ಅತ್ಯುತ್ತಮ ಫೀಚರ್ಸ್ ಒಳಗೊಂಡ ಟೈಗನ್ ಇಂಟಿರಿಯರ್ ಅನಾವರಣಗೊಳಿಸಿದ ಫೋಕ್ಸ್‌ವ್ಯಾಗನ್

ಫೋಕ್ಸ್‌ವ್ಯಾಗನ್ ಇಂಡಿಯಾ ಕಂಪನಿಯು ತನ್ನ ಬಹುನೀರಿಕ್ಷಿತ ಟೈಗನ್ ಕಂಪ್ಯಾಕ್ಟ್ ಎಸ್‌ಯುವಿ ಕಾರಿನ ಉತ್ಪಾದನಾ ಮಾದರಿಯನ್ನು ಭಾರತದಲ್ಲಿ ಈಗಾಗಲೇ ಅನಾವರಣಗೊಳಿಸಿದ್ದು, ಹೊಸ ಕಂಪ್ಯಾಕ್ಟ್ ಎಸ್‌ಯುವಿ ಕಾರಿನ ಇಂಟಿರಿಯರ್ ಮಾಹಿತಿಗಳನ್ನು ಮೊದಲ ಬಾರಿಗೆ ಬಹಿರಂಗಪಡಿಸಿದೆ.

ಅತ್ಯುತ್ತಮ ಫೀಚರ್ಸ್ ಒಳಗೊಂಡ ಟೈಗನ್ ಇಂಟಿರಿಯರ್ ಅನಾವರಣಗೊಳಿಸಿದ ಫೋಕ್ಸ್‌ವ್ಯಾಗನ್

ಕಾನ್ಸೆಪ್ಟ್ ಮಾದರಿಯಲ್ಲಿನ ಬಹುತೇಕ ತಾಂತ್ರಿಕ ಅಂಶಗಳನ್ನು ಉಳಿಸಿಕೊಂಡಿರುವ ಟೈಗನ್ ಉತ್ಪಾದನಾ ಮಾದರಿಯು ಕಂಪ್ಯಾಕ್ಟ್ ಎಸ್‌ಯುವಿ ಕಾರು ಮಾದರಿಗಳಲ್ಲೇ ಹೆಚ್ಚಿನ ಮಟ್ಟದ ಪ್ರೀಮಿಯಂ ಫೀಚರ್ಸ್‌ ಪಡೆದುಕೊಂಡಿದ್ದು, ಅನಾವರಣಗೊಂಡ ನಂತರವು ಹೊಸ ಕಾರಿನ ವಿವಿಧ ಹಂತದ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲಾಗುತ್ತಿದೆ. ಇದೀಗ ಕಂಪನಿಯು ಹೊಸ ಕಾರಿನ ಮೊದಲ ಇಂಟಿರಿಯರ್ ಚಿತ್ರವನ್ನು ಬಹಿರಂಗಪಡಿಸಿದೆ.

ಅತ್ಯುತ್ತಮ ಫೀಚರ್ಸ್ ಒಳಗೊಂಡ ಟೈಗನ್ ಇಂಟಿರಿಯರ್ ಅನಾವರಣಗೊಳಿಸಿದ ಫೋಕ್ಸ್‌ವ್ಯಾಗನ್

ಹೊಸ ಕಾರಿನಲ್ಲಿ ಕಂಪನಿಯು ಹಲವಾರು ಪ್ರೀಮಿಯಂ ಫೀಚರ್ಸ್‌ಗಳ ಜೊತೆಗೆ ಎಲ್‍ಇಡಿ ಪೊಜೆಕ್ಟರ್ ಹೆಡ್‌ಲ್ಯಾಂಪ್ಸ್ ಇಂಟ್ರಾಗ್ರೆಟೆಡ್ ಡಿಆರ್‌ಎಲ್ಎಸ್ ಜೋಡಣೆ ಮಾಡಿದ್ದು, ಫಂಕ್ಷನಲ್ ಟರ್ನ್ ಇಂಡಿಕೇಟರ್, ಎಲ್‍ಇ‍‍ಡಿ ಲೈಟ್ ಬಾರ್‌, ಮುಂಭಾಗದಲ್ಲಿ ಸ್ಕಫ್ ಪ್ಲೇಟ್, 17-ಇಂಚಿನ ಡ್ಯುಯಲ್ ಟೋನ್ ಅಲಾಯ್ ವೀಲ್ಹ್, ವಿಂಡೋ ಮತ್ತು ಡೋರ್ ಹ್ಯಾಂಡಲ್ ಮೇಲೆ ಕ್ರೋಮ್ ವಿನ್ಯಾಸ ಪಡೆದುಕೊಂಡಿದೆ.

ಅತ್ಯುತ್ತಮ ಫೀಚರ್ಸ್ ಒಳಗೊಂಡ ಟೈಗನ್ ಇಂಟಿರಿಯರ್ ಅನಾವರಣಗೊಳಿಸಿದ ಫೋಕ್ಸ್‌ವ್ಯಾಗನ್

ಸ್ಪೋರ್ಟಿ ವಿನ್ಯಾಸಕ್ಕೆ ಪೂರಕವಾಗಿ ಬೂಟ್ ಲಿಡ್, ಎಲ್ಇಡಿ ಟೈಲ್ ಲ್ಯಾಂಪ್ಸ್, ಬ್ಲ್ಯಾಕ್ ಔಟ್ ರೂಫ್, ಹಿಂಬದಿಯಲ್ಲಿ ಕ್ರೊಮ್ ಆಕ್ಸೆಂಟ್ ನೀಡಲಾಗಿದ್ದು, ಎಂಕ್ಯೂಬಿ ಎ0 ಪ್ಲ್ಯಾಟ್‌ಫಾರ್ಮ್ ಅಡಿಯಲ್ಲಿ ಉತ್ಪಾದನೆಗೊಳಿಸಲಾಗಿದೆ.

ಅತ್ಯುತ್ತಮ ಫೀಚರ್ಸ್ ಒಳಗೊಂಡ ಟೈಗನ್ ಇಂಟಿರಿಯರ್ ಅನಾವರಣಗೊಳಿಸಿದ ಫೋಕ್ಸ್‌ವ್ಯಾಗನ್

ಆಕರ್ಷಕವಾಗಿರುವ ಹೊಸ ಕಾರಿನ ಇಂಟಿರಿಯರ್ ಕೂಡಾ ಅಡ್ವಾನ್ಸ್ ಟೆಕ್ನಿಕಲ್ ಫೀಚರ್ಸ್‌ಗಳಾದ 10-ಇಂಚಿನ ಟಚ್ ಸ್ಕ್ರೀನ್ ಇನ್ಫೋಟೆನ್‍‍ಮೆಂಟ್ ಸಿಸ್ಟಂ ಹಾಗೂ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್‍‍ಗಳನ್ನು ಹೊಂದಿದ್ದು, ಬ್ಲ್ಯಾಕ್ ಆ್ಯಂಡ್ ಗ್ರೇ ಡ್ಯುಯಲ್ ಕಲರ್ ಪಡೆದುಕೊಂಡಿದೆ.ಹಾಗೆಯೇ ವೆಂಟಿಲೆಟೆಡ್ ಸೀಟ್, ಎಲೆಕ್ಟ್ರಿಕ್ ಸನ್‌ರೂಫ್, ಬಾಡಿ ಕ್ಲಾಡಿಂಗ್, ರಿಯರ್ ಎಸಿ ವೆಂಟ್ಸ್, ಕೀ ಲೆಸ್ ಎಂಟ್ರಿ, ವೈರ್‌ಲೆಸ್ ಚಾರ್ಜರ್ ಹೊಂದಿದ್ದು, ಹೊಸ ಕಾರಿನ ಒಳಭಾಗದ ವಿನ್ಯಾಸವು ಸಹ ಸಾಕಷ್ಟು ಪ್ರೀಮಿಯಂ ಫೀಚರ್ಸ್‌ಗಳಿಂದ ಕೂಡಿದೆ.

ಅತ್ಯುತ್ತಮ ಫೀಚರ್ಸ್ ಒಳಗೊಂಡ ಟೈಗನ್ ಇಂಟಿರಿಯರ್ ಅನಾವರಣಗೊಳಿಸಿದ ಫೋಕ್ಸ್‌ವ್ಯಾಗನ್

ಹೊಸ ಕಾರಿನಲ್ಲಿ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, ಕಾರ್ ಕನೆಕ್ಟ್ ಟೆಕ್ನಾಲಜಿಯೊಂದಿಗೆ ಎಬಿಎಸ್ ಜೊತೆ ಇಬಿಡಿ, 6 ಏರ್‌ಬ್ಯಾಗ್(ಹೈಎಂಡ್ ಮಾದರಿಯಲ್ಲಿ), 2 ವೀಲ್ಹ್ ಡ್ರೈವ್ ಟೆಕ್ನಾಲಜಿ, ಐಸೋಫಿಕ್ಸ್ ಚೈಲ್ಡ್ ಸೀಟ್ ಮೌಂಟ್, ತ್ರಿ ಪಾಯಿಂಟ್ ಸೀಟ್ ಬೆಲ್ಟ್, ತ್ರಿ ಜೋನ್ ಕ್ಲೈಮೆಟ್ ಕಂಟ್ರೋಲ್, ಕ್ರೂಸ್ ಕಂಟ್ರೊಲ್ ಮತ್ತು ಹಿಲ್ ಅಸಿಸ್ಟ್ ಸೌಲಭ್ಯಗಳಿವೆ.

ಅತ್ಯುತ್ತಮ ಫೀಚರ್ಸ್ ಒಳಗೊಂಡ ಟೈಗನ್ ಇಂಟಿರಿಯರ್ ಅನಾವರಣಗೊಳಿಸಿದ ಫೋಕ್ಸ್‌ವ್ಯಾಗನ್

ಈ ಮೂಲಕ ಆಕರ್ಷಕ ಹೊರನೋಟವನ್ನು ಪಡೆದುಕೊಂಡಿರುವ ಹೊಸ ಕಾರು ರೂಫ್ ಮೌಂಟೆಡ್, ಸಿಲ್ವರ್ ರೂಫ್ ರೈಲ್ಸ್ ಸೌಲಭ್ಯಗಳನ್ನು ಹೊಂದಿದ್ದು, ಸ್ಥಳೀಯವಾಗಿ ಶೇ.95 ರಷ್ಟು ಬಿಡಿಭಾಗಗಳನ್ನು ಪಡೆದುಕೊಂಡಿರುವ ಟೈಗನ್ ಕಾರು ಮಾದರಿಯು ಬೆಲೆಯಲ್ಲಿ ಪ್ರತಿಸ್ಪರ್ಧಿ ಮಾದರಿಗಳಿಗೆ ಉತ್ತಮ ಪೈಪೋಟಿ ನೀಡಲಿದೆ.

ಅತ್ಯುತ್ತಮ ಫೀಚರ್ಸ್ ಒಳಗೊಂಡ ಟೈಗನ್ ಇಂಟಿರಿಯರ್ ಅನಾವರಣಗೊಳಿಸಿದ ಫೋಕ್ಸ್‌ವ್ಯಾಗನ್

ಇನ್ನು ಅಂತರ್‍‍ರಾಷ್ಟ್ರೀಯ ಮಾರುಕಟ್ಟೆಯಲ್ಲಿರುವ ಟೈಗನ್ ಎಸ್‍‍ಯುವಿಗಳಿಗಿಂತಲೂ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಕಾರು ಹೆಚ್ಚಿನ ಮಟ್ಟದ ಗ್ರೌಂಡ್ ಕ್ಲಿಯರೆನ್ಸ್ ಹಾಗೂ ಹೆಚ್ಚುವರಿ ವ್ಹೀಲ್‍‍ಬೇಸ್ ಅನ್ನು ಹೊಂದಿರಲಿದೆ.

MOST READ: ಭಾರತದಲ್ಲಿ ಅತಿ ಹೆಚ್ಚು ರಿಸೇಲ್ ವ್ಯಾಲ್ಯೂ ಹೊಂದಿರುವ ಕಾರುಗಳಿವು!

ಅತ್ಯುತ್ತಮ ಫೀಚರ್ಸ್ ಒಳಗೊಂಡ ಟೈಗನ್ ಇಂಟಿರಿಯರ್ ಅನಾವರಣಗೊಳಿಸಿದ ಫೋಕ್ಸ್‌ವ್ಯಾಗನ್

ಹೊಸ ಟೈಗನ್ ಕಾರು ಮಾದರಿಯಲ್ಲಿ ಫೋಕ್ಸ್‌ವ್ಯಾಗನ್ ಕಂಪನಿಯು ಗ್ರಾಹಕರ ಬೇಡಿಕೆಯೆಂತೆ ಎರಡು ಪೆಟ್ರೋಲ್ ಆವೃತ್ತಿಯನ್ನು ಮಾತ್ರವೇ ಬಿಡುಗಡೆ ಮಾಡುತ್ತಿದ್ದು, ನಗರ ಪ್ರದೇಶದಲ್ಲಿನ ಓಡಾಟಕ್ಕೆ ಅನುಕೂಲಕರವಾಗುವಂತೆ ಪ್ರಮುಖ ಹೊಸ ಎಂಜಿನ್ ಸಿದ್ದಪಡಿಸಲಾಗಿದೆ.

ಅತ್ಯುತ್ತಮ ಫೀಚರ್ಸ್ ಒಳಗೊಂಡ ಟೈಗನ್ ಇಂಟಿರಿಯರ್ ಅನಾವರಣಗೊಳಿಸಿದ ಫೋಕ್ಸ್‌ವ್ಯಾಗನ್

ಹೊಸ ಕಾರಿನಲ್ಲಿ ಪೊಲೊ ಹ್ಯಾಚ್‌ಬ್ಯಾಕ್‌ನಲ್ಲಿ ಬಳಕೆ ಮಾಡಲಾಗಿರುವ 108-ಬಿಎಚ್‌ಪಿ ಸಾಮರ್ಥ್ಯದ 1.0-ಲೀಟರ್ ಟಿಎಸ್ಐ ಪೆಟ್ರೋಲ್ ಮತ್ತು 148-ಬಿಎಚ್‌ಪಿ ಸಾಮರ್ಥ್ಯದ 1.5-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಟೈಗನ್‌ನಲ್ಲಿ ಜೋಡಿಸಲಾಗಿದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಅತ್ಯುತ್ತಮ ಫೀಚರ್ಸ್ ಒಳಗೊಂಡ ಟೈಗನ್ ಇಂಟಿರಿಯರ್ ಅನಾವರಣಗೊಳಿಸಿದ ಫೋಕ್ಸ್‌ವ್ಯಾಗನ್

ಟೈಗನ್ ಕಂಪ್ಯಾಕ್ಟ್ ಎಸ್‍‍ಯುವಿ ಕಾರು ಮಾದರಿಯು ಸದ್ಯ ಮಾರುಕಟ್ಟೆಯಲ್ಲಿ ಜನಪಪ್ರಿಯವಾಗಿರುವ ಹ್ಯುಂಡೈ ವೆನ್ಯೂ, ಮಹೀಂದ್ರಾ ಎಕ್ಸ್‌ಯುವಿ300, ಟಾಟಾ ನೆಕ್ಸಾನ್ ಮತ್ತು ಮಾರುತಿ ಸುಜುಕಿ ಬ್ರೆಝಾ ಕಾರುಗಳಿಗೆ ಉತ್ತಮ ಪೈಪೋಟಿ ನೀಡಲಿದ್ದು, ಹೊಸ ಕಾರಿನ ಬೆಲೆಯು ತಾಂತ್ರಿಕ ಅಂಶಗಳಿಗೆ ಅನುಗುಣವಾಗಿ ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 9.50 ಲಕ್ಷದಿಂದ ರೂ .14 ಲಕ್ಷ ಬೆಲೆ ಅಂತರದಲ್ಲಿ ಮಾರಾಟಬಹುದೆಂದು ನೀರಿಕ್ಷಿಸಲಾಗಿದೆ.

Most Read Articles

Kannada
English summary
Volkswagen Taigun cabin features revealed. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X