ಎಲ್ಲಾ ಹೊಸ ಕಾರುಗಳು ಈ ಟೆಕ್ನಾಲಜಿ ಹೊಂದುವುದು ಕಡ್ಡಾಯ

ರಸ್ತೆ ಅಪಘಾತಗಳು ಕರೋನಾ ವೈರಸ್‌ಗಿಂತ ಹೆಚ್ಚು ಸಾವು ನೋವು ಉಂಟು ಮಾಡುತ್ತವೆ. ಪ್ರತಿ ದಿನ ಪ್ರಪಂಚದ ಯಾವುದಾದರೂ ಭಾಗದಲ್ಲಿ ಜನರು ಅಪಘಾತದಿಂದಾಗಿ ಸಾವನ್ನಪ್ಪುತ್ತಲೇ ಇರುತ್ತಾರೆ. ರಸ್ತೆ ಅಪಘಾತಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

ಎಲ್ಲಾ ಹೊಸ ಕಾರುಗಳು ಈ ಟೆಕ್ನಾಲಜಿ ಹೊಂದುವುದು ಕಡ್ಡಾಯ

ರಸ್ತೆ ಅಪಘಾತಗಳನ್ನು ನಿಯಂತ್ರಿಸಲು ಕೇಂದ್ರ ಸರ್ಕಾರವು ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ. ಕೇಂದ್ರ ಸಾರಿಗೆ ಇಲಾಖೆಯು ಈ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಗಳನ್ನು ಇಡುತ್ತಿದೆ. 2018 ಕ್ಕೆ ಹೋಲಿಸಿದರೆ 2019 ರಲ್ಲಿ ಭಾರತದಲ್ಲಿ ಸಂಭವಿಸಿದ ಅಪಘಾತಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿರವರು ಈ ಬಗ್ಗೆ ಇತ್ತೀಚೆಗೆ ಸಂಸತ್ತಿನಲ್ಲಿ ಮಾಡಿದ ಭಾಷಣದಲ್ಲಿ ತಿಳಿಸಿದ್ದಾರೆ.

ಎಲ್ಲಾ ಹೊಸ ಕಾರುಗಳು ಈ ಟೆಕ್ನಾಲಜಿ ಹೊಂದುವುದು ಕಡ್ಡಾಯ

ಭಾರತ ಮಾತ್ರವಲ್ಲ ವಿಶ್ವದ ಹಲವು ದೇಶಗಳಲ್ಲಿ ಅಪಘಾತಗಳನ್ನು ತಡೆಯಲು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಅದರಂತೆ ವಿಶ್ವದ ದೊಡ್ಡಣ್ಣ ಅಮೆರಿಕಾದಲ್ಲಿ ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಈ ತಂತ್ರಜ್ಞಾನವು ಅಪಘಾತ ಪ್ರಮಾಣವನ್ನು ಕಡಿಮೆ ಮಾಡುತ್ತದೆ ಎಂದು ಹೇಳಲಾಗಿದೆ.

ಎಲ್ಲಾ ಹೊಸ ಕಾರುಗಳು ಈ ಟೆಕ್ನಾಲಜಿ ಹೊಂದುವುದು ಕಡ್ಡಾಯ

ಮದ್ಯ ಪಾನ ಮಾಡಿ ವಾಹನ ಚಾಲನೆ ಮಾಡುವುದರಿಂದ ಅಪಘಾತಗಳು ಸಂಭವಿಸುತ್ತವೆ. ಅಮೆರಿಕಾದಲ್ಲಿ ಈ ಪ್ರಮಾಣವು ಹೆಚ್ಚಿನ ಸಂಖ್ಯೆಯಲ್ಲಿದೆ. ಇದನ್ನು ಕಡಿಮೆ ಮಾಡಲು ಯುಎಸ್ ಸೆನೆಟ್ ವಾಹನದಲ್ಲಿ ಹೊಸ ತಂತ್ರಜ್ಞಾನವನ್ನು ಪರಿಚಯಿಸಲು ನಿರ್ಧರಿಸಿದೆ.

ಎಲ್ಲಾ ಹೊಸ ಕಾರುಗಳು ಈ ಟೆಕ್ನಾಲಜಿ ಹೊಂದುವುದು ಕಡ್ಡಾಯ

ಅಮೆರಿಕಾ ಸರ್ಕಾರವು ಹೊಸ ನಿಯಮವನ್ನು ಪರಿಚಯಿಸಲು ನಿರ್ಧರಿಸಿದೆ. ಈ ನಿಯಮವು ಕುಡಿದು ವಾಹನ ಚಾಲನೆ ಮಾಡುವ ಚಾಲಕರನ್ನು ಪತ್ತೆ ಮಾಡುವತಂತ್ರಜ್ಞಾನವನ್ನು ಎಲ್ಲಾ ವಾಹನಗಳಲ್ಲಿ ಲಭ್ಯವಾಗುವಂತೆ ಮಾಡುತ್ತದೆ.

ಎಲ್ಲಾ ಹೊಸ ಕಾರುಗಳು ಈ ಟೆಕ್ನಾಲಜಿ ಹೊಂದುವುದು ಕಡ್ಡಾಯ

ಈ ತಂತ್ರಜ್ಞಾನವು ಕುಡಿದು ವಾಹನ ಚಾಲನೆ ಮಾಡುವುದನ್ನು ತಪ್ಪಿಸಲು ವಾಹನ ಚಾಲಕರಿಗೆ ಸಹಾಯ ಮಾಡುತ್ತದೆ. ಈ ಮೂಲಕ ಅಮೆರಿಕಾ ಸರ್ಕಾರವು ಡ್ರಿಂಕ್ ಅಂಡ್ ಡ್ರೈವ್ ಪ್ರಕರಣಗಳ ಸಂಖ್ಯೆ ಕಡಿಮೆಯಾಗ ಬಹುದು ಎಂಬ ನಿರೀಕ್ಷೆಯಲ್ಲಿದೆ.

ಎಲ್ಲಾ ಹೊಸ ಕಾರುಗಳು ಈ ಟೆಕ್ನಾಲಜಿ ಹೊಂದುವುದು ಕಡ್ಡಾಯ

ಅಮೆರಿಕಾ ಸರ್ಕಾರವು ಈ ಯೋಜನೆಯನ್ನು ಶೀಘ್ರವೇ ಜಾರಿಗೆ ತರಲು ನಿರ್ಧರಿಸಿದೆ. ಕುಡಿದು ವಾಹನ ಚಾಲನೆ ಮಾಡುವುದು ಅಮೆರಿಕಾದಲ್ಲಿರುವ ಅತ್ಯಂತ ಗಂಭೀರವಾದ ಅಪರಾಧಗಳಲ್ಲಿ ಒಂದಾಗಿದೆ.

ಎಲ್ಲಾ ಹೊಸ ಕಾರುಗಳು ಈ ಟೆಕ್ನಾಲಜಿ ಹೊಂದುವುದು ಕಡ್ಡಾಯ

ಅಮೆರಿಕಾದಲ್ಲಿ ಕುಡಿದು ವಾಹನ ಚಾಲನೆ ಮಾಡುವವರಿಗೆ ಅತ್ಯಂತ ಕಠಿಣ ಶಿಕ್ಷೆಗಳನ್ನು ನೀಡಲಾಗುತ್ತದೆ. ಹೊಸ ಮಸೂದೆಯು ಕುಡಿದು ವಾಹನ ಚಾಲನೆ ಮಾಡುವವರ ವಿರುದ್ಧ ಕಠಿಣ ಕ್ರಮ ತೆಗೆದು ಕೊಳ್ಳಲು ನೆರವಾಗುವ ನಿರೀಕ್ಷೆಗಳಿವೆ.

ಎಲ್ಲಾ ಹೊಸ ಕಾರುಗಳು ಈ ಟೆಕ್ನಾಲಜಿ ಹೊಂದುವುದು ಕಡ್ಡಾಯ

ಜೂನ್ ತಿಂಗಳಿನಲ್ಲಿ ಅಮೆರಿಕಾದ ರಾಷ್ಟ್ರೀಯ ಹೆದ್ದಾರಿ ಟ್ರಾಫಿಕ್ ಸೇಫ್ಟಿ ಅಡ್ಮಿನಿಸ್ಟ್ರೇಷನ್ ಬಿಡುಗಡೆಗೊಳಿಸಿದ ಅಂಕಿ ಅಂಶಗಳ ಪ್ರಕಾರ, 2020 ರ ವೇಳೆಗೆ 38,000 ಕ್ಕೂ ಹೆಚ್ಚು ಜನರು ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪಿದ್ದಾರೆ. ಈ ಅಪಘಾತಗಳಲ್ಲಿ ಹೆಚ್ಚಿನವು ಡ್ರಿಂಕ್ ಅಂಡ್ ಡ್ರೈವ್ ನಿಂದ ಸಂಭವಿಸಿವೆ.

ಎಲ್ಲಾ ಹೊಸ ಕಾರುಗಳು ಈ ಟೆಕ್ನಾಲಜಿ ಹೊಂದುವುದು ಕಡ್ಡಾಯ

ಈ ಕಾರಣಕ್ಕೆ ಅಮೆರಿಕಾ ಸರ್ಕಾರವು ಡ್ರಿಂಕ್ ಅಂಡ್ ಡ್ರೈವ್ ವಿಷಯವನ್ನು ಗಂಭೀರವಾಗಿ ಪರಿಗಣಿಸಲು ನಿರ್ಧರಿಸಿದೆ. ಡ್ರಿಂಕ್ ಅಂಡ್ ಡ್ರೈವ್ ಡಿಟೆಕ್ಶನ್ ತಂತ್ರಜ್ಞಾನವು ಮುಂಬರುವ ದಿನಗಳಲ್ಲಿ ಅಮೆರಿಕಾದಲ್ಲಿ ಮಾರಾಟವಾಗುವ ಎಲ್ಲಾ ಕಾರುಗಳಲ್ಲಿ ಕಾಣಿಸಿಕೊಳ್ಳುವ ನಿರೀಕ್ಷೆಗಳಿವೆ.

ಎಲ್ಲಾ ಹೊಸ ಕಾರುಗಳು ಈ ಟೆಕ್ನಾಲಜಿ ಹೊಂದುವುದು ಕಡ್ಡಾಯ

ಅಪಘಾತಗಳ ಅಪಾಯವನ್ನು ಕಡಿಮೆ ಮಾಡಲು ಅಮೆರಿಕಾ ಸರ್ಕಾರವು ತೆಗೆದು ಕೊಳ್ಳುತ್ತಿರುವ ದಿಟ್ಟ ಕ್ರಮವು ಆ ದೇಶದ ಆಲ್ಕೊಹಾಲ್ ಪ್ರಿಯರಲ್ಲಿ ನಡುಕ ಹುಟ್ಟಿಸಿದೆ. ಇದೇ ವೇಳೆ ಸಂಚಾರ ತಜ್ಞರು ಇದು ಅತ್ಯುತ್ತಮ ಸುರಕ್ಷತಾ ಕ್ರಮವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಗಮನಿಸಿ: ಈ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
All new cars in usa to have drunk and drive detecting technology details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X