ಟೈರ್ ಸೇವೆಗಳನ್ನು ಸರಳಗೊಳಿಸಲು ಪ್ರತ್ಯೇಕ ಸರ್ವಿಸ್ ಸೆಂಟರ್ ತೆರೆದ ಅಪೊಲೊ ಟೈರ್ಸ್

ದೇಶದ ಮುಂಚೂಣಿ ಟೈರ್ ಉತ್ಪಾದನಾ ಕಂಪನಿಯಾಗಿರುವ ಅಪೊಲೊ ಟೈರ್ಸ್ ತನ್ನ ಗ್ರಾಹಕ ಸೇವೆಗಳನ್ನು ಸರಳಗೊಳಿಸಲು ಮೊದಲ ಬಾರಿಗೆ ಪ್ರತ್ಯೇಕ ಸರ್ವಿಸ್ ಸೆಂಟರ್‌ಗಳಿಗೆ ಚಾಲನೆ ನೀಡಿದ್ದು, ಟೈರ್‌ಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳಿಗೆ ಒಂದೇ ಸೂರಿನಡಿ ಪರಿಹಾರ ಒದಗಿಸುವ ಗುರಿಹೊಂದಿದೆ.

ಪ್ರತ್ಯೇಕ ಸರ್ವಿಸ್ ಸೆಂಟರ್ ತೆರೆದ ಅಪೊಲೊ ಟೈರ್ಸ್

ಟೈರ್ ಮಾರಾಟ ನಂತರ ಗ್ರಾಹಕ ಸೇವೆಗಳನ್ನು ಸರಳಗೊಳಿಸಲು ಮತ್ತು ಗುಣಮಟ್ಟದ ಸೇವೆಗಳನ್ನು ನೀಡುವ ಉದ್ದೇಶದೊಂದಿಗೆ ವಿಶೇಷ ಸೇವಾ ಕೇಂದ್ರಗಳ ನಿರ್ಮಾಣಕ್ಕೆ ಚಾಲನೆ ನೀಡಿರುವ ಅಪೊಲೊ ಟೈರ್ಸ್ ಕಂಪನಿಯು ದೇಶದ ವಿವಿಧ ಹತ್ತು ನಗರಗಳಲ್ಲಿ ಹೊಸ ಸೇವಾ ಕೇಂದ್ರಗಳಿಗೆ ಚಾಲನೆ ನೀಡುತ್ತಿದ್ದು, ಮೊದಲ ಟೈರ್ ಸೇವಾ ಕೇಂದ್ರವನ್ನು ಗುರುಗ್ರಾಮ್‌ನಲ್ಲಿ ತೆರೆದಿದೆ.

ಪ್ರತ್ಯೇಕ ಸರ್ವಿಸ್ ಸೆಂಟರ್ ತೆರೆದ ಅಪೊಲೊ ಟೈರ್ಸ್

ಹೊಸ ಸೇವಾ ಕೇಂದ್ರಗಳನ್ನು ನೇರವಾಗಿ ಕಂಪನಿಯೇ ನಿರ್ವಹಣೆ ಮಾಡಲಿದ್ದು, ಎಲ್ಲಾ ಮಾದರಿಯ ಟೈರ್‌ಗಳಿಗೂ ಇಲ್ಲಿ ಒಂದೇ ಸೂರಿನಡಿ ಸೇವೆಗಳು ಲಭ್ಯವಿರವಿವೆ ಎಂದು ಕಂಪನಿಯು ಮಾಧ್ಯಮ ಪ್ರಕಟನೆ ಹೊರಡಿಸಿದೆ.

ಪ್ರತ್ಯೇಕ ಸರ್ವಿಸ್ ಸೆಂಟರ್ ತೆರೆದ ಅಪೊಲೊ ಟೈರ್ಸ್

ಟೈರ್‌ಗೆ ಸಂಬಂಧಿಸಿದ ಸಮಸ್ಯೆಗಳಿಗೆ ವಿವಿಧ ಟಚ್ ಪಾಯಿಂಟ್‌ಗಳಿಗೆ ಗ್ರಾಹಕರು ಅಲೆಯುವುದನ್ನು ತಪ್ಪಿಸಲು ಹೊಸ ಯೋಜನೆಗೆ ಚಾಲನೆ ನೀಡಿರುವ ಅಪೊಲೊ ಕಂಪನಿಯು ಒಂದೇ ಸೂರಿನಡಿ ವಿವಿಧ ಸೇವೆಗಳನ್ನು ಒದಗಿಸಲಿದ್ದು, ಸರ್ಟಿಫೈಡ್ ಸಿಬ್ಬಂದಿಯಿಂದಲೇ ಉತ್ತಮ ಸೇವೆಗಳನ್ನು ಒದಗಿಸಲಿದೆ.

ಪ್ರತ್ಯೇಕ ಸರ್ವಿಸ್ ಸೆಂಟರ್ ತೆರೆದ ಅಪೊಲೊ ಟೈರ್ಸ್

ಅಪೊಲೊ ಟೈರ್ಸ್ ಕಂಪನಿಯು ವಿಶೇಷ ಸೇವಾ ಕೇಂದ್ರಗಳು ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದ್ದು, ಹೊಸ ಸೇವಾ ಕೇಂದ್ರಗಳಲ್ಲಿ ಕಂಪ್ಯೂಟರೈಸ್ಡ್ ವೀಲ್ಹ್ ಅಲೈನ್ಮೆಂಟೇ , ಆಟೋಮ್ಯಾಟಿಕ್ ಟೈರ್ ಚೇಂಜರ್, ವೀಲ್ಹ್ ಬ್ಯಾಲೆನ್ಸಿಂಗ್ ಮಷಿನ್ ಮತ್ತು ನೈಟ್ರೊಜೆನ್ ಗ್ಯಾಸ್ ಇನ್ಫ್ಲೇಟರ್ ಸೇರಿದಂತೆ ವಿವಿಧ ಸೇವೆಗಳನ್ನು ಹೊಂದಿದೆ. ಹಾಗೆಯೇ ದ್ವಿಚಕ್ರ ವಾಹನಗಳಿಗೆ ಟೈರ್ ಬದಲಾಯಿಸಲು ಮತ್ತು ಸಮತೋಲನಗೊಳಿಸಲು ವಿಶೇಷ ಉಪಕರಣವನ್ನು ಸಹ ಈ ಸೇವಾ ಕೇಂದ್ರಗಳು ಒಳಗೊಂಡಿರಲಿದೆ.

ಪ್ರತ್ಯೇಕ ಸರ್ವಿಸ್ ಸೆಂಟರ್ ತೆರೆದ ಅಪೊಲೊ ಟೈರ್ಸ್

ಇದಲ್ಲದೆ ಹೊಸ ಸೇವಾ ಕೇಂದ್ರಗಳ ಮೂಲಕ ತುರ್ತು ಸಂದರ್ಭಗಳಲ್ಲಿ ಔಟ್ ಡೋರ್ ಸೇವೆಗಳನ್ನು ಸಹ ಆರಂಭಿಸಿದ್ದು, ಒಂದೇ ನಿಲುಗಡೆಯಲ್ಲಿ ಟೈರ್‌ಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದಾಗಿದೆ.

ಪ್ರತ್ಯೇಕ ಸರ್ವಿಸ್ ಸೆಂಟರ್ ತೆರೆದ ಅಪೊಲೊ ಟೈರ್ಸ್

ಇನ್ನು ಅಪೊಲೊ ಟೈರ್ಸ್ ಕಂಪನಿಯು ಇ-ಕಾಮರ್ಸ್ ಮಾರಾಟ ಮಳಿಗೆಯ ಮೂಲಕ ದ್ವಿಚಕ್ರ ವಾಹನಗಳಿಗೆ ಮತ್ತು ಕಾರುಗಳ ಟಯರ್ ಮಾರಾಟವನ್ನು ಆರಂಭಿಸಿದ್ದು, ಇ-ಕಾಮರ್ಸ್ ಪೋರ್ಟಲ್ ಆರಂಭದೊಂದಿಗೆ'ಬೈ ಆನ್‌ಲೈನ್, ಫಿಟ್‌ ಆಫ್‌ಲೈನ್' ಅಭಿಯಾನ ಕೈಗೊಂಡಿದೆ.

ಪ್ರತ್ಯೇಕ ಸರ್ವಿಸ್ ಸೆಂಟರ್ ತೆರೆದ ಅಪೊಲೊ ಟೈರ್ಸ್

'ಬೈ ಆನ್‌ಲೈನ್, ಫಿಟ್‌ ಆಫ್‌ಲೈನ್' ಅಭಿಯಾನ ಕೈಗೊಂಡಿರುವ ಅಪೊಲೊ ಟೈರ್ಸ್ ಕಂಪನಿಯು ಟಯರ್ಸ್ ಖರೀದಿ ಮಾಡಿದ ನಂತರ ಹತ್ತಿರದಲ್ಲಿರುವ ಡೀಲರ್ಸ್ ಮೂಲಕ ಉಚಿತವಾಗಿ ಜೋಡಣೆ ಮಾಡಿಕೊಡುವ ಸೌಲಭ್ಯ ಆರಂಭಿಸಿದ್ದು, ಆನ್‌ಲೈನ್ ಟಯರ್ ಮಾರಾಟ ಸೇವೆಗಳಿಗೆ ಭಾರೀ ಬೇಡಿಕೆ ಪಡೆದುಕೊಳ್ಳುತ್ತಿದೆ.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಪ್ರತ್ಯೇಕ ಸರ್ವಿಸ್ ಸೆಂಟರ್ ತೆರೆದ ಅಪೊಲೊ ಟೈರ್ಸ್

ಆನ್‌ಲೈನ್ ಮಳಿಗೆಯ ಮೂಲಕ ಗ್ರಾಹಕರಿಗೆ ಹೊಸ ಮಾದರಿಯ ಟೈರ್‌‌ಗಳನ್ನು ಖರೀದಿಸಲು ಸುಲಭವಾಗುವಂತೆ ಪೋರ್ಟಲ್ ವಿನ್ಯಾಸಗೊಳಿಸಲಾಗಿದ್ದು, ಯಾವ ವಾಹನಕ್ಕೆ ಯಾವ ಮಾದರಿಯ ಟಯರ್ ಸೂಕ್ತ? ಎನ್ನುವ ಮಾಹಿತಿಯೊಂದಿಗೆ ಟಯರ್ ಗುಣಮಟ್ಟದ ಮಾಹಿತಿಗಳನ್ನು ಸರಳವಾಗಿ ತಿಳಿಸಲಿದೆ.

ಪ್ರತ್ಯೇಕ ಸರ್ವಿಸ್ ಸೆಂಟರ್ ತೆರೆದ ಅಪೊಲೊ ಟೈರ್ಸ್

ಜೊತೆಗೆ ಆನ್‌ಲೈನ್ ಮೂಲಕ ಟಯರ್ ಖರೀದಿಸುವ ಗ್ರಾಹಕರಿಗೆ ರಿಟೇಲ್ ಮಾರಾಟಗಾರರಲ್ಲಿ ಖರೀದಿ ಮಾಡುವುದಕ್ಕಿಂತಲೂ ಹಲವಾರು ಆಫರ್‌ಗಳೊಂದಿಗೆ ಖರೀದಿಗೆ ಅವಕಾಶ ನೀಡಿದ್ದು, ಟೈರ್ ಖರೀದಿ ಮಾಡಿದ ನಂತರ ಅದನ್ನು ವಾಹನಗಳಿಗೆ ಜೋಡಣೆ ಮಾಡಲು ಹತ್ತಿರದ ಡೀಲರ್ಸ್‌ಗಳಿಗೆ ಸೂಚಿಸುತ್ತದೆ.

MOST READ: ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಬಜೆಟ್ ಬೆಲೆಯ ಬೈಕುಗಳಿವು..!

ಪ್ರತ್ಯೇಕ ಸರ್ವಿಸ್ ಸೆಂಟರ್ ತೆರೆದ ಅಪೊಲೊ ಟೈರ್ಸ್

ನಿಮಗೆ ಅನುಕೂಲಕ್ಕೆ ತಕ್ಕಂತೆ ಟಯರ್ ಜೋಡಣೆಗಾಗಿ ಡೀಲರ್ಸ್ ಅನ್ನು ಕೂಡಾ ಫೋರ್ಟಲ್ ಮೂಲಕ ದಿನಾಂಕ ಮತ್ತು ಸಮಯವನ್ನು ಕಾಯ್ದಿಸಬಹುದಾಗಿದ್ದು, ಹಣಪಾವತಿ ವಿಧಾನಗಳು ಕೂಡಾ ಸಾಕಷ್ಟು ಸರಳವಾಗಿವೆ. ಟಯರ್ ಖರೀದಿಗಾಗಿ ಆನ್‌ಲೈನ್ ಪೋರ್ಟಲ್ ದಿನದ 24 ಗಂಟೆ ವಾರದ 7 ದಿನವು ಕಾರ್ಯನಿರ್ವಹಿಸಲಿದ್ದು, ಟಯರ್ ಖರೀದಿಗೆ ಇಎಂಐ ಸೌಲಭ್ಯ ನೀಡಿರುವುದು ಕೂಡಾ ಗ್ರಾಹಕರ ಪ್ರಮುಖ ಆಕರ್ಷಣೆಯಾಗಿದೆ.

Most Read Articles

Kannada
English summary
Apollo Specialised Service Center For Tyres Opens In India. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X