ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ 2021ರ ಆಡಿ ಎ7ಎಲ್ ಕಾರು

ಐಷಾರಾಮಿ ಕಾರು ತಯಾರಕ ಕಂಪನಿಯಾದ ಆಡಿ ತನ್ನ ಹೊಸ ಎ7ಎಲ್ ಕಾರನ್ನು ಚೀನಾದಲ್ಲಿ ನಡೆಯುವ 2021 ಶಾಂಘೈ ಆಟೋ ಶೋನಲ್ಲಿ ಅನಾವರಣಗೊಳಿಸಿದೆ. ಈ ಹೊಸ ಆಡಿ ಎ7ಎಲ್ ಕಾರನ್ನು ಬ್ರ್ಯಾಂಡ್‌ನಚೀನೀ ಪಾಲುದಾರ ಎಸ್‌ಐಸಿ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಲಾಗಿದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ 2021ರ ಆಡಿ ಎ7ಎಲ್ ಕಾರು

ವಿಶ್ವದ ಬಹುತೇಕ ಎಲ್ಲ ಪ್ರಮುಖ ಕಾರು ತಯಾರಕರು ಚೀನಾದಲ್ಲಿ ತಮ್ಮ ಪ್ರಬಲ್ಯವನ್ನು ಸಾಧಿಸಲು ಪ್ರಯತ್ನಿಸುತ್ತಿದೆ.ಆದ್ದರಿಂದ ಚೀನಾದ ಗ್ರಾಹಕರ ಅವಶ್ಯಕತೆಗಳನ್ನು ಪೂರೈಸಲು ನಿರ್ದಿಷ್ಟ ಮಾದರಿಗಳನ್ನು ತಯಾರಿಸಲಾಗುತ್ತದೆ. ಚೀನಾದಲ್ಲಿ ಅನಾವರಣಗೊಂಡ 2021ರ ಆಡಿ ಎ7ಎಲ್ ಕೇವಲ ವಿಸ್ತೃತ-ವೀಲ್‌ಬೇಸ್ ಮಾದರಿಯಲ್ಲ, ಏಕೆಂದರೆ ಇದು ಕೆಲವು ವಿಶಿಷ್ಟ ಗುಣಲಕ್ಷಣಗಳನ್ನು ಹೊಂದಿದೆ. ಅವುಗಳಲ್ಲಿ ಮುಖ್ಯವಾದುದು ಇದು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಕಂಡುಬರುವ ಲಿಫ್ಟ್‌ಬ್ಯಾಕ್ ವಿನ್ಯಾಸಕ್ಕೆ ವಿರುದ್ಧವಾಗಿ ಸಾಮಾನ್ಯ ಸೆಡಾನ್ ಬಾಡಿಸ್ಟೈಲ್ ಮಾದರಿಯಲಿಯು ಲಭ್ಯವಿರುತ್ತದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ 2021ರ ಆಡಿ ಎ7ಎಲ್ ಕಾರು

2021ರ ಆಡಿ ಎ7ಎಲ್ ಅಧಿಕೃತ ಬೂಟ್ ರಚನೆಯನ್ನು ಹೊಂದಿದೆ ಮತ್ತು ಇದು ಒಟ್ಟಾರೆ 5,076 ಎಂಎಂ ಉದ್ದವನ್ನು ಹೊಂದಿದೆ. ಸಾಮಾನ್ಯ ಮಾದರಿಗೆ ಹೋಲಿಸಿದರೆ ವ್ಹೀಲ್‌ಬೇಸ್ 98 ಎಂಎಂ ಹೆಚ್ಚು ಉದ್ದವಿದೆ. ಎ8ಗೆ ಹೋಲಿಸಿದರೆ ಎ7ಎಲ್ ಚಿಕ್ಕದಾಗಿದ್ದರೆ ವ್ಹೀಲ್‌ಬೇಸ್ ಉದ್ದ ಸ್ವಲ್ಪ ಉದ್ದವಾಗಿರುತ್ತದೆ.

MOST READ: ಭಾರತದಲ್ಲಿ ಸೋಲ್ಡ್ ಔಟ್ ಆದ ಮರ್ಸಿಡಿಸ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್‍ಯುವಿ

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ 2021ರ ಆಡಿ ಎ7ಎಲ್ ಕಾರು

ಇನ್ನು ಈ ಹೊಸ ಆಡಿ ಎ7ಎಲ್ ಕಾರಿನ ವಿನ್ಯಾಸವನ್ನು ಆಡಿ ಎ7 ಸ್ಪೋರ್ಟ್‌ಬ್ಯಾಕ್‌ ಮಾದರಿಗೆ ಹೋಲಿಸಿದರೆ ಯಾವುದೇ ಪ್ರಮುಖ ಬದಲಾವಣೆಗಳಿಲ್ಲ. ಈ ಹೊಸ ಕಾರಿನ ಇಂಟಿರಿಯರ್ ನಲ್ಲಿಯು ಕೂಡ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ 2021ರ ಆಡಿ ಎ7ಎಲ್ ಕಾರು

ಹೆಚ್ಚಿದ ವ್ಹೀಲ್‌ಬೇಸ್‌ನಿಂದಾಗಿ ಹಿಂಭಾಗದ ಲೆಗ್ ರೂಂ ಸ್ಪೇಸ್ ಹೆಚ್ಚಾಗುತ್ತದೆ. 2021ರ ಆಡಿ ಎ7ಎಲ್ ಕಾರಿನಲ್ಲಿ ಮೈಲ್ಡ್-ಹೈಬ್ರಿಡ್ ಸಿಸ್ಟಂನೊಂದಿಗೆ 3.0-ಲೀಟರ್ ಟರ್ಬೋಚಾರ್ಜ್ಡ್ ವಿ6 ಎಂಜಿನ್ ಅನ್ನು ಅಳವಡಿಸಲಾಗಿದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ 2021ರ ಆಡಿ ಎ7ಎಲ್ ಕಾರು

ಈ ಎಂಜಿನ್ 335 ಬಿಹೆಚ್‍ಪಿ ಪವರ್ ಮತ್ತು 500 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನು ಇದರ ಕ್ವಾಟ್ರೊ ಎಡಬ್ಲ್ಯೂಡಿ ಸಿಸ್ಟಂ ಮೂಲಕ ಎಲ್ಲಾ ನಾಲ್ಕು ವ್ಹೀಲ್ ಗಳಿಗೆ ಪವರ್ ಅನ್ನು ಕಳುಹಿಸಲಾಗುತ್ತದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ 2021ರ ಆಡಿ ಎ7ಎಲ್ ಕಾರು

ಎಂಜಿನ್ ಅನ್ನು 7-ಸ್ಪೀಡ್ ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.ಇನ್ನು ಈ ಹೊಸ ಕಾರಿನಲ್ಲಿ ಏರ್ ಸಸ್ಪೆಂಕ್ಷನ್ ಸೆಟಪ್ ಅನ್ನು ಒಳಗೊಂಡಿದೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ 2021ರ ಆಡಿ ಎ7ಎಲ್ ಕಾರು

ಆಡಿ ಎ7ಎಲ್ ಕಾರಿನ ಮೊದಲ ಆವೃತ್ತಿಯ ಉತ್ಪಾದನೆಯನ್ನು ಕೇವಲ 1,000 ಯುನಿಟ್ ಗಳಿಗೆ ಸೀಮಿತಗೊಳಿಸಿದ್ದಾರೆ. ಬಿಗಿಯಾದ ಪಾರ್ಕಿಂಗ್ ಸನ್ನಿವೇಶಗಳನ್ನು ಮತ್ತು ಬಿಗಿಯಾದ ಸ್ಥಳಗಳಲ್ಲಿ ಸುಲಭವಾಗಿ ತಿರುಗಿಸಲು ಇದರ ಫೋರ್-ವ್ಹೀಲ್ ಸ್ಟೀಯರಿಂಗ್ ನೆರವಾಗುತ್ತದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ 2021ರ ಆಡಿ ಎ7ಎಲ್ ಕಾರು

ಇನ್ನು ಈ 2021ರ ಆಡಿ ಎ7ಎಲ್ ಕಾರು ಚೀನಾ ಮಾರುಕಟ್ಟೆಯಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಬಹುದು. ಈ ಹೊಸ ಕಾರು ಸಾಮಾನ್ಯ ಎ7 ಸ್ಪೋರ್ಟ್‌ಬ್ಯಾಕ್ ಮಾದರಿಯ ಜೊತೆಗೆ ಮಾರಾಟವಾಗಲಿದೆ. ಇನ್ನು 2025ರ ವೇಳೆಗೆ ಒಂದು ಮಿಲಿಯನ್ ಯುನಿಟ್‌ಗಳ ವಾರ್ಷಿಕ ಮಾರಾಟವನ್ನು ತಲುಪುವ ಉದ್ದೇಶ ಆಡಿ ಹೊಂದಿದೆ.

Most Read Articles

Kannada
Read more on ಆಡಿ audi
English summary
2021 Audi A7L Breaks Cover Officially As A Sedan Ditching Liftback Desig. Read In Kananda.
Story first published: Wednesday, April 21, 2021, 9:54 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X