Just In
- 7 hrs ago ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- 8 hrs ago Suzuki Access Electric: ಸುಜುಕಿ ಆಕ್ಸೆಸ್ ಎಲೆಕ್ಟ್ರಿಕ್ ಸ್ಕೂಟರ್ ಈ ವರ್ಷ ಬಿಡುಗಡೆ ಸಾಧ್ಯತೆ!
- 9 hrs ago Royal Enfield Himalayan ಸುಲಭವಾಗಿ ಖರೀದಿಸುವುದು ಹೇಗೆ?: ಇಲ್ಲಿದೆ ಡೌನ್ಪೇಮೆಂಟ್, EMI ಮಾಹಿತಿಗಳು!
- 10 hrs ago ಮಿಂಚಿನ ವೇಗಕ್ಕೆ ಸರಿಸಾಟಿಯಾಗಿ ಬೆಂಗಳೂರಿನ ಹೊಸ ಅಲ್ಟ್ರಾವೈಲೆಟ್ ಬೈಕ್ ಬಿಡುಗಡೆ: 323KM ರೇಂಜ್
Don't Miss!
- Movies ನೀಲಿ ಪ್ರಪಂಚದ ಕರಾಳ ಸತ್ಯವನ್ನ ಹೇಳಿದ ಲಾನಾ ರೋಡ್ಸ್
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬಿಡುಗಡೆಯಾಗಲಿರುವ ಟಾಟಾ ಮೈಕ್ರೊ ಎಸ್ಯುವಿ ಕಾರಿನ ಇಂಟಿರಿಯರ್ ಮಾಹಿತಿ ಬಹಿರಂಗ
ಟಾಟಾ ಮೋಟಾರ್ಸ್ ಕಂಪನಿಯು ತನ್ನ ಬಹುನೀರಿಕ್ಷಿತ ಬಜೆಟ್ ಕಾರು ಮಾದರಿಯಾದ ಹೆಬಿಎಕ್ಸ್ ಕಾನ್ಸೆಪ್ಟ್ ಮೈಕ್ರೊ ಎಸ್ಯುವಿ ಆವೃತ್ತಿಯನ್ನು ಬಿಡುಗಡೆಗೊಳಿಸಲು ಅಂತಿಮ ಹಂತದ ಸಿದ್ದತೆಯಲ್ಲಿದ್ದು, ಹೊಸ ಕಾರು ಎಂಟ್ರಿ ಲೆವಲ್ ಕಾರುಗಳ ಮಾರಾಟದಲ್ಲಿ ವಿಶೇಷ ಸೌಲಭ್ಯಗಳೊಂದಿಗೆ ಭಾರೀ ನೀರಿಕ್ಷೆ ಹುಟ್ಟುಹಾಕಿದೆ.
ನ್ಯೂ ಜನರೇಷನ್ ಕಾರು ಮಾದರಿಯೊಂದಿಗೆ ಈಗಾಗಲೇ ಸಾಕಷ್ಟು ಬೇಡಿಕೆ ಪಡೆದುಕೊಳ್ಳುತ್ತಿರುವ ಟಾಟಾ ಮೋಟಾರ್ಸ್ ಕಂಪನಿಯು ನ್ಯೂ ಜನರೇಷನ್ ಸಫಾರಿ ಬಿಡುಗಡೆಯ ನಂತರ ಮೈಕ್ರೊ ಎಸ್ಯುವಿ ಬಿಡುಗಡೆಗೆ ಸಿದ್ದವಾಗಿದ್ದು, ಹೊಸ ಉತ್ಪಾದನಾ ಪ್ಲ್ಯಾಟ್ಫಾರ್ಮ್ ಆಧರಿಸಿ ಅಭಿವೃದ್ದಿಗೊಂಡಿರುವ ಹೊಸ ಕಾರು ಮಾದರಿಯು ಬಜೆಟ್ ಕಾರು ಮಾರಾಟದಲ್ಲಿ ಭಾರೀ ಬೇಡಿಕೆ ಪಡೆದುಕೊಳ್ಳುವ ತವಕದಲ್ಲಿದೆ.
ಎಸ್ಯುವಿ ಕಾರುಗಳ ಸರಣಿ ಮಾದರಿಗಳ ಮಾರಾಟವನ್ನು ಹೆಚ್ಚಿಸುತ್ತಿರುವ ಟಾಟಾ ಮೋಟಾರ್ಸ್ ಕಂಪನಿಯು ಹೊಸ ಮೈಕ್ರೊ ಎಸ್ಯುವಿ ಮಾದರಿಯ ಭಾರೀ ನೀರಿಕ್ಷೆಯಿಟ್ಟುಕೊಂಡಿದ್ದು, ಹೊಸ ಕಾರು ಬಿಡುಗಡೆಗಾಗಿ ವಿವಿಧ ಹಂತದ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುತ್ತಿದೆ.
ಹೊಸ ಕಾರು ಬಜೆಟ್ ಕಾರು ಮಾದರಿಯಲ್ಲಿರುವ ಮಾರುತಿ ಎಸ್ ಪ್ರೆಸ್ಸೊ ಮತ್ತು ಹ್ಯುಂಡೈ ಸ್ಯಾಂಟ್ರೊ ಕಾರುಗಳಿಗೆ ಭರ್ಜರಿ ಪೈಪೋಟಿ ನೀಡಲಿದ್ದು, ಹೊಸ ಕಾರಿನ ಮೂಲಕ ಟಾಟಾ ಮೋಟಾರ್ಸ್ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿನ ಕಾರು ಮಾರಾಟದಲ್ಲಿ ಶೇ.10 ರಷ್ಟು ಪಾಲು ಹೊಂದುವ ಗುರಿಹೊಂದಿದೆ.
ಎಂಟ್ರಿ ಲೆವಲ್ ಕಾರು ಮಾದರಿಯಾಗಿ ಬಿಡುಗಡೆಯಾಗಲಿರುವ ಮೈಕ್ರೊ ಎಸ್ಯುವಿ ಮಾದರಿಯು ಕಾನ್ಸೆಪ್ಟ್ ಮಾದರಿಯಲ್ಲೇ ಆಕರ್ಷಕ ವಿನ್ಯಾಸದೊಂದಿಗೆ ರಸ್ತೆಗಿಳಿಯಲು ಸಜ್ಜಾಗುತ್ತಿದ್ದು, ಹೊಸ ಕಾರನ್ನು ಡ್ಯುಯಲ್ ಟೋನ್ ಅಲಾಯ್ ವೀಲ್ಹ್, ಆಕರ್ಷಕ ಫ್ರಂಟ್ ಫಾಸಿಯಾ, ಡಿ ಕಟ್ ಸ್ಟೀರಿಂಗ್, 7-ಇಂಚಿನ ಇನ್ಪೋಟೈನ್ಮೆಂಟ್ ಸಿಸ್ಟ ಸೌಲಭ್ಯದೊಂದಿಗೆ ಸ್ಪೋರ್ಟಿ ಲುಕ್ನೊಂದಿಗೆ ಬೆಸ್ ವೆರಿಯೆಂಟ್ನಲ್ಲೂ ಉತ್ತಮ ಸೌಲಭ್ಯಗಳನ್ನು ಹೊಂದಿರಲಿದೆ.
ಹೊಸ ಕಾರಿನಲ್ಲಿ 1.2-ಲೀಟರ್ ಸಾಮಾನ್ಯ ಪೆಟ್ರೋಲ್ ಎಂಜಿನ್ ಜೊತೆಗೆ ಪರ್ಫಾಮೆನ್ಸ್ ಪ್ರಿಯರಿಗಾಗಿ 1.0-ಲೀಟರ್ ಟರ್ಬೋ ಪೆಟ್ರೋಲ್ ಆವೃತ್ತಿಯನ್ನು ಪಡೆದುಕೊಳ್ಳುವ ಸಾಧ್ಯತೆಗಳಿದ್ದು, ಟರ್ಬೋ ಪೆಟ್ರೋಲ್ ಎಂಜಿನ್ ಆಯ್ಕೆ ಕುರಿತಾಗಿ ಇದುವರೆಗೂ ಯಾವುದೇ ನಿಖರ ಮಾಹಿತಿ ಲಭ್ಯವಾಗಿಲ್ಲ.
ಮುಂಬರುವ ಮೇ ಅಥವಾ ಜೂನ್ ಆರಂಭದಲ್ಲಿ ಹೊಸ ಕಾರಿನ ಉತ್ಪಾದನಾ ಆವೃತ್ತಿಯು ಅಧಿಕೃತ ಹೆಸರನ್ನು ಅನಾವರಣಗೊಳ್ಳುವ ಸಾಧ್ಯತೆಗಳಿದ್ದು, ಎಂಟ್ರಿ ಲೆವಲ್ ಕಾರುಗಳಲ್ಲಿ ಹೊಸ ಮೈಕ್ರೊ ಎಸ್ಯುವಿ ಭರ್ಜರಿ ಪೈಪೋಟಿ ನೀಡಲಿದೆ.
MOST READ: ಭಾರತದಲ್ಲಿ ಅತಿ ಹೆಚ್ಚು ರಿಸೇಲ್ ವ್ಯಾಲ್ಯೂ ಹೊಂದಿರುವ ಕಾರುಗಳಿವು!
ಹೊಸ ಕಾರಿನಲ್ಲಿ ಸ್ಪೋರ್ಟಿ ಖದರ್ ಹೆಚ್ಚಿಸಲು ವಿಶೇಷ ಡಿಸೈನ್ಗಳನ್ನು ನೀಡಲಾಗಿದ್ದು, ಸ್ಪ್ಲಿಟ್ ಹೆಡ್ಲ್ಯಾಂಪ್ ಸೆಟ್ಅಪ್, ಆಕರ್ಷಕವಾದ ಬಂಪರ್, ಸ್ಕ್ವಾರ್ಡ್ ಔಟ್ ವೀಲ್ಹ್ ಆರ್ಚ್, ರೂಫ್ ಮೌಂಟೆಡ್ ಕ್ಯಾರಿಯರ್ ಸೌಲಭ್ಯಗಳು ಕಾರಿನ ಬಲಿಷ್ಠತೆ ಮತ್ತಷ್ಟು ಮೆರಗು ನೀಡಿವೆ.
ಹೊಸ ಕಾರು ಮಾದರಿಯು ಪ್ರತಿಸ್ಪರ್ಧಿ ಮಾದರಿಗಳಿಂತಲೂ ಹೆಚ್ಚು ಫೀಚರ್ಸ್ಗಳನ್ನು ಪಡೆದುಕೊಳ್ಳುತ್ತಿದ್ದು, ದೆಹಲಿ ಎಕ್ಸ್ಶೋರೂಂ ಪ್ರಕಾರ ಹೊಸ ಕಾರು ಆರಂಭಿಕವಾಗಿ ರೂ. 4 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 6.20 ಲಕ್ಷ ಬೆಲೆ ಅಂತರದಲ್ಲಿ ಬಿಡುಗಡೆಯಾಗುವ ನೀರಿಕ್ಷೆಯಿದೆ.
MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!
ಸದ್ಯ ಮಾರುಕಟ್ಟೆಯಲ್ಲಿ ವಾಹನ ಸುರಕ್ಷತೆಯ ವಿಚಾರವಾಗಿ ಗ್ರಾಹಕರ ಮೆಚ್ಚುಗೆಗೆ ಕಾರಣವಾಗಿರುವ ಟಾಟಾ ಕಂಪನಿಯು ಎಂಟ್ರಿ ಲೆವಲ್ ಮಾದರಿಯಲ್ಲೂ ಉತ್ತಮ ಸೇಫ್ಟಿ ರೇಟಿಂಗ್ ಕಾಯ್ದುಕೊಳ್ಳುವ ವಿಶ್ವಾಸದಲ್ಲಿದ್ದು, ಹೊಸ ಕಾರು ಮುಂಬರುವ ಕೆಲವೇ ದಿನಗಳಲ್ಲಿ ಖರೀದಿಗೆ ಲಭ್ಯವಾಗಲಿದೆ.