Just In
- 10 hrs ago
ಹೊಸ ಫೀಚರ್ಸ್ಗಳನ್ನು ಪಡೆಯಲಿದೆ ನ್ಯೂ ಜನರೇಷನ್ ಫೋಕ್ಸ್ವ್ಯಾಗನ್ ಪೊಲೊ
- 12 hrs ago
ಫೋರ್ಡ್ ಮುಸ್ಟಾಂಗ್ ಕಾರಿನಂತೆ ಮಾಡಿಫೈಗೊಂಡ ಬಲೆನೊ ಸೆಡಾನ್ ಕಾರು
- 14 hrs ago
ವಾರದ ಸುದ್ದಿ: ಸಿಟ್ರನ್ ಕಾರು ಬಿಡುಗಡೆ, ಹೊಸ ವಾಹನ ಬೆಲೆ ಹೆಚ್ಚಳ, ಅಲ್ಕಾಜರ್ ಅನಾವರಣ, ಯುಗಾದಿ ಆಫರ್ ಘೋಷಣೆ!
- 24 hrs ago
ಎಕ್ಸ್ಯುವಿ700 ಎಸ್ಯುವಿ ಕಾರಿನ ಮತ್ತಷ್ಟು ಹೊಸ ಮಾಹಿತಿ ಹಂಚಿಕೊಂಡ ಮಹೀಂದ್ರಾ
Don't Miss!
- Sports
ದಿನೇಶ್ ಕಾರ್ತಿಕ್ ನನಗೆ ಸಂಪೂರ್ಣ ಬೆಂಬಲವನ್ನು ನೀಡುತ್ತಿದ್ದಾರೆ: ಇಯಾನ್ ಮಾರ್ಗನ್
- News
ನಾರ್ವೆ ಪ್ರಧಾನಿಗೆ ವಿಧಿಸಿದ 1.71 ಲಕ್ಷ ರೂ. ದಂಡದ ಹಿಂದಿನ ಕುತೂಹಲಕಾರಿ ಕಾರಣ?
- Movies
ಸೋನು ಸೂದ್ಗೆ ವಿಶೇಷ ಗೌರವ ನೀಡಿದ ಪಂಜಾಬ್ ಸರ್ಕಾರ
- Finance
ಟಾಪ್ 10ರಲ್ಲಿ 4 ಕಂಪನಿಗಳ ಮೌಲ್ಯ 1.14 ಲಕ್ಷ ಕೋಟಿ ರುಗೇರಿಕೆ
- Lifestyle
ವಾರ ಭವಿಷ್ಯ:ಈ ವಾರ 12 ರಾಶಿಗಳ ರಾಶಿಫಲ ಹೇಗಿದೆ?
- Education
Bank Of Baroda Recruitment 2021: 512 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಭಾರತದಲ್ಲಿ 2021ರ ಜಿಎಲ್ಸಿ ಎಸ್ಯುವಿ ಬಿಡುಗಡೆ ಮಾಡಿದ ಮರ್ಸಿಡಿಸ್ ಬೆಂಝ್
ಮರ್ಸಿಡಿಸ್ ಬೆಂಝ್ ಇಂಡಿಯಾ ಕಂಪನಿಯು ತನ್ನ ಜನಪ್ರಿಯ ಎಸ್ಯುವಿ ಕಾರು ಮಾದರಿಯಾದ ಜಿಎಲ್ಸಿ ಕಾರಿನ 2021ರ ಆವೃತ್ತಿಯನ್ನು ಬಿಡುಗಡೆ ಮಾಡಿದ್ದು, ಹೊಸ ಆವೃತ್ತಿಯು ಕೆಲವು ಪ್ರಮುಖ ಬದಲಾವಣೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ.

ಹೊಸ ಜಿಎಲ್ಸಿ ಎಸ್ಯುವಿ ಕಾರು ಮಾದರಿಯಲ್ಲಿ ಮರ್ಸಿಡಿಸ್ ಬೆಂಝ್ ಕಂಪನಿಯು ಈ ಬಾರಿ ಹಲವು ಪ್ರೀಮಿಯಂ ಫೀಚರ್ಸ್ಗಳನ್ನು ಸ್ಟ್ಯಾಂಡರ್ಡ್ ಆಗಿ ಜೋಡಣೆ ಮಾಡಿದ್ದು, ಕಳೆದ ವರ್ಷವಷ್ಟೇ ಈ ಕಾರು ಫೇಸ್ಲಿಫ್ಟ್ ಮಾದರಿಯೊಂದಿಗೆ ಬಿಡುಗಡೆಯಾಗಿತ್ತು. ಇದೀಗ 2021ರ ಮಾದರಿಯಲ್ಲಿ ಕೆಲವು ಹೆಚ್ಚುವರಿ ತಾಂತ್ರಿಕ ಅಂಶಗಳ ಜೋಡಣೆ ಹೊರತುಪಡಿಸಿ ಕಾರಿನ ಹೊರಭಾಗದಲ್ಲಿ ಯಾವುದೇ ಬದಲಾವಣೆ ಪರಿಚಯಿಸಲಾಗಿಲ್ಲ.

2021ರ ಜಿಎಲ್ಸಿ ಮಾದರಿಯು ದೆಹಲಿ ಎಕ್ಸ್ಶೋರೂಂ ಪ್ರಕಾರ ಆರಂಭಿಕವಾಗಿ ರೂ.57.40 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯು ರೂ.63.15 ಲಕ್ಷ ಬೆಲೆ ಹೊಂದಿದ್ದು, ಹೊಸ ಆವೃತ್ತಿಯು ಫೇಸ್ಲಿಫ್ಟ್ ಮಾದರಿಗಿಂತಲೂ ಹೆಚ್ಚುವರಿಯಾಗಿ ರೂ. 1.56 ಲಕ್ಷದಿಂದ ರೂ.2.02 ಲಕ್ಷದಷ್ಟು ದುಬಾರಿಯಾಗಿದೆ.

ಜಿಎಲ್ಸಿ ಎಸ್ಯುವಿ ಕಾರು ಮಾದರಿಯು ಗ್ರಾಹಕರ ಬೇಡಿಕೆಯೆಂತೆ ಜಿಎಲ್ಸಿ 200 ಮತ್ತು ಜಿಎಲ್ಸಿ 200ಡಿ 4ಮ್ಯಾಟಿಕ್ ಆವೃತ್ತಿಗಳಲ್ಲಿ ಖರೀದಿಗೆ ಲಭ್ಯವಿದ್ದು, ಹೊಸ ಕಾರಿನಲ್ಲಿ ಕಾರ್ ಕನೆಕ್ಟೆಡ್ ಫೀಚರ್ಸ್ಗಳನ್ನು ನವೀಕರಣಗೊಳಿಸುವ ಮೂಲಕ ಹೆಚ್ಚುವರಿ ಬಣ್ಣಗಳ ಆಯ್ಕೆ ನೀಡಿದೆ.

ಹೊಸ ಜಿಎಲ್ಸಿ ಕಾರು ಮಾದರಿಯನ್ನು ಬ್ರಿಲಿಯೆಂಟ್ ಬ್ಲ್ಯೂ ಮತ್ತು ಹೈ ಟೆಕ್ ಸಿಲ್ವರ್ ಬಣ್ಣಗಳಲ್ಲಿ ಬಿಡುಗಡೆ ಮಾಡಲಾಗಿದ್ದು, ಹೊಸ ಕಾರಿನಲ್ಲಿ ಜೋಡಿಸಲಾಗಿರುವ 12.3-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಡಿಸ್ಪ್ಲೇ ಅನ್ನು ಪ್ರಮುಖ ಮೂರು ವಿಧಗಳಲ್ಲಿ ವೀಕ್ಷಣೆ ಮಾಡಬಹುದಾಗಿದೆ. ಇನ್ಸ್ಟ್ರುಮೆಂಟ್ ಕ್ಲಸ್ಟರ್ ಡಿಸ್ಪ್ಲೇ ಅನ್ನು ಕ್ಲಾಸಿಕ್, ಪ್ರೊಗ್ರೆಸಿವ್ ಮತ್ತು ಸ್ಪೋರ್ಟಿ ಸ್ಟೈಲಿನಲ್ಲಿ ನೋಡಬಹುದಾಗಿದ್ದು, ಮುಂಭಾಗದ ಆಸನವು ಈ ಬಾರಿ ಮಸಾಜ್ ಫಂಕ್ಷನ್ ಹೊಂದಿರಲಿದೆ.

ಮಸಾಜ್ ಫಂಕ್ಷನ್ ವೈಶಿಷ್ಟ್ಯತೆಯನ್ನು ಸೆಂಟರ್ ಕನ್ಸೊಲ್ನಲ್ಲಿರುವ ಒನ್ ಟಚ್ ಬಟನ್ ಮೂಲಕ ನಿಯಂತ್ರಣ ಮಾಡಬಹುದಾಗಿದ್ದು, ಮರ್ಸಿಡಿಸ್ ಬೆಂಝ್ ಕಂಪನಿಯು ತನ್ನ ಸರಣಿ ಕಾರುಗಳಲ್ಲಿ ಮೊದಲ ಬಾರಿಗೆ ಮಸಾಜ್ ಫಂಕ್ಷನ್ ಫೀಚರ್ಸ್ ಅನ್ನು ಜಿಎಲ್ಸಿಯಲ್ಲಿ ಸ್ಟ್ಯಾಂಡರ್ಡ್ ಆಗಿ ನೀಡಿದೆ.

ಇನ್ನುಳಿದಂತೆ ಹೊಸ ಕಾರಿನ ಕನೆಕ್ಟೆಡ್ ಫೀಚರ್ಸ್ನಲ್ಲಿ ಮಹತ್ವದ ಬದಲಾವಣೆ ತಂದಿರುವ ಮರ್ಸಿಡಿಸ್ ಬೆಂಝ್ ಕಂಪನಿಯು ಮಿ ಕನೆಕ್ಟ್ ಫೀಚರ್ಸ್ ಅಮೆಜಾನ್ ಅಲೆಕ್ಸಾ ಮತ್ತು ಗೂಗಲ್ ಹೋಂ ಮೂಲಕ ವಾಯ್ಸ್ ಅಸಿಸ್ಟ್ ಒಂದೇ ಕಾರ್ ಕನೆಕ್ಟ್ ಸಿಸ್ಟಂನಲ್ಲಿ ಬಳಕೆ ಮಾಡಬಹುದಾಗಿದ್ದು, ಹೊಸ ನ್ಯಾವಿಗೇಷನ್ ಸಿಸ್ಟಂ ಮೂಲಕ ಪಾರ್ಕಿಂಗ್ ಸ್ಥಳಗಳನ್ನು ಅತಿ ಸುಲಭವಾಗಿ ಪತ್ತೆ ಮಾಡಬಹುದಾಗಿದೆ.

ನಗರ ಪ್ರದೇಶಗಳಲ್ಲಿ ಕಾರು ಚಾಲನೆ ಮಾಡುವಾಗ ಅಗತ್ಯವಿದ್ದಲ್ಲಿ ನಿಲುಗಡೆಯ ಸ್ಥಳಗಳಲ್ಲಿ ಪಾರ್ಕಿಂಗ್ ಸ್ಥಳ ಲಭ್ಯವಿಲ್ಲವಾದರೆ ಹತ್ತಿರದ ಸ್ಥಳದಲ್ಲಿರುವ ಪಾರ್ಕಿಂಗ್ ಸ್ಥಳಗಳನ್ನು ಸುಲಭವಾಗಿ ಗುರುತಿಸಿ ವಾಯ್ಸ್ ಕಮಾಂಡ್ ಮಾಡಲಿದೆ.
MOST READ: ಮುಖೇಶ್ ಅಂಬಾನಿ ಭದ್ರತೆಗಾಗಿಯೇ ಬಂತು ಮೂರು ಕೋಟಿ ಬೆಲೆಯ ಕಾರು

ಇದಲ್ಲದೇ ಹೊಸ ಕಾರಿನಲ್ಲಿ ರಿಮೋಟ್ ಮೂಲಕವೇ ವಿಂಡೋಗಳನ್ನು ಮತ್ತು ಸನ್ರೂಫ್ ತೆರೆಯಲು ಮತ್ತು ಮಚ್ಚುವ ಸೌಲಭ್ಯಗಳನ್ನು ನೀಡಲಾಗಿದ್ದು, 360-ಡಿಗ್ರಿ ಕ್ಯಾಮೆರಾ ಸೌಲಭ್ಯವನ್ನು ಸಹ ಈ ಬಾರಿ ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ.

ಎಂಜಿನ್ ಮತ್ತು ಪರ್ಫಾಮೆನ್ಸ್
ಜಿಎಲ್ಸಿ ಕಾರು ಮಾದರಿಯಲ್ಲಿ ಮರ್ಸಿಡಿಸ್ ಬೆಂಝ್ ಕಂಪನಿಯು 2.0-ಲೀಟರ್ ಟರ್ಬೋ ಪೆಟ್ರೋಲ್ ಮತ್ತು 2.0-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಗಳನ್ನು ನೀಡುತ್ತಿದ್ದು, 9-ಸ್ಪೀಡ್ ಆಟೋಮ್ಯಾಟಿಕ್ ಗೇರ್ಬಾಕ್ಸ್ ಆಯ್ಕೆಯೊಂದಿಗೆ ಪೆಟ್ರೋಲ್ ಮಾದರಿಯು 197-ಬಿಎಚ್ಪಿ ಮತ್ತು ಡೀಸೆಲ್ ಮಾದರಿಯು 194-ಬಿಎಚ್ಪಿ ಉತ್ಪಾದನಾ ಶಕ್ತಿ ಹೊಂದಿವೆ.
MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಡೀಸೆಲ್ ಹೈ ಎಂಡ್ ಮಾದರಿಯಲ್ಲಿ ಮಾತ್ರ ಮರ್ಸಿಡಿಸ್ ಕಂಪನಿಯು 4ಮ್ಯಾಟಿಕ್ ಆಲ್ ವೀಲ್ಹ್ ಸಿಸ್ಟಂ ಜೋಡಣೆ ಮಾಡಿದ್ದು, ಹೊಸ ಕಾರು ಮಾದರಿಯು ಬಿಎಂಡಬ್ಲ್ಯು ಎಕ್ಸ್3, ವೊಲ್ವೊ ಎಕ್ಸ್ಸಿ60 ಮತ್ತು ಆಡಿ ಕ್ಯೂ5 ಕಾರುಗಳಿಗೆ ಪ್ರಬಲ ಪೈಪೋಟಿಯಾಗಲಿದೆ.