ದಕ್ಷಿಣ ಆಫ್ರಿಕಾ ಮಾರುಕಟ್ಟೆಯಲ್ಲಿ ಮಾರಾಟವಾಗುವ ಅಗ್ಗದ ಬೆಲೆಯ ಕಾರಿದು

ದಕ್ಷಿಣ ಆಫ್ರಿಕಾ ಮಾರುಕಟ್ಟೆಯಲ್ಲಿ ಮಾರಾಟವಾಗುವ ಅಗ್ಗದ ಬೆಲೆಯ ಪ್ಯಾಸೆಂಜರ್ ಕಾರು ಎಂಬ ಹೆಗ್ಗಳಿಕೆಗೆ ಭಾರತದಲ್ಲಿ ಉತ್ಪಾದನೆಯಾಗುವ ಕಾರು ಪಾತ್ರವಾಗಿದೆ. ಬಜಾಜ್ ಕ್ಯೂಟ್ ಎಂಬ ಹೆಸರಿನ ಈ ಕಾರು ಕ್ವಾಡ್ರಿ ಸೈಕಲ್ ಎಂಬುದು ವಿಶೇಷ.

ದಕ್ಷಿಣ ಆಫ್ರಿಕಾ ಮಾರುಕಟ್ಟೆಯಲ್ಲಿ ಮಾರಾಟವಾಗುವ ಅಗ್ಗದ ಬೆಲೆಯ ಕಾರಿದು

ಈ ಕಾರು ಸುರಕ್ಷತಾ ಮಾನದಂಡ, ನಿಯಮಗಳು ಸೇರಿದಂತೆ ಹಲವಾರು ವಿಷಯಗಳಲ್ಲಿ ಜಾಗತಿಕ ಆಟೋ ಮೊಬೈಲ್ ಉದ್ಯಮದ ಗಮನ ಸೆಳೆದಿದೆ. ಈಗ ದಕ್ಷಿಣ ಆಫ್ರಿಕಾದಲ್ಲಿ ಮಾರಾಟವಾಗುವ ಅಗ್ಗದ ಬೆಲೆಯ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ದಕ್ಷಿಣ ಆಫ್ರಿಕಾ ಮಾರುಕಟ್ಟೆಯಲ್ಲಿ ಮಾರಾಟವಾಗುವ ಅಗ್ಗದ ಬೆಲೆಯ ಕಾರಿದು

ದಕ್ಷಿಣ ಆಫ್ರಿಕಾ ದೇಶವು ಆಫ್ರಿಕಾ ಖಂಡದ ಅತಿದೊಡ್ಡ ಕಾರು ಮಾರುಕಟ್ಟೆಗಳಲ್ಲಿ ಒಂದಾಗಿದೆ. ಮಾಹಿತಿಗಳ ಪ್ರಕಾರ ದಕ್ಷಿಣ ಆಫ್ರಿಕಾದಲ್ಲಿ ಮಾರಾಟವಾಗುವ ಬಜಾಜ್ ಕ್ಯೂಟ್ ಬೆಲೆ 75,000 ರಾಂಡ್ ಅಥವಾ 5,300 ಡಾಲರ್'ಗಳಾಗಿದೆ. ಅಂದರೆ ಭಾರತೀಯ ರೂಪಾಯಿ ಮೌಲ್ಯದಲ್ಲಿ ರೂ.3,87,278ಗಳಾಗಿದೆ.

MOST READ:ವಿಮಾನಗಳು ಹಾರಾಟ ನಡೆಸುವಾಗ, ಲ್ಯಾಂಡಿಂಗ್ ಆಗುವಾಗ ಉಂಟಾಗುವ ಶಬ್ದಗಳಿವು

ದಕ್ಷಿಣ ಆಫ್ರಿಕಾ ಮಾರುಕಟ್ಟೆಯಲ್ಲಿ ಮಾರಾಟವಾಗುವ ಅಗ್ಗದ ಬೆಲೆಯ ಕಾರಿದು

ಈ ಕೈಗೆಟುಕುವ ಬೆಲೆಯೊಂದಿಗೆ ಬಜಾಜ್ ಕ್ಯೂಟ್ ದಕ್ಷಿಣ ಆಫ್ರಿಕಾ ಮಾರುಕಟ್ಟೆಯಲ್ಲಿ ಹೆಚ್ಚು ಜನಪ್ರಿಯತೆಯನ್ನು ಪಡೆದಿದೆ. ಈ ವಾಹನದಲ್ಲಿ ಮೈಕ್ರೋ ಪ್ಯಾಸೆಂಜರ್ ಕಾರ್ ತರಹದ ವಿನ್ಯಾಸವನ್ನು ನೀಡಲಾಗಿದೆ. ಆದರೆ ವಾಸ್ತವದಲ್ಲಿ ಬಜಾಜ್ ಕ್ಯೂಟ್ ಕ್ವಾಡ್ರಿ ಸೈಕಲ್ ಆಗಿದೆ.

ದಕ್ಷಿಣ ಆಫ್ರಿಕಾ ಮಾರುಕಟ್ಟೆಯಲ್ಲಿ ಮಾರಾಟವಾಗುವ ಅಗ್ಗದ ಬೆಲೆಯ ಕಾರಿದು

ಈ ವಾಹನದಲ್ಲಿರುವ ಸೀಕ್ವೆನ್ಶಿಯಲ್ ಗೇರ್ ಶಿಫ್ಟ್ ಟೆಕ್ನಾಲಜಿಯು ಬೈಕುಗಳ ಟ್ರಾನ್ಸ್ ಮಿಷನ್ ಯುನಿಟ್'ನಂತೆ ಕಾರ್ಯನಿರ್ವಹಿಸುತ್ತದೆ. ಬೈಕುಗಳಲ್ಲಿ ಕೈಗಳಿಂದ ಗೇರ್ ಶಿಫ್ಟ್ ಮಾಡಲಾದರೆ ಈ ವಾಹನದಲ್ಲಿ ಫುಟ್ ಪೆಡಲ್ ಬಳಸಲಾಗುತ್ತದೆ.

MOST READ:ಪ್ರವಾಸದ ಹುಚ್ಚಿಗಾಗಿ ವಾಹನ ಕದಿಯುತ್ತಿದ್ದ ಎಂಜಿನಿಯರಿಂಗ್ ಪದವೀಧರ ಕೊನೆಗೂ ಲಾಕ್

ದಕ್ಷಿಣ ಆಫ್ರಿಕಾ ಮಾರುಕಟ್ಟೆಯಲ್ಲಿ ಮಾರಾಟವಾಗುವ ಅಗ್ಗದ ಬೆಲೆಯ ಕಾರಿದು

ಬಜಾಜ್ ಕ್ಯೂಟ್ ವಾಹನದಲ್ಲಿ 216 ಸಿಸಿ ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ ಸಬ್ 250 ಸಿಸಿ ಬೈಕಿನಷ್ಟು ಪವರ್ ಉತ್ಪಾದಿಸುತ್ತದೆ. ಅಂದರೆ ಕ್ಯೂಟ್'ನಲ್ಲಿರುವ ಸಣ್ಣ ಎಂಜಿನ್ 10.83 ಬಿಹೆಚ್‌ಪಿ ಪವರ್ ಹಾಗೂ 18.9 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ದಕ್ಷಿಣ ಆಫ್ರಿಕಾ ಮಾರುಕಟ್ಟೆಯಲ್ಲಿ ಮಾರಾಟವಾಗುವ ಅಗ್ಗದ ಬೆಲೆಯ ಕಾರಿದು

ಬಜಾಜ್ ಕ್ಯೂಟ್'ನ ಟಾಪ್ ಸ್ಪೀಡ್ ಪ್ರತಿ ಗಂಟೆಗೆ ಕೇವಲ 70 ಕಿ.ಮೀಗಳಾಗಿದೆ. ಈ ವೇಗವು ಸಿಟಿಯೊಳಗೆ ಹಾಗೂ ಸುತ್ತ ಮುತ್ತ ಸೂಕ್ತವಾಗಿದೆ. ಆದರೆ ಈ ವಾಹನವನ್ನು ಹೆದ್ದಾರಿಗಳಲ್ಲಿ ಚಾಲನೆ ಮಾಡುವುದು ಅಪಾಯಕಾರಿ.

MOST READ:ಭಾರತದಲ್ಲಿ ಹೆಚ್ಚು ಕಾರು ಮಾರಾಟವಾಗುವ ಹತ್ತು ಪ್ರಮುಖ ನಗರಗಳಿವು

ದಕ್ಷಿಣ ಆಫ್ರಿಕಾ ಮಾರುಕಟ್ಟೆಯಲ್ಲಿ ಮಾರಾಟವಾಗುವ ಅಗ್ಗದ ಬೆಲೆಯ ಕಾರಿದು

ಇನ್ನು ಈ ವಾಹನದ ನಿರ್ಮಾಣ ಗುಣಮಟ್ಟದ ಬಗ್ಗೆ ಹೇಳುವುದಾದರೆ, ಈ ವಾಹನವು ಯಾವುದೇ ಸುರಕ್ಷತಾ ಫೀಚರ್'ಗಳನ್ನು ಹೊಂದಿಲ್ಲ. ಬಜಾಜ್ ಕ್ಯೂಟ್ ಬಗ್ಗೆ ಇರುವ ಪ್ರಮುಖ ಕಾಳಜಿ ಎಂದರೆ ಅದರ ರೋಲ್‌ಓವರ್.

ದಕ್ಷಿಣ ಆಫ್ರಿಕಾ ಮಾರುಕಟ್ಟೆಯಲ್ಲಿ ಮಾರಾಟವಾಗುವ ಅಗ್ಗದ ಬೆಲೆಯ ಕಾರಿದು

ಈ ಕಾರು ತುಂಬಾ ಹಗುರವಾಗಿದ್ದು ಸಣ್ಣ ಎಂಜಿನ್ ಹೊಂದಿದೆ. ನಗರಗಳಲ್ಲಿ ಹೆಚ್ಚು ವಾಹನ ದಟ್ಟಣೆ ಇರುವ ವೇಳೆ ಈ ವಾಹನವು ಸೂಕ್ತವಾಗಿದೆ. ಈ ವಾಹನವು ರೂಫ್ ಹಾಗೂ ನಾಲ್ಕು ಕಡೆ ವಾಲ್ ಹೊಂದಿರುವ ಬೈಕಿನಂತೆ ಕಾಣುತ್ತದೆ.

Most Read Articles

Kannada
English summary
Bajaj Qute becomes most cheapest car in South Africa. Read in Kannada.
Story first published: Monday, May 17, 2021, 19:23 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X