ಸಿಟ್ರನ್ 2ನೇ ಕಾರು ಮಾದರಿಯಾಗಿ ಬಿಡುಗಡೆಯಾಗಲಿದೆ ವಿನೂತನ ಮಾದರಿಯ ಕಂಪ್ಯಾಕ್ಟ್ ಎಸ್‌ಯುವಿ

ಫ್ರೆಂಚ್ ಆಟೋ ಉತ್ಪಾದನಾ ಕಂಪನಿಯಾದ ಸಿಟ್ರನ್ ಭಾರತದಲ್ಲಿ ತನ್ನ ಮೊದಲ ಕಾರು ಮಾದರಿಯಾದ ಸಿ5 ಏರ್‌ಕ್ರಾಸ್ ಎಸ್‌ಯುವಿ ಮಾದರಿಯನ್ನು ಇದೇ ತಿಂಗಳಾಂತ್ಯಕ್ಕೆ ಬಿಡುಗಡೆ ಮಾಡುತ್ತಿದ್ದು, ಸಿ5 ಏರ್‌ಕ್ರಾಸ್ ಎಸ್‌ಯುವಿ ನಂತರ ಗ್ರಾಹಕರ ಬೇಡಿಕೆಯೆಂತೆ ಹಲವಾರು ಕಾರು ಮಾದರಿಗಳನ್ನು ಬಿಡುಗಡೆ ಮಾಡುವ ಸಿದ್ದತೆಯಲ್ಲಿದೆ.

ಬಿಡುಗಡೆಯಾಗಲಿದೆ ಸಿಟ್ರನ್ ವಿನೂತನ ಮಾದರಿಯ ಕಂಪ್ಯಾಕ್ಟ್ ಎಸ್‌ಯುವಿ

ಸಿ5 ಏರ್‌ಕ್ರಾಸ್ ಎಸ್‌ಯುವಿ ಮಾದರಿಯ ಉತ್ಪಾದನಾ ಮಾದರಿಯನ್ನು ಅನಾವರಣಗೊಳಿಸುವ ಮೂಲಕ ದೇಶಿಯ ಮಾರುಕಟ್ಟೆಯಲ್ಲಿ ಆಟೋ ಉತ್ಪಾದನಾ ವಲಯಕ್ಕೆ ಅಧಿಕೃತವಾಗಿ ಎಂಟ್ರಿ ನೀಡಿರುವ ಸಿಟ್ರನ್ ಕಂಪನಿಯು ತಮಿಳುನಾಡಿನ ತಿರುವಲ್ಲೂರ್‌ನಲ್ಲಿರುವ ಉತ್ಪಾದನಾ ಘಟಕದಲ್ಲಿ ಈಗಾಗಲೇ ಹೊಸ ಕಾರುಗಳ ಉತ್ಪಾದನೆಗೆ ಅಧಿಕೃತವಾಗಿ ಚಾಲನೆ ನೀಡಿದ್ದು, ಮೊದಲ ಹಂತವಾಗಿ ಸಿ5 ಏರ್‌ಕ್ರಾಸ್ ಎಸ್‌ಯುವಿ ಬಿಡುಗಡೆಗೊಳಿಸಿದ ನಂತರ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ವಿವಿಧ ಮಾದರಿಯ ಹಲವು ಕಾರು ಆವೃತ್ತಿಗಳನ್ನು ಭಾರತದಲ್ಲಿ ಬಿಡುಗಡೆ ಮಾಡುವ ಯೋಜನೆಯಲ್ಲಿದೆ.

ಬಿಡುಗಡೆಯಾಗಲಿದೆ ಸಿಟ್ರನ್ ವಿನೂತನ ಮಾದರಿಯ ಕಂಪ್ಯಾಕ್ಟ್ ಎಸ್‌ಯುವಿ

ಯುರೋಪ್ ಮಾರುಕಟ್ಟೆಯಲ್ಲಿ ಪಿಎಸ್ಎ ಸಂಸ್ಥೆಯ ಅಂಗಸಂಸ್ಥೆಯಾಗಿರುವ ಸಿಟ್ರನ್ ಕಂಪನಿಯು ಗ್ರಾಹಕರ ಬೇಡಿಕೆಯೆಂತೆ ವಿವಿಧ ಕಾರು ಮಾದರಿಗಳ ಮಾರಾಟಗೊಂದಿಗೆ ಜನಪ್ರಿಯ ಕಾರು ಉತ್ಪಾದನಾ ಕಂಪನಿಯಾಗಿ ಗುರುತಿಸಿಕೊಂಡಿದ್ದು, ಆಟೋ ಉತ್ಪಾದನೆಯಲ್ಲಿ ಸುಮಾರು 100 ವರ್ಷಗಳ ಅನುಭವವನ್ನು ಹೊಂದಿದೆ.

ಬಿಡುಗಡೆಯಾಗಲಿದೆ ಸಿಟ್ರನ್ ವಿನೂತನ ಮಾದರಿಯ ಕಂಪ್ಯಾಕ್ಟ್ ಎಸ್‌ಯುವಿ

ಆಟೋ ಉತ್ಪಾದನೆಯಲ್ಲಿ ಮುಂಚೂಣಿ ಸಾಧಿಸುತ್ತಿರುವ ಭಾರತದಲ್ಲೂ ಇದೀಗ ಸಿಟ್ರನ್ ಕಂಪನಿಯು ತನ್ನ ಮಾರಾಟ ವ್ಯಾಪ್ತಿಯನ್ನು ವಿಸ್ತರಿಸುತ್ತಿದ್ದು, ಗ್ರಾಹಕರ ಬೇಡಿಕೆಯೆಂತೆ ಕಂಪನಿಯು ವಿವಿಧ ಮಾದರಿಯ ಎಸ್‌ಯುವಿ, ಕಂಪ್ಯಾಕ್ಟ್ ಎಸ್‌ಯುವಿ, ಎಂಪಿವಿ ಮತ್ತು ಹ್ಯಾಚ್‌ಬ್ಯಾಕ್ ಕಾರುಗಳನ್ನು ಮಾರಾಟ ಮಾಡುವ ಯೋಜನೆಯಲ್ಲಿದೆ.

ಬಿಡುಗಡೆಯಾಗಲಿದೆ ಸಿಟ್ರನ್ ವಿನೂತನ ಮಾದರಿಯ ಕಂಪ್ಯಾಕ್ಟ್ ಎಸ್‌ಯುವಿ

ಸಿಟ್ರನ್ ಕಂಪನಿಯು ಸಿ5 ಏರ್‌ಕ್ರಾಸ್ ನಂತರ ಮತ್ತಷ್ಟು ಹೊಸ ಕಾರುಗಳನ್ನು ಪರಿಚಯಿಸಲಿದ್ದು, ಶೇ.90 ರಷ್ಟು ಸ್ಥಳೀಯ ಸಂಪನ್ಮೂಲ ಬಳಕೆಯೊಂದಿಗೆ ಹೊಸ ಕಾರುಗಳನ್ನು ಉತ್ಪಾದನೆ ಮಾಡಿ ಮಾರಾಟ ಮಾಡುವ ಯೋಜನೆ ಹೊಂದಿದೆ. ಸಿ5 ಏರ್‌ಕ್ರಾಸ್ ಎಸ್‌ಯುವಿ ನಂತರ ಸಿ21 ಸ್ಪೋರ್ಟಿ ಕಂಪ್ಯಾಕ್ಟ್ ಎಸ್‌ಯುವಿ ಮತ್ತು ಮೈಕ್ರೊ ಎಸ್‌ಯುವಿ ಕಾರು ಮಾದರಿಯನ್ನು ಬಿಡುಗಡೆ ಮಾಡಲಿರುವ ಸಿಟ್ರನ್ ಇಂಡಿಯಾ ಕಂಪನಿಯು ಐಷಾರಾಮಿ ಜೊತೆಗೆ ಬಜೆಟ್ ಕಾರುಗಳ ಮಾರಾಟದಲ್ಲೂ ಉತ್ತಮ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.

ಬಿಡುಗಡೆಯಾಗಲಿದೆ ಸಿಟ್ರನ್ ವಿನೂತನ ಮಾದರಿಯ ಕಂಪ್ಯಾಕ್ಟ್ ಎಸ್‌ಯುವಿ

ಸಿಟ್ರನ್ ಕಂಪನಿಯು ಹೊಸ ಸಬ್ ಫೋರ್ ಮೀಟರ್ ಕಂಪ್ಯಾಕ್ಟ್ ಎಸ್‌ಯುವಿಯನ್ನು ಈಗಾಗಲೇ ಭಾರತದಲ್ಲಿ ವಿವಿಧ ಹಂತದ ಎಂಜಿನ್ ಕಾರ್ಯಕ್ಷಮತೆಯ ಪರೀಕ್ಷೆಗಳನ್ನು ಕೈಗೊಂಡಿದ್ದು, ಮೊದಲ ಬಾರಿಗೆ ಸಿ21 ಕೋಡ್ ನೆಮ್ ಆಧರಿಸಿರುವ ಹೊಸ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯು ಮುಂಬರುವ ದೀಪಾವಳಿ ಹೊತ್ತಿಗೆ ಬಿಡುಗಡೆಯಾಗಲಿದೆ.

ಬಿಡುಗಡೆಯಾಗಲಿದೆ ಸಿಟ್ರನ್ ವಿನೂತನ ಮಾದರಿಯ ಕಂಪ್ಯಾಕ್ಟ್ ಎಸ್‌ಯುವಿ

ಸಿ21 ಕಾರು ಕಾರು ಸಿ3 ಏರ್‌ಕ್ರಾಸ್ ಅಥವಾ ಬದಲಿ ಹೆಸರಿನೊಂದಿಗೆ ಬಿಡುಗಡೆಯಾಗಬಹುದಾಗಿದ್ದು, ಹೊಸ ಕಾರು ಮಾದರಿಯು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಮಾರುತಿ ಸುಜುಕಿ ಬ್ರೆಝಾ, ಹ್ಯುಂಡೈ ವೆನ್ಯೂ, ಕಿಯಾ ಸೊನೆಟ್, ಟಾಟಾ ನೆಕ್ಸಾನ್ ಮತ್ತು ಮಹೀಂದ್ರಾ ಎಕ್ಸ್‌ಯುವಿ300 ಕಾರುಗಳಿಗೆ ಪೈಪೋಟಿ ನೀಡಲಿದೆ.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಬಿಡುಗಡೆಯಾಗಲಿದೆ ಸಿಟ್ರನ್ ವಿನೂತನ ಮಾದರಿಯ ಕಂಪ್ಯಾಕ್ಟ್ ಎಸ್‌ಯುವಿ

ಹೊಸ ಕಾರು ಗ್ರಾಹಕರ ಬೇಡಿಕೆಯೆಂತೆ ಎರಡು ಪ್ರಮುಖ ಪೆಟ್ರೋಲ್ ಮಾದರಿಯನ್ನು ಬಿಡುಗಡೆ ಮಾಡುತ್ತಿದ್ದು, 1.2-ಲೀಟರ್ ಸಾಮಾನ್ಯ ಪೆಟ್ರೋಲ್ ಮತ್ತು 1.0-ಲೀಟರ್ ಟರ್ಬೊ ಪೆಟ್ರೋಲ್ ಮಾದರಿಗಳನ್ನು ಪಡೆದುಕೊಳ್ಳುವ ಸಾಧ್ಯತೆಗಳಿವೆ.

ಬಿಡುಗಡೆಯಾಗಲಿದೆ ಸಿಟ್ರನ್ ವಿನೂತನ ಮಾದರಿಯ ಕಂಪ್ಯಾಕ್ಟ್ ಎಸ್‌ಯುವಿ

ಸಿಟ್ರನ್ ಕಂಪನಿಯು ಮೊದಲ ಹಂತದಲ್ಲಿ ಬಿಡುಗಡೆ ಮಾಡುತ್ತಿರುವ ಸಿ5 ಏರ್‌ಕ್ರಾಸ್ ಕಾರು ಮಾದರಿಯಲ್ಲಿ ಮಾತ್ರವೇ ಡೀಸೆಲ್ ಎಂಜಿನ್ ಆಯ್ಕೆ ನೀಡುತ್ತಿದ್ದು, ಮುಂಬರುವ ಹೊಸ ಕಾರುಗಳಲ್ಲಿ ಪೆಟ್ರೋಲ್ ಎಂಜಿನ್ ಆಯ್ಕೆಗಳನ್ನು ಮಾತ್ರ ನೀಡುವ ಯೋಜನೆ ಹೊಂದಿದೆ.

MOST READ: ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಅತ್ಯುತ್ತಮ ರೇಟಿಂಗ್ಸ್ ಪಡೆದುಕೊಂಡ ನಿಸ್ಸಾನ್ ಮ್ಯಾಗ್ನೈಟ್

ಬಿಡುಗಡೆಯಾಗಲಿದೆ ಸಿಟ್ರನ್ ವಿನೂತನ ಮಾದರಿಯ ಕಂಪ್ಯಾಕ್ಟ್ ಎಸ್‌ಯುವಿ

ಸಿಟ್ರನ್ ಹೊಸ ಕಾರುಗಳಲ್ಲಿ ಸಿ5 ಏರ್‌ಕ್ರಾಸ್ ಎಸ್‌ಯುವಿ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 23 ಲಕ್ಷದಿಂದ ರೂ. 26 ಲಕ್ಷ ಬೆಲೆ ಹೊಂದಲಿದ್ದರೆ ಕಂಪ್ಯಾಕ್ಟ್ ಎಸ್‌ಯುವಿ ಕಾರು ಆರಂಭಿಕವಾಗಿ ರೂ. 8 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.12 ಲಕ್ಷ ಬೆಲೆ ಅಂತರದಲ್ಲಿ ಮಾರಾಟಗೊಳ್ಳಲಿದೆ.

Most Read Articles

Kannada
English summary
Citroen is planning to launch sub-compact SUV model in India. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X