ಡ್ರೈವ್ ದಿ ಚೇಂಜ್ ಅಭಿಯಾನದ ಮೂಲಕ ಮಹಿಳಾ ದಿನಾಚರಣೆ ಆಚರಿಸಿದ ಆಡಿ ಇಂಡಿಯಾ

ಮಾರ್ಚ್ 8ರಂದು ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಗುತ್ತದೆ. ಸಮಾಜದಲ್ಲಿ ಮಹಿಳೆಯರ ಬಗ್ಗೆ ಗೌರವವನ್ನು ರಕ್ಷಿಸುವುದು ಹಾಗೂ ಅವರ ಗೌರವವನ್ನು ಉತ್ತೇಜಿಸುವುದು ಈ ದಿನಾಚರಣೆಯ ಹಿಂದಿರುವ ಉದ್ದೇಶ.

ಡ್ರೈವ್ ದಿ ಚೇಂಜ್ ಅಭಿಯಾನದ ಮೂಲಕ ಮಹಿಳಾ ದಿನಾಚರಣೆ ಆಚರಿಸಿದ ಆಡಿ ಇಂಡಿಯಾ

ಯಾವುದೇ ಕ್ಷೇತ್ರವಿರಲಿ ಮಹಿಳೆಯರು ಪುರುಷರಿಗೆ ಸರಿ ಸಮಾನರಾಗಿ ದುಡಿಯುತ್ತಿದ್ದಾರೆ. ಆದರೂ ಮಹಿಳೆಯರು ಪುರುಷರಿಗಿಂತ ಕಡಿಮೆ ಎಂಬ ಭಾವನೆಯಲ್ಲಿಯೇ ನೋಡಲಾಗುತ್ತಿದೆ.

ಡ್ರೈವ್ ದಿ ಚೇಂಜ್ ಅಭಿಯಾನದ ಮೂಲಕ ಮಹಿಳಾ ದಿನಾಚರಣೆ ಆಚರಿಸಿದ ಆಡಿ ಇಂಡಿಯಾ

ಇನ್ನು ಡ್ರೈವಿಂಗ್ ವಿಷಯಕ್ಕೆ ಬಂದಾಗ ಮಹಿಳೆಯರ ಡ್ರೈವಿಂಗ್ ಕೌಶಲ್ಯವನ್ನು ಪರಿಗಣಿಸುವುದೇ ಇಲ್ಲ. ಈ ಮನಸ್ಥಿತಿಯನ್ನು ಬದಲಿಸಲು ಜರ್ಮನಿಯ ಕಾರು ತಯಾರಕ ಕಂಪನಿಯಾದ ಆಡಿ ಡ್ರೈವ್ ದಿ ಚೇಂಜ್ ಅಭಿಯಾನವನ್ನು ಆರಂಭಿಸಿದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಡ್ರೈವ್ ದಿ ಚೇಂಜ್ ಅಭಿಯಾನದ ಮೂಲಕ ಮಹಿಳಾ ದಿನಾಚರಣೆ ಆಚರಿಸಿದ ಆಡಿ ಇಂಡಿಯಾ

ಮಹಿಳೆಯರು ಸಹ ಪುರುಷರಂತೆಯೇ ಚಾಲನೆಯಲ್ಲಿ ಪರಿಣತರಾಗಿದ್ದಾರೆಂದು ತಿಳಿಸುವುದು ಈ ಅಭಿಯಾನದ ಹಿಂದಿರುವ ಉದ್ದೇಶ. ಕಂಪನಿಯು ಈ ಅಭಿಯಾನದಲ್ಲಿ ದೇಶದ ವಿವಿಧ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುವ ಎಂಟು ಮಹಿಳೆಯರನ್ನು ಸೇರಿಸಿದೆ.

ಡ್ರೈವ್ ದಿ ಚೇಂಜ್ ಅಭಿಯಾನದ ಮೂಲಕ ಮಹಿಳಾ ದಿನಾಚರಣೆ ಆಚರಿಸಿದ ಆಡಿ ಇಂಡಿಯಾ

ಈ ಮಹಿಳೆಯರು ತಮ್ಮ ಚಾಲನಾ ಕೌಶಲ್ಯದಿಂದ ಪುರುಷರಂತೆ ಕಾರುಗಳನ್ನು ಚಾಲನೆ ಮಾಡುವುದರಲ್ಲಿ ಪರಿಣತರಾಗಿದ್ದಾರೆಂದು ಹೇಳಿಕೊಂಡಿದ್ದಾರೆ. ಕಂಪನಿಯು #DriveTheChange ಹಾಗೂ #FutureIsAnAttitude ಎಂಬ ಹ್ಯಾಶ್‌ಟ್ಯಾಗ್‌ಗಳೊಂದಿಗೆ ಈ ಅಭಿಯಾನವನ್ನು ಆಯೋಜಿಸಿದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಡ್ರೈವ್ ದಿ ಚೇಂಜ್ ಅಭಿಯಾನದ ಮೂಲಕ ಮಹಿಳಾ ದಿನಾಚರಣೆ ಆಚರಿಸಿದ ಆಡಿ ಇಂಡಿಯಾ

ಇತ್ತೀಚೆಗೆ ಕಾರು ಕಂಪನಿಯೊಂದು ನಡೆಸಿದ ಅಧ್ಯಯನದ ಪ್ರಕಾರ ಜನರು ಮಹಿಳಾ ಚಾಲಕರನ್ನು ನಂಬುವುದಿಲ್ಲ. ಒಂದು ವೇಳೆ ಚಾಲಕ ಮಹಿಳೆಯಾಗಿದ್ದರೆಅವರಿಂದ ದೂರವಿರುತ್ತಾರೆ. ಮಹಿಳೆಯರಿಗೆ ವಾಹನವನ್ನು ಸರಿಯಾಗಿ ಕಂಟ್ರೋಲ್ ಮಾಡಲು ಸಾಧ್ಯವಾಗುವುದಿಲ್ಲವೆಂದೇ ಜನರು ನಂಬುತ್ತಾರೆ.

ಡ್ರೈವ್ ದಿ ಚೇಂಜ್ ಅಭಿಯಾನದ ಮೂಲಕ ಮಹಿಳಾ ದಿನಾಚರಣೆ ಆಚರಿಸಿದ ಆಡಿ ಇಂಡಿಯಾ

ಇನ್ನು ಕೆಲವರು ವಾಹನದ ಸಾಮರ್ಥ್ಯದ ಆಧಾರದ ಮೇಲೆ ವಾಹನ ಚಾಲನೆ ಮಾಡುವಂತೆ ಮಹಿಳೆಯರಿಗೆ ಸೂಚಿಸುತ್ತಾರೆ. ಎಸ್‌ಯುವಿಗಳಂತಹ ದೊಡ್ಡ ವಾಹನಗಳನ್ನು ಚಾಲನೆ ಮಾಡದಂತೆ ಮಹಿಳೆಯರಿಗೆ ಸೂಚಿಸುತ್ತಾರೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಡ್ರೈವ್ ದಿ ಚೇಂಜ್ ಅಭಿಯಾನದ ಮೂಲಕ ಮಹಿಳಾ ದಿನಾಚರಣೆ ಆಚರಿಸಿದ ಆಡಿ ಇಂಡಿಯಾ

ದೊಡ್ಡ ವಾಹನಗಳನ್ನು ಕಂಟ್ರೋಲ್ ಮಾಡಲು ಮಹಿಳೆಯರಿಗೆ ಸಾಧ್ಯವಾಗುವುದಿಲ್ಲವೆಂಬುದು ಬಹುತೇಕ ಜನರ ಅಭಿಪ್ರಾಯ. ಸಣ್ಣ ಕಾರುಗಳನ್ನು ಖರೀದಿಸುವಂತೆ ಹಾಗೂ ಅವುಗಳನ್ನು ಮಾತ್ರವೇ ಚಾಲನೆ ಮಾಡುವಂತೆ ಮಹಿಳೆಯರಿಗೆ ಹೇಳಲಾಗುತ್ತದೆ.

ಡ್ರೈವ್ ದಿ ಚೇಂಜ್ ಅಭಿಯಾನದ ಮೂಲಕ ಮಹಿಳಾ ದಿನಾಚರಣೆ ಆಚರಿಸಿದ ಆಡಿ ಇಂಡಿಯಾ

ಆದರೆ ಮಹಿಳೆಯರು ಇಂತಹ ಸೂಚನೆಗಳನ್ನು ತಳ್ಳಿ ಹಾಕುತ್ತಾರೆ. ಇತ್ತೀಚಿನ ದಿನಗಳಲ್ಲಿ ಪ್ರಪಂಚದಾದ್ಯಂತ ಆಯೋಜಿಸಲಾಗುತ್ತಿರುವ ಮೋಟಾರ್‌ಸ್ಪೋರ್ಟ್ ಈವೆಂಟ್‌ಗಳಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದಾರೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಡ್ರೈವ್ ದಿ ಚೇಂಜ್ ಅಭಿಯಾನದ ಮೂಲಕ ಮಹಿಳಾ ದಿನಾಚರಣೆ ಆಚರಿಸಿದ ಆಡಿ ಇಂಡಿಯಾ

ಈ ಮೂಲಕ ಮಹಿಳೆಯರು ತಾವು ಎಲ್ಲಾ ರೀತಿಯ ವಾಹನಗಳನ್ನು ಚಾಲನೆ ಮಾಡುತ್ತೇವೆ ಎಂಬುದನ್ನು ಸಾಬೀತುಪಡಿಸುತ್ತಿದ್ದಾರೆ. ದೇಶದ ಹಲವು ನಗರಗಳಲ್ಲಿ ಮಹಿಳೆಯರು ಆಟೋ ಚಾಲನೆ ಮಾಡುತ್ತಿದ್ದಾರೆ.

ಡ್ರೈವ್ ದಿ ಚೇಂಜ್ ಅಭಿಯಾನದ ಮೂಲಕ ಮಹಿಳಾ ದಿನಾಚರಣೆ ಆಚರಿಸಿದ ಆಡಿ ಇಂಡಿಯಾ

ಇನ್ನು ಕೆಲವು ಮಹಿಳೆಯರು ಕುಟುಂಬ ನಿರ್ವಹಣೆಗಾಗಿ ಟ್ರಕ್ ಹಾಗೂ ಬಸ್ಸುಗಳನ್ನು ಚಾಲನೆ ಮಾಡುತ್ತಿದ್ದಾರೆ. ಇಂತಹ ಸನ್ನಿವೇಶದಲ್ಲಿ ಮಹಿಳೆಯರ ಚಾಲನಾ ಸಾಮರ್ಥ್ಯವನ್ನು ಪ್ರಶ್ನಿಸುವುದು ಸರಿಯಲ್ಲ.

Most Read Articles

Kannada
Read more on ಆಡಿ audi
English summary
Audi India celebrates women's day through drive the change campaign. Read in Kannada.
Story first published: Tuesday, March 9, 2021, 19:38 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X