ದೇಶಿಯ ಮಾರುಕಟ್ಟೆಯಲ್ಲಿ ಮತ್ತೆ ಬಿಡುಗಡೆಯಾಗಲಿದೆ ಕ್ಯೂಟ್ ಕ್ವಾಡ್ರೈಸಿಕಲ್ ವಾಹನ

ಕ್ಯೂಟ್, ಬಜಾಜ್ ಆಟೋ ಕಂಪನಿಯ ಅತ್ಯಂತ ಜನಪ್ರಿಯ ವಾಹನಗಳಲ್ಲಿ ಒಂದು. ಕ್ಯೂಟ್ ಕ್ವಾಡ್ರೈಸಿಕಲ್ ವಾಹನವಾಗಿದೆ. ಕೆಲವು ಕಾರಣಗಳಿಗಾಗಿ ಬಜಾಜ್ ಆಟೋ ಕಂಪನಿಯು ಈ ವಾಹನದ ಮಾರಾಟವನ್ನು ದೇಶಿಯ ಮಾರುಕಟ್ಟೆಯಲ್ಲಿ ಸ್ಥಗಿತಗೊಳಿಸಿತು.

ದೇಶಿಯ ಮಾರುಕಟ್ಟೆಯಲ್ಲಿ ಮತ್ತೆ ಬಿಡುಗಡೆಯಾಗಲಿದೆ ಕ್ಯೂಟ್ ಕ್ವಾಡ್ರೈಸಿಕಲ್ ವಾಹನ

ಆದರೆ ಬಜಾಜ್ ಕಂಪನಿಯು ಈ ಕ್ವಾಡ್ರೈಸಿಕಲ್ ವಾಹನವನ್ನು ಇನ್ನೂ ವಿಶ್ವದ ಹಲವು ದೇಶಗಳಲ್ಲಿ ಮಾರಾಟ ಮಾಡುತ್ತಿದೆ. ಕ್ಯೂಟ್ ಬಜೆಟ್ ಬೆಲೆಯ ವಾಹನವಾಗಿದೆ. ಕ್ಯೂಟ್ ವಾಹನವು ರೂ. 2.50 ಲಕ್ಷಗಳಿಗಿಂತ ಕಡಿಮೆ ಬೆಲೆಯನ್ನು ಹೊಂದಿದೆ.

ದೇಶಿಯ ಮಾರುಕಟ್ಟೆಯಲ್ಲಿ ಮತ್ತೆ ಬಿಡುಗಡೆಯಾಗಲಿದೆ ಕ್ಯೂಟ್ ಕ್ವಾಡ್ರೈಸಿಕಲ್ ವಾಹನ

ಬಜಾಜ್ ಕಂಪನಿಯು ಈ ವಾಹನವನ್ನು ಮತ್ತೆ ಭಾರತದಲ್ಲಿ ಬಿಡುಗಡೆಗೊಳಿಸಲು ಸಿದ್ದತೆ ನಡೆಸುತ್ತಿದೆ ಎಂದು ವರದಿಯಾಗಿದೆ. ಪ್ರಸಕ್ತ ಹಣಕಾಸು ವರ್ಷದ ಅಂತ್ಯದ ವೇಳೆಗೆ ಈ ವಾಹನವನ್ನು ಬಿಡುಗಡೆಗೊಳಿಸಲಾಗುವುದು ಎಂದು ವರದಿಗಳು ತಿಳಿಸಿವೆ.

ದೇಶಿಯ ಮಾರುಕಟ್ಟೆಯಲ್ಲಿ ಮತ್ತೆ ಬಿಡುಗಡೆಯಾಗಲಿದೆ ಕ್ಯೂಟ್ ಕ್ವಾಡ್ರೈಸಿಕಲ್ ವಾಹನ

ಈ ಸುದ್ದಿ ಕೇಳಿ ಭಾರತೀಯ ಬಜೆಟ್ ವಾಹನ ಪ್ರಿಯರು ಖುಷಿಯಾಗಿದ್ದಾರೆ. ಆದರೆ ಬಜಾಜ್ ಕಂಪನಿಯು ಈ ಕ್ವಾಡ್ರೈಸಿಕಲ್ ವಾಹನವನ್ನು ಬಾಡಿಗೆ ಕಾರು ವಿಭಾಗದಲ್ಲಿ ಮಾತ್ರ ಮಾರಾಟ ಮಾಡಲಿದೆ. ವೈಯಕ್ತಿಕ ಬಳಕೆಗಾಗಿ ಕ್ಯೂಟ್ ಕ್ವಾಡ್ರೈಸಿಕಲ್ ವಾಹನವನ್ನು ಮಾರಾಟ ಮಾಡುವುದಿಲ್ಲವೆಂದು ಬಜಾಜ್ ಕಂಪನಿ ತಿಳಿಸಿದೆ.

ದೇಶಿಯ ಮಾರುಕಟ್ಟೆಯಲ್ಲಿ ಮತ್ತೆ ಬಿಡುಗಡೆಯಾಗಲಿದೆ ಕ್ಯೂಟ್ ಕ್ವಾಡ್ರೈಸಿಕಲ್ ವಾಹನ

ಕ್ಯೂಟ್ ವಾಹನವು ಕಾರಿನಂತೆ ಕಂಡರೂ ಅದು ಕಾರು ಅಲ್ಲ ಎಂಬುದು ನಿಜ. ಈ ವಾಹನದಲ್ಲಿ ಚಲಿಸುವ ಪ್ರಯಾಣ ದರವು ತ್ರಿಚಕ್ರ ವಾಹನದಲ್ಲಿ ಚಲಿಸುವ ಪ್ರಯಾಣ ದರಕ್ಕೆ ಸಮನಾಗಿರುತ್ತದೆ.

ದೇಶಿಯ ಮಾರುಕಟ್ಟೆಯಲ್ಲಿ ಮತ್ತೆ ಬಿಡುಗಡೆಯಾಗಲಿದೆ ಕ್ಯೂಟ್ ಕ್ವಾಡ್ರೈಸಿಕಲ್ ವಾಹನ

ಈ ಕಾರಣಕ್ಕೆ ಕ್ಯೂಟ್ ವಾಹನವನ್ನು ವಾಹನ ಉದ್ಯಮವೆಂದು ಬಿಡುಗಡೆಗೊಳಿಸಲಾಗುವುದು. ಬಜಾಜ್ ಕಂಪನಿಯು ಕ್ಯೂಟ್ ಕ್ವಾಡ್ರೈಸಿಕಲ್ ವಾಹನವನ್ನು ಶೀಘ್ರದಲ್ಲೇ ಬಿಡುಗಡೆಯಾಗಲಿರುವ ಮಹೀಂದ್ರಾ ಕಂಪನಿಯ ಆಟಂ ವಾಹನಕ್ಕೆ ಪೈಪೋಟಿ ನೀಡಲು ಸಜ್ಜುಗೊಳಿಸುತ್ತಿದೆ.

ದೇಶಿಯ ಮಾರುಕಟ್ಟೆಯಲ್ಲಿ ಮತ್ತೆ ಬಿಡುಗಡೆಯಾಗಲಿದೆ ಕ್ಯೂಟ್ ಕ್ವಾಡ್ರೈಸಿಕಲ್ ವಾಹನ

ಆಟಂ ವಾಹನವು ಮುಂದಿನ ವರ್ಷ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಕ್ಯೂಟ್ ಭಾರತದಲ್ಲಿ ಬಿಡುಗಡೆಯಾದ ಮೊದಲ ಕ್ವಾಡ್ರೈಸಿಕಲ್ ವಾಹನವಾಗಿದೆ. ಬಜಾಜ್ ಕಂಪನಿಯು ಈ ವಾಹನವನ್ನು ಕೇರಳ, ಗುಜರಾತ್ ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲಿ ಮಾತ್ರ ಮಾರಾಟ ಮಾಡುತ್ತಿತ್ತು.

ದೇಶಿಯ ಮಾರುಕಟ್ಟೆಯಲ್ಲಿ ಮತ್ತೆ ಬಿಡುಗಡೆಯಾಗಲಿದೆ ಕ್ಯೂಟ್ ಕ್ವಾಡ್ರೈಸಿಕಲ್ ವಾಹನ

ಹೊಸ ನಿಯಮಗಳ ಕಾರಣದಿಂದಾಗಿ ಈ ವಾಹನದ ಮಾರಾಟವನ್ನು ದೇಶಿಯ ಮಾರುಕಟ್ಟೆಯಲ್ಲಿ ಸ್ಥಗಿತಗೊಳಿಸಲಾಯಿತು. ಈಗ ದೇಶಿಯ ಮಾರುಕಟ್ಟೆಯಲ್ಲಿ ಮತ್ತೆ ಬಿಡುಗಡೆಯಾಗಲು ಸಜ್ಜಾಗುತ್ತಿದೆ.

ದೇಶಿಯ ಮಾರುಕಟ್ಟೆಯಲ್ಲಿ ಮತ್ತೆ ಬಿಡುಗಡೆಯಾಗಲಿದೆ ಕ್ಯೂಟ್ ಕ್ವಾಡ್ರೈಸಿಕಲ್ ವಾಹನ

ಕ್ಯೂಟ್ ಕಮರ್ಷಿಯಲ್ ವೆಹಿಕಲ್ ಸೆಗ್ ಮೆಂಟ್ ಮೂಲಕ ಬಿಡುಗಡೆಯಾಗುವ ನಿರೀಕ್ಷೆಗಳಿವೆ. ಈ ಕಾರಣಕ್ಕೆ ಉಬರ್ ಕಂಪನಿಯ ಜೊತೆ ಪಾಲುದಾರಿಕೆ ಮಾಡಿಕೊಂಡಿರುವುದಾಗಿ ಬಜಾಜ್ ಕಂಪನಿಯು ತಿಳಿಸಿದ್ದು, ಪರೀಕ್ಷೆಗಾಗಿ ನಮ್ಮ ಬೆಂಗಳೂರಿನಲ್ಲಿ ಕ್ಯೂಟ್ ಅನ್ನು ಬಿಡುಗಡೆಗೊಳಿಸಲಿದೆ.

Most Read Articles

Kannada
English summary
Bajaj Auto to relaunch Qute quadricycle vehicle in domestic market soon. Read in Kannada.
Story first published: Thursday, July 29, 2021, 21:30 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X