ರಾಷ್ಟ್ರೀಯ ಹೆದ್ದಾರಿಗಳನ್ನು ಟೋಲ್ ಪ್ಲಾಜಾಗಳಿಂದ ಮುಕ್ತಗೊಳಿಸಲು ಬೃಹತ್ ಪ್ಲ್ಯಾನ್

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಶುಲ್ಕವನ್ನು ಪಾವತಿಸಲು ಫಾಸ್ಟ್‌ಟ್ಯಾಗ್ ಸೌಲಭ್ಯವನ್ನು ಅಳವಡಿಸಿಕೊಂಡಿರುವ ಕೇಂದ್ರ ಹೆದ್ದಾರಿ ಅಭಿವೃದ್ದಿ ಪ್ರಾಧಿಕಾರವು ಮುಂಬರುವ ದಿನಗಳಲ್ಲಿ ಮತ್ತೊಂದು ಮಹತ್ವದ ಹೆಜ್ಜೆಯಿರಿಸುತ್ತಿದ್ದು, ರಾಷ್ಟ್ರೀಯ ಹೆದ್ದಾರಿಗಳನ್ನು ಹೊಸ ಶುಲ್ಕು ಪಾವತಿ ಸೌಲಭ್ಯದೊಂದಿಗೆ ಟೋಲ್ ಪ್ಲಾಜಾ ಮುಕ್ತಗೊಳಿಸುವ ಯೋಜನೆಯಲ್ಲಿದೆ.

ರಾಷ್ಟ್ರೀಯ ಹೆದ್ದಾರಿಗಳನ್ನು ಟೋಲ್ ಪ್ಲಾಜಾಗಳಿಂದ ಮುಕ್ತಗೊಳಿಸಲು ಬೃಹತ್ ಪ್ಲ್ಯಾನ್

ಹೌದು, ಫಾಸ್ಟ್‌ಟ್ಯಾಗ್‌ಗಿಂತಲೂ ವೇಗವಾಗಿ ಶುಲ್ಕ ಸಂಗ್ರಹಿಸುವ ಮೂಲಕ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ನಿರ್ಧರಿಸಿರುವ ಕೇಂದ್ರ ಹೆದ್ದಾರಿ ಅಭಿವೃದ್ದಿ ಪ್ರಾಧಿಕಾರವು ಟೋಲ್ ಪ್ಲಾಜಾಗಳನ್ನು ತೆಗೆದುಹಾಕಿ ಜಿಪಿಎಸ್ ಆಧರಿತ ಟೋಲ್ ಸಂಗ್ರಹ ಸೌಲಭ್ಯವನ್ನು ಜಾರಿಗೊಳಿಸುತ್ತಿದ್ದು, ಹೊಸ ಟೋಲ್ ಸಂಗ್ರಹ ಸೌಲಭ್ಯವನ್ನು ಅಚ್ಚುಕಟ್ಟಾಗಿ ಜಾರಿಗೆ ತರಲು ರಷ್ಯಾ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ.

ರಾಷ್ಟ್ರೀಯ ಹೆದ್ದಾರಿಗಳನ್ನು ಟೋಲ್ ಪ್ಲಾಜಾಗಳಿಂದ ಮುಕ್ತಗೊಳಿಸಲು ಬೃಹತ್ ಪ್ಲ್ಯಾನ್

ರಷ್ಯಾ ಸರ್ಕಾರದೊಂದಿನ ಸಹಭಾಗೀತ್ವ ಯೋಜನೆ ಅಡಿ ದೇಶದ ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಜಿಪಿಎಸ್ ಆಧರಿತ ಟೋಲ್ ಸಂಗ್ರಹ ಸೌಲಭ್ಯವನ್ನು ಜಾರಿಗೊಳಿಸುವ ಮೂಲಕ ಟೋಲ್ ಪ್ಲಾಜಾಗಳನ್ನು ಹಂತ-ಹಂತವಾಗಿ ತೆಗೆದುಹಾಕಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತಿದೆ.

ರಾಷ್ಟ್ರೀಯ ಹೆದ್ದಾರಿಗಳನ್ನು ಟೋಲ್ ಪ್ಲಾಜಾಗಳಿಂದ ಮುಕ್ತಗೊಳಿಸಲು ಬೃಹತ್ ಪ್ಲ್ಯಾನ್

ಟೋಲ್ ಪ್ಲಾಜಾ‌ಗಳಲ್ಲೇ ಜಿಪಿಎಸ್ ಆಧರಿತ ಟೋಲ್ ಸಂಗ್ರಹ ತಂತ್ರಜ್ಞಾನ ಅಳವಡಿಸಲಿರುವ ಕೇಂದ್ರ ಸರ್ಕಾರವು ಫಾಸ್ಟ್‌ಟ್ಯಾಗ್ ಮೂಲಕ ಶುಲ್ಕ ಕಡಿತಕ್ಕಾಗಿ ಟೋಲ್‌ಗಳಲ್ಲಿ ವಾಹನ ಸವಾರರು ಕಾಯುವುದನ್ನು ಸಹ ಇದು ತಪ್ಪಿಸಲಿದೆ.

ರಾಷ್ಟ್ರೀಯ ಹೆದ್ದಾರಿಗಳನ್ನು ಟೋಲ್ ಪ್ಲಾಜಾಗಳಿಂದ ಮುಕ್ತಗೊಳಿಸಲು ಬೃಹತ್ ಪ್ಲ್ಯಾನ್

ಫಾಸ್ಟ್‌ಟ್ಯಾಗ್ ಮೂಲಕ ಶುಲ್ಕ ಸಂಗ್ರಹಣೆಯು ತಡವಾದಲ್ಲಿ ಕೆಲವೊಮ್ಮೆ ಇತರೆ ವಾಹನ ಸವಾರರು ಸಹ ಕಾಯಬೇಕಿದ್ದು, ಜಿಪಿಎಸ್ ಟೋಲ್ ಸಂಗ್ರಹ ಸೌಲಭ್ಯ ಜಾರಿ ಬಂದಲ್ಲಿ ಇಂತಹ ಯಾವುದೇ ತೊಂದರೆ ಉಂಟಾಗುವುದಿಲ್ಲ ಎನ್ನಬಹುದು. ಹೊಸ ವಾಹನಗಳಲ್ಲಿ ಈಗಾಗಲೇ ಕಡ್ಡಾಯವಾಗಿ ಜಿಪಿಎಸ್ ಸೌಲಭ್ಯವನ್ನು ಅಳವಡಿಕೆ ಹೊಂದಿರುವುದರಿಂದ ಹೊಸ ಟೋಲ್ ಶುಲ್ಕ ಸೌಲಭ್ಯ ಅವಡಿಕೆ ಸುಲಭವಾಗಲಿದೆ ಎಂದಿರುವ ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿಯವರು ಮುಂದಿನ ಒಂದು ವರ್ಷದಲ್ಲಿ ಹೊಸ ಸೌಲಭ್ಯ ಜಾರಿಗೆ ತರುವ ಸುಳಿವು ನೀಡಿದ್ದಾರೆ.

ರಾಷ್ಟ್ರೀಯ ಹೆದ್ದಾರಿಗಳನ್ನು ಟೋಲ್ ಪ್ಲಾಜಾಗಳಿಂದ ಮುಕ್ತಗೊಳಿಸಲು ಬೃಹತ್ ಪ್ಲ್ಯಾನ್

ಸಂಸತ್‌ ಕಲಾಪದಲ್ಲಿ ಮಾತನಾಡಿರುವ ಸಚಿವ ನಿತಿನ್ ಗಡ್ಕರಿಯವರು ಹೊಸ ಟೋಲ್ ಸಂಗ್ರಹ ವ್ಯವಸ್ಥೆಯನ್ನು ಜಾರಿಗೊಳಿಸಲು ಅಂತಿಮ ಹಂತದ ಸಿದ್ದತೆ ನಡೆಸಲಾಗುತ್ತಿದ್ದು, ಹೊಸ ಟೋಲ್ ಸಂಗ್ರಹ ವ್ಯವಸ್ಥೆಯಲ್ಲಿ ತಡೆರಹಿತ ಹೆದ್ದಾರಿಗಳಲ್ಲಿ ಬಳಕೆದಾರರ ಬ್ಯಾಂಕ್ ಖಾತೆಯಿಂದ ನೇರವಾಗಿ ಹಣ ಸಂದಾಯವಾಗಲಿದೆ ಎಂದಿದ್ದಾರೆ.

ರಾಷ್ಟ್ರೀಯ ಹೆದ್ದಾರಿಗಳನ್ನು ಟೋಲ್ ಪ್ಲಾಜಾಗಳಿಂದ ಮುಕ್ತಗೊಳಿಸಲು ಬೃಹತ್ ಪ್ಲ್ಯಾನ್

ಜಿಪಿಎಸ್ ಮೂಲಕ ವಾಹನಗಳ ಚಲನವಲನದ ಮೇಲೆ ಟ್ರ್ಯಾಕ್ ಮಾಡುವ ಹೊಸ ಸೌಲಭ್ಯವು ಶುಲ್ಕ ಪಾವತಿ ಮಾಡುವ ಟೋಲ್‌ಗಳಲ್ಲಿ ಹಾಯ್ದುಹೋಗುವಾಗ ಸ್ವಯಂಚಾಲಿತವಾಗಿ ವಾಹನ ಮಾಲೀಕರ ಖಾತೆಯಿಂದ ನೇರವಾಗಿ ಶುಲ್ಕ ಸಂದಾಯವಾಗಲಿದೆ.

MOST READ: ಕಾರಿನಲ್ಲಿ ಡ್ಯಾಶ್‌ಬೋರ್ಡ್ ಕ್ಯಾಮೆರಾ ಹೊಂದುವುದರಿಂದಾಗುವ ಪ್ರಯೋಜನಗಳಿವು

ರಾಷ್ಟ್ರೀಯ ಹೆದ್ದಾರಿಗಳನ್ನು ಟೋಲ್ ಪ್ಲಾಜಾಗಳಿಂದ ಮುಕ್ತಗೊಳಿಸಲು ಬೃಹತ್ ಪ್ಲ್ಯಾನ್

ಹೊಸ ಟೋಲ್ ಸಂಗ್ರಹದಿಂದ ವಾಹನಗಳ ಸಂಚಾರ ಅವಧಿಯು ಸಾಕಷ್ಟು ಕಡಿತವಾಗಲಿದ್ದು, ದೀರ್ಘಾವಧಿಯಲ್ಲಿ ಸಂಚರಿಸುವ ವಾಣಿಜ್ಯ ವಾಹನಗಳಿಂದ ಅತಿ ಕಡಿಮೆ ಸಮಯದೊಂದಿಗೆ ಹೆಚ್ಚಿನ ಮಟ್ಟದ ಟೋಲ್ ಸಂಗ್ರಹವಾಗಲಿದೆ.

ರಾಷ್ಟ್ರೀಯ ಹೆದ್ದಾರಿಗಳನ್ನು ಟೋಲ್ ಪ್ಲಾಜಾಗಳಿಂದ ಮುಕ್ತಗೊಳಿಸಲು ಬೃಹತ್ ಪ್ಲ್ಯಾನ್

ಇದೇ ಕಾರಣಕ್ಕೆ ವಾಣಿಜ್ಯ ವಾಹನ ಸಂಚಾರಕ್ಕಾಗಿ ಈಗಾಗಲೇ ಜಿಪಿಎಸ್ ಅಳವಡಿಕೆಯನ್ನು ಕಡ್ಡಾಯಗೊಳಿಸಲಾಗಿದ್ದು, ಹೊಸ ಪ್ರಯಾಣಿಕ ವಾಹನಗಳಲ್ಲೂ ಕಡ್ಡಾಯವಾಗಿ ಜಿಪಿಎಸ್ ಅವಡಿಸಲಾಗುತ್ತಿದೆ. ಹಳೆಯ ಪ್ರಯಾಣಿಕ ವಾಹನಗಳಿಗೆ ಮಾತ್ರ ಜಿಪಿಎಸ್ ಸೌಲಭ್ಯವು ಕಡ್ಡಾಯವಾಗಬೇಕಿದ್ದು, ಹೊಸ ಸೌಲಭ್ಯ ಜಾರಿಗೂ ಮುನ್ನ ಹಳೆಯ ವಾಹನಗಳಿಗೂ ಜಿಪಿಎಸ್ ಸೌಲಭ್ಯವನ್ನು ಕಡ್ಡಾಯವಾಗಿ ಅಳವಡಿಕೆ ಮಾಡಿಕೊಳ್ಳಬೇಕಿದೆ.

MOST READ: ಹಳೆ ವಾಹನ ಮಾಲೀಕರಿಗೆ ಆಘಾತ ನೀಡಿದ ಕೇಂದ್ರ ಸಾರಿಗೆ ಇಲಾಖೆ

ರಾಷ್ಟ್ರೀಯ ಹೆದ್ದಾರಿಗಳನ್ನು ಟೋಲ್ ಪ್ಲಾಜಾಗಳಿಂದ ಮುಕ್ತಗೊಳಿಸಲು ಬೃಹತ್ ಪ್ಲ್ಯಾನ್

ಹೊಸ ಟೋಲ್ ಸಂಗ್ರಹದ ಸೌಲಭ್ಯದ ಮೂಲಕ ಮುಂದಿನ ಐದು ವರ್ಷಗಳಲ್ಲಿ ರೂ. 1.34 ಲಕ್ಷ ಕೋಟಿ ಆದಾಯ ನೀರಿಕ್ಷೆಯಲ್ಲಿರುವ ಕೇಂದ್ರ ಹೆದ್ದಾರಿ ಪ್ರಾಧಿಕಾರವು ಹೊಸ ಟೋಲ್ ಶುಲ್ಕ ಸಂಗ್ರಹ ಸೌಲಭ್ಯವನ್ನು ಪಾರದರ್ಶಕವಾಗಿ ಜಾರಿಗೆ ತರುತ್ತಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಪ್ರಮುಖ ರಾಷ್ಟ್ರೀಯ ಹೆದ್ದಾರಿ ಮಾರ್ಗಗಳು ತಡೆರಹಿತವಾಗಲಿವೆ.

Most Read Articles

Kannada
English summary
Toll Plazas To Be Removed, GPS-based Toll Collection Within 1 Year: Union Minister Nitin Gadkari.
Story first published: Thursday, March 18, 2021, 23:06 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X