Just In
- 1 hr ago
ಫೋಕ್ಸ್ವ್ಯಾಗನ್ ಐಡಿ.4 ಜಿಟಿಎಕ್ಸ್ ಪರ್ಫಾಮೆನ್ಸ್ ಎಲೆಕ್ಟ್ರಿಕ್ ಕಾರಿನ ಟೀಸರ್ ಬಿಡುಗಡೆ
- 1 hr ago
ಕೇವಲ 48 ನಿಮಿಷಗಳಲ್ಲಿ ಸೋಲ್ಡ್ ಔಟ್ ಆದ ಕೆಟಿಎಂ 1290 ಸೂಪರ್ ಡ್ಯೂಕ್ ಆರ್ಆರ್
- 3 hrs ago
ಹೆರ್ಮೆಸ್ 75 ವಾಣಿಜ್ಯ ಬಳಕೆಯ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದ ಕಬೀರಾ ಮೊಬಿಲಿಟಿ
- 3 hrs ago
ದುಬಾರಿ ಬೆಲೆಯ ಲ್ಯಾಂಡ್ ರೋವರ್ ಡಿಫೆಂಡರ್ ಎಸ್ಯುವಿ ಖರೀದಿಸಿದ ನಟ ಅರ್ಜುನ್ ಕಪೂರ್
Don't Miss!
- Sports
ಐಪಿಎಲ್ 2021: ಕಣಕ್ಕಿಳಿಯಲು ಪಡಿಕ್ಕಲ್ ಸಜ್ಜು, ಆರ್ಸಿಬಿ ಸಂಭಾವ್ಯ ತಂಡ ಹೀಗಿದೆ
- Movies
'ನೀವು ಬಸ್ ಡ್ರೈವರ್ ಮಗನೇ, ನಮ್ಮ ಮುಷ್ಕರ ಬೆಂಬಲಿಸಿ': ಯಶ್ಗೆ ಪತ್ರ ಬರೆದ ಸಾರಿಗೆ ನೌಕರರು?
- News
ಸರ್ಕಾರ v/s ಸಾರಿಗೆ ನೌಕರರು: 8ನೇ ದಿನಕ್ಕೆ ಕಾಲಿಟ್ಟ ಮುಷ್ಕರ
- Lifestyle
ರಕ್ತದಲ್ಲಿ ಕಬ್ಬಿಣದಂಶ ಹೆಚ್ಚಾದರೆ ಆಯುಸ್ಸು ಕಡಿಮೆಯಾಗುವುದು
- Education
NEET PG Admit Card 2021: ನೀಟ್ ಪಿಜಿ ಪ್ರವೇಶ ಪತ್ರ ಡೌನ್ಲೋಡ್ ಮಾಡುವುದು ಹೇಗೆ ?
- Finance
ಸುಮಾರು 5,550 ಕೋಟಿ ರು ಡಿವಿಡೆಂಡ್ ಘೋಷಿಸಿದ ಟಿಸಿಎಸ್
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಹೊಸ ರೂಪದೊಂದಿಗೆ ರಸ್ತೆಗಿಳಿಯಲಿವೆ ತೆರೆಮರೆಗೆ ಸರಿದ ಜಟಕಾ ಬಂಡಿ
ಅನಾದಿ ಕಾಲದಿಂದಲೂ ಪ್ರಮುಖ ಸಾರಿಗೆ ಸಂವಹನವಾಗಿ ಗುರುತಿಸಿಕೊಂಡಿದ್ದ ಜಟಕಾ ಬಂಡಿಗಳ ಸೇವೆಗಳು ನಗರೀಕರಣದ ಪರಿಣಾಮ ಕೇವಲ ಪ್ರವಾಸಿ ತಾಣಗಳಲ್ಲಿ ಮಾತ್ರ ಸೀಮಿತವಾಗಿದ್ದು, ತೆರೆಮರೆಗೆ ಸರಿಯುತ್ತಿರುವ ಬದುಕಿನ ಜಟಕಾ ಬಂಡಿಗೆ ಮತ್ತೆ ಹೊಸರೂಪ ನೀಡಲಾಗುತ್ತಿದೆ.

ಹೌದು, ನಗರದ ಸ್ವಚ್ಚತೆ ಮತ್ತು ಸುಗಮ ಸಂಚಾರ ಸುವ್ಯವಸ್ಥೆ ಹೆಸರಿನಲ್ಲಿ ಮೂಲೆಗುಂಪು ಮಾಡಲಾಗಿರುವ ಟಾಂಗಾಗಳಿಗೆ ಮತ್ತೆ ಹೊಸ ರೂಪ ನೀಡುವ ಯೋಜನೆಗೆ ಹಸಿರು ನಿಶಾನೆ ಸಿಕ್ಕಿದ್ದು, ಈ ಬಾರಿ ಟಾಂಗಾ ಸೇವೆಗಳಿಗೆ ಕುದರೆ ಬದಲಾಗಿ ಎಲೆಕ್ಟ್ರಿಕ್ ವಾಹನವನ್ನಾಗಿ ಮಾರ್ಪಡಿಸಿ ರಸ್ತೆಗಿಳಿಸಲಾಗುತ್ತಿದೆ. ಒಂದೂ ಕಾಲದಲ್ಲಿ ರಾಜ-ಮಾಹಾರಾಜರಿಂದ ಹಿಡಿದು ಜನಸಾಮಾನ್ಯ ಸಂಚಾರಕ್ಕೂ ಮುಖ್ಯ ಸಾರಿಗೆ ಸೌಲಭ್ಯವಾಗಿದ್ದ ಟಾಂಗಾ ಸೇವೆಯನ್ನು ಇದೀಗ ಮೂಲೆಗುಂಪು ಮಾಡಲಾಗಿದೆ.

ಪ್ರವಾಸಿ ತಾಣಗಳಲ್ಲಿ ಹೊರತುಪಡಿಸಿ ಬಹುತೇಕ ನಗರಗಳಲ್ಲಿ ಟಾಂಗಾ ಸೇವೆಗಳನ್ನು ನಿಷೇಧಗೊಳಿಸಲಾಗಿದ್ದು, ಮುಂಬೈ ಮಹಾನಗರದಲ್ಲೂ ಕೂಡಾ ಲಕ್ಷಾಂತರ ಸಂಖ್ಯೆಯಲ್ಲಿದ್ದ ಟಾಂಗಾಗಳಿಗೆ 2015ರಿಂದಲೇ ನಿಷೇಧ ಹೇರಲಾಗಿದೆ.

ಟಾಂಗಾ ನಿಷೇಧದೊಂದಿಗೆ ಪಾರಂಪರಿಕ ಸಾರಿಗೆ ಸೌಲಭ್ಯವನ್ನು ಮೂಲೆಗುಂಪು ಮಾಡುವುದರ ಜೊತೆಗೆ ಅದನ್ನೇ ನಂಬಿಕೊಂಡಿದ್ದ ಲಕ್ಷಾಂತರ ಜನರ ಬದುಕಿನ ಬಂಡೆಯ ಹಳಿ ತಪ್ಪಿಹೊಯ್ತು. ಇದೀಗ ಇದೇ ಪಾರಂಪರಿಕ ಸಾರಿಗೆ ಸೌಲಭ್ಯವನ್ನು ಪುನಾರಂಭಿಸುವ ಭರವಸೆ ಸಿಕ್ಕಿದ್ದು, ಟಾಂಗಾ ಸಂಸ್ಕೃತಿಗೆ ಆಧುನಿಕ ಸ್ಪರ್ಶ ನೀಡಲಾಗುತ್ತಿದೆ.

ಕುದುರೆ ಮೂಲಕ ಎಳೆಯುವ ಟಾಂಗಾಗಳಿಗೆ 2015 ರಲ್ಲಿ ನಿಷೇಧ ಹೇರಿದ್ದ ಮುಂಬೈ ಹೈಕೋರ್ಟ್ ಇದೀಗ ಟಾಂಗಾ ಸೇವೆಯನ್ನು ಪುನಾರಂಭಿಸಲು ಹೊಸ ಷರತ್ತುಗಳೊಂದಿಗೆ ಅವಕಾಶ ನೀಡಿದ್ದು, ಈ ಬಾರಿ ಟಾಂಗಾಗಳು ಕುದರೆಯ ಬದಲಾಗಿ ಎಲೆಕ್ಟ್ರಿಕ್ ರೂಪದಲ್ಲಿ ರಸ್ತೆಗಿಳಿಯುವುದು ಖಚಿತವಾಗಿದೆ. ಟಾಂಗಾಗಳನ್ನು ಎಲೆಕ್ಟ್ರಿಕ್ ಮಾದರಿಯಾಗಿ ಪರಿವರ್ತಿಸಿ ಓಡಿಸುವ ಮನವಿಗೆ ಅನುಮೋದನೆ ದೊರೆತಿದ್ದು, ಪ್ರವಾಸಿಗರಿಗೆ ಹೊಸ ಸಾರಿಗೆ ಮೂಲಕ ಟಾಂಗಾ ಅನುಭವ ನೀಡಲು ಯೋಜಿಸಲಾಗಿದೆ.

ಕುದರೆಯಿಲ್ಲದೆ ಟಾಂಗಾ ಸವಾರಿ ಪರಿಪೂರ್ಣವಾಗುವಿದಿಲ್ಲವಾದರೂ ಸದ್ಯದ ಪರಿಸ್ಥಿತಿ ಮತ್ತು ಟ್ರಾಫಿಕ್ ದಟ್ಟಣೆಯ ಪರಿಣಾಮವಾಗಿ ಕೆಲವು ಬದಲಾವಣೆಗಳು ಅನಿವಾರ್ಯವಾಗಿದ್ದು, ಟಾಂಗಾ ಚಾಲನೆಯನ್ನೇ ಹೊಟ್ಟೆಪಾಡಾಗಿಸಿಕೊಂಡಿದ್ದ ಕುಟುಂಬಗಳಿಗೆ ಹೊಸ ಯೋಜನೆಯು ಸದುಪಯೋಗವಾಗಲಿದೆ.

ಮಾಲಿನ್ಯ ತಡೆ ಜೊತೆಗೆ ಅಚ್ಚುಕಟ್ಟಾದ ಸಾರಿಗೆ ಸಂವಹನವನ್ನು ಬಲಪಡಿಸುವ ಉದ್ದೇಶದಿಂದ ಎಲೆಕ್ಟ್ರಿಕ್ ಮಾದರಿಯ ಟಾಂಗಾ ಸೇವೆಗಳಿಗೆ ಚಾಲನೆ ನೀಡಲು ಅನುಮತಿ ನೀಡಲಾಗಿದ್ದು, ಹೊಸ ಯೋಜನೆಯನ್ನು ಅಚ್ಚುಕಟ್ಟಾಗಿ ಜಾರಿಗೆ ತರಲು ಮುಂದಾಗಿರುವ ಯುಬಿಒ ರೈಡ್ಜ್ ಕಂಪನಿಯು ಸಾಮಾನ್ಯ ಟಾಂಗಾಗಳನ್ನು ಎಲೆಕ್ಟ್ರಿಕ್ ಮಾದರಿಯಾಗಿ ಸಿದ್ದಪಡಿಸುತ್ತಿದೆ.
MOST READ: ಪ್ರತಿ ಚಾರ್ಜ್ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್ಯುವಿ..!

ಮುಂಬೈ ನಗರದಲ್ಲಿ ವಿಕ್ಟೋರಿಯಾ ಟಾಂಗಾ ಎಂದೇ ಜನಪ್ರಿಯವಾಗಿದ್ದ ಟಾಂಗಾ ಸೇವೆಗಳನ್ನು ಎಲೆಕ್ಟ್ರಿಕ್ ರೂಪರೊಂದಿಗೆ ಮರುಚಾಲನೆ ನೀಡುತ್ತಿರುವ ಯುಬಿಒ ರೈಡ್ಜ್ ಕಂಪನಿಯು ಮೊದಲ ಹಂತದಲ್ಲಿ ಹತ್ತು ಇ-ಟಾಂಗಾಗಳನ್ನು ಪರೀಕ್ಷೆ ನಡೆಸಿ ಯಶಸ್ವಿಯಾಗಿದೆ.

ಪ್ರಾಯೋಗಿಕ ಚಾಲನೆಯಲ್ಲಿ ನಗರದ ಪ್ರಮುಖ ಭಾಗಗಳಿಗೆ ತಲುಪುವ ಸಾಧ್ಯತೆಗಳ ಕುರಿತಾಗಿ ಪರಿಶೀಲನೆ ನಡೆಸಲಾಗುತ್ತಿದ್ದು, ಮಾಹಿತಿಗಳ ಪ್ರಕಾರ ಹೊಸ ಟಾಂಗಾ ಸೇವೆಗಳು ಮುಂದಿನ ಕೆಲವೇ ತಿಂಗಳಿನಲ್ಲಿ ಅಧಿಕೃತವಾಗಿ ಪ್ರವಾಸಿಗರ ಸೇವೆಗೆ ಸಜ್ಜಾಗಲಿವೆ.
MOST READ: ಸ್ಕ್ರ್ಯಾಪೇಜ್ ನೀತಿ ಅಳವಡಿಸಿಕೊಳ್ಳುವ ವಾಹನ ಮಾಲೀಕರಿಗೆ ಸಿಹಿಸುದ್ದಿ ನೀಡಿದ ಕೇಂದ್ರ ಸರ್ಕಾರ

ಹೆಚ್ಚುತ್ತಿರುವ ಮಾಲಿನ್ಯ ತಡೆಗಾಗಿ ಎಲೆಕ್ಟ್ರಿಕ್ ವಾಹನಗಳ ಬಳಕೆಯು ಹೆಚ್ಚು ಗಮನಸೆಳೆಯುತ್ತಿದ್ದು, ಗ್ರಾಹಕರನ್ನು ಕೂಡಾ ಎಲೆಕ್ಟ್ರಿಕ್ ವಾಹನಗಳನ್ನೇ ಬಳಕೆ ಮಾಡುವಂತೆ ವಿವಿಧ ಯೋಜನೆಗಳ ಮೂಲಕ ಗಮನಸೆಳೆಯುತ್ತಿರುವುದು ಮುಂಬರುವ ದಿನಗಳಲ್ಲಿ ಮಹತ್ವದ ಬದಲಾವಣೆಯನ್ನು ನೀರಿಕ್ಷಿಸಲಾಗಿದೆ.