಮತ್ತು ಫ್ಯಾಂಟಮ್ ಬ್ಲ್ಯಾಕ್ ಎಂಬ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿರುತ್ತದೆ.

ಅನಾವರಣವಾಯ್ತು 2021ರ ಹ್ಯುಂಡೈ ಟ್ಯುಸಾನ್ ಎನ್ ಲೈನ್ ಎಸ್‍ಯುವಿ

ಇನ್ನು ಟ್ಯುಸಾನ್ ಎನ್ ಲೈನ್ ಎಸ್‍ಯುವಿಯ ಇಂಟಿರಿಯರ್ ನಲ್ಲಿ ಎನ್ ಲೋಗೊ ಹೊಂದಿರುವ ಎನ್ ಸ್ಟೀಯರಿಂಗ್ ವ್ಹೀಲ್, ಎನ್ ಗೇರ್ ಶಿಫ್ಟರ್ ಮತ್ತು ಮೆಟಲ್ ಫೂಟ್ ಪೆಡಲ್‌ಗಳೊಂದಿಗೆ ಎನ್-ಬ್ರಾಂಡೆಡ್ ಸ್ಪೋರ್ಟ್ಸ್ ಸೀಟುಗಳನ್ನು ಪಡೆಯುತ್ತದೆ.

MOST READ: ಭಾರತದಲ್ಲಿ ಸೋಲ್ಡ್ ಔಟ್ ಆದ ಮರ್ಸಿಡಿಸ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್‍ಯುವಿ

ಅನಾವರಣವಾಯ್ತು 2021ರ ಹ್ಯುಂಡೈ ಟ್ಯುಸಾನ್ ಎನ್ ಲೈನ್ ಎಸ್‍ಯುವಿ

ಪರ್ಫಾಮೆನ್ಸ್ ಮಾದರಿಯಾದ ಟ್ಯುಸಾನ್ ಎನ್ ಲೈನ್ 1.6-ಲೀಟರ್ ನಾಲ್ಕು ಸಿಲಿಂಡರ್ ಟಿಜಿಡಿ ಟರ್ಬೊ-ಪೆಟ್ರೋಲ್ ಎಂಜಿನ್‌ ಅನ್ನು ಹೊಂದಿರುತ್ತದೆ. ಇದರೊಂದಿಗೆ 48-ವೋಲ್ಟ್ ಮೈಲ್ಡ್ ಹೈಬ್ರಿಡ್ ಸಿಸ್ಟಂ ಅನ್ನು ಪಡೆಯುತ್ತದೆ.

ಅನಾವರಣವಾಯ್ತು 2021ರ ಹ್ಯುಂಡೈ ಟ್ಯುಸಾನ್ ಎನ್ ಲೈನ್ ಎಸ್‍ಯುವಿ

ಇದು 150 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಮತ್ತೊಂದೆಡೆ ಹ್ಯುಂಡೈ ಟ್ಯುಸಾನ್ ಎನ್ ಲೈನ್ ಹೈಬ್ರಿಡ್ ಅನ್ನು ಹೆಚ್ಚು ಪವರ್ ಫುಲ್ 230 ಬಿಹೆಚ್‍ಪಿ ಕಾನ್ಫಿಗರೇಶನ್‌ನೊಂದಿಗೆ ನೀಡಲಾಗುವುದು, ಆದರೆ ರೇಂಜ್-ಟಾಪಿಂಗ್ ಪಿಹೆಚ್‌ಇವಿ ಮಾದರಿಯು 265 ಬಿಹೆಚ್‍ಪಿ ಪವರ್ ವರೆಗೆ ಉತ್ಪಾದಿಸಬಹುದು.

Most Read Articles

Kannada
English summary
2021 Hyundai Tucson N Line Officially Breaks Cover. Read In Kananda.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X