ಮತ್ತೊಂದು ಐಷಾರಾಮಿ ಎಲೆಕ್ಟ್ರಿಕ್ ಕಾರು ಬಿಡುಗಡೆಗೊಳಿಸಿದ Audi

ಜರ್ಮನಿ ಮೂಲದ ಐಷಾರಾಮಿ ಕಾರು ತಯಾರಕ ಕಂಪನಿಯಾದ Audi (Audi) ದೇಶಿಯ ಮಾರುಕಟ್ಟೆಯಲ್ಲಿ ತನ್ನ ನಾಲ್ಕು ಡೋರುಗಳ e-tron GT (e-tron GT) ಎಲೆಕ್ಟ್ರಿಕ್ ಕಾರ್ ಅನ್ನು ಬಿಡುಗಡೆಗೊಳಿಸಿದೆ. Audi ಕಂಪನಿಯು ಈ ಕಾರಿನ ಬುಕ್ಕಿಂಗ್ ಗಳನ್ನು ಈಗಾಗಲೇ ಆರಂಭಿಸಿದೆ.

ಮತ್ತೊಂದು ಐಷಾರಾಮಿ ಎಲೆಕ್ಟ್ರಿಕ್ ಕಾರು ಬಿಡುಗಡೆಗೊಳಿಸಿದ Audi

e-tron ಕ್ವಾಟ್ರೊ ಮೂಲ ಮಾದರಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ. 1.80 ಕೋಟಿಗಳಾದರೆ, ಟಾಪ್ ಎಂಡ್ ಆರ್‌ಎಸ್ (RS) ಮಾದರಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ. 2.05 ಕೋಟಿಗಳಾಗಿದೆ. ಕೆಲವು ತಿಂಗಳ ಹಿಂದೆ e-tron ಎಸ್‌ಯುವಿ ಹಾಗೂ e-tron ಸ್ಪೋರ್ಟ್‌ ಬ್ಯಾಕ್ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆಗೊಳಿಸಿದ್ದ Audi ಕಂಪನಿಯು ಈಗ e-tron ಮೂಲಕ ಭಾರತದಲ್ಲಿ ತನ್ನ ಮೂರನೇ ಎಲೆಕ್ಟ್ರಿಕ್ ಕಾರ್ ಅನ್ನು ಬಿಡುಗಡೆಗೊಳಿಸಿದೆ.

ಮತ್ತೊಂದು ಐಷಾರಾಮಿ ಎಲೆಕ್ಟ್ರಿಕ್ ಕಾರು ಬಿಡುಗಡೆಗೊಳಿಸಿದ Audi

ಈ ಕಾರ್ ಅನ್ನು ಕಂಪ್ಲೀಟ್ಲಿ ಬಿಲ್ಟ್ ಯುನಿಟ್ (ಸಿಬಿಯು) ಆಗಿ ಮಾರಾಟ ಮಾಡಲಾಗುತ್ತದೆ. ಜರ್ಮನಿಯ Audi ಬೊಲಿಂಗರ್ ಹಾಫ್ ಘಟಕದಲ್ಲಿ ಈ ಕಾರನ್ನು ಉತ್ಪಾದಿಸಲಾಗಿದೆ. Audi e-tron GT ಈ ವರ್ಷದ ಫೆಬ್ರವರಿ ತಿಂಗಳಿನಲ್ಲಿ ಜಾಗತಿಕ ಮಟ್ಟದಲ್ಲಿ ಬಿಡುಗಡೆಯಾಯಿತು.

ಮತ್ತೊಂದು ಐಷಾರಾಮಿ ಎಲೆಕ್ಟ್ರಿಕ್ ಕಾರು ಬಿಡುಗಡೆಗೊಳಿಸಿದ Audi

e-tron GT ಕೂಪೆ ಕಾರ್ ಅನ್ನು ಇ-ಟ್ರಾನ್ ಹಾಗೂ ಆರ್‌ಎಸ್ ಇ-ಟ್ರಾನ್ ಎಂಬ ಎರಡು ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತದೆ. ಈ ಎಲೆಕ್ಟ್ರಿಕ್ ಕಾರು ಗ್ರಿಲ್ ಬದಲಿಗೆ ಸಿಗ್ನೇಚರ್ ಇ-ಟ್ರಾನ್ ಪ್ಯಾಟರ್ನ್ ಪ್ಯಾನಲ್ ಅನ್ನು ಹೊಂದಿದ್ದು, ಬಾನೆಟ್‌ನಲ್ಲಿ ದಪ್ಪ ರೇಖೆ ಹಾಗೂ ದೊಡ್ಡ ಇಂಡೆಂಟೇಶನ್ ಗಳನ್ನು ನೀಡಲಾಗಿದೆ.

ಮತ್ತೊಂದು ಐಷಾರಾಮಿ ಎಲೆಕ್ಟ್ರಿಕ್ ಕಾರು ಬಿಡುಗಡೆಗೊಳಿಸಿದ Audi

ಮ್ಯಾಟ್ರಿಕ್ಸ್ ಎಲ್‌ಇಡಿ ಹೆಡ್‌ಲೈಟ್‌ಗಳನ್ನು ಆರ್‌ಎಸ್ ಮಾದರಿಯಲ್ಲಿ ಸ್ಟ್ಯಾಂಡರ್ಡ್ ಆಗಿ ನೀಡಲಾಗಿದ್ದರೂ, ಸಾಮಾನ್ಯ ಇ-ಟ್ರಾನ್‌ ಮಾದರಿಯಲ್ಲಿ ಆಯ್ಕೆಯಾಗಿ ಲಭ್ಯವಿದೆ. ಆದರೆ Audi ಲೇಸರ್ ಲೈಟ್ ಎರಡೂ ಮಾದರಿಗಳಲ್ಲಿ ಆಯ್ಕೆಯಾಗಿ ಲಭ್ಯವಿರಲಿದೆ.

ಮತ್ತೊಂದು ಐಷಾರಾಮಿ ಎಲೆಕ್ಟ್ರಿಕ್ ಕಾರು ಬಿಡುಗಡೆಗೊಳಿಸಿದ Audi

Audi e-tron GT 19 ಇಂಚಿನ ಅಲಾಯ್ ವ್ಹೀಲ್ ಗಳನ್ನು ಹೊಂದಿದೆ. ಗ್ರಾಹಕರು ಈ ವ್ಹೀಲ್ ಗಳನ್ನು 21 ಇಂಚಿನ ಅಲಾಯ್ ವ್ಹೀಲ್ ಗಳಿಗೆ ಪರಿವರ್ತಿಸಬಹುದು. ಈ ಕಾರಿನ ಹಿಂಭಾಗದಲ್ಲಿ ಬಾಣದ ಆಕಾರದ ಎಲ್ಇಡಿ ಲೈಟ್ ಹಾಗೂ ಸಿಗ್ನೇಚರ್ ಎಂಡ್ ಟು ಎಂಡ್ ಎಲ್ಇಡಿ ಟೇಲ್‌ಲ್ಯಾಂಪ್ ಗಳನ್ನು ನೀಡಲಾಗಿದೆ.

ಮತ್ತೊಂದು ಐಷಾರಾಮಿ ಎಲೆಕ್ಟ್ರಿಕ್ ಕಾರು ಬಿಡುಗಡೆಗೊಳಿಸಿದ Audi

Audi e-tron GT ಕಾರು 4,989 ಎಂಎಂ ಉದ್ದ, 1,964 ಎಂಎಂ ಅಗಲ, 1,418 ಎಂಎಂ ಎತ್ತರ ಹಾಗೂ 2,903 ಎಂಎಂ ವ್ಹೀಲ್‌ಬೇಸ್ ಅನ್ನು ಹೊಂದಿದೆ. ಈ ಕಾರು ಐಬಿಜ್ ವೈಟ್, ಅಜುರೆ ಬ್ಲೂ, ಫ್ಲೋರಿಸ್ಟ್ ಸಿಲ್ವರ್, ಕೆಮೊರಾ ಗ್ರೇ, ಮಿಥೋಸ್ ಬ್ಲಾಕ್, ಸುಜುಕಿ ಗ್ರೇ, ಟ್ಯಾಕ್ಟಿಕಲ್ ಗ್ರೀನ್, ಟ್ಯಾಂಗೋ ರೆಡ್ ಹಾಗೂ ಡೇಟೋನಾ ಗ್ರೇ ಎಂಬ ಒಂಬತ್ತು ಬಣ್ಣಗಳಲ್ಲಿ ಲಭ್ಯವಿದೆ.

ಮತ್ತೊಂದು ಐಷಾರಾಮಿ ಎಲೆಕ್ಟ್ರಿಕ್ ಕಾರು ಬಿಡುಗಡೆಗೊಳಿಸಿದ Audi

Audi e-tron GT ಕಾರಿನ ಒಳಗೆ 5 ಸೀಟಿನ ಕ್ಯಾಬಿನ್‌ ಅನ್ನು ಉತ್ತಮವಾಗಿ ವಿನ್ಯಾಸಗೊಳಿಸಲಾಗಿದೆ. ಇದರಲ್ಲಿ 12.3 ಇಂಚಿನ ದೊಡ್ಡ ವರ್ಚುವಲ್ ಕಾಕ್‌ಪಿಟ್ ಕನ್ಸೋಲ್ ಹಾಗೂ 10.1 ಇಂಚಿನ ಎಂಎಂಐ ಟಚ್‌ಸ್ಕ್ರೀನ್ ಡಿಸ್‌ಪ್ಲೇಗಳನ್ನು ನೀಡಲಾಗಿದೆ.

ಮತ್ತೊಂದು ಐಷಾರಾಮಿ ಎಲೆಕ್ಟ್ರಿಕ್ ಕಾರು ಬಿಡುಗಡೆಗೊಳಿಸಿದ Audi

e-tron ಕಾರಿನ ಕ್ಯಾಬಿನ್ ವಿನ್ಯಾಸವು ಕ್ಲಾಸಿಕ್ ಗ್ರ್ಯಾನ್ ಟುರಿಸ್ಮೊಗೆ ಅನುಗುಣವಾಗಿದೆ ಎಂಬುದು ಗಮನಾರ್ಹ. ಫ್ರಂಟ್ ಸೀಟುಗಳನ್ನು ವಿಶಾಲವಾದ ಸೆಂಟರ್ ಕನ್ಸೋಲ್‌ನಿಂದ ಬೇರ್ಪಡಿಸಿದ ಕ್ರೀಡಾ ಸ್ಥಾನದಲ್ಲಿ ಇರಿಸಲಾಗಿದೆ. ಈ ಸಿಸ್ಟಂ ನ್ಯಾಚುರಲ್ ವಾಯ್ಸ್ ಕಮ್ಯಾಂಡ್ ಹಾಗೂ Audi ಕನೆಕ್ಟೆಡ್ ಸರ್ವೀಸ್ ಗಳನ್ನು ಬೆಂಬಲಿಸುತ್ತದೆ.

ಮತ್ತೊಂದು ಐಷಾರಾಮಿ ಎಲೆಕ್ಟ್ರಿಕ್ ಕಾರು ಬಿಡುಗಡೆಗೊಳಿಸಿದ Audi

ಇನ್ನು ಎಂಎಂಐ ನ್ಯಾವಿಗೇಷನ್ ಪ್ಲಸ್ ವೈ-ಫೈ ಹಾಟ್‌ಸ್ಪಾಟ್ ಮೂಲಕ e-tron ನಿರ್ದಿಷ್ಟ ಕಾರ್ಯಗಳನ್ನು ನಿರ್ವಹಿಸುತ್ತದೆ. Audi ಕಂಪನಿಯು ತನ್ನ e-tron GT ಕಾರಿನ ಗುಣವನ್ನು ಇನ್ನಷ್ಟು ಹೆಚ್ಚಿಸಲು ಉತ್ತಮವಾದ ಎಕ್ಸಾಸ್ಟ್ ಸೌಂಡ್ ಗಳನ್ನು ಒದಗಿಸುವ ಕಸ್ಟಮ್ ಸಾಫ್ಟ್‌ವೇರ್ ಅನ್ನು ನೀಡುವುದಾಗಿ ಘೋಷಿಸಿದೆ.

ಮತ್ತೊಂದು ಐಷಾರಾಮಿ ಎಲೆಕ್ಟ್ರಿಕ್ ಕಾರು ಬಿಡುಗಡೆಗೊಳಿಸಿದ Audi

ಕಂಪನಿಯು ಈ ಸಿಸ್ಟಂ ಅನ್ನು AVAS (ಅಕೌಸ್ಟಿಕ್ ವೆಹಿಕಲ್ ಅಲರ್ಟ್ ಸಿಸ್ಟಮ್) ಎಂದು ಕರೆಯುತ್ತದೆ. ಈ ಸಿಸ್ಟಂ ಕಾರಿನ ಹೊರ ಭಾಗ ಹಾಗೂ ಒಳ ಭಾಗದಲ್ಲಿಅಳವಡಿಸಲಾಗಿರುವ ಸ್ಪೀಕರ್‌ಗಳನ್ನು ಬಳಸಿಕೊಂಡು ವಿಶೇಷ ಬಾಹ್ಯ ಹಾಗೂ ಆಂತರಿಕ ಶಬ್ದಗಳನ್ನು ಸೃಷ್ಟಿಸುತ್ತದೆ.

ಮತ್ತೊಂದು ಐಷಾರಾಮಿ ಎಲೆಕ್ಟ್ರಿಕ್ ಕಾರು ಬಿಡುಗಡೆಗೊಳಿಸಿದ Audi

ಇದರಲ್ಲಿ ಕಂಫರ್ಟ್ ಹಾಗೂ ಡೈನಾಮಿಕ್ ಎಂಬ ಎರಡು ಎರಡು ವಿಧಾನಗಳಿವೆ. ಮೊದಲನೆಯದರಲ್ಲಿ ಬಾಹ್ಯ ಶಬ್ದವು ಸಂಪೂರ್ಣವಾಗಿದ್ದು, ಉತ್ತಮ ಗುಣಮಟ್ಟದಿಂದ ಕೂಡಿದೆ. ಡೈನಾಮಿಕ್ ಮೋಡ್‌ನಲ್ಲಿ ಶಬ್ದವು ಹೆಚ್ಚು ಶಕ್ತಿಯುತವಾಗಿದ್ದು, ಕ್ಯಾಬಿನ್‌ನೊಳಗೆ ತಲುಪುತ್ತದೆ ಎಂದು Audi ಕಂಪನಿ ಹೇಳಿದೆ.

ಮತ್ತೊಂದು ಐಷಾರಾಮಿ ಎಲೆಕ್ಟ್ರಿಕ್ ಕಾರು ಬಿಡುಗಡೆಗೊಳಿಸಿದ Audi

Audi e-tron GT ಪ್ರತಿ ಆಕ್ಸಲ್‌ನಲ್ಲಿ ಎರಡು ಸ್ಟೆಬಲ್ ಸಿಂಕ್ರೊನಸ್ ಮಿಶಿನ್ (ಪಿಎಸ್‌ಎಂ) ಮೋಟರ್‌ಗಳನ್ನು ನೀಡುತ್ತದೆ. ಹಿಂದಿನ ಆಕ್ಸಲ್ ಅನ್ನು ಎರಡು ಸ್ಪೀಡ್ ಟ್ರಾನ್ಸ್‌ಮಿಷನ್ ಎಲೆಕ್ಟ್ರಿಕ್ ಆಲ್ ವ್ಹೀಲ್ ಡ್ರೈವ್‌ಗೆ ಜೋಡಿಸಲಾಗಿದೆ.

ಮತ್ತೊಂದು ಐಷಾರಾಮಿ ಎಲೆಕ್ಟ್ರಿಕ್ ಕಾರು ಬಿಡುಗಡೆಗೊಳಿಸಿದ Audi

ಈ ಎಲೆಕ್ಟ್ರಿಕ್ ಕಾರಿನಲ್ಲಿ 85 ಕಿ.ವ್ಯಾ ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್‌ ಅಳವಡಿಸಲಾಗಿದೆ. ಈ ಬ್ಯಾಟರಿ ಪ್ಯಾಕ್, 270 ಕಿ.ವ್ಯಾವರೆಗಿನ ಡಿಸಿ ಚಾರ್ಜಿಂಗ್ ಅನ್ನು ಸಕ್ರಿಯಗೊಳಿಸುವ 800 ವೋಲ್ಟ್ ತಂತ್ರಜ್ಞಾನವನ್ನು ಬೆಂಬಲಿಸುತ್ತದೆ ಎಂದು Audi ಕಂಪನಿ ಹೇಳಿದೆ.

ಮತ್ತೊಂದು ಐಷಾರಾಮಿ ಎಲೆಕ್ಟ್ರಿಕ್ ಕಾರು ಬಿಡುಗಡೆಗೊಳಿಸಿದ Audi

ಸ್ಟ್ಯಾಂಡರ್ಡ್ e-tron GT ಕ್ವಾಟ್ರೊ ಮಾದರಿಯು 350 ಕಿ.ವ್ಯಾ ಅಥವಾ 469 ಬಿಹೆಚ್‌ಪಿ ಪವರ್ ಹಾಗೂ ಗರಿಷ್ಠ ಟಾರ್ಕ್ 630 ಎನ್ಎಂ ಉತ್ಪಾದಿಸುತ್ತದೆ. ಇನ್ನು e-tron GT RS ಮಾದರಿಯು 490 ಕಿ.ವ್ಯಾ ಅಥವಾ 590 ಬಿಹೆಚ್‌ಪಿ ಪವರ್ ಹಾಗೂ 830 ಎನ್ಎಂ ಗರಿಷ್ಠ ಟಾರ್ಕ್ ಉತ್ಪಾದಿಸುತ್ತದೆ.

ಮತ್ತೊಂದು ಐಷಾರಾಮಿ ಎಲೆಕ್ಟ್ರಿಕ್ ಕಾರು ಬಿಡುಗಡೆಗೊಳಿಸಿದ Audi

e-tron GT ಕ್ವಾಟ್ರೊ ಮಾದರಿಯು ಪೂರ್ತಿಯಾಗಿ ಚಾರ್ಜ್ ಆದ ನಂತರ 500 ಕಿ.ಮೀಗಳವರೆಗೆ ಚಲಿಸಿದರೆ e-tron GT RS ಮಾದರಿಯು ಪೂರ್ತಿಯಾಗಿ ಚಾರ್ಜ್ ಆದ ನಂತರ 481 ಕಿ.ಮೀಗಳವರೆಗೆ ಚಲಿಸುತ್ತದೆ ಎಂದು ಹೇಳಲಾಗಿದೆ.

ಮತ್ತೊಂದು ಐಷಾರಾಮಿ ಎಲೆಕ್ಟ್ರಿಕ್ ಕಾರು ಬಿಡುಗಡೆಗೊಳಿಸಿದ Audi

e-tron GT ಕ್ವಾಟ್ರೊ ಮಾದರಿಯು 4.1 ಸೆಕೆಂಡುಗಳಲ್ಲಿ 0 - 100 ಕಿ.ಮೀ ವೇಗವನ್ನು ತಲುಪುತ್ತದೆ. ಈ ಮಾದರಿಯ ಗರಿಷ್ಠ ವೇಗ ಪ್ರತಿ ಗಂಟೆಗೆ 245 ಕಿ.ಮೀಗಳಾಗಿದೆ. ಇನ್ನು RS ಮಾದರಿಯು 3.3 ಸೆಕೆಂಡುಗಳಲ್ಲಿ 0 - 100 ಕಿ.ಮೀ ವೇಗವನ್ನು ತಲುಪುತ್ತದೆ. ಈ ಮಾದರಿಯ ಗರಿಷ್ಠ ವೇಗ ಪ್ರತಿ ಗಂಟೆಗೆ 250 ಕಿ.ಮೀಗಳಾಗಿದೆ.

ಮತ್ತೊಂದು ಐಷಾರಾಮಿ ಎಲೆಕ್ಟ್ರಿಕ್ ಕಾರು ಬಿಡುಗಡೆಗೊಳಿಸಿದ Audi

e-tron GT ಕಾರು ಎಸಿ ಹಾಗೂ ಡಿಸಿ ಚಾರ್ಜಿಂಗ್ ಆಯ್ಕೆಗಳನ್ನು ಹೊಂದಿದೆ. 11 ಕಿ.ವ್ಯಾ ಎಸಿ ಚಾರ್ಜರ್ ಮೂಲಕ ಈ ಕಾರ್ ಅನ್ನು 9.5 ಗಂಟೆಗಳಲ್ಲಿ ಅಥವಾ 22 ಕಿ.ವ್ಯಾ ಎಸಿ ಚಾರ್ಜರ್‌ ಮೂಲಕ 5 ಗಂಟೆ 15 ನಿಮಿಷಗಳಲ್ಲಿ ಈ ಕಾರ್ ಅನ್ನು ಕಾರನ್ನು 5 - 80% ವರೆಗೂ ಚಾರ್ಜ್ ಮಾಡಬಹುದು ಎಂದು ಕಂಪನಿ ಹೇಳಿಕೊಂಡಿದೆ. ಇನ್ನು 270 ಕಿ.ವ್ಯಾ ಡಿಸಿ ಚಾರ್ಜರ್‌ ಮೂಲಕ ಈ ಕಾರಿನಲ್ಲಿರುವ ಬ್ಯಾಟರಿಯನ್ನು ಕೇವಲ 22.5 ನಿಮಿಷಗಳಲ್ಲಿ 5 - 80% ವರೆಗೂ ಚಾರ್ಜ್ ಮಾಡಬಹುದು ಎಂದು ಹೇಳಲಾಗಿದೆ.

Most Read Articles

Kannada
Read more on ಆಡಿ audi
English summary
Audi launches e tron gt electric car in indian market details
Story first published: Wednesday, September 22, 2021, 15:24 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X