Just In
- 29 min ago ವಿಮಾನದಂತಹ ಸೌಲಭ್ಯ ಹೊಂದಿರುವ ವಂದೇ ಭಾರತ್ ಸರಣಿ ರೈಲುಗಳು ಶೀಘ್ರ ಬರಲಿವೆ.. ಆರಾಮದಾಯಕ ಪ್ರಯಾಣ!
- 33 min ago 'ಬಾಹುಬಲಿ' ಎಸ್ಯುವಿ ಪರಾಕ್ರಮ: ಟೊಯೊಟಾ ಫಾರ್ಚುನರ್ ಲೀಡರ್ ಎಡಿಷನ್ ವಿಶೇಷತೆಗಳೇನು?
- 35 min ago Honda: ಭಾರತ ನಿರ್ಮಿಸಿದ ಹೋಂಡಾ ಕಾರಿಗೆ ಮುಗಿಬಿದ್ದ ಜಪಾನ್ ಜನ!
- 45 min ago ಮತ್ತೆ ಅಖಾಡಕ್ಕೆ ಅಮೇರಿಕನ್ ಆಫ್ರೋಡ್ ಕಿಂಗ್: 2024 ಜೀಪ್ ರಾಂಗ್ಲರ್ ಫೇಸ್ಲಿಫ್ಟ್ ರಿವ್ಯೂ!
Don't Miss!
- Technology HMD ಪಲ್ಸ್ ಸರಣಿ ಅಡಿಯಲ್ಲಿ 3 ಹೊಸ ಸ್ಮಾರ್ಟ್ಫೋನ್ ಲಾಂಚ್! ಫೀಚರ್ಸ್ ಏನಿವೆ?
- News Tamannaah Bhatia: ಮಿಲ್ಕಿ ಬ್ಯೂಟಿ ತಮನ್ನಾಗೆ ಮುಂಬೈ ಸೈಬರ್ ಪೊಲೀಸರಿಂದ ಸಮನ್ಸ್.!-ಕಾರಣ ಏನು?
- Finance April 25 Gold Rate: ಇಂದಿನ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರ ಎಷ್ಟಿದೆ ತಿಳಿಯಿರಿ
- Lifestyle ಬೆಳ್ಳುಳ್ಳಿ ಕಬಾಬ್ ಅಂದುಕೊಂಡ್ರಾ? ಇದು ಚಿಕನ್ ರುಚಿಯ ಹೂವಿನ ಫ್ರೈ..!
- Sports 2009ರ ಐಪಿಎಲ್ ಫೈನಲ್ನಲ್ಲಿ ಆರ್ಸಿಬಿ ಸೋಲಲು ಕಾರಣ ತಿಳಿಸಿದ ಅನಿಲ್ ಕುಂಬ್ಳೆ
- Movies 'ಯುವ ರಣಧೀರ ಕಂಠೀರವ' ಸಿನಿಮಾ ನಿಂತಿದ್ದೇಕೆ? ಕಥೆಗಾರ ಭಗೀರಥ ಏನಂದ್ರು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬೆಂಗಳೂರಿನಲ್ಲಿ ಪ್ರದರ್ಶನವಾದ ಬೆಂಟ್ಲಿ ಬೆಂಟಾಯ್ಗಾ ವಿ8, ಫ್ಲೈಯಿಂಗ್ ಸ್ಪರ್ ಡಬ್ಲ್ಯು12 ವಿಶೇಷತೆ ಏನು?
ವಿಶ್ವಾದ್ಯಂತ ಹಲವಾರು ಐಷಾರಾಮಿ ಕಾರುಗಳನ್ನು ಮಾರಾಟ ಮಾಡುತ್ತಿರುವ ಬೆಂಟ್ಲಿ ಕಂಪನಿಯು ತನ್ನ ಹೊಸ ಬೆಂಟಾಯ್ಗಾ ವಿ8 ಹಾಗೂ ಫ್ಲೈಯಿಂಗ್ ಸ್ಪರ್ ಡಬ್ಲ್ಯು12 ಆವೃತ್ತಿಗಳನ್ನು ಸುಧಾರಿತ ತಂತ್ರಜ್ಞಾನ ಪ್ರೇರಣೆಯೊಂದಿಗೆ ಅಭಿವೃದ್ದಿಗೊಳಿಸಿದ್ದು, ಹೊಸ ಐಷಾರಾಮಿ ಕಾರು ಮಾದರಿಗಳನ್ನು ಬೆಂಟ್ಲಿ ಇಂಡಿಯಾ ಕಂಪನಿಯು ಇತ್ತೀಚೆಗೆ ನಮ್ಮ ಬೆಂಗಳೂರಿನಲ್ಲಿ ಪ್ರದರ್ಶನಗೊಳಿಸಿತು.
ಬೆಂಟ್ಲಿ ಹೊಸ ಕಾರುಗಳ ಬೆಲೆಯು ಭಾರತದಲ್ಲಿ ಎಕ್ಸ್ ಶೋರೂಂ ದರದಂತೆ ಆರಂಭಿಕವಾಗಿ ರೂ. 4.01 ಕೋಟಿಗಳಾಗಿದ್ದು, ಹೊಸ ಕಾರುಗಳು ಆಧುನಿಕ ತಂತ್ರಜ್ಞಾನ ಪ್ರೇರಿತ ಹಲವಾರು ತಾಂತ್ರಿಕ ಸೌಲಭ್ಯಗಳನ್ನು ಪಡೆದುಕೊಂಡಿವೆ.
ಬೆಂಟಾಯ್ಗಾ ವಿ8 ಕಾರು ಮಾದರಿಯು ಐಷಾರಾಮಿ ಕಾರುಗಳಲ್ಲೇ ಅತಿ ವೇಗದ ಆವೃತ್ತಿಯಾಗಿದ್ದು, ಈ ಕಾರಿನಲ್ಲಿ ಕಂಪನಿಯು 542 ಬಿಎಚ್ಪಿ ಉತ್ಪಾದನಾ ಸಾಮರ್ಥ್ಯದ 4.0-ಲೀಟರ್ ಟ್ವಿನ್ ಟರ್ಬೊ ಎಂಜಿನ್ ಜೋಡಣೆ ಮಾಡಿದೆ.
ಬೆಂಟ್ಲಿ ನಿರ್ಮಾಣದ ಮತ್ತೊಂದು ಐಷಾರಾಮಿ ಕಾರು ಮಾದರಿಯಾದ ಫ್ಲೈಯಿಂಗ್ ಸ್ಪರ್ ಡಬ್ಲ್ಯು12 ಮಾದರಿಯು 636-ಬಿಎಚ್ಪಿ ಮತ್ತು900 ಎನ್ಎಂ ಟಾರ್ಕ್ ಉತ್ಪಾದನೆಯ 6.0-ಲೀಟರ್ ಟರ್ಬೊ-ಟ್ವಿನ್ ಡಬ್ಲ್ಯು 12 ಎಂಜಿನ್ ಹೊಂದಿದೆ.
ಸುಮಾರು 2.5 ಟನ್ ತೂಕ ಹೊಂದಿರುವ ಹೊಸ ಕಾರುಗಳಿಗೆ ಅತ್ಯುತ್ತಮ ಎಂಜಿನ್ ಆಯ್ಕೆ ನೀಡಲಾಗಿದ್ದು, ಹೊಸ ಕಾರುಗಳು ಕೇವಲ 3.8 ಸೆಕೆಂಡುಗಳಲ್ಲಿ ಸೊನ್ನೆಯಿಂದ 100 ಕಿ.ಮೀ ವೇಗ ಪಡೆದುಕೊಳ್ಳಲಿದ್ದು, ಟಾಪ್ ಸ್ಪೀಡ್ ಗಂಟೆಗೆ 333 ಕಿ.ಮೀ ತಲುಪಬಲ್ಲವು.