ಭಾರತದಲ್ಲಿ Volkswagen T-ROC ಎರಡನೇ ಬ್ಯಾಚ್ ಸೋಲ್ಡ್ ಔಟ್

ಜರ್ಮನಿ ಮೂಲದ ವಾಹನ ತಯಾರಕ ಕಂಪನಿಯಾದ ಫೋಕ್ಸ್‌ವ್ಯಾಗನ್ ತನ್ನ 2021ರ ಟಿ-ರಾಕ್ ಎಸ್‍ಯುವಿಯನ್ನು ಈ ವರ್ಷದ ಮಾರ್ಚ್ ತಿಂಗಳಿನ ಅಂತ್ಯದಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು. ಈ ಫೋಕ್ಸ್‌ವ್ಯಾಗನ್ ಟಿ-ರಾಕ್ ಎಸ್‍ಯುವಿಗೆ ಭಾರತೀಯ ಮಾರುಕಟ್ಟೆಯಲ್ಲಿ ಭರ್ಜರಿ ಬೇಡಿಕೆಯನ್ನು ಪಡೆದುಕೊಂಡಿದೆ.

ಭಾರತದಲ್ಲಿ Volkswagen T-ROC ಎರಡನೇ ಬ್ಯಾಚ್ ಸೋಲ್ಡ್ ಔಟ್

ಫೋಕ್ಸ್‌ವ್ಯಾಗನ್ ಇಂಡಿಯಾ ಕಂಪನಿಯು ಟಿ-ರಾಕ್ ಎಸ್‍ಯುವಿಗಾಗಿ ಬುಕ್ಕಿಂಗ್‌ಗಳನ್ನು ಸ್ವೀಕರಿಸುವುದನ್ನು ನಿಲ್ಲಿಸಿದೆ. ಏಕೆಂದರೆ ಫೋಕ್ಸ್‌ವ್ಯಾಗನ್ ಟಿ-ರಾಕ್ ಎಸ್‍ಯುವಿಯ ಎರಡನೇ ಬ್ಯಾಚ್ ಮಾರಾಟವಾಗಿದೆ. ಈ ಟಿ-ರಾಕ್ ಎಸ್‍ಯುವಿಯು ಸಂಪೂರ್ಣವಾಗಿ ಆಮದು ಮಾಡಲಾದ ವಾಹನವಾಗಿದ್ದು, ಟೈಗನ್‌ನ ಮೇಲೆ ಇರಿಸಲಾಗಿದೆ. ಈ ಫೋಕ್ಸ್‌ವ್ಯಾಗನ್ ಟಿ-ರಾಕ್ ಎಸ್‍ಯುವಿಯ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.21.35 ಲಕ್ಷವಾಗಿದೆ. ಈ ಪ್ರೀಮಿಯಂ ಮಿಡ್ ಸೈಜ್ ಎಸ್‍ಯುವಿಯಾದ ಟಿ-ರಾಕ್ ಅನ್ನು ಸಿಬಿಯು ಆಗಿ ಭಾರತಕ್ಕೆ ತರಲಾಗುತ್ತಿದೆ. ಇದರ ಪರಿಣಾಮವಾಗಿ 2021ರ ಫೋಕ್ಸ್‌ವ್ಯಾಗನ್ ಟಿ-ರಾಕ್ ಎಸ್‍ಯುವಿಯ ಬೆಲೆಯು ಹಿಂದಿನ ಮಾದರಿಗಿಂತ ರೂ.1.36 ಲಕ್ಷ ಹೆಚ್ಚಾಗಿದೆ.

ಭಾರತದಲ್ಲಿ Volkswagen T-ROC ಎರಡನೇ ಬ್ಯಾಚ್ ಸೋಲ್ಡ್ ಔಟ್

ಬೆಲೆ ಏರಿಕೆಯ ಹೊರತಾಗಿ 2021ರ ಫೋಕ್ಸ್‌ವ್ಯಾಗನ್ ಟಿ-ರಾಕ್ ಎಸ್‍ಯುವಿಯಯಲ್ಲಿ ಯಾವುದೇ ಬದಲಾವಣೆಳನ್ನು ಮಾಡಲಾಗಿಲ್ಲ, ಸಂಪೂರ್ಣವಾಗಿ ಹಿಂದಿನ ಮಾದರಿಯಂತಿದೆ, ಭಾರತೀಯ ಮಾರುಕಟ್ಟೆಯಲ್ಲಿ ಟಿಗ್ವಾನ್ ಆಲ್-ಸ್ಪೇಸ್ ಮತ್ತು ಟಿಗ್ವಾನ್ 5 ಸೀಟರ್ ಎಸ್‍ಯುವಿ ನಡುವಿನ ಸ್ಥಾನದಲ್ಲಿ ಟಿ-ರಾಕ್ ಅನ್ನು ಇರಿಸಲಾಗುತ್ತದೆ.

ಭಾರತದಲ್ಲಿ Volkswagen T-ROC ಎರಡನೇ ಬ್ಯಾಚ್ ಸೋಲ್ಡ್ ಔಟ್

2021ರ ಫೋಕ್ಸ್‌ವ್ಯಾಗನ್ ಟಿ-ರಾಕ್ ಎಸ್‍ಯುವಿಯ ವಿನ್ಯಾಸದ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಸ್ಲೀಕ್ ಗ್ರಿಲ್ ಅನ್ನು ಹೊಂದಿದೆ ಮತ್ತು ಮುಂಭಾಗದ ಎರಡೂ ಬದಿಯಲ್ಲಿ ಎಲ್‍ಇಡಿ ಪ್ರೊಜೆಕ್ಟರ್ ಹೆಡ್‍‍ಲ್ಯಾಂಪ್‍‍ಗಳನ್ನು ನೀಡಲಾಗಿದೆ. ಈ ಎಸ್‍‍ಯುವಿನ ಹೊಸ ಬಂಪರ್ ಅನ್ನು ಹೊಂದಿದ್ದು, ದೊಡ್ಡ ಮೆಡ್ ಗ್ರಿಲ್ ಏರ್ ಇನ್ ಟೆಕ್ ಅನ್ನು ಹೊಂದಿದೆ.

ಭಾರತದಲ್ಲಿ Volkswagen T-ROC ಎರಡನೇ ಬ್ಯಾಚ್ ಸೋಲ್ಡ್ ಔಟ್

ಈ ಟಿ-ರಾಕ್ ಎಸ್‍‍ಯುವಿಯ ಮುಂಭಾಗದಲ್ಲಿ ಎಲ್‍ಇ‍ಡಿ ಡಿಆರ್‍ಎಲ್‍ಗಳನ್ನು ಸಹ ಅಳವಡಿಸಲಾಗಿದೆ. ಈ ಹೊಸ ಟಿ-ರಾಕ್ ಎಸ್‍‍ಯುವಿನಲ್ಲಿ 5 ಸ್ಪೋಕ್ ಅಲಾಯ್ ವ್ಹೀಲ್, ಹಿಂಭಾಗದಲ್ಲಿ ರೂಫ್-ಮೌಂಟೆಡ್ ಸ್ಪಾಯ್ಲರ್ ಮತ್ತು ಸ್ಲೀಕ್ ಎಲ್‍ಇಡಿ ಟೈಲ್‍ ಲೈಟ್‍‍‍ಗಳನ್ನು ಹೊಂದಿದೆ. ಹಿಂಭಾಗದಲ್ಲಿ ಬಂಪರ್ ಮತ್ತು ಸ್ಕಫ್ ಪ್ಲೇಟ್ ಗಳನ್ನು ಕೂಡ ಹೊಂದಿವೆ.

ಭಾರತದಲ್ಲಿ Volkswagen T-ROC ಎರಡನೇ ಬ್ಯಾಚ್ ಸೋಲ್ಡ್ ಔಟ್

ಈ ಫೋಕ್ಸ್‌ವ್ಯಾಗನ್ ಹೊಸ ಟಿ-ರಾಕ್ ಎಸ್‍‍ಯುವಿಯ ಪ್ರೀಮಿಯಂ ಫೀಚರ್ಸ್‌ಗಳಾದ ಡ್ಯುಯಲ್ ಟೋನ್ ಅಲಾಯ್ ವೀಲ್ಹ್, ವೆನ್ನಾ ಲೆದರ್ ಸೀಟುಗಳು, ಫ್ರಂಟ್ ಆ್ಯಂಡ್ ರೇರ್ ಪಾರ್ಕಿಂಗ್ ಸೆನ್ಸಾರ್ ಸೌಲಭ್ಯಗಳಿದೆ. ಇನ್ನು ಸುರಕ್ಷತೆಗಾಗಿ ಎಬಿಎಸ್ ಜೊತೆ ಇಬಿಡಿ, 6 ಏರ್‌ಬ್ಯಾಗ್‌ಗಳು, ಟಯರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ, ರೇರ್ ಪಾರ್ಕಿಂಗ್ ಕ್ಯಾಮೆರಾ ಸೇರಿದಂತೆ ಹಲವಾರು ಪ್ರೀಮಿಯಂ ಫೀಚರ್ ಗಳನ್ನು ಹೊಂದಿವೆ.

ಭಾರತದಲ್ಲಿ Volkswagen T-ROC ಎರಡನೇ ಬ್ಯಾಚ್ ಸೋಲ್ಡ್ ಔಟ್

ಫೋಕ್ಸ್‌ವ್ಯಾಗನ್ ಟಿ-ರಾಕ್ ಎಸ್‍‍ಯುವಿನಲ್ಲಿ 1.5-ಲೀಟರ್ 4 ಸಿಲಿಂಡರ್ ಟರ್ಬೋ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 148 ಬಿ‍ಹೆಚ್‍ಪಿ ಪವರ್ ಮತ್ತು 250 ಎನ್‍‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍‍ನೊಂದಿಗೆ 7-ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಅನ್ನು ನೀಡಲಾಗಿದೆ.

ಭಾರತದಲ್ಲಿ Volkswagen T-ROC ಎರಡನೇ ಬ್ಯಾಚ್ ಸೋಲ್ಡ್ ಔಟ್

ಹೊಸ ಫೋಕ್ಸ್‌ವ್ಯಾಗನ್‍ ಟಿ-ರಾಕ್ ಎಸ್‍ಯುವಿಯು ಕೇವಲ 8.4 ಸೆಕೆಂಡುಗಳಲ್ಲಿ 0 ರಿಂದ 100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಇನ್ನು ಈ ಹೊಸ ಟಿ-ರಾಕ್ ಎಸ್‍ಯುವಿಯು ಪ್ರತಿ ಗಂಟೆಗೆ 205 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ.

ಭಾರತದಲ್ಲಿ Volkswagen T-ROC ಎರಡನೇ ಬ್ಯಾಚ್ ಸೋಲ್ಡ್ ಔಟ್

ಇನ್ನು ಫೋಕ್ಸ್‌ವ್ಯಾಗನ್ ಭಾರತೀಯ ಮಾರುಕಟ್ಟೆಯಲ್ಲಿ ಬಹುನಿರೀಕ್ಷಿತ 5-ಸೀಟರ್ ಟಿಗ್ವಾನ್ ಫೇಸ್‌ಲಿಫ್ಟ್ ಮತ್ತು ಮಿಡ್ ಸೈಜ್ ಸೆಡಾನ್ ಮಾದರಿಗಳನ್ನು ಪರಿಚಯಿಸಲಿದೆ. ಈ ಹೊಸ ಮಿಡ್ ಸೈಜ್ ಸೆಡಾನ್ ವಿರ್ಟಸ್ ಆಗಿರಬಹುದು ಎಂದು ನಿರೀಕ್ಷಿಸಬಹುದು. ಫೋಕ್ಸ್‌ವ್ಯಾಗನ್ ಕಂಪನಿಯು ಟಿಗ್ವಾನ್ ಫೇಸ್‌ಲಿಫ್ಟ್ ಎಸ್‍ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಈಗಾಗಲೇ ಅನಾವರಣಗೊಳಿಸಲಾಗಿದೆ, ಈ ಟಿಗ್ವಾನ್ ಫೇಸ್‌ಲಿಫ್ಟ್ ಎಸ್‍ಯುವಿಯು ಈ ವರ್ಷದ ಮಧ್ಯಂತರ ಅವಧಿಯಲ್ಲಿ ಬಿಡುಗಡೆಗೊಳಿಸಲು ನಿರ್ದರಿಸಲಾಗಿತ್ತು. ಆದರೆ ಕೊರೋನಾ ಆತಂಕದಿಂದ ಇದರ ಬಿಡುಗಡೆಯು ವಿಳಂಬವಾಗಿದೆ.

ಭಾರತದಲ್ಲಿ Volkswagen T-ROC ಎರಡನೇ ಬ್ಯಾಚ್ ಸೋಲ್ಡ್ ಔಟ್

ಫೋಕ್ಸ್‌ವ್ಯಾಗನ್ ಹೊಸ ಮಿಡ್ ಸೈಜ್ ಸೆಡಾನ್ ಡಾನ್ ಅನ್ನು ಸಿದ್ಧಪಡಿಸುತ್ತಿದೆ, ಇದು ವರ್ಟಸ್ ಸೆಡಾನ್‌ನ ಭಾರತೀಯ ಆವೃತ್ತಿಯಾಗಿರಬಹುದು. ಈ ವಿಡಬ್ಲ್ಯೂ ವರ್ಟಸ್ ಅನ್ನು ಭಾರತೀಯ ರಸ್ತೆಗಳಲ್ಲಿ ಹಲವು ಬಾರಿ ಸ್ಪಾಟ್ ಟೆಸ್ಟ್ ಅನ್ನು ನಡೆಸಿದೆ.ಇನ್ನು ಟೈಗನ್ ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಭರ್ಜರಿಯಾಗಿ ಮಾರಾಟವಾಗುತ್ತಿದೆ. ಇದರೊಂದಿಗೆ ಫೋಕ್ಸ್‌ವ್ಯಾಗನ್ ಭಾರತೀಯ ಮಾರುಕಟ್ಟೆಯಲ್ಲಿ ಪಾರುಪತ್ಯ ಸಾಧಿಸಲು ಹೊಸ ಕಾರುಗಳನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ.

ಭಾರತದಲ್ಲಿ Volkswagen T-ROC ಎರಡನೇ ಬ್ಯಾಚ್ ಸೋಲ್ಡ್ ಔಟ್

ಫೋಕ್ಸ್‌ವ್ಯಾಗನ್ ಇಂಡಿಯಾ ತನ್ನ ಹೊಸ ಟೈಗನ್ ಕಾಂಪ್ಯಾಕ್ಟ್ ಎಸ್‌ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಇದು ಭಾರತದ ಫೋಕ್ಸ್‌ವ್ಯಾಗನ್‌ನಿಂದ ಅತ್ಯಂತ ಕೈಗೆಟುವ ದರದ ಕಾಂಪ್ಯಾಕ್ಟ್ ಎಸ್‌ಯುವಿಯಾಗಿದೆ. ಟೈಗನ್ ಭಾರತೀಯ ಮಾರುಕಟ್ಟೆಗೆ ಒಂದು ಪ್ರಮುಖ ಮಾದರಿಯಾಗಿದೆ ಏಕೆಂದರೆ ಇದು ಬ್ರಾಂಡ್‌ನ ಇಂಡಿಯಾ 2.0 ಸ್ಟ್ರಾಟಜಿ ಅಡಿಯಲ್ಲಿ ಹೊರಬಂದ ಮೊದಲ ಮಾದರಿಯಾಗಿದೆ. ಫೋಕ್ಸ್‌ವ್ಯಾಗನ್ ಟೈಗನ್ ಎಸ್‍ಯುವಿಯ ಆರಂಭಿಕ ಬೆಲೆಯು ಎಕ್ಸ್ ಶೊರೂಂ ಪ್ರಕಾರ ರೂ.10.49 ಲಕ್ಷಗಳಾಗಿದೆ. ಫೋಕ್ಸ್‌ವ್ಯಾಗನ್ ಇಂಡಿಯಾ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಟೈಗನ್ ಎಸ್‍ಯುವಿಯ ಟಿವಿಸಿಯನ್ನು ಹಂಚಿಕೊಂಡಿದೆ.

ಭಾರತದಲ್ಲಿ Volkswagen T-ROC ಎರಡನೇ ಬ್ಯಾಚ್ ಸೋಲ್ಡ್ ಔಟ್

2021ರ ಫೋಕ್ಸ್‌ವ್ಯಾಗನ್‍ ಟಿ-ರಾಕ್ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಜೀಪ್ ಕಂಪಾಸ್, ಕಿಯಾ ಸೆಲ್ಟೋಸ್ ಮತ್ತು ಸ್ಕೋಡಾ ಕರೋಕ್ ಎಸ್‍‍ಯುವಿಗಳಿಗೆ ಪೈಪೋಟಿ ನೀಡಿದೆ. ಇನ್ನು ಫೋಕ್ಸ್‌ವ್ಯಾಗನ್ ಕಂಪನಿಯ ಇಉಳಿದ ಮಾದರಿಗಳು ಹಬ್ಬದ ಸೀಸನ್ ನಲ್ಲಿ ಭರ್ಜರಿಯಾಗಿ ಮಾರಾಟವಾಗುವ ಸಾಧ್ಯತೆಗಳಿದೆ. ಇನ್ನು ಫೋಕ್ಸ್‌ವ್ಯಾಗನ್ ಟೈಗನ್ ಎಸ್‍ಯುವಿಯ ಬೇಡಿಕೆಯು ಹಬ್ಬದ ಸೀಸನ್ ನಲ್ಲಿ ಹೆಚ್ಚುಗುವ ಸಾಧ್ಯತೆಗಳಿದೆ,

Most Read Articles

Kannada
English summary
2021 volkswagen t roc suv bookings stopped second batch sold out details
Story first published: Wednesday, November 3, 2021, 19:36 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X