ಭಾರತದಲ್ಲಿ ಹೊಸ Audi A4 Premium ವೆರಿಯೆಂಟ್ ಬಿಡುಗಡೆ

ಜರ್ಮನ್ ಮೂಲದ ಐಷಾರಾಮಿ ಕಾರು ತಯಾರಕ ಕಂಪನಿಯಾದ ಆಡಿ ತನ್ನ ಎ4 ಸೆಡಾನ್ ಸರಣಿಗೆ ಹೊಸ ಪ್ರೀಮಿಯಂ ವೆರಿಯೆಂಟ್ ಅನ್ನು ಬಿಡುಗಡೆ ಮಾಡಿದೆ. ಆಡಿ ಕಂಪನಿಯು ತನ್ನ ಎ4 ಸೆಡಾನ್ ಭಾರತದಲ್ಲಿ ಯಶಸ್ವಿಯಾದ ಸಂಭ್ರಮದ ಭಾಗವಾಗಿ ಹೊಸ ಪ್ರೀಮಿಯಂ ವೆರಿಯೆಂಟ್ ಅನ್ನು ಬಿಡುಗಡೆಗೊಳಿಸಲಾಗಿದೆ ಎಂದು ಕಂಪನಿ ಹೇಳಿದೆ.

ಭಾರತದಲ್ಲಿ ಹೊಸ Audi A4 Premium ವೆರಿಯೆಂಟ್ ಬಿಡುಗಡೆ

ಈ ಹೊಸ ಆಡಿ ಎ4 ಪ್ರೀಮಿಯಂ ವೆರಿಯೆಂಟ್ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.39.99 ಲಕ್ಷವಾಗಿದೆ. ಈ ಪ್ರೀಮಿಯಂ ಟ್ರಿಮ್ ಮಿಡ್ ಪ್ರೀಮಿಯಂ ಪ್ಲಸ್ ವೆರಿಯೆಂಟ್ ಮತ್ತು ಸರಣಿಯ-ಟಾಪ್ ಟೆಕ್ನಾಲಜಿ ವೆರಿಯೆಂಟ್ ಲೈನ್-ಅಪ್‌ಗೆ ಸೇರುತ್ತದೆ. ಇದರಲ್ಲಿ 2.0-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್‌ ಅನ್ನು ಹೊಂದಿದೆ. ಈ ಎಂಜಿನ್ 188 ಬಿಹೆಚ್‍ಪಿ ಪವರ್ ಮತ್ತು 320 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 7-ಸ್ಪೀಡ್ S-ಟ್ರಾನಿಕ್ ಡ್ಯುಯಲ್-ಕ್ಲಚ್ ಟ್ರಾನ್ಸ್‌ಮಿಷನ್‌ನೊಂದಿಗೆ ಸ್ಟ್ಯಾಂಡರ್ಡ್ ಆಗಿ ಜೋಡಿಸಲಾಗುತ್ತದೆ.

ಭಾರತದಲ್ಲಿ ಹೊಸ Audi A4 Premium ವೆರಿಯೆಂಟ್ ಬಿಡುಗಡೆ

ಆಡಿ ಎ4 ಪ್ರೀಮಿಯಂ ವೆರಿಯೆಂಟ್ 7.3 ಸೆಕೆಂಡುಗಳಲ್ಲಿ 0-100 ಕಿ.ಮೀ ಸ್ಪೀಡ್ ಅನ್ನು ಪಡೆದುಕೊಳ್ಳುತ್ತದೆ. ಬೇಸ್ ಪ್ರೀಮಿಯಂ ಟ್ರಿಮ್ ಪ್ರೀಮಿಯಂ ಪ್ಲಸ್ ರೂಪಾಂತರಕ್ಕಿಂತ ಸುಮಾರು ರೂ,3.7 ಲಕ್ಷ ಅಗ್ಗವಾಗಿದೆ. ಯಾಂತ್ರಿಕವಾಗಿ ಬೇಸ್ ಆಡಿ ಎ4 ಟಾಪ್-ಎಂಡ್ ಟ್ರಿಮ್‌ಗಳಿಗೆ ಹೋಲುತ್ತದೆ, ಅದರ ವೈಶಿಷ್ಟ್ಯಗಳ ಪಟ್ಟಿಯಲ್ಲಿ ಬದಲಾವಣೆಗಳಿವೆ.

ಭಾರತದಲ್ಲಿ ಹೊಸ Audi A4 Premium ವೆರಿಯೆಂಟ್ ಬಿಡುಗಡೆ

ಇನ್ನು ಹೊಸ ಆಡಿ ಎ4 ಪ್ರೀಮಿಯಂ ವೆರಿಯೆಂಟ್ ಒಳಭಾಗದ ಆಕರ್ಷಕವಾಗಿದೆ, ಇನ್ನು ಈ ಎ4 ಪ್ರೀಮಿಯಂ ವೆರಿಯೆಂಟ್ ನಲ್ಲಿ ಸಾಫ್ಟ್ ಟಚ್ ಮಟಿರಿಯಲ್‌ಗಳು ಕಾರಿನ ಕ್ಯಾಬಿನ್ ಐಷಾರಾಮಿಗೆ ಮತ್ತಷ್ಟು ಪೂಕವಾಗಿವೆ ಎನ್ನಬಹುದು.

ಭಾರತದಲ್ಲಿ ಹೊಸ Audi A4 Premium ವೆರಿಯೆಂಟ್ ಬಿಡುಗಡೆ

ಆಡಿ ಎ4 ಪ್ರೀಮಿಯಂ ವೆರಿಯೆಂಟ್ ನಲ್ಲಿ 10-ಇಂಚಿನ MMI ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಪಡೆಯುತ್ತೀರಿ ಆದರೆ ಪ್ರೀಮಿಯಂ ಯೂನಿಟ್ ಬದಲಿಗೆ ಸ್ಟ್ಯಾಂಡರ್ಡ್ ಆಡಿ ಸೌಂಡ್ ಸಿಸ್ಟಮ್‌ನೊಂದಿಗೆ. ಇದು ಸ್ಮಾರ್ಟ್ಫೋನ್ ಇಂಟರ್ಫೇಸ್ ಮತ್ತು ಆಫಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋನಂತಹ ಇತರ ವೈಶಿಷ್ಟ್ಯಗಳನ್ನು ಬೆಂಬಲಿಸುತ್ತದೆ.

ಭಾರತದಲ್ಲಿ ಹೊಸ Audi A4 Premium ವೆರಿಯೆಂಟ್ ಬಿಡುಗಡೆ

ಈ ವೆರಿಯೆಂಟ್ ನಲ್ಲಿ ಸಿಂಗಲ್ ಝೋನ್ ಕ್ಲೈಮೇಂಟ್ ಕಂಟ್ರೋಲ್ ಸಿಸ್ಟಂ, ವೈರ್‌ಲೆಸ್ ಚಾರ್ಜಿಂಗ್‌ನೊಂದಿಗೆ ಆಡಿ ಫೋನ್‌ಬಾಕ್ಸ್ ಲೈಟ್, ಆರು ಏರ್‌ಬ್ಯಾಗ್‌ಗಳು ಮತ್ತು ಸಿಂಗಲ್ ಕಲರ್ ಆಂಬಿಯೆಂಟ್ ಲೈಟಿಂಗ್ ಅಮನ್ ಇತರವುಗಳಿವೆ. ಇನ್ನು ಆಡಿ ಎ4 ಪ್ರೀಮಿಯಂನಲ್ಲಿ ಡೇಟೈಮ್ ರನ್ನಿಂಗ್ ಲೈಟ್‌ಗಳು (DRL ಗಳು), LED ರೇರ್ ಕಾಂಬಿನೆಷನ್ ಲೈಟ್, ಗ್ಲಾಸ್ ಸನ್ ರೂಫ್, ರಿಯರ್ ವ್ಯೂ ಕ್ಯಾಮೆರಾ ಮತ್ತು ಆಡಿ ಡ್ರೈವ್ ಆಯ್ಕೆಯೊಂದಿಗೆ LED ಹೆಡ್‌ಲೈಟ್‌ಗಳನ್ನು ಸಹ ಒಳಗೊಂಡಿದೆ.

ಭಾರತದಲ್ಲಿ ಹೊಸ Audi A4 Premium ವೆರಿಯೆಂಟ್ ಬಿಡುಗಡೆ

ಆಡಿ ಎ4 ಬೇಸ್ ವೆರಿಯೆಂಟ್ ಭಾರತದಲ್ಲಿ ಸಿಬಿಯುಯಾಗಿ ನೀಡಲಾಗುವ ಆಡಿ ಕ್ಯೂ2 ಗಿಂತ ಹೆಚ್ಚಿನ ವೈಶಿಷ್ಟ್ಯಗಳನ್ನು ಸ್ಟ್ಯಾಂಡರ್ಡ್ ನೀಡುತ್ತದೆ. ಸ್ಟ್ಯಾಂಡರ್ಡ್ ವೈಶಿಷ್ಟ್ಯಗಳ ಪಟ್ಟಿಯು ಎಲೆಕ್ಟ್ರಿಕ್ ಆಗಿ ಸರಿಹೊಂದಿಸಬಹುದಾದ ಮುಂಭಾಗದ ಸೀಟುಗಳು, ಆಟೋ ಫೋಲ್ಡಿಂಗ್ ಮತ್ತು ಹೀಟೆಡ್ ವಿಂಗ್ ಮಿರರ್‌ಗಳು, ಆಂಟಿ-ಗ್ಲೇರ್ ಲೆಥೆರೆಟ್ ಅಪ್ಹೋಲ್ಸ್ಟರಿ, ಮುಂಭಾಗದ ಸೀಟ್‌ಗಳಿಗೆ 4-ವೇ ಲುಂಬರ್ ಸಪೋರ್ಟ್, ಆಟೋ ಡಿಮ್ಮಿಂಗ್‌ನೊಂದಿಗೆ ಫ್ರೇಮ್‌ಲೆಸ್ ಇಂಟೀರಿಯರ್ ಮಿರರ್‌ಗಳು ಮತ್ತು ಸ್ಪೀಡ್ ಲಿಮಿಟರ್ ಅನ್ನು ಒಳಗೊಂಡಿದೆ.

ಭಾರತದಲ್ಲಿ ಹೊಸ Audi A4 Premium ವೆರಿಯೆಂಟ್ ಬಿಡುಗಡೆ

ಇನ್ನು ಆಡಿ ಇಂಡಿಯಾ ಕಂಪನಿಯು ತನ್ನ ನವೀಕರಿಸಿದ ಕ್ಯೂ7 ಎಸ್‍ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಈ ಹೊಸ ಆಡಿ ಕ್ಯೂ7(Audi Q7) ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಮುಂದಿನ ವರ್ಷದ ಜನವರಿಯಲ್ಲಿ ಬಿಡುಗಡೆಯಾಗಲಿದೆ.

ಭಾರತದಲ್ಲಿ ಹೊಸ Audi A4 Premium ವೆರಿಯೆಂಟ್ ಬಿಡುಗಡೆ

ಈ ವರ್ಷದ ಏಪ್ರಿಲ್ ತಿಂಗಳಿನಲ್ಲಿ ಬಿಎಸ್6 ಮಾಲಿನ್ಯ ನಿಯಮ ಜಾರಿಯಾಗುವ ವೇಳೆ ಈ ಆಡಿ ಕ್ಯೂ7 ಎಸ್‍ಯುವಿಯನ್ನು ಸ್ಥಗಿತಗೊಳಿತು. ಹೊಸ 2022ರ ಆಡಿ ಕ್ಯೂ7 ಫೇಸ್‌ಲಿಫ್ಟ್ ಗಮನಾರ್ಹವಾದ ಕಾಸ್ಮೆಟಿಕ್ ಬದಲಾವಣೆಗಳಿಗೆ ಸಾಕ್ಷಿಯಾಗಲಿದೆ. ಈ ಹೊಸ ಆಡಿ ಕ್ಯೂ7 ಎಸ್‍ಯುವಿಯಲ್ಲಿ 3.0 ಲೀಟರ್ ವಿ6 ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್‌ ಅನ್ನು ಹೊಂದಿದೆ. ಈ ಎಂಜಿನ್ 48ವಿ ಮೈಲ್ಡ್ ಹೈಬ್ರಿಡ್ ಸಿಸ್ಟಮ್‌ನೊಂದಿಗೆ ಬೂಟ್ ಮಾಡಲಾದ ಮೋಟಾರ್ ಅನ್ನು ಹೊಂದಿದೆ.

ಭಾರತದಲ್ಲಿ ಹೊಸ Audi A4 Premium ವೆರಿಯೆಂಟ್ ಬಿಡುಗಡೆ

ಈ ಎಂಜಿನ್ 340 ಬಿಹೆಚ್‍ಪಿ ಪವರ್ ಮತ್ತು 500 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 8-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಮತ್ತು ಆಡಿಯ ಕ್ವಾಟ್ರೊ ಎಡಬ್ಲ್ಯುಡಿ ಸಿಸ್ಟಮ್‌ಗೆ ಜೋಡಿಯಾಗಿ ಪವರ್ ಅನ್ನು ಪಡೆಯುತ್ತದೆ. ಇನ್ನು ಈ ಎಸ್‍ಯುವಿಯೊಂದಿಗೆ 2.0 ಲೀಟರ್ 4-ಸಿಲಿಂಡರ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಹೊಂದಿರಬಹುದು. ಈ ಎಂಜಿನ್ 252 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಇಂಡಿಯಾ-ಸ್ಪೆಕ್ ಆವೃತ್ತಿಯು ಆಯಿಲ್ ಬರ್ನರ್ ಅನ್ನು ಹೊಂದಿರುವುದಿಲ್ಲ.

ಭಾರತದಲ್ಲಿ ಹೊಸ Audi A4 Premium ವೆರಿಯೆಂಟ್ ಬಿಡುಗಡೆ

ಹೊಸ ಆಡಿ ಕ್ಯೂ7 ಎಸ್‍ಯುವಿಯು ವಿನ್ಯಾಸ ಬದಲಾವಣೆಗಳ ಬಗ್ಗೆ ಹೇಳುವುದಾದರೆ, ಇದರಲ್ಲಿ ದೊಡ್ಡದಾದ, ಸಿಂಗಲ್ ಫ್ರೇಮ್ ಗ್ರಿಲ್ ಅನ್ನು ಹೊಂದಿದ್ದು ನೇರವಾದ ಸ್ಲ್ಯಾಟ್‌ಗಳು, ಸ್ಪೋರ್ಟಿಯರ್ ಬಂಪರ್ ಎರಡು ಭಾಗಗಳ ಸೈಡ್ ಏರ್ ಇನ್‌ಲೆಟ್‌ಗಳು, ದಪ್ಪ ಕ್ಲಾಡಿಂಗ್ ಮತ್ತು ಎಲ್-ಆಕಾರದ ಏರ್ ಸ್ಪ್ಲಿಟರ್ ಅನ್ನು ಹೊಂದಿರುತ್ತದೆ. ಆಡಿ ಲೇಸರ್ ಲೈಟ್ ನೊಂದಿಗೆ HD ಮ್ಯಾಟ್ರಿಕ್ಸ್ ಎಲ್ಇಡಿ ಒಂದು ಆಯ್ಕೆಯಾಗಿ ಬರುತ್ತದೆ.

ಭಾರತದಲ್ಲಿ ಹೊಸ Audi A4 Premium ವೆರಿಯೆಂಟ್ ಬಿಡುಗಡೆ

ಹೊಸ ಆಡಿ ಎ4 ಪ್ರೀಮಿಯಂ ವೆರಿಯೆಂಟ್ ಭಾರತದಲ್ಲಿ ಹೆಚ್ಚಿನ ಗ್ರಾಹಕರನ್ನು ಸೆಳೆಯಬಹುದು ಎಂದು ನಿರೀಕ್ಷಿಸುತ್ತೇವೆ. ಈ ಆಡಿ ಎ4 ಮಾದರಿಯು ಮರ್ಸಿಡಿಸ್ ಬೆಂಝ್ ಸಿ-ಕ್ಲಾಸ್, ಬಿಎಂಡಬ್ಲ್ಯು 3 ಸೀರಿಸ್, ಜಾಗ್ವಾರ್ XE ಮತ್ತು ವೊಲ್ವೊ ಎಸ್60 ಕಾರುಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
Read more on ಆಡಿ audi
English summary
Audi launched new premium variant to the a4 sedan lineup details
Story first published: Monday, December 6, 2021, 19:47 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X