Just In
- 26 min ago
ಫೋಕ್ಸ್ವ್ಯಾಗನ್ ಐಡಿ.4 ಜಿಟಿಎಕ್ಸ್ ಪರ್ಫಾಮೆನ್ಸ್ ಎಲೆಕ್ಟ್ರಿಕ್ ಕಾರಿನ ಟೀಸರ್ ಬಿಡುಗಡೆ
- 27 min ago
ಕೇವಲ 48 ನಿಮಿಷಗಳಲ್ಲಿ ಸೋಲ್ಡ್ ಔಟ್ ಆದ ಕೆಟಿಎಂ 1290 ಸೂಪರ್ ಡ್ಯೂಕ್ ಆರ್ಆರ್
- 2 hrs ago
ಹೆರ್ಮೆಸ್ 75 ವಾಣಿಜ್ಯ ಬಳಕೆಯ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದ ಕಬೀರಾ ಮೊಬಿಲಿಟಿ
- 2 hrs ago
ದುಬಾರಿ ಬೆಲೆಯ ಲ್ಯಾಂಡ್ ರೋವರ್ ಡಿಫೆಂಡರ್ ಎಸ್ಯುವಿ ಖರೀದಿಸಿದ ನಟ ಅರ್ಜುನ್ ಕಪೂರ್
Don't Miss!
- Sports
ಸ್ವಿಗ್ಗಿಯಿಂದ ರೋಹಿತ್ ಶರ್ಮಾಗೆ ಅವಮಾನ ; ಕಿಡಿಕಾರಿದ ಫ್ಯಾನ್ಸ್
- News
ಪುಟ್ಟೇನಹಳ್ಳಿ ಡಬಲ್ ಮರ್ಡರ್ : ಆರೋಪಿಗಳು ಅಂದರ್ ಆಗಿದ್ದೇ ಥ್ರಿಲ್ಲಿಂಗ್ !
- Lifestyle
ರಕ್ತದಲ್ಲಿ ಕಬ್ಬಿಣದಂಶ ಹೆಚ್ಚಾದರೆ ಆಯುಸ್ಸು ಕಡಿಮೆಯಾಗುವುದು
- Education
NEET PG Admit Card 2021: ನೀಟ್ ಪಿಜಿ ಪ್ರವೇಶ ಪತ್ರ ಡೌನ್ಲೋಡ್ ಮಾಡುವುದು ಹೇಗೆ ?
- Finance
ಸುಮಾರು 5,550 ಕೋಟಿ ರು ಡಿವಿಡೆಂಡ್ ಘೋಷಿಸಿದ ಟಿಸಿಎಸ್
- Movies
'ಅಮಿತಾಭ್ ಮಗಳ ಪಾತ್ರ ಮಾಡ್ತಿದ್ದೇನೆ' ಎಂದಾಗ ರಶ್ಮಿಕಾ ಪೋಷಕರ ಪ್ರತಿಕ್ರಿಯೆ ಹೇಗಿತ್ತು?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಹೊಸ ಜೀಪ್ ರ್ಯಾಂಗ್ಲರ್ ರೂಬಿಕಾನ್ 392 ಲಾಂಚ್ ಎಡಿಷನ್ ಬಿಡುಗಡೆ
ಜನಪ್ರಿಯ ವಾಹನ ತಯಾರಕ ಕಂಪನಿಯಾದ ಜೀಪ್ ತನ್ನ ಹೊಸ ರ್ಯಾಂಗ್ಲರ್ ರೂಬಿಕಾನ್ 392 ಲಾಂಚ್ ಎಡಿಷನ್ ಅನ್ನು ಅಮೆರಿಕದಲ್ಲಿ ಬಿಡುಗಡೆಗೊಳಿಸಿದೆ. ಜೀಪ್ ಸರಣಿಯಲ್ಲಿ ರ್ಯಾಂಗ್ಲರ್ ರೂಬಿಕಾನ್ ಜನಪ್ರಿಯ ಮಾದರಿಯಾಗಿದೆ.

ಹೊಸ ಜೀಪ್ ರ್ಯಾಂಗ್ಲರ್ ರೂಬಿಕಾನ್ 392 ಎಸ್ಯುವಿಯನ್ನು ಕೆಲವು ತಿಂಗಳ ಹಿಂದೆ ಉತ್ಪಾದನಾ ಮಾದರಿಯಾಗಿ ಪ್ರದರ್ಶಿಸಿದ್ದರು. ಆದರೆ ಉತ್ಪಾದನಾ ಆವೃತ್ತಿಯು ಕೆಲವು ಬದಲಾವಣೆಗಳನ್ನು ಹೊಂದಿದೆ. ಹೊಸ ಜೀಪ್ ರ್ಯಾಂಗ್ಲರ್ ರೂಬಿಕಾನ್ 392 ಲಾಂಚ್ ಎಡಿಷನ್ ನಲ್ಲಿ 6.4-ಲೀಟರ್ ವಿ8 ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 470 ಬಿಹೆಚ್ಪಿ ಪವರ್ ಮತ್ತು 637 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಪ್ಯಾಡಲ್ ಶಿಫ್ಟರ್ಗಳೊಂದಿಗೆ ಎಂಜಿನ್ ಅನ್ನು 8 ಸ್ಪೀಡ್ ಆಟೋಮ್ಯಾಟಿಕ್ ಗೇರ್ಬಾಕ್ಸ್ಗೆ ಜೋಡಿಸಲಾಗಿದೆ. ಹೊಸ ಜೀಪ್ ರ್ಯಾಂಗ್ಲರ್ ರೂಬಿಕಾನ್ 392 ಎಸ್ಯುವಿಯು ಕೇವಲ 4.5 ಸೆಕೆಂಡುಗಳಲ್ಲಿ 0-100 ಕಿ.ಮೀ ಸ್ಪೀಡ್ ಅನ್ನು ಪಡೆದುಕೊಳ್ಳುತ್ತದೆ.
MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್ಯುವಿ300

ಹೊಸ ಜೀಪ್ ರ್ಯಾಂಗ್ಲರ್ ರೂಬಿಕಾನ್ 392 ಲಾಂಚ್ ಎಡಿಷನ್ ಸಸ್ಪೆಂಕ್ಷನ್ ಬಗ್ಗೆ ಹೇಳುವುದಾದರೆ, ಫಾಕ್ಸ್ ಶಾಕ್ಸ್, ಅಪರ್ ಕಂಟ್ರೋಲ್ ಅರ್ಮ್ಸ್ ಮತ್ತು ಹೆವಿ ಡ್ಯೂಟಿ ಬ್ರೇಕ್ಗಳನ್ನು ಅಳವಡಿಸಲಾಗಿದೆ.

ಇನ್ನು ಈ ಹೊಸ ಎಸ್ಯುವಿಯಲ್ಲಿ ಆಫ್ ರೋಡ್ ಸಾಮರ್ಥ್ಯವನ್ನು ಹೆಚ್ಚಿಸಿದೆ. ಇನ್ನು 32.5 ಇಂಚಿನ ವಾಟರ್ ಕ್ಲೀಯರೆನ್ಸ್ ಅನ್ನು ಕೂಡ ಹೊಂದಿದೆ ಎಂದು ಜೀಪ್ ಕಂಪನಿಯು ಹೇಳಿಕೊಂಡಿದೆ.
MOST READ: ಜನವರಿ ತಿಂಗಳಿನಲ್ಲಿ ಮಾರುತಿ ಎಕ್ಸ್ಎಲ್6 ಕಾರು ಮಾರಾಟದಲ್ಲಿ ಶೇ.305ರಷ್ಟು ಹೆಚ್ಚಳ

ಹೊಸ ಜೀಪ್ ರ್ಯಾಂಗ್ಲರ್ ರೂಬಿಕಾನ್ 392 ಎಸ್ಯುವಿಯಲ್ಲಿ 4ಡಬ್ಲ್ಯುಡಿ ಆಟೋ, 4ಡಬ್ಲ್ಯುಡಿ ಹೈ, ನ್ಯೂಟ್ರಾಲ್ ಮತ್ತು 4ಡಬ್ಲ್ಯುಡಿ ಲೋ ಮೋಡ್ಗಳ ಜೊತೆಗೆ ಸೆಲೆಕ್ಟ್-ಟ್ರ್ಯಾಕ್ 4ಡಬ್ಲ್ಯುಡಿ ಸಿಸ್ಟಂ ಅನ್ನು ಕೂಡ ಒಳಗೊಂಡಿದೆ.

ಇದು 44 ಮುಂಭಾಗ ಮತ್ತು ಹಿಂಭಾಗದಲ್ಲಿ ದಾನ ಆಕ್ಸಲ್ಗಳನ್ನು ಹೊಂದಿದೆ, ಇನ್ನು ದಪ್ಪವಾದ ಟ್ಯೂಬ್ಗಳನ್ನು ಹೊಂದಿದ್ದು, ಕಷ್ಟಕರವಾದ ಆಫ್-ರೋಡ್ ದಾರಿಯಲ್ಲಿ ಸಾಗಲು ಎಲೆಕ್ಟ್ರಾನಿಕ್ ಲಾಕಿಂಗ್ ಡಿಫರೆನ್ಷಿಯಲ್ಸ್ ಮತ್ತು ಫ್ರಂಟ್ ಸ್ಟೆಬಿಲೈಜರ್ ಬಾರ್ಗಾಗಿ ಎಲೆಕ್ಟ್ರಾನಿಕ್ ಡಿಸ್ಕನೆಕ್ಟ್ ನಂತಹ ಆಫ್-ರೋಡ್ ಫೀಚರ್ ಗಳನ್ನು ನೀಡಿದೆ.
MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಇದಲ್ಲದೆ ಒರಟಾದ ಪ್ರದೇಶಗಳಲ್ಲಿ ಸರಾಗವಾಗಿ ಚಲಿಸಲು ಬಹುತೇಕ ಎಲ್ಲಾ ಎಂಜಿನ್ ಟಾರ್ಕ್ ಕಡಿಮೆ ರೆವ್ಗಳಿಂದ ಲಭ್ಯವಿದೆ ಎಂದು ಜೀಪ್ ಹೇಳಿಕೊಂಡಿದೆ. ಫೀಚರ್ ಗಳು ಮತ್ತು ವಿನ್ಯಾಸವನ್ನು ನೋಡಿದಾಗ ಹೊಸ ಜೀಪ್ ್ಯಾಂಗ್ಲರ್ ರೂಬಿಕಾನ್ 392 ಮಾದರಿಯು ಸಮರ್ಥ ಆಫ್-ರೋಡ್ ಎಸ್ಯುವಿಯಾಗಿರಲಿದೆ ಎಂದು ಹೇಳಬಹುದು.

ಹೊಸ ಜೀಪ್ ರ್ಯಾಂಗ್ಲರ್ ರೂಬಿಕಾನ್ 392 ಲಾಂಚ್ ಎಡಿಷನ್ ವಿನ್ಯಾಸದ ಬಗ್ಗೆ ಹೇಳುವುದಾದರೆ, ರ್ಯಾಂಗ್ಲರ್ ರೂಬಿಕಾನ್ ಬ್ಯಾಡ್ಜ್ಗಳು ಮತ್ತು ಸುಧಾರಿಸಲು ಗ್ರಿಲ್ ಅನ್ನು ಅಳವಡಿಸಿದೆ. ಈ ಎಸ್ಯುವಿಯು ಹಾರ್ಡ್ಟಾಪ್ ಬಾಡಿಯನ್ನು ಹೊಂದಿದೆ.

ಇನ್ನು ಈ ಜೀಪ್ ರ್ಯಾಂಗ್ಲರ್ ರೂಬಿಕಾನ್ 392 ಲಾಂಚ್ ಎಡಿಷನ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿಲ್ಲ. ಆದರೆ 2021ರ ಜೀಪ್ ರ್ಯಾಂಗ್ಲರ್ ಎಸ್ಯುವಿಯನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ. ಶೀಘ್ರದಲ್ಲೇ ಈ ಹೊಸ ಜೀಪ್ ರ್ಯಾಂಗ್ಲರ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ.