ಐಷಾರಾಮಿ ಕಾರುಗಳ ಮೇಲೆ ವಿಧಿಸಲಾಗುವ ದುಬಾರಿ ತೆರಿಗೆ ಕಡಿತಗೊಳಿಸುವಂತೆ ಮನವಿ ಮಾಡಿದ Audi

ಭಾರತದಲ್ಲಿ ಐಷಾರಾಮಿ ಕಾರುಗಳ ಮೇಲೆ ವಿಧಿಸಲಾಗುತ್ತಿರುವ ಹೆಚ್ಚಿನ ತೆರಿಗೆ ದರಗಳು ಕಾರು ಮಾರಾಟದ ಮೇಲೆ ಪರಿಣಾಮ ಬೀರುತ್ತಿವೆ ಎಂದು ಐಷಾರಾಮಿ ಕಾರು ತಯಾರಕ ಕಂಪನಿಯಾದ ಆಡಿ (Audi) ಹೇಳಿದೆ. ಐಷಾರಾಮಿ ಕಾರು ತಯಾರಕ ಕಂಪನಿಗಳಿಗೆ ನೆರವು ನೀಡಲು ಸರ್ಕಾರ ಸುಂಕವನ್ನು ಕಡಿತಗೊಳಿಸಬೇಕು ಎಂದು ಆಡಿ ಕಂಪನಿಯು ಮನವಿ ಮಾಡಿದೆ.

ಐಷಾರಾಮಿ ಕಾರುಗಳ ಮೇಲೆ ವಿಧಿಸಲಾಗುವ ದುಬಾರಿ ತೆರಿಗೆ ಕಡಿತಗೊಳಿಸುವಂತೆ ಮನವಿ ಮಾಡಿದ Audi

ಐಷಾರಾಮಿ ಕಾರುಗಳ ವಿಭಾಗದ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಆಡಿ ಕಂಪನಿಯು ದೇಶದಲ್ಲಿ ಐಷಾರಾಮಿ ಕಾರುಗಳ ಪಾಲು 2% ಗಿಂತ ಕಡಿಮೆಯಿದ್ದು, ಕಳೆದ ಒಂದು ದಶಕದಿಂದ ಇದೇ ಪರಿಸ್ಥಿತಿ ಇದೆ ಎಂದು ಹೇಳಿದೆ. ಈ ಬಗ್ಗೆ ಮಾತನಾಡಿರುವ ಆಡಿ ಇಂಡಿಯಾದ ಮುಖ್ಯಸ್ಥ ಬಲ್ಬೀರ್ ಸಿಂಗ್ ಧಿಲ್ಲೋನ್, ಭಾರತದಲ್ಲಿ ನಮ್ಮ ಸಂಪೂರ್ಣ ಸಾಮರ್ಥ್ಯವನ್ನು ಪಡೆಯಲು ನಮಗೆ ಸಾಧ್ಯವಾಗುತ್ತಿಲ್ಲ. ದೇಶದಲ್ಲಿ ಐಷಾರಾಮಿ ಕಾರು ವಿಭಾಗವು ಸ್ಥಬ್ದವಾಗಿದೆ ಎಂದು ಹೇಳಿದರು.

ಐಷಾರಾಮಿ ಕಾರುಗಳ ಮೇಲೆ ವಿಧಿಸಲಾಗುವ ದುಬಾರಿ ತೆರಿಗೆ ಕಡಿತಗೊಳಿಸುವಂತೆ ಮನವಿ ಮಾಡಿದ Audi

ಇತರ ಕಾರು ವಿಭಾಗಗಳು ವೇಗವಾಗಿ ಬೆಳೆಯುತ್ತಿರುವ ಸಂದರ್ಭದಲ್ಲಿ ಐಷಾರಾಮಿ ಕಾರುಗಳ ವಾರ್ಷಿಕ ಮಾರಾಟವು 40,000 ಯುನಿಟ್‌ಗಳನ್ನು ಮೀರಿ ಬೆಳೆಯುತ್ತಿಲ್ಲ ಎಂದು ಅವರು ಹೇಳಿದರು. ಕರೋನಾ ಸಾಂಕ್ರಾಮಿಕ ಹಾಗೂ ಸೆಮಿ ಕಂಡಕ್ಟರ್ ಚಿಪ್‌ಗಳ ಕೊರತೆಯಿಂದಾಗಿ ಈ ವರ್ಷ ಮಾರಾಟ ಅಂಕಿ ಅಂಶವು ಇನ್ನಷ್ಟು ಕಡಿಮೆಯಾಗಬಹುದು ಎಂದು ಅವರು ಹೇಳಿದರು.

ಐಷಾರಾಮಿ ಕಾರುಗಳ ಮೇಲೆ ವಿಧಿಸಲಾಗುವ ದುಬಾರಿ ತೆರಿಗೆ ಕಡಿತಗೊಳಿಸುವಂತೆ ಮನವಿ ಮಾಡಿದ Audi

ತೆರಿಗೆಯ ಹೊರೆಯು ಈ ವಿಭಾಗದ ವಾಹನಗಳನ್ನು ಗ್ರಾಹಕರ ವ್ಯಾಪ್ತಿಯಿಂದ ದೂರವಿಟ್ಟಿದೆ. ಇದರಿಂದ ಐಷಾರಾಮಿ ಕಾರುಗಳ ಮಾರಾಟವು ಹೆಚ್ಚಾಗುತ್ತಿಲ್ಲ ಎಂದು ಬಲ್ಬೀರ್ ಸಿಂಗ್ ಧಿಲ್ಲೋನ್ ಹೇಳಿದರು. ಭಾರತದಲ್ಲಿ ಐಷಾರಾಮಿ ಕಾರುಗಳ ಮೇಲೆ 28% ನಷ್ಟು ಸರಕು ಹಾಗೂ ಸೇವಾ ತೆರಿಗೆ (ಜಿಎಸ್‌ಟಿ) ವಿಧಿಸಲಾಗುತ್ತದೆ. ಇದಲ್ಲದೆ, ಸೆಡಾನ್‌ ಕಾರುಗಳ ಮೇಲೆ 20% ಹಾಗೂ ಎಸ್‌ಯು‌ವಿಗಳ ಮೇಲೆ 22% ಹೆಚ್ಚುವರಿ ಸೆಸ್ ವಿಧಿಸಲಾಗುತ್ತದೆ.

ಐಷಾರಾಮಿ ಕಾರುಗಳ ಮೇಲೆ ವಿಧಿಸಲಾಗುವ ದುಬಾರಿ ತೆರಿಗೆ ಕಡಿತಗೊಳಿಸುವಂತೆ ಮನವಿ ಮಾಡಿದ Audi

ಇದರಿಂದ ಐಷಾರಾಮಿ ಕಾರುಗಳ ಮೇಲಿನ ತೆರಿಗೆಯು ಕಾರಿನ ವೆಚ್ಚದ 50% ನಷ್ಟು ಆಗುತ್ತದೆ. ಐಷಾರಾಮಿ ಕಾರುಗಳ ಮೇಲೆ ಏಕ ರೂಪದ ತೆರಿಗೆ ವಿಧಿಸುವ ಸಂಬಂಧ ನಿಯಮ ರೂಪಿಸುವಂತೆ ಬಲ್ಬೀರ್ ಸಿಂಗ್ ಧಿಲ್ಲೋನ್ ಸರ್ಕಾರವನ್ನು ಒತ್ತಾಯಿಸಿದರು. ಭಾರತದಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವ ಕಾರುಗಳು ಇತರ ದೇಶಗಳಲ್ಲಿ ಕೈಗೆಟುಕುವ ಬೆಲೆಯಲ್ಲಿ ಮಾರಾಟವಾಗುತ್ತಿವೆ ಎಂದು ಕಾರು ಗ್ರಾಹಕರಿಗೆ ಚೆನ್ನಾಗಿ ತಿಳಿದಿದೆ ಎಂದು ಅವರು ಹೇಳಿದರು.

ಐಷಾರಾಮಿ ಕಾರುಗಳ ಮೇಲೆ ವಿಧಿಸಲಾಗುವ ದುಬಾರಿ ತೆರಿಗೆ ಕಡಿತಗೊಳಿಸುವಂತೆ ಮನವಿ ಮಾಡಿದ Audi

ಕಾರುಗಳ ಮೇಲೆ ಅತಿ ಹೆಚ್ಚು ತೆರಿಗೆ ವಿಧಿಸುವ ದೇಶಗಳಲ್ಲಿ ಭಾರತವೂ ಸೇರಿದೆ. ಹೆಚ್ಚಿನ ವಾಹನ ವೆಚ್ಚವು ಗ್ರಾಹಕರನ್ನು ಐಷಾರಾಮಿ ವಿಭಾಗಕ್ಕೆ ಅಪ್‌ಗ್ರೇಡ್ ಮಾಡುವುದನ್ನು ತಡೆಯುತ್ತದೆ ಎಂದು ಅವರು ಹೇಳಿದರು. ಆಡಿ ಇಂಡಿಯಾ ಶೀಘ್ರದಲ್ಲೇ ದೇಶಿಯ ಮಾರುಕಟ್ಟೆಯಲ್ಲಿ ತನ್ನ Q5 ಫೇಸ್‌ಲಿಫ್ಟ್ ಕಾರ್ ಅನ್ನು ಬಿಡುಗಡೆಗೊಳಿಸಲಿದೆ. ಕಂಪನಿಯು ಈ ಕಾರ್ ಅನ್ನು ಭಾರತದಲ್ಲಿಯೇ ಉತ್ಪಾದಿಸುತ್ತಿದೆ.

ಐಷಾರಾಮಿ ಕಾರುಗಳ ಮೇಲೆ ವಿಧಿಸಲಾಗುವ ದುಬಾರಿ ತೆರಿಗೆ ಕಡಿತಗೊಳಿಸುವಂತೆ ಮನವಿ ಮಾಡಿದ Audi

ಹೊಸ Audi Q5 ಕಾರ್ ಅನ್ನು ಔರಂಗಾಬಾದ್‌ನಲ್ಲಿರುವ ಕಂಪನಿಯ ಉತ್ಪಾದನಾ ಘಟಕದಲ್ಲಿ ಉತ್ಪಾದಿಸಲಾಗುತ್ತಿದೆ. ಈ ಕಾರಿನ ಅಧಿಕೃತ ಬಿಡುಗಡೆ ದಿನಾಂಕವನ್ನು ಶೀಘ್ರದಲ್ಲೇ ಬಹಿರಂಗಪಡಿಸಲಾಗುವುದು. ಕಂಪನಿಯು ಈಗ ಹೊಸ Q5 ಎಸ್‌ಯು‌ವಿಯ ಬುಕ್ಕಿಂಗ್ ಗಳನ್ನು ಆರಂಭಿಸಿದೆ. ಈ ಎಸ್‌ಯು‌ವಿಯನ್ನು ಕಂಪನಿಯ ಅಧಿಕೃತ ಡೀಲರ್‌ಶಿಪ್ ಅಥವಾ ವೆಬ್‌ಸೈಟ್‌ ಮೂಲಕ ಬುಕ್ ಮಾಡಬಹುದು.

ಐಷಾರಾಮಿ ಕಾರುಗಳ ಮೇಲೆ ವಿಧಿಸಲಾಗುವ ದುಬಾರಿ ತೆರಿಗೆ ಕಡಿತಗೊಳಿಸುವಂತೆ ಮನವಿ ಮಾಡಿದ Audi

ಹೊಸ Audi Q5 ಕಾರ್ ಅನ್ನು 12 V ಸೌಮ್ಯ ಹೈಬ್ರಿಡ್ ವ್ಯವಸ್ಥೆಯೊಂದಿಗೆ ಪೆಟ್ರೋಲ್ ಎಂಜಿನ್‌ನಲ್ಲಿ ಮಾತ್ರ ಮಾರಾಟ ಮಾಡಲಾಗುವುದು. ಆಡಿ A6 ನಂತೆ, 2 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಇದರಲ್ಲಿ ನೀಡಬಹುದು. ಈ ಎಂಜಿನ್ 245 ಬಿ‌ಹೆಚ್‌ಪಿ ಪವರ್ ಹಾಗೂ 370 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಟ್ರಾನ್ಸ್ ಮಿಷನ್'ಗಾಗಿ 7 ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ ಆಲ್ ವ್ಹೀಲ್ ಡ್ರೈವ್ ಸಿಸ್ಟಂಗೆ ಜೋಡಿಸಲಾಗಿದೆ.

ಐಷಾರಾಮಿ ಕಾರುಗಳ ಮೇಲೆ ವಿಧಿಸಲಾಗುವ ದುಬಾರಿ ತೆರಿಗೆ ಕಡಿತಗೊಳಿಸುವಂತೆ ಮನವಿ ಮಾಡಿದ Audi

ಆಡಿ ಕ್ಯೂ 5 ಫೇಸ್‌ಲಿಫ್ಟ್ ಎಸ್‍ಯುವಿಯ ವಿನ್ಯಾಸದ ಬಗ್ಗೆ ಹೇಳುವುದಾದರೆ, ಈ ಎಸ್‍ಯುವಿಯ ಮುಂಭಾಗದಲ್ಲಿ ಹೊಸ ಎಲ್ಇಡಿ ಹೆಡ್‌ಲ್ಯಾಂಪ್‌, ಸಣ್ಣ ಗ್ರಿಲ್ ಹಾಗೂ ನವೀಕರಿಸಿದ ಹೆಚ್ಚು ಸ್ಪೋರ್ಟಿ ಲುಕ್ ಹೊಂದಿರುವ ಬಂಪರ್ ನೀಡಲಾಗಿದೆ. ಈ ಎಸ್‍ಯುವಿಯ ಪ್ರೊಫೈಲ್‌ನ ಬದಲಾವಣೆಗಳು ಮರು ವಿನ್ಯಾಸಗೊಳಿಸಲಾದ ಸೈಡ್ ಸ್ಕರ್ಟ್‌ಗಳಿಗೆ ಸೀಮಿತವಾಗಿರುತ್ತವೆ ಎಂದು ಹೇಳಲಾಗಿದೆ.

ಐಷಾರಾಮಿ ಕಾರುಗಳ ಮೇಲೆ ವಿಧಿಸಲಾಗುವ ದುಬಾರಿ ತೆರಿಗೆ ಕಡಿತಗೊಳಿಸುವಂತೆ ಮನವಿ ಮಾಡಿದ Audi

ಈ ಐಷಾರಾಮಿ ಎಸ್‍ಯುವಿಯ ಹಿಂಭಾಗದಲ್ಲಿ ಹೊಸ ಡಿಫ್ಯೂಸರ್ ಹಾಗೂ ಸೂಕ್ಷ್ಮವಾಗಿ ನವೀಕರಿಸಿದ ಟೇಲ್‌ಗೇಟ್‌ನೊಂದಿಗೆ ಹೊಸ ಬಂಪರ್ ಅನ್ನು ಅಳವಡಿಸಲಾಗಿದೆ. ಇನ್ನು ಭಾರತದಲ್ಲಿ ಈ ಆಡಿ ಕ್ಯೂ 5 ಫೇಸ್‌ಲಿಫ್ಟ್ ಎಸ್‍ಯುವಿಯನ್ನು ಹೊಸ ಬಣ್ಣಗಳಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ. ಈ ಐಷಾರಾಮಿ ಕಾರಿನ ಡ್ಯಾಶ್‌ಬೋರ್ಡ್‌ನ ವಿನ್ಯಾಸವು ಬಹುತೇಕ ಒಂದೇ ಆಗಿದ್ದು, ದೊಡ್ಡ 10.1-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಪಡೆಯುವ ಸಾಧ್ಯತೆಗಳಿವೆ.

ಐಷಾರಾಮಿ ಕಾರುಗಳ ಮೇಲೆ ವಿಧಿಸಲಾಗುವ ದುಬಾರಿ ತೆರಿಗೆ ಕಡಿತಗೊಳಿಸುವಂತೆ ಮನವಿ ಮಾಡಿದ Audi

ಇದರ ಜೊತೆಗೆ 12.3-ಇಂಚಿನ ಕಾನ್ಫಿಗರ್ ಮಾಡಬಹುದಾದ ಕಲರ್ ಟಿಎಫ್‌ಟಿ ಇನ್ಸ್ ಟ್ರೂಮೆಂಟ್ ಕ್ಲಸ್ಟರ್(ವರ್ಚುವಲ್ ಕಾಕ್‌ಪಿಟ್) ಹೊಂದಿರಲಿದೆ. ಇದು ಹಳೆಯ ಮಾದರಿಗಿಂತ 10 ಪಟ್ಟು ಹೆಚ್ಚು ಕಂಪ್ಯೂಟಿಂಗ್ ಶಕ್ತಿಯನ್ನು ಹೊಂದಿದೆ. ಇದರ ಜೊತೆಗೆ ಹೆಡ್ ಅಪ್ ಡಿಸ್ ಪ್ಲೇ ಹಾಗೂ ಆಂಬಿಯೆಂಟ್ ಲೈಟಿಂಗ್ ಹೊಂದಿರಲಿದೆ. ಹೊಸ ಆಡಿ ಕ್ಯೂ 5 ಎಸ್‍ಯುವಿಯು 360 ಡಿಗ್ರಿ ಪಾರ್ಕಿಂಗ್ ಸೆನ್ಸಾರ್‌, 18 ಇಂಚಿನ ಅಲಾಯ್ ವ್ಹೀಲ್, ಕೀ ಲೆಸ್ ಎಂಟ್ರಿ, ಡ್ಯುಯಲ್ ಏರ್‌ಬ್ಯಾಗ್‌, ಎಬಿಎಸ್, ಇಬಿಡಿ, ಇಎಸ್‌ಪಿ, ಟಿಸಿ ಸೇರಿದಂತೆ ಹಲವು ಸ್ಟ್ಯಾಂಡರ್ಡ್ ಫೀಚರ್'ಗಳನ್ನು ಹೊಂದಿದೆ.

Most Read Articles

Kannada
Read more on ಆಡಿ audi
English summary
Audi requests union government to reduce tax details
Story first published: Friday, November 5, 2021, 18:19 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X