Just In
- 1 hr ago Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- 1 hr ago ಬಹುಕೋಟಿ ಬೆಲೆಯ ಕಾರುಗಳಿದ್ದರೂ ಸಾಮಾನ್ಯ ಮಾರುತಿ ಕಾರಿನಲ್ಲಿ ಓಡಾಡಿದ ರೋಹಿತ್ ಶರ್ಮಾ: ಕಾರಣವೇನು?
- 2 hrs ago HSRP ನಂಬರ್ ಪ್ಲೇಟ್ನಲ್ಲಿ ನಡೆಯುತ್ತಿದೆ ಭಾರೀ ಮೋಸ: ಬುಕ್ ಮಾಡದವರು ಇದನ್ನು ಗಮನಿಸಿ!
- 2 hrs ago Nissan Magnite: ಕಾಮಧೇನುವಾದ ನಿಸ್ಸಾನ್ ಮ್ಯಾಗ್ನೈಟ್.. 6 ಲಕ್ಷ ಬೆಲೆ, 20 ಕಿ.ಮೀ ಮೈಲೇಜ್
Don't Miss!
- News Siddaramaiah: ಹುಬ್ಬಳ್ಳಿಯ ನೇಹಾ ಹಿರೇಮಠ ನಿವಾಸಕ್ಕೆ ಸಿಎಂ ಭೇಟಿ: ಪ್ರಕರಣ ಬಗ್ಗೆ ಸಿದ್ದರಾಮಯ್ಯ ಹೇಳಿದ್ದೇನು?
- Movies ''ಹೆಣ್ಮಕ್ಕಳು ಎಲ್ಲೆಲ್ಲೋ ಹೋದರು'' ಎಂದ ಶ್ರುತಿಗೆ ಮಹಿಳಾ ಆಯೋಗ ನೋಟಿಸ್ ; 07 ದಿನದ ಗಡುವು..!
- Lifestyle ದೇಹದಲ್ಲಿ ಈ ಬದಲಾವಣೆ ಆದರೆ ನಿಮ್ಮಲ್ಲಿ ವಿಟಮಿನ್ ಬಿ12 ಕೊರತೆಯಾಗಿದೆ ಎಂದರ್ಥ
- Sports IPL 2024: ಹೈದರಾಬಾದ್ ಅಂಗಳದಲ್ಲಿ ಗೆಲ್ಲುವುದೆ ಆರ್ಸಿಬಿ: ಟಾಸ್ ವರದಿ ಹೀಗಿದೆ
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬಿಡುಗಡೆಗೆ ಸಜ್ಜಾಗುತ್ತಿದೆ 2021ರ ಮಾರುತಿ ಎಕ್ಸ್ಎಲ್5 ಕಾರು
ಮಾರುತಿ ಸುಜುಕಿ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಜನಪ್ರಿಯ ವ್ಯಾಗನ್ಆರ್ ಹ್ಯಾಚ್ಬ್ಯಾಕ್ನ ಪ್ರೀಮಿಯಂ ಆವೃತ್ತಿಯಾದ ಮಾರುತಿ ಎಕ್ಸ್ಎಲ್5 ಅನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಇದರ ಭಾಗವಾಗಿ ಈ ಹೊಸ ಮಾರುತಿ ಎಕ್ಸ್ಎಲ್5 ಪ್ರೀಮಿಯಂ ಕಾರು ಭಾರತದಲ್ಲಿ ಸ್ಪಾಟ್ ನಡೆಸಿದೆ.
ಈ ಹೊಸ ಮಾರುತಿ ಎಕ್ಸ್ಎಲ್5 ಕಾರು ದೆಹಲಿಯಲ್ಲಿ ಸ್ಫಾಟ್ ಟೆಸ್ಟ್ ನಡಿಸಿದೆ. ಈ ಪ್ರೀಮಿಯಂ ಕಾರು ಸ್ಪಾಟ್ ಟೆಸ್ಟ್ ನಡೆಸುತ್ತಿರುವ ಚಿತ್ರಗಳು ಬಹಿರಂಗವಾಗಿವೆ. ಈ ಚಿತ್ರದಲ್ಲಿ ಎಕ್ಸ್ಎಲ್5 ಕಾರು ಸಂಪೂರ್ಣವಾಗಿ ಮರೆಮಾಚಿ ಸ್ಪಾಟ್ ಟೆಸ್ಟ್ ಅನ್ನು ನಡೆಸಲಾಗಿದೆ. ಈ ಹೊಸ ಮಾರುತಿ ಸುಜುಕಿ ಎಕ್ಸ್ಎಲ್5 ಕಾರಿಗೆ ಸ್ಪ್ಲಿಟ್ ಹೆಡ್ಲ್ಯಾಂಪ್ ಸೆಟಪ್, ಮುಂಭಾಗದ ಬಂಪರ್ನಲ್ಲಿ ಏರ್ ಡ್ಯಾಮ್ ಮತ್ತು ಎರಡೂ ತುದಿಯಲ್ಲಿ ಫಾಗ್ ಲ್ಯಾಂಪ್ ಅನ್ನು ಹೊಂದಿದೆ.
ಈ ಎಕ್ಸ್ಎಲ್5 ಕಾರಿನಲ್ಲಿ ಸ್ಲಿಕ್ ಗ್ರಿಲ್ ಮತ್ತು ಹಿಂಭಾಗದಲ್ಲಿ ಕೆಲವು ಸಣ್ಣ ಬದಲಾವಣೆಗಳೊಂದಿಗೆ ವ್ಯಾಗನ್ಆರ್ ಗಿಂತ ಭಿನ್ನವಾಗಿ ಕಾಣುತ್ತದೆ. ಇನ್ನು ಈ ಕಾರಿನಲ್ಲಿ ಹೊಸ ಅಲಾಯ್ ವ್ಹೀಲ್ ಗಳನ್ನು ಅಳವಡಿಸಲಾಗಿದೆ.
MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ
ಈ ಎಕ್ಸ್ಎಲ್5 ಮಾದರಿಯ ಒಟ್ಟಾರೆ ಸಿಲೂಯೆಟ್ ವ್ಯಾಗನ್ಆರ್ ಕಾರಿಗೆ ಹೋಲುತ್ತದೆ. ಸ್ಪೈ ಚಿತ್ರಗಳಲ್ಲಿ ಕಂಡು ಬಂದ ಹಾಗೆ ಎಕ್ಸ್ಎಲ್5 ಕಾರು ಸ್ಟ್ಯಾಂಡರ್ಡ್ ವ್ಯಾಗನ್ಆರ್ ಕಂಡುಬರುವಂತಹ ಕ್ಯಾಬಿನ್ ವಿನ್ಯಾಸವನ್ನು ಹೊಂದಿರಲಿದೆ.
ಈ ಹೊಸ ಕಾರಿನಲ್ಲಿ ಕ್ಲೈಮೆಂಟ್ ಕಂಟ್ರೋಲ್ ಏರ್-ಕಾನ್ ಯುನಿಟ್ ಮತ್ತು 7.0 ಇಂಚಿನ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ ಅನ್ನು ಹೊಂದಿರುತ್ತದೆ. ಇನ್ನು ಇತರ ಪ್ರೀಮಿಯಂ ಫೀಚರ್ ಗಳನ್ನು ಕೂಡ ಹೊಂದಿರಲಿದೆ.
MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು
ಈ ಹೊಸ ಮಾರುತಿ ಬಿಎಸ್-6 ಎಕ್ಸ್ಎಲ್5 ಕಾರಿನಲ್ಲಿ 1.2-ಲೀಟರ್ ಕೆ12ಬಿ ಪೆಟ್ರೋಲ್ ಎಂಜಿನ್ ಅನ್ನು ಹೊಂದಿರಲಿದೆ. ವ್ಯಾಗನ್ಆರ್ ಹ್ಯಾಚ್ಬ್ಯಾಕ್ನಲ್ಲಿಯು ಇದೇ ಮಾದರಿಯ ಎಂಜಿನ್ ಅನ್ನು ಹೊಂದಿದೆ.
ಈ ಎಂಜಿನ್ 82 ಬಿಹೆಚ್ಪಿ ಪವರ್ ಮತ್ತು 114 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ಎಜಿಎಸ್ ಆಟೋಮ್ಯಾಟಿಕ್ ಗೇರ್ಬಾಕ್ಸ್ನೊಂದಿಗೆ ಅದೇ 5-ಸ್ಪೀಡ್ ಮ್ಯಾನ್ಯುವಲ್ ಗೇರ್ಬಾಕ್ಸ್ ಅನ್ನು ಒಳಗೊಂಡಿದೆ.
MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್
ಮಾರುತಿ ಎಕ್ಸ್ಎಲ್5 ಕಾರನ್ನು ಬ್ರ್ಯಾಂಡ್ನ ಪ್ರೀಮಿಯಂ ನೆಕ್ಸಾ ಡೀಲರ್ ಗಳ ಮೂಲಕ ಪ್ರತ್ಯೇಕವಾಗಿ ಮಾರಾಟ ಮಾಡಲಾಗುತ್ತದೆ. ನೆಕ್ಸಾ ಪ್ರೀಮಿಯಂ ವಿಭಾಗದಲ್ಲಿ ಈ ಕಾರನ್ನು ಎಂಟ್ರಿ-ಲೆವೆಲ್ ಮಾದರಿಯಾಗಿ ಮಾರಾಟ ಮಾಡಲಾಗುವುದು, ನೆಕ್ಸಾ ಡೀಲರ್ ಗಳು ಇಗ್ನೀಸ್, ಬಲೆನೊ, ಎಸ್-ಕ್ರಾಸ್ ಮತ್ತು ಎಕ್ಸ್ಎಲ್6 ಕಾರುಗಳನ್ನು ಕೂಡ ಮಾರಾಟ ಮಾಡಲಾಗುತ್ತದೆ.
ಮಾರುತಿ ಸುಜುಕಿ ವ್ಯಾಗನ್ಆರ್ ಹ್ಯಾಚ್ಬ್ಯಾಕ್ನ ಪ್ರೀಮಿಯಂ ಆವೃತ್ತಿಯಾಗಿ ಎಕ್ಸ್ಎಲ್5 ಅನ್ನು ಬಿಡುಗಡೆಗೊಳಿಸುತ್ತಿದೆ. ಈ ಹೊಸ ಮಾರುತಿ ಸುಜುಕಿ ಎಕ್ಸ್ಎಲ್5 ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಇದೇ ವರ್ಷ ಬಿಡುಗಡೆಯಾಗಲಿದೆ.