ಸ್ಟೀಲ್ ವ್ಹೀಲ್, ಅಲಾಯ್ ವ್ಹೀಲ್‌ಗಳ ಅನುಕೂಲ ಹಾಗೂ ಅನಾನುಕೂಲಗಳಿವು

ವಾಹನದ ಅಗತ್ಯ ಬಿಡಿ ಭಾಗಗಳಲ್ಲಿ ವ್ಹೀಲ್‌ಗಳು ಸಹ ಸೇರಿವೆ. ವ್ಹೀಲ್‌ಗಳು ವಾಹನಗಳ ನಿರ್ವಹಣೆ ಹಾಗೂ ವೇಗವರ್ಧನೆಯಲ್ಲಿ ನೆರವಾಗುತ್ತವೆ. ವಾಹನಗಳ ಪ್ರಮುಖ ಭಾಗವಾಗಿರುವ ವ್ಹೀಲ್‌ಗಳನ್ನು ಸ್ಟೀಲ್ ವ್ಹೀಲ್ ಹಾಗೂ ಅಲಾಯ್ ವ್ಹೀಲ್ ಎಂಬ ಎರಡು ವಿಧದಲ್ಲಿ ಮಾರಾಟ ಮಾಡಲಾಗುತ್ತದೆ.

ಸ್ಟೀಲ್ ವ್ಹೀಲ್, ಅಲಾಯ್ ವ್ಹೀಲ್‌ಗಳ ಅನುಕೂಲ ಹಾಗೂ ಅನಾನುಕೂಲಗಳಿವು

ಸ್ಟೀಲ್ ವ್ಹೀಲ್ ಹಾಗೂ ಅಲಾಯ್ ವ್ಹೀಲ್‌ಗಳಲ್ಲಿ ಯಾವುದು ಉತ್ತಮ. ಯಾವ ವ್ಹೀಲ್ ಬಳಸಿದರೆ ವಾಹನ ಸವಾರರಿಗೆ ಪ್ರಯೋಜನವಾಗುತ್ತದೆ ಎಂಬ ವಿವರಗಳನ್ನು ಈ ಲೇಖನದಲ್ಲಿ ನೋಡೋಣ.

ಸ್ಟೀಲ್ ವ್ಹೀಲ್, ಅಲಾಯ್ ವ್ಹೀಲ್‌ಗಳ ಅನುಕೂಲ ಹಾಗೂ ಅನಾನುಕೂಲಗಳಿವು

ಅಲಾಯ್ ವ್ಹೀಲ್:

ಅಲಾಯ್ ವ್ಹೀಲ್‌ಗಳು ಹಗುರವಾಗಿದ್ದು, ಆಕರ್ಷಕವಾಗಿರುತ್ತವೆ. ಇದೇ ವೇಳೆ ಅವುಗಳ ಜೀವಿತಾವಧಿ ಕಡಿಮೆ. ಅಲಾಯ್ ವ್ಹೀಲ್‌ಗಳನ್ನು ಎರಡು ಅಥವಾ ಹೆಚ್ಚಿನ ಲೋಹಗಳ ಸಂಯೋಜನೆಯಿಂದ ತಯಾರಿಸಲಾಗುತ್ತದೆ.

ಸ್ಟೀಲ್ ವ್ಹೀಲ್, ಅಲಾಯ್ ವ್ಹೀಲ್‌ಗಳ ಅನುಕೂಲ ಹಾಗೂ ಅನಾನುಕೂಲಗಳಿವು

ಈ ಮಿಶ್ರ ಲೋಹವನ್ನು ರೂಪಿಸಲು ಸಾಮಾನ್ಯವಾಗಿ ನಿಕಲ್, ಮೆಗ್ನೀಸಿಯಮ್ ಹಾಗೂ ಇನ್ನಿತರ ಲೋಹಗಳನ್ನು ಬಳಸಲಾಗುತ್ತದೆ. ಹಗುರವಾದ ಅಲಾಯ್ ವ್ಹೀಲ್‌ಗಳನ್ನು ತಯಾರಿಸಲು ಈ ಮಿಶ್ರ ಲೋಹಕ್ಕೆ ಅಲ್ಯೂಮಿನಿಯಂ ಅನ್ನು ಸೇರಿಸಲಾಗುತ್ತದೆ.

ಸ್ಟೀಲ್ ವ್ಹೀಲ್, ಅಲಾಯ್ ವ್ಹೀಲ್‌ಗಳ ಅನುಕೂಲ ಹಾಗೂ ಅನಾನುಕೂಲಗಳಿವು

ಈ ವ್ಹೀಲ್‌ಗಳು ಹಗುರವಾಗಿರುವುದರಿಂದ ಹೆಚ್ಚು ಬ್ಯಾಲೆನ್ಸ್, ಬಾಳಿಕೆ ಹಾಗೂ ಆರ್ಥಿಕತೆಯನ್ನು ಸಾಧಿಸಲು ವಾಹನಗಳಿಗೆ ನೆರವಾಗುತ್ತವೆ. ಅಲಾಯ್ ವ್ಹೀಲ್‌ಗಳು ಸ್ಟೀಲ್ ವ್ಹೀಲ್‌ಗಳಿಗಿಂತ ಹೆಚ್ಚು ಹಗುರವಾಗಿರುವುದರಿಂದ ವಾಹನ ಸವಾರರನ್ನು ಆಕರ್ಷಿಸುತ್ತವೆ.

ಸ್ಟೀಲ್ ವ್ಹೀಲ್, ಅಲಾಯ್ ವ್ಹೀಲ್‌ಗಳ ಅನುಕೂಲ ಹಾಗೂ ಅನಾನುಕೂಲಗಳಿವು

ಅಲಾಯ್ ವ್ಹೀಲ್‌ಗಳು ಹೆಚ್ಚು ಗ್ರಿಪ್ ಒದಗಿಸಲು ನೆರವಾಗುತ್ತವೆ. ಕಡಿಮೆ ತೂಕ ಹೊಂದಿರುವುದರಿಂದ ಹೆಚ್ಚು ಇಂಧನ ಆರ್ಥಿಕತೆಯನ್ನು ನೀಡುತ್ತವೆ. ಅಲಾಯ್ ವ್ಹೀಲ್‌ಗಳು ಆಕರ್ಷಕವಾಗಿರುವುದರಿಂದ ಹೆಚ್ಚು ಜನಪ್ರಿಯವಾಗಿವೆ.

ಸ್ಟೀಲ್ ವ್ಹೀಲ್, ಅಲಾಯ್ ವ್ಹೀಲ್‌ಗಳ ಅನುಕೂಲ ಹಾಗೂ ಅನಾನುಕೂಲಗಳಿವು

ಇದೇ ವೇಳೆ ಅಲಾಯ್ ವ್ಹೀಲ್‌ಗಳು ಅನಾನುಕೂಲಗಳನ್ನು ಸಹ ಹೊಂದಿವೆ. ಇವುಗಳ ಜೀವಿತಾವಧಿ ತುಂಬಾ ಕಡಿಮೆ. ಅಲಾಯ್ ವ್ಹೀಲ್‌ಗಳು ದೊಡ್ಡ ದೊಡ್ಡ ಗುಂಡಿಗಳಲ್ಲಿ ಚಲಿಸಿದರೆ ಅಥವಾ ಅಪಘಾತಕ್ಕೀಡಾದರೆ ಸುಲಭವಾಗಿ ಹಾಳಾಗುತ್ತವೆ.

ಸ್ಟೀಲ್ ವ್ಹೀಲ್, ಅಲಾಯ್ ವ್ಹೀಲ್‌ಗಳ ಅನುಕೂಲ ಹಾಗೂ ಅನಾನುಕೂಲಗಳಿವು

ಇವುಗಳನ್ನು ಸರಿಪಡಿಸುವುದು ತುಂಬಾ ಕಷ್ಟ. ಬದಲಿಗೆ ಹೊಸ ವ್ಹೀಲ್‌ಗಳನ್ನು ಅಳವಡಿಸಬೇಕಾಗುತ್ತದೆ. ಇದು ಅಲಾಯ್ ವ್ಹೀಲ್‌ಗಳ ಬಹು ದೊಡ್ಡ ನ್ಯೂನತೆಯಾಗಿದೆ. ಈ ಕಾರಣಕ್ಕೆ ಕಾರು ತಯಾರಕ ಕಂಪನಿಗಳು ಕಡಿಮೆ ಬೆಲೆಯ ಕಾರುಗಳಲ್ಲಿ ಅಲಾಯ್ ವ್ಹೀಲ್‌ಗಳನ್ನು ನೀಡಲು ಹಿಂದೇಟು ಹಾಕುತ್ತವೆ.

ಸ್ಟೀಲ್ ವ್ಹೀಲ್, ಅಲಾಯ್ ವ್ಹೀಲ್‌ಗಳ ಅನುಕೂಲ ಹಾಗೂ ಅನಾನುಕೂಲಗಳಿವು

ಸ್ಟೀಲ್ ವ್ಹೀಲ್:

ಸ್ಟೀಲ್ ವ್ಹೀಲ್‌ಗಳು ಹೆಚ್ಚು ಗಟ್ಟಿಯಾಗಿದ್ದು, ಭಾರವಾಗಿರುತ್ತವೆ. ಈ ಕಾರಣಕ್ಕೆ ಈ ವ್ಹೀಲ್‌ಗಳಲ್ಲಿ ಆಕರ್ಷಕ ವಿನ್ಯಾಸವನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಈ ವ್ಹೀಲ್‌ಗಳನ್ನು ಹೆಸರೇ ಸೂಚಿಸುವಂತೆ ಸ್ಟೀಲ್'ನಿಂದ ತಯಾರಿಸಲಾಗುತ್ತದೆ.

ಸ್ಟೀಲ್ ವ್ಹೀಲ್, ಅಲಾಯ್ ವ್ಹೀಲ್‌ಗಳ ಅನುಕೂಲ ಹಾಗೂ ಅನಾನುಕೂಲಗಳಿವು

ಸ್ಟೀಲ್ ವ್ಹೀಲ್‌ಗಳಿಗೆ ಬಹು ದೊಡ್ಡ ಇತಿಹಾಸವಿದೆ. ಇವುಗಳನ್ನು ಹೆಚ್ಚಾಗಿ ಭಾರೀ ಗಾತ್ರದ ವಾಹನಗಳಲ್ಲಿ ಬಳಸಲಾಗುತ್ತದೆ. ಈ ವ್ಹೀಲ್‌ಗಳು ಹೆಚ್ಚು ಕಾರ್ಯ ಗುಣಲಕ್ಷಣಗಳನ್ನು ಹೊಂದಿವೆ.

ಸ್ಟೀಲ್ ವ್ಹೀಲ್, ಅಲಾಯ್ ವ್ಹೀಲ್‌ಗಳ ಅನುಕೂಲ ಹಾಗೂ ಅನಾನುಕೂಲಗಳಿವು

ಅಲಾಯ್ ವ್ಹೀಲ್‌ಗಳಿಗೆ ಹೋಲಿಸಿದರೆ ಸ್ಟೀಲ್ ವ್ಹೀಲ್‌ಗಳ ಬೆಲೆ ಕಡಿಮೆ. ಸ್ಟೀಲ್ ವ್ಹೀಲ್‌ಗಳು ಸುಲಭವಾಗಿ ಹಾನಿಗೀಡಾಗುವುದಿಲ್ಲ. ಅಲಾಯ್ ವ್ಹೀಲ್‌ಗಳಿಗಿಂತ ಸ್ಟೀಲ್ ವ್ಹೀಲ್‌ಗಳು ಹೆಚ್ಚು ಜೀವಿತಾವಧಿಯನ್ನು ಹೊಂದಿವೆ.

ಸ್ಟೀಲ್ ವ್ಹೀಲ್, ಅಲಾಯ್ ವ್ಹೀಲ್‌ಗಳ ಅನುಕೂಲ ಹಾಗೂ ಅನಾನುಕೂಲಗಳಿವು

ಸ್ಟೀಲ್ ವ್ಹೀಲ್‌ಗಳು ಹೆಚ್ಚು ವೈಬ್ರೆಷನ್'ಗಳನ್ನು ಸಹ ತಡೆದುಕೊಳ್ಳಬಲ್ಲವು. ಸ್ಟೀಲ್ ವ್ಹೀಲ್‌ಗಳಿಗೆ ಯಾವುದೇ ಹಾನಿಯಾದರೂ ಅವುಗಳನ್ನು ಸರಿಪಡಿಸಬಹುದು. ಸ್ಟೀಲ್ ವ್ಹೀಲ್‌ಗಳ ಮಹತ್ವ ತಿಳಿದವರು ವಾಹನಗಳಲ್ಲಿ ಸ್ಟೀಲ್ ವ್ಹೀಲ್‌ಗಳನ್ನು ಅಳವಡಿಸಿಕೊಳ್ಳುತ್ತಾರೆ.

ಸ್ಟೀಲ್ ವ್ಹೀಲ್, ಅಲಾಯ್ ವ್ಹೀಲ್‌ಗಳ ಅನುಕೂಲ ಹಾಗೂ ಅನಾನುಕೂಲಗಳಿವು

ಇನ್ನು ಆಕರ್ಷಕ ಲುಕ್ ಬಯಸುವವರು, ಇಂಧನ ಮಿತವ್ಯಯವನ್ನು ಬಯಸುವವರು ಹಾಗೂ ವಾಹನ ನಿರ್ವಹಣೆಯನ್ನು ಸುಲಭವಾಗಿಸಿ ಕೊಳ್ಳಲು ಬಯಸುವವರು ಅಲಾಯ್ ವ್ಹೀಲ್‌ಗಳನ್ನು ಖರೀದಿಸುತ್ತಾರೆ.

Most Read Articles

Kannada
English summary
Advantages and disadvantages of alloy wheel and steel wheels. Read in Kannada.
Story first published: Monday, July 26, 2021, 10:08 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X