Just In
- 1 hr ago
ಫೋಕ್ಸ್ವ್ಯಾಗನ್ ಐಡಿ.4 ಜಿಟಿಎಕ್ಸ್ ಪರ್ಫಾಮೆನ್ಸ್ ಎಲೆಕ್ಟ್ರಿಕ್ ಕಾರಿನ ಟೀಸರ್ ಬಿಡುಗಡೆ
- 2 hrs ago
ಕೇವಲ 48 ನಿಮಿಷಗಳಲ್ಲಿ ಸೋಲ್ಡ್ ಔಟ್ ಆದ ಕೆಟಿಎಂ 1290 ಸೂಪರ್ ಡ್ಯೂಕ್ ಆರ್ಆರ್
- 3 hrs ago
ಹೆರ್ಮೆಸ್ 75 ವಾಣಿಜ್ಯ ಬಳಕೆಯ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದ ಕಬೀರಾ ಮೊಬಿಲಿಟಿ
- 4 hrs ago
ದುಬಾರಿ ಬೆಲೆಯ ಲ್ಯಾಂಡ್ ರೋವರ್ ಡಿಫೆಂಡರ್ ಎಸ್ಯುವಿ ಖರೀದಿಸಿದ ನಟ ಅರ್ಜುನ್ ಕಪೂರ್
Don't Miss!
- Movies
ಡಾರ್ಲಿಂಗ್ ಕೃಷ್ಣ ಮತ್ತು ಮಿಲನ ನಾಗರಾಜ್ ದಂಪತಿಗೆ ಕೊರೊನಾ
- News
ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯಾನಾಥ್ ಹಾಗೂ ಅಖಿಲೇಶ್ ಯಾದವ್ಗೆ ಕೊರೊನಾ
- Sports
ಐಪಿಎಲ್ 2021: ಅತಿ ದೊಡ್ಡ ಮೈಲಿಗಲ್ಲು ಮುಟ್ಟಲು ವಿರಾಟ್ ಕೊಹ್ಲಿ ಮತ್ತಷ್ಟು ಸನಿಹ
- Finance
ಸತತ 15ದಿನಗಳಿಂದ ಪೆಟ್ರೋಲ್, ಡೀಸೆಲ್ ದರದಲ್ಲಿ ವ್ಯತ್ಯಾಸವಿಲ್ಲ
- Lifestyle
ರಕ್ತದಲ್ಲಿ ಕಬ್ಬಿಣದಂಶ ಹೆಚ್ಚಾದರೆ ಆಯುಸ್ಸು ಕಡಿಮೆಯಾಗುವುದು
- Education
NEET PG Admit Card 2021: ನೀಟ್ ಪಿಜಿ ಪ್ರವೇಶ ಪತ್ರ ಡೌನ್ಲೋಡ್ ಮಾಡುವುದು ಹೇಗೆ ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸ್ಪಾಟ್ ಟೆಸ್ಟ್ನಲ್ಲಿ ಕಾಣಿಸಿಕೊಂಡ 2021ರ ಮಿನಿ 3 ಡೋರ್ ಫೇಸ್ಲಿಫ್ಟ್
ಜನಪ್ರಿಯ ಮಿನಿ ಕಂಪನಿಯು ಇತ್ತೀಚೆಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ 2021ರ ಮಿನಿ 3 ಡೋರ್ ಫೇಸ್ಲಿಫ್ಟ್ ಹ್ಯಾಚ್ಬ್ಯಾಕ್ ಅನ್ನು ಅನಾವರಣಗೊಳಿಸಿತ್ತು. ಈ ಹೊಸ ಮಿನಿ 3 ಡೋರ್ ಫೇಸ್ಲಿಫ್ಟ್ ಹ್ಯಾಚ್ಬ್ಯಾಕ್ ಭಾರತದಲ್ಲಿ ಇತ್ತೀಚೆಗೆ ಸ್ಪಾಟ್ ಟೆಸ್ಟ್ ಅನ್ನು ನಡೆಸಿದೆ.

ಈ ಹೊಸ ಮಿನಿ 3 ಡೋರ್ ಫೇಸ್ಲಿಫ್ಟ್ ಹ್ಯಾಚ್ಬ್ಯಾಕ್ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಸ್ಟೈಲಿಂಗ್ ನವೀಕರಣಗಳು ಮತ್ತು ಇತರ ಪರಿಷ್ಕೃತ ಪೀಚರ್ ಗಳನ್ನು ಪಡೆದುಕೊಂಡಿದೆ. ಈ ಹೊಸ ಮಿನಿ 3 ಡೋರ್ ಹ್ಯಾಚ್ಬ್ಯಾಕ್ ಸ್ಪಾಟ್ ಟೆಸ್ಟ್ ನಡೆಸುತ್ತಿರುವ ಸ್ಪೈ ಚಿತ್ರಗಳನ್ನು ಆಟೋಕಾರ್ ಇಂಡಿಯಾ ಬಹಿರಂಗಪಡಿಸಿವೆ. ಬಹುತೇಕ ಬಂಪರಿನ ತಳಕ್ಕೆ. ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬಹಿರಂಗಪಡಿಸಿದ ಕಾರು ನಂಬರ್ ಪ್ಲೇಟ್ ಅನ್ನು ಹೊಂದಿರುವ ಮತ್ತು ಗ್ರಿಲ್'ನ ಸುತ್ತ ಮರೆಮಾಚಲಾಗಿದೆ.

ಹೊಸ ಮಿನಿ 3 ಡೋರ್ ಫೇಸ್ಲಿಫ್ಟ್ ಹ್ಯಾಚ್ಬ್ಯಾಕ್ ಇಂಟಿರಿಯರ್ ಹಾಗೂ ಎಕ್ಸ್ ಟಿರಿಯರ್'ಗಳನ್ನು ಅಪ್ ಡೇಟ್ ಮಾಡಲಾಗಿದೆ. ಮುಂಭಾಗ, ಇಂಟಿರಿಯರ್ ವಿನ್ಯಾಸ, ಕ್ಯಾಬಿನ್, ಅಲಾಯ್ ವ್ಹೀಲ್, ಸೀಟ್ ಹಾಗೂ ಬಣ್ಣಗಳನ್ನು ಬದಲಾಯಿಸಿದೆ.
MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್ಯುವಿ300

ಈ ಕಾರುಗಳ ಮುಂಭಾಗದ ಹೆಕ್ಸಾಗನಲ್ ಗ್ರಿಲ್ ಅನ್ನು ಮರುವಿನ್ಯಾಸಗೊಳಿಸಲಾಗಿದ್ದು, ಹೆಡ್ಲೈಟ್ ವಿನ್ಯಾಸವನ್ನು ಸಹ ನವೀಕರಿಸಲಾಗಿದೆ. ಕಾರಿನ ರೇಡಿಯೇಟರ್ ಗ್ರಿಲ್ ಈಗ ಮೊದಲಿಗಿಂತ ದೊಡ್ಡದಾಗಿದೆ ಎಂದು ಹೇಳಲಾಗಿದೆ.

ಹೊಸ ಮಿನಿ 3 ಡೋರ್ ಫೇಸ್ಲಿಫ್ಟ್ ಕಾರಿನ ಹೆಡ್ಲೈಟ್ ಎಲ್ಇಡಿ ಹೈಬೀಮ್ ಹಾಗೂ ಲೋಬೀಮ್ ಅನ್ನು ಹೊಂದಿದ್ದು ಇದರಿಂದ ರಾತ್ರಿ ವೇಳೆಯಲ್ಲಿ ಎದುರಿಗಿರುವ ವಸ್ತುಗಳು ಸ್ಪಷ್ಟವಾಗಿ ಕಾಣುತ್ತವೆ. ಕಾರಿನ ಅಲಾಯ್ ವ್ಹೀಲ್'ಗಳಲ್ಲಿಯೂ ಗಮನಾರ್ಹ ಬದಲಾವಣೆಗಳನ್ನು ಮಾಡಲಾಗಿದೆ.
MOST READ: ಜನವರಿ ತಿಂಗಳಿನಲ್ಲಿ ಮಾರುತಿ ಎಕ್ಸ್ಎಲ್6 ಕಾರು ಮಾರಾಟದಲ್ಲಿ ಶೇ.305ರಷ್ಟು ಹೆಚ್ಚಳ

ಕಾರಿನಲ್ಲಿ ಡ್ಯುಯಲ್ ಟೋನ್ 7-ಸ್ಪೋಕ್ ಅಲಾಯ್ ವ್ಹೀಲ್, ಹೆಡ್ಲೈಟ್ನ ಬದಿಯಲ್ಲಿ ಎಲ್ಇಡಿ ಟರ್ನ್ ಇಂಡಿಕೇಟರ್ ಅಳವಡಿಸಲಾಗಿದೆ. ಕಾರಿನ ಹಿಂಭಾಗದ ಏಪ್ರನ್ ಎಲ್ಇಡಿ ಡಿಫಾಗರ್ ಹೊಂದಿದೆ. ಈ ಕಾರು ರೂಫ್ ಟಾಪ್ ಗ್ರೇ, ಐಲ್ಯಾಂಡ್ ಬ್ಲೂ ಹಾಗೂ ಜೀಟಿ ಯೆಲ್ಲೋ ಬಣ್ಣಗಳಲ್ಲಿ ಮಾರಾಟವಾಗಲಿವೆ. ಈ ಕಾರುಗಳಲ್ಲಿ ಮಲ್ಟಿಟೋನ್ ರೂಫ್ ಆಯ್ಕೆಯನ್ನು ಸಹ ನೀಡಲಾಗಿದೆ.

ಕಾರಿನ ಇಂಟಿರಿಯರ್ ಅನ್ನು ಮೊದಲಿಗಿಂತ ಹೆಚ್ಚು ಪ್ರೀಮಿಯಂ ಮಾಡಲಾಗಿದೆ. ಕಾರಿನ ಫಿನಿಷಿಂಗ್ ಅನ್ನು ಸುಧಾರಿಸಲಾಗಿದೆ. ಈ ಕಾರಿನೊಳಗೆ ಹೊಸ ಸ್ಪೋರ್ಟ್ಸ್ ಸೀಟುಗಳನ್ನು ಅಳವಡಿಸಲಾಗಿದೆ. ಕಾರಿನ ಕ್ಯಾಬಿನ್ನಲ್ಲಿ ಹೊಸ ಟಚ್ಸ್ಕ್ರೀನ್ ಇನ್ಫೋಟೇನ್ಮೆಂಟ್ ಸಿಸ್ಟಂ ನೀಡಲಾಗಿದೆ.
MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಇದರ ಜೊತೆಗೆ ಹೊಸ ಏರ್ ವೆಂಟ್ಸ್, ಹೊಸ ಸ್ವಿಚ್, ಹೊಸ ಲೆದರ್ ಕವರ್ಡ್ ಸ್ಟೀಯರಿಂಗ್ ವ್ಹೀಲ್, ಎಲ್ಇಡಿ ಆಂಬಿಯೆಂಟ್ ಲೈಟಿಂಗ್'ಗಳನ್ನು ನೀಡಲಾಗಿದೆ. ಈಗ ಈ ಮಿನಿ ಕಾರಿನಲ್ಲಿ ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಸಹ ನೀಡಲಾಗುತ್ತದೆ. ಸುರಕ್ಷತೆಗಾಗಿ ಆಕ್ಟಿವ್ ಕ್ರೂಸ್ ಕಂಟ್ರೋಲ್, ಲೇನ್ ಚೇಂಜ್ ವಾರ್ನಿಂಗ್, ವೆದರಿಂಗ್ ಸಿಸ್ಟಂಗಳನ್ನು ನೀಡಲಾಗಿದೆ.

ಅಂತರರಾಷ್ಟ್ರೀಯ ಮಿನಿ 3 ಡೋರ್ನಲ್ಲಿ ಮಿನಿ ಎಂಜಿನ್ ಸಾಲಿನಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ. ಪ್ರಸ್ತುತ ಭಾರತದಲ್ಲಿ ಸ್ಟ್ಯಾಂಡರ್ಡ್ ಮಿನಿ ಹ್ಯಾಚ್ಬ್ಯಾಕ್ 192 ಡೋರ್ ಮಾದರಿಯಲ್ಲಿರುವ 2.0-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಈ ಹೊಸ ಕಾರಿಗೆ ನೀಡಬಹುದು.

ಈ ಎಂಜಿನ್ ಅನ್ನು 7-ಸ್ಪೀಡ್ ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ ಗೇರ್ಬಾಕ್ಸ್ಗೆ ಜೋಡಿಸಲಾಗಿದೆ. ಇನ್ನು ಈ 2021ರ ಮಿನಿ 3 ಡೋರ್ ಫೇಸ್ಲಿಫ್ಟ್ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸುತ್ತೇವೆ.