ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ 2021ರ ಮಿನಿ 3 ಡೋರ್ ಫೇಸ್‌ಲಿಫ್ಟ್

ಜನಪ್ರಿಯ ಮಿನಿ ಕಂಪನಿಯು ಇತ್ತೀಚೆಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ 2021ರ ಮಿನಿ 3 ಡೋರ್ ಫೇಸ್‌ಲಿಫ್ಟ್ ಹ್ಯಾಚ್‌ಬ್ಯಾಕ್ ಅನ್ನು ಅನಾವರಣಗೊಳಿಸಿತ್ತು. ಈ ಹೊಸ ಮಿನಿ 3 ಡೋರ್ ಫೇಸ್‌ಲಿಫ್ಟ್ ಹ್ಯಾಚ್‌ಬ್ಯಾಕ್ ಭಾರತದಲ್ಲಿ ಇತ್ತೀಚೆಗೆ ಸ್ಪಾಟ್ ಟೆಸ್ಟ್ ಅನ್ನು ನಡೆಸಿದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ 2021ರ ಮಿನಿ 3 ಡೋರ್ ಫೇಸ್‌ಲಿಫ್ಟ್

ಈ ಹೊಸ ಮಿನಿ 3 ಡೋರ್ ಫೇಸ್‌ಲಿಫ್ಟ್ ಹ್ಯಾಚ್‌ಬ್ಯಾಕ್ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಸ್ಟೈಲಿಂಗ್ ನವೀಕರಣಗಳು ಮತ್ತು ಇತರ ಪರಿಷ್ಕೃತ ಪೀಚರ್ ಗಳನ್ನು ಪಡೆದುಕೊಂಡಿದೆ. ಈ ಹೊಸ ಮಿನಿ 3 ಡೋರ್ ಹ್ಯಾಚ್‌ಬ್ಯಾಕ್ ಸ್ಪಾಟ್ ಟೆಸ್ಟ್ ನಡೆಸುತ್ತಿರುವ ಸ್ಪೈ ಚಿತ್ರಗಳನ್ನು ಆಟೋಕಾರ್ ಇಂಡಿಯಾ ಬಹಿರಂಗಪಡಿಸಿವೆ. ಬಹುತೇಕ ಬಂಪರಿನ ತಳಕ್ಕೆ. ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬಹಿರಂಗಪಡಿಸಿದ ಕಾರು ನಂಬರ್ ಪ್ಲೇಟ್ ಅನ್ನು ಹೊಂದಿರುವ ಮತ್ತು ಗ್ರಿಲ್'ನ ಸುತ್ತ ಮರೆಮಾಚಲಾಗಿದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ 2021ರ ಮಿನಿ 3 ಡೋರ್ ಫೇಸ್‌ಲಿಫ್ಟ್

ಹೊಸ ಮಿನಿ 3 ಡೋರ್ ಫೇಸ್‌ಲಿಫ್ಟ್ ಹ್ಯಾಚ್‌ಬ್ಯಾಕ್ ಇಂಟಿರಿಯರ್ ಹಾಗೂ ಎಕ್ಸ್ ಟಿರಿಯರ್'ಗಳನ್ನು ಅಪ್ ಡೇಟ್ ಮಾಡಲಾಗಿದೆ. ಮುಂಭಾಗ, ಇಂಟಿರಿಯರ್ ವಿನ್ಯಾಸ, ಕ್ಯಾಬಿನ್, ಅಲಾಯ್ ವ್ಹೀಲ್, ಸೀಟ್ ಹಾಗೂ ಬಣ್ಣಗಳನ್ನು ಬದಲಾಯಿಸಿದೆ.

MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್‌ಯುವಿ300

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ 2021ರ ಮಿನಿ 3 ಡೋರ್ ಫೇಸ್‌ಲಿಫ್ಟ್

ಈ ಕಾರುಗಳ ಮುಂಭಾಗದ ಹೆಕ್ಸಾಗನಲ್ ಗ್ರಿಲ್ ಅನ್ನು ಮರುವಿನ್ಯಾಸಗೊಳಿಸಲಾಗಿದ್ದು, ಹೆಡ್‌ಲೈಟ್ ವಿನ್ಯಾಸವನ್ನು ಸಹ ನವೀಕರಿಸಲಾಗಿದೆ. ಕಾರಿನ ರೇಡಿಯೇಟರ್ ಗ್ರಿಲ್ ಈಗ ಮೊದಲಿಗಿಂತ ದೊಡ್ಡದಾಗಿದೆ ಎಂದು ಹೇಳಲಾಗಿದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ 2021ರ ಮಿನಿ 3 ಡೋರ್ ಫೇಸ್‌ಲಿಫ್ಟ್

ಹೊಸ ಮಿನಿ 3 ಡೋರ್ ಫೇಸ್‌ಲಿಫ್ಟ್ ಕಾರಿನ ಹೆಡ್‌ಲೈಟ್ ಎಲ್‌ಇಡಿ ಹೈಬೀಮ್ ಹಾಗೂ ಲೋಬೀಮ್ ಅನ್ನು ಹೊಂದಿದ್ದು ಇದರಿಂದ ರಾತ್ರಿ ವೇಳೆಯಲ್ಲಿ ಎದುರಿಗಿರುವ ವಸ್ತುಗಳು ಸ್ಪಷ್ಟವಾಗಿ ಕಾಣುತ್ತವೆ. ಕಾರಿನ ಅಲಾಯ್ ವ್ಹೀಲ್'ಗಳಲ್ಲಿಯೂ ಗಮನಾರ್ಹ ಬದಲಾವಣೆಗಳನ್ನು ಮಾಡಲಾಗಿದೆ.

MOST READ: ಜನವರಿ ತಿಂಗಳಿನಲ್ಲಿ ಮಾರುತಿ ಎಕ್ಸ್‌ಎಲ್6 ಕಾರು ಮಾರಾಟದಲ್ಲಿ ಶೇ.305ರಷ್ಟು ಹೆಚ್ಚಳ

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ 2021ರ ಮಿನಿ 3 ಡೋರ್ ಫೇಸ್‌ಲಿಫ್ಟ್

ಕಾರಿನಲ್ಲಿ ಡ್ಯುಯಲ್ ಟೋನ್ 7-ಸ್ಪೋಕ್ ಅಲಾಯ್ ವ್ಹೀಲ್, ಹೆಡ್‌ಲೈಟ್‌ನ ಬದಿಯಲ್ಲಿ ಎಲ್‌ಇಡಿ ಟರ್ನ್ ಇಂಡಿಕೇಟರ್ ಅಳವಡಿಸಲಾಗಿದೆ. ಕಾರಿನ ಹಿಂಭಾಗದ ಏಪ್ರನ್ ಎಲ್ಇಡಿ ಡಿಫಾಗರ್ ಹೊಂದಿದೆ. ಈ ಕಾರು ರೂಫ್ ಟಾಪ್ ಗ್ರೇ, ಐಲ್ಯಾಂಡ್ ಬ್ಲೂ ಹಾಗೂ ಜೀಟಿ ಯೆಲ್ಲೋ ಬಣ್ಣಗಳಲ್ಲಿ ಮಾರಾಟವಾಗಲಿವೆ. ಈ ಕಾರುಗಳಲ್ಲಿ ಮಲ್ಟಿಟೋನ್ ರೂಫ್ ಆಯ್ಕೆಯನ್ನು ಸಹ ನೀಡಲಾಗಿದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ 2021ರ ಮಿನಿ 3 ಡೋರ್ ಫೇಸ್‌ಲಿಫ್ಟ್

ಕಾರಿನ ಇಂಟಿರಿಯರ್ ಅನ್ನು ಮೊದಲಿಗಿಂತ ಹೆಚ್ಚು ಪ್ರೀಮಿಯಂ ಮಾಡಲಾಗಿದೆ. ಕಾರಿನ ಫಿನಿಷಿಂಗ್ ಅನ್ನು ಸುಧಾರಿಸಲಾಗಿದೆ. ಈ ಕಾರಿನೊಳಗೆ ಹೊಸ ಸ್ಪೋರ್ಟ್ಸ್ ಸೀಟುಗಳನ್ನು ಅಳವಡಿಸಲಾಗಿದೆ. ಕಾರಿನ ಕ್ಯಾಬಿನ್‌ನಲ್ಲಿ ಹೊಸ ಟಚ್‌ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಸಿಸ್ಟಂ ನೀಡಲಾಗಿದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ 2021ರ ಮಿನಿ 3 ಡೋರ್ ಫೇಸ್‌ಲಿಫ್ಟ್

ಇದರ ಜೊತೆಗೆ ಹೊಸ ಏರ್ ವೆಂಟ್ಸ್, ಹೊಸ ಸ್ವಿಚ್, ಹೊಸ ಲೆದರ್ ಕವರ್ಡ್ ಸ್ಟೀಯರಿಂಗ್ ವ್ಹೀಲ್, ಎಲ್ಇಡಿ ಆಂಬಿಯೆಂಟ್ ಲೈಟಿಂಗ್'ಗಳನ್ನು ನೀಡಲಾಗಿದೆ. ಈಗ ಈ ಮಿನಿ ಕಾರಿನಲ್ಲಿ ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಸಹ ನೀಡಲಾಗುತ್ತದೆ. ಸುರಕ್ಷತೆಗಾಗಿ ಆಕ್ಟಿವ್ ಕ್ರೂಸ್ ಕಂಟ್ರೋಲ್, ಲೇನ್ ಚೇಂಜ್ ವಾರ್ನಿಂಗ್, ವೆದರಿಂಗ್ ಸಿಸ್ಟಂಗಳನ್ನು ನೀಡಲಾಗಿದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ 2021ರ ಮಿನಿ 3 ಡೋರ್ ಫೇಸ್‌ಲಿಫ್ಟ್

ಅಂತರರಾಷ್ಟ್ರೀಯ ಮಿನಿ 3 ಡೋರ್‌ನಲ್ಲಿ ಮಿನಿ ಎಂಜಿನ್ ಸಾಲಿನಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ. ಪ್ರಸ್ತುತ ಭಾರತದಲ್ಲಿ ಸ್ಟ್ಯಾಂಡರ್ಡ್ ಮಿನಿ ಹ್ಯಾಚ್‌ಬ್ಯಾಕ್ 192 ಡೋರ್ ಮಾದರಿಯಲ್ಲಿರುವ 2.0-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್‌ ಅನ್ನು ಈ ಹೊಸ ಕಾರಿಗೆ ನೀಡಬಹುದು.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ 2021ರ ಮಿನಿ 3 ಡೋರ್ ಫೇಸ್‌ಲಿಫ್ಟ್

ಈ ಎಂಜಿನ್ ಅನ್ನು 7-ಸ್ಪೀಡ್ ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಇನ್ನು ಈ 2021ರ ಮಿನಿ 3 ಡೋರ್ ಫೇಸ್‌ಲಿಫ್ಟ್ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸುತ್ತೇವೆ.

Most Read Articles

Kannada
Read more on ಮಿನಿ mini
English summary
2021 Mini 3 Door Facelift Spotted Testing. Read In Kannada.
Story first published: Saturday, February 27, 2021, 20:13 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X