ಕಿಕ್'ನಿಂದ ಸ್ಟಾರ್ಟ್ ಆಗುತ್ತೆ ಹಳೆಯ ವಸ್ತುಗಳಿಂದ ತಯಾರಾದ ಈ ಜೀಪ್

ಮಹೀಂದ್ರಾ ಅಂಡ್ ಮಹೀಂದ್ರಾ (Mahindra and Mahindra) ಕಂಪನಿಯ ಸಿಇಒ ಆನಂದ್ ಮಹೀಂದ್ರಾ ರವರು ಸದಾ ಕಾಲ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುತ್ತಾರೆ. ಅವರು ತಮ್ಮ ಟ್ವಿಟರ್ ಖಾತೆಯ ಮೂಲಕ ಕೆಲವು ವೀಡಿಯೊ ಅಥವಾ ಚಿತ್ರಗಳನ್ನು ಪೋಸ್ಟ್ ಮಾಡುತ್ತಾರೆ. ಅವರು ಟ್ವಿಟರ್‌ನಲ್ಲಿ ಶೇರ್ ಮಾಡುವ ಪೋಸ್ಟ್‌ಗಳು ಪ್ರೇರಕವಾಗಿರುತ್ತವೆ, ಇಲ್ಲವೇ ತಮಾಷೆಯಿಂದ ಕೂಡಿರುತ್ತವೆ.

ಕಿಕ್'ನಿಂದ ಸ್ಟಾರ್ಟ್ ಆಗುತ್ತೆ ಹಳೆಯ ವಸ್ತುಗಳಿಂದ ತಯಾರಾದ ಈ ಜೀಪ್

ಅವರು ತಮ್ಮ ಟ್ವೀಟ್‌ಗಳ ಮೂಲಕ ತಮ್ಮ ಫಾಲೋವರ್ ಗಳನ್ನು ರಂಜಿಸಲು ಮರೆಯುವುದಿಲ್ಲ. ಈಗ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ವೀಡಿಯೊವೊಂದನ್ನು ಶೇರ್ ಮಾಡಿದ್ದಾರೆ. ಈ ವೀಡಿಯೊ ಸಾಕಷ್ಟು ವೈರಲ್ ಆಗಿದೆ. ಕಿಕ್ ಸ್ಟಾರ್ಟ್ ಮಾಡಿದಾಗ ಆರಂಭವಾಗುವ ಸಣ್ಣ ಜೀಪ್ ಅನ್ನು ಈ ವೀಡಿಯೊದಲ್ಲಿ ತೋರಿಸಲಾಗಿದೆ. ಸಾಮಾನ್ಯವಾಗಿ ಸ್ಕೂಟರ್ ಅಥವಾ ಬೈಕ್ ಗಳನ್ನು ಕಿಕ್ ಮಾಡುವ ಮೂಲಕ ಸ್ಟಾರ್ಟ್ ಮಾಡಲಾಗುತ್ತದೆ.

ಕಿಕ್'ನಿಂದ ಸ್ಟಾರ್ಟ್ ಆಗುತ್ತೆ ಹಳೆಯ ವಸ್ತುಗಳಿಂದ ತಯಾರಾದ ಈ ಜೀಪ್

ಆದರೆ ಜೀಪ್ ಅನ್ನು ಕಿಕ್ ಮೂಲಕ ಸ್ಟಾರ್ಟ್ ಮಾಡುವುದನ್ನು ಯಾರೂ ನೋಡಿಯೇ ಇಲ್ಲವೆಂದು ಹೇಳಬಹುದು. ಈ ಕಾರಣಕ್ಕೆ ಆನಂದ್ ಮಹೀಂದ್ರಾ ರವರು ಶೇರ್ ಮಾಡಿರುವ ಈ ವೀಡಿಯೊ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಈ ವೀಡಿಯೊ ಶೇರ್ ಮಾಡಿರುವ ಆನಂದ್ ಮಹೀಂದ್ರಾ, ಈ ವಾಹನವು ಯಾವುದೇ ನಿಯಮಗಳಿಗೆ ಅನುಸಾರವಾಗಿಲ್ಲ. ಆದರೆ ನಾನು ಯಾವಾಗಲೂ ಕಡಿಮೆ ವಸ್ತುವಿನಿಂದ ಹೆಚ್ಚು ಮಾಡುವ ಜನರ ಈ ಪ್ರವೃತ್ತಿಯನ್ನು ಮೆಚ್ಚುತ್ತೇನೆ. ವಾಹನಗಳ ಬಗ್ಗೆ ಅವರಿಗಿರುವ ಉತ್ಸಾಹ ನಿಜಕ್ಕೂ ಅದ್ಭುತವೆಂದು ಹೇಳಿದ್ದಾರೆ.

ಕಿಕ್'ನಿಂದ ಸ್ಟಾರ್ಟ್ ಆಗುತ್ತೆ ಹಳೆಯ ವಸ್ತುಗಳಿಂದ ತಯಾರಾದ ಈ ಜೀಪ್

ಹಲವು ಟ್ವಿಟರ್ ಬಳಕೆದಾರರು ಈ ವೀಡಿಯೊವನ್ನು ಲೈಕ್ ಮಾಡಿದ್ದಾರೆ. ಆನಂದ್ ಮಹೀಂದ್ರಾ ರವರು ಶೇರ್ ಮಾಡಿರುವ ಈ ವೀಡಿಯೊವನ್ನು ಇಡುವರೆಗೂ 3 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದರೆ, 15 ಸಾವಿರಕ್ಕೂ ಹೆಚ್ಚು ಜನರು ಲೈಕ್‌ ಮಾಡಿದ್ದಾರೆ. ಇನ್ನು ಒಂದೂವರೆ ಸಾವಿರಕ್ಕೂ ಹೆಚ್ಚು ಜನರು ರಿಟ್ವೀಟ್ ಮಾಡಿದ್ದಾರೆ. ಅಂದ ಹಾಗೆ ಈ ವೀಡಿಯೊ ಮಹಾರಾಷ್ಟ್ರದ ಹಳ್ಳಿಯೊಂದಕ್ಕೆ ಸಂಬಂಧಿಸಿದೆ.

ಈ ವೀಡಿಯೊದಲ್ಲಿ ಆ ಹಳ್ಳಿಯ ವ್ಯಕ್ತಿಯೊಬ್ಬರು ಮಾಡಿಫೈ ಮಾಡಿದ ಜೀಪ್ ಅನ್ನು ಚಾಲನೆ ಮಾಡುತ್ತಿರುವುದನ್ನು ತೋರಿಸಲಾಗಿದೆ. ಈ ಜೀಪ್ ಅನ್ನು ಹಳೆಯ ವಸ್ತುಗಳಿಂದ ತಯಾರಿಸಲಾಗಿದೆ. ಈ ಜೀಪ್'ಗೆ ಬೈಕಿನ ಎಂಜಿನ್ ಅಳವಡಿಸಿರುವುದನ್ನು ವೀಡಿಯೊದಲ್ಲಿ ಕಾಣಬಹುದು. ವೀಡಿಯೊದಲ್ಲಿ, ಜೀಪ್ ಅನ್ನು ಕಿಕ್ ಮಾಡಿ ಸ್ಟಾರ್ಟ್ ಮಾಡುವುದನ್ನು ಸಹ ತೋರಿಸಲಾಗಿದೆ.

ಕಿಕ್'ನಿಂದ ಸ್ಟಾರ್ಟ್ ಆಗುತ್ತೆ ಹಳೆಯ ವಸ್ತುಗಳಿಂದ ತಯಾರಾದ ಈ ಜೀಪ್

ಕೆಲ ದಿನಗಳ ಹಿಂದಷ್ಟೇ ಆನಂದ್ ಮಹೀಂದ್ರಾ ರವರು ರಸ್ತೆಯಲ್ಲಿ ಬೈಕ್ ಸ್ಟಂಟ್ ಮಾಡುತ್ತಿದ್ದ ವ್ಯಕ್ತಿಯೊರ್ವನ ವೀಡಿಯೊವನ್ನು ಶೇರ್ ಮಾಡಿದ್ದರು. ಈ ವೀಡಿಯೋವನ್ನು ಶೇರ್ ಮಾಡುವಾಗ ಸಿನಿಮಾ ಹಾಡಿನ ಕೆಲವು ಸಾಲುಗಳನ್ನೂ ಬರೆದಿದ್ದರು. ವೀಡಿಯೊ ವೈರಲ್ ಆದ ನಂತರ ಕೆಲವರು ಬೈಕ್ ನಲ್ಲಿ ಸ್ಟಂಟ್ ಮಾಡುತ್ತಿದ್ದ ವ್ಯಕ್ತಿಯನ್ನು ಹೊಗಳಿದರೆ, ಇನ್ನೂ ಕೆಲವರು ಈ ಅಪಾಯಕಾರಿ ಸ್ಟಂಟ್ ಅನ್ನು ಬೈಕ್ ಚಾಲಕನ ನಿರ್ಲಕ್ಷ್ಯವೆಂದು ಹೇಳಿದ್ದರು.

ಕಿಕ್'ನಿಂದ ಸ್ಟಾರ್ಟ್ ಆಗುತ್ತೆ ಹಳೆಯ ವಸ್ತುಗಳಿಂದ ತಯಾರಾದ ಈ ಜೀಪ್

ಇನ್ನು ಮಹೀಂದ್ರಾ ಕಂಪನಿಯು ತನ್ನ ವಾಣಿಜ್ಯ ತ್ರಿಚಕ್ರ ವಾಹನ ವಿಭಾಗದಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರಾಟವನ್ನು ಹೆಚ್ಚಿಸುವ ಯೋಜನೆಯಲ್ಲಿ ಕಾರ್ಯನಿರತವಾಗಿದೆ. 2025ರ ವೇಳೆಗೆ ದೇಶದ ತ್ರಿಚಕ್ರ ವಾಹನ ವಿಭಾಗದಲ್ಲಿ 30%ನಷ್ಟು ಎಲೆಕ್ಟ್ರಿಕ್ ವಾಹನಗಳಿರಲಿವೆ ಎಂಬುದು ಕಂಪನಿಯ ಅಭಿಪ್ರಾಯ. ವಾಣಿಜ್ಯ ತ್ರಿಚಕ್ರ ವಾಹನ ವಿಭಾಗದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಂಪನಿಯು ಶೀಘ್ರದಲ್ಲೇ 5 ಹೊಸ ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆಗೊಳಿಸುವುದಾಗಿ ಹೇಳಿದೆ.

ಕಿಕ್'ನಿಂದ ಸ್ಟಾರ್ಟ್ ಆಗುತ್ತೆ ಹಳೆಯ ವಸ್ತುಗಳಿಂದ ತಯಾರಾದ ಈ ಜೀಪ್

ಈ ಹಿಂದೆ ಮಹೀಂದ್ರಾ ಕಂಪನಿಯು 2027ರ ವೇಳೆಗೆ 16 ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆಗೊಳಿಸುವುದಾಗಿ ತಿಳಿಸಿತ್ತು. ಮಹೀಂದ್ರಾ ಕಂಪನಿಯು ಈ ಎಲೆಕ್ಟ್ರಿಕ್ ವಾಹನಗಳು ಎಸ್‌ಯುವಿ ಹಾಗೂ ಲಘು ವಾಣಿಜ್ಯ ವಾಹನ ವಿಭಾಗಗಳಲ್ಲಿರಲಿವೆ ಎಂದು ಹೇಳಿದೆ. 2027ರ ವೇಳೆಗೆ ಕಂಪನಿಯು ಎಲೆಕ್ಟ್ರಿಕ್ ಎಸ್‌ಯುವಿಗಳ ಮೂಲಕ 20% ನಷ್ಟು ಮಾರಾಟವನ್ನು ಹೆಚ್ಚಿಸಿ ಕೊಳ್ಳುವ ಗುರಿಯನ್ನು ಹೊಂದಿದೆ.

ಕಿಕ್'ನಿಂದ ಸ್ಟಾರ್ಟ್ ಆಗುತ್ತೆ ಹಳೆಯ ವಸ್ತುಗಳಿಂದ ತಯಾರಾದ ಈ ಜೀಪ್

ಮಹೀಂದ್ರಾ ಕಂಪನಿಯು ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಗಾಗಿ ರೂ. 3,000 ಕೋಟಿ ಬಂಡವಾಳ ಹೂಡಿಕೆ ಮಾಡಲಿದೆ. ಭಾರತದಲ್ಲಿ ಈಗ ಎಲೆಕ್ಟ್ರಿಕ್ ವಾಹನ ವಿಭಾಗವು ಅಭಿವೃದ್ಧಿ ಹೊಂದುತ್ತಿದೆ ಎಂದು ಕಂಪನಿ ಹೇಳಿದೆ. ಮಹೀಂದ್ರಾ ತನ್ನ ಎಲೆಕ್ಟ್ರಿಕ್ ವಾಹನಗಳಿಗಾಗಿ ಹೊಸ ಬ್ರ್ಯಾಂಡ್ ಅನ್ನು ಸಹ ಘೋಷಿಸುವ ಸಾಧ್ಯತೆಗಳಿವೆ. ಮಹೀಂದ್ರಾ ಕಂಪನಿಯು ತನ್ನ ಇ-ವಾಹನ ವ್ಯವಹಾರಕ್ಕೆ ಖಾಸಗಿ ಹೂಡಿಕೆದಾರರನ್ನು ಆಹ್ವಾನಿಸುತ್ತಿದೆ.

ಕಿಕ್'ನಿಂದ ಸ್ಟಾರ್ಟ್ ಆಗುತ್ತೆ ಹಳೆಯ ವಸ್ತುಗಳಿಂದ ತಯಾರಾದ ಈ ಜೀಪ್

2019 ರ ಜನವರಿಯಲ್ಲಿ ವಾಹನಗಳನ್ನು ಮಾರ್ಪಡಿಸುವುದು ಕಾನೂನುಬಾಹಿರವೆಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತು. ಆದರೆ ಕಾರುಗಳಲ್ಲಿ ಮಾಡುವ ಎಲ್ಲಾ ಮಾರ್ಪಾಡುಗಳು ಕಾನೂನುಬಾಹಿರವಲ್ಲ. ಕಾನೂನುಬದ್ಧವಾಗಿ ಕಾರುಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಬಹುದು. ಅವು ಯಾವುವು ಎಂಬುದನ್ನು ನೋಡುವುದಾದರೆ...

ಕಿಕ್'ನಿಂದ ಸ್ಟಾರ್ಟ್ ಆಗುತ್ತೆ ಹಳೆಯ ವಸ್ತುಗಳಿಂದ ತಯಾರಾದ ಈ ಜೀಪ್

ಟಯರ್‌ಗಳನ್ನು ಕಾನೂನುಬದ್ಧವಾಗಿ ಅಪ್ ಡೇಟ್ ಮಾಡಬಹುದು. ಆದರೆ ಹೊಸ ಟಯರ್ ಗಳು ತಯಾರಕ ಕಂಪನಿಗಳ ಅವಶ್ಯಕತೆಗಳಿಗೆ ಒಳಪಟ್ಟಿರಬೇಕು. ಹೊಸ ಟಯರ್‌ಗಳು ಅದೇ ವೇಗದ ರೇಟಿಂಗ್ (ಎ) ಅಥವಾ ಸ್ಟಾಕ್ ಟಯರ್‌ಗಳಿಗಿಂತ ಹೆಚ್ಚಿನದನ್ನು ಹೊಂದಿರ ಬೇಕಾಗುತ್ತದೆ. ಹೊಸ ಟಯರ್ ಗಳು ಹೆಚ್ಚು ಅಗಲವನ್ನು ಹೊಂದಿದ್ದರೆ, ಕಾರಿನ ಸೈಡ್ವಾಲ್ ಎತ್ತರವನ್ನು ಕಡಿಮೆ ಮಾಡಬೇಕಾಗುತ್ತದೆ.

ಕಿಕ್'ನಿಂದ ಸ್ಟಾರ್ಟ್ ಆಗುತ್ತೆ ಹಳೆಯ ವಸ್ತುಗಳಿಂದ ತಯಾರಾದ ಈ ಜೀಪ್

ಕಾರು ಮಾಲೀಕರು ತಮ್ಮ ಇಷ್ಟದ ಬಣ್ಣವನ್ನು ಹೊಂದಲು ಅನುಮತಿ ನೀಡಲಾಗಿದೆ. ಆದರೆ ಬಣ್ಣದ ಮಾರ್ಪಾಡುಗಳಿಗೆ ಆರ್‌ಟಿಒ ಅನುಮೋದನೆ ಪಡೆಯಬೇಕು. ಇದರ ಬಗ್ಗೆ ಕಾರಿನ ನೋಂದಣಿ ಪ್ರಮಾಣಪತ್ರದಲ್ಲಿ ಕಾರಿನ ಬಣ್ಣವನ್ನು ಬದಲಾಯಿಸಲಾಗಿದೆ ಎಂದು ತಿಳಿಸಬೇಕು. ಆದರೆ ಆರ್ಮಿ ಗ್ರೀನ್ ಬಣ್ಣದಲ್ಲಿ ಕಾರುಗಳನ್ನು ಪೇಂಟ್ ಮಾಡುವಂತಿಲ್ಲ. ಈ ಬಣ್ಣವನ್ನು ಮಿಲಿಟರಿ ಬಳಕೆಗೆ ಮಾತ್ರ ಮೀಸಲಿಡಲಾಗಿದೆ.

ಕಿಕ್'ನಿಂದ ಸ್ಟಾರ್ಟ್ ಆಗುತ್ತೆ ಹಳೆಯ ವಸ್ತುಗಳಿಂದ ತಯಾರಾದ ಈ ಜೀಪ್

ಕಾರು ಮಾಲೀಕರು ತಮ್ಮ ಕಾರಿಗೆ ಅತ್ಯುತ್ತಮವಾದ ಸಸ್ಪೆಂಷನ್ ಪಡೆಯಬಹುದು. ಇದರಿಂದ ಕಾರು ಪ್ರಯಾಣದ ಅನುಭವ ಹೆಚ್ಚುತ್ತದೆ. ಆ್ಯಂಟಿ ರೋಲ್ ಬಾರ್ ಇತ್ಯಾದಿಗಳನ್ನು ಅಳವಡಿಸಿಕೊಳ್ಳುವ ಮೂಲಕ ತಿರುವುಗಳಲ್ಲಿ ಕಾರು ತಿರುಗಿಸುವಾಗ ಬಾಡಿ ರೋಲ್‌ನಂತಹ ಸಮಸ್ಯೆಗಳನ್ನು ತಪ್ಪಿಸಬಹುದು. ಇದರಿಂದ ಆರಾಮದಾಯಕ ಸವಾರಿಯನ್ನು ಪಡೆಯಬಹುದು.

ಕಿಕ್'ನಿಂದ ಸ್ಟಾರ್ಟ್ ಆಗುತ್ತೆ ಹಳೆಯ ವಸ್ತುಗಳಿಂದ ತಯಾರಾದ ಈ ಜೀಪ್

ಕಾರುಗಳಲ್ಲಿ ವಿಶೇಷ ಚೇತನರಿಗೆ ನೆರವಾಗುವ ಮಾರ್ಪಾಡುಗಳನ್ನು ಮಾಡುವುದರಿಂದ ಅವರಲ್ಲಿ ಆತ್ಮವಿಶ್ವಾಸ ಮೂಡುತ್ತದೆ. ವಿಶೇಷ ಚೇತನರಿಗಾಗಿ ಕಾರುಗಳಲ್ಲಿರುವ ಒಆರ್‌ವಿ‌ಎಂ, ವ್ಹೀಲ್‌ಚೇರ್ ಲಿಫ್ಟ್‌, ಆಟೋಮ್ಯಾಟಿಕ್ ಅಥವಾ ಕೈಯಿಂದ ಚಾಲಿತವಾಗುವ ಕ್ಲಚ್, ಆಕ್ಸಲರೇಟರ್, ಬ್ರೇಕ್‌ ಸೇರಿದಂತೆ ಕೆಲವು ಭಾಗಗಳನ್ನು ಮಾರ್ಪಾಡು ಮಾಡಬಹುದು.

Most Read Articles

Kannada
English summary
Anand mahindra shares a video of kick start jeep made with junk items details
Story first published: Wednesday, December 22, 2021, 20:20 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X