ಭಾರತದಲ್ಲಿ ಕೈಗೆಟುಕುವ ದರದಲ್ಲಿ ಮಾರಾಟವಾಗುತ್ತಿರುವ ಜನಪ್ರಿಯ ಕಾರುಗಳಿವು

ದೇಶಿಯ ಮಾರುಕಟ್ಟೆಯಲ್ಲಿ ಗ್ರಾಹಕರ ಬೇಡಿಕೆಗೆ ತಕ್ಕಂತೆ ಹಲವು ಕಾರುಗಳಿವೆ. ಆದರೂ ಮಧ್ಯಮ ಮತ್ತು ಕೆಳ ವರ್ಗದ ಜನರಿಗೆ ಕಾರು ಖರೀದಿಸುವುದು ದೊಡ್ಡ ಸವಾಲಾಗಿದೆ. ತಾವು ಕೂಡಿಟ್ಟ ಹಣದಲ್ಲಿ ಒಂದು ಕಾರು ಖರೀದಿಸಬೇಕೆಂಬ ಕನಸನ್ನು ಹೊಂದಿರುತ್ತಾರೆ.

ಭಾರತದಲ್ಲಿ ಕೈಗೆಟುಕುವ ದರದಲ್ಲಿ ಮಾರಾಟವಾಗುತ್ತಿರುವ ಜನಪ್ರಿಯ ಕಾರುಗಳಿವು

ಎಲ್ಲರಿಗೂ ಸ್ವಂತವಾಗಿ ಒಂದು ಕಾರು ಇರಬೇಕೆಂಬ ಆಸೆ ಇರುತ್ತದೆ. ಇತ್ತೀಚೆಗೆ ಒಂದು ಮಾಧ್ಯಮ ಸಂಸ್ಥೆಯೊಂದು ನಡೆಸಿದ ಸಮೀಕ್ಷೆಯಲ್ಲಿ ಸರಾಸರಿ 70% ರಷ್ಟು ಜನರು ಕೆಲಸಕ್ಕಾಗಿ ಪ್ರಯಾಣಿಸಲು ಸ್ವಂತ ವಾಹನಗಳನ್ನು ಆದ್ಯತೆ ನೀಡುವುದಾಗಿ ತಿಳಿದುಬಂದಿದೆ. ಎಲ್ಲರೂ ದೈನಂದಿನ ಬಳಕೆಗೆ ಸಣ್ಣ ಕಾರನ್ನು ಬಳಕೆ ಮಾಡಲು ಇಷ್ಟಪಡುತ್ತಾರೆ. ಇದು ಹಲವು ಸಮೀಕ್ಷೆಗಳಲ್ಲಿ ಸಾಬೀತಾಗಿದ್ದು, ಎಲ್ಲರೂ ಸ್ವಂತ ವಾಹನ ಹೊಂದಲು ಇಷ್ಟಪಡುತ್ತಾರೆ. ಕರೋನಾ ಆತಂಕದಿಂದ ಸಾರ್ವಜನಿಕ ಸಾರಿಗೆಯ ಬಳಕೆಯು ಮುಂಬರುವ ದಿನಗಳಲ್ಲಿ ಕಡಿಮೆಯಾಗುವ ಸಾಧ್ಯತೆಗಳಿದೆ

ಭಾರತದಲ್ಲಿ ಕೈಗೆಟುಕುವ ದರದಲ್ಲಿ ಮಾರಾಟವಾಗುತ್ತಿರುವ ಜನಪ್ರಿಯ ಕಾರುಗಳಿವು

ಜನರು ಹೆಚ್ಚಾಗಿ ಕೈಗೆಟುಕುವ ದರದಲ್ಲಿ ಸಿಗುವ ಸಣ್ಣ ಕಾರುಗಳಿಗೆ ಆದ್ಯತೆ ನೀಡುತ್ತಾರೆ . ಹೀಗಾಗಿ ಕೈಗೆಟುಕುವ ದರದ ಅಥವಾ ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಕಾರುಗಳನ್ನು ಖರೀದಿಸಲು ಬಯಸುವವರಿಗೆ ಇಲ್ಲೊಂದಿಷ್ಟು ಕಾರುಗಳ ಮಾಹಿತಿ ನೀಡಲಾಗಿದೆ.

ಭಾರತದಲ್ಲಿ ಕೈಗೆಟುಕುವ ದರದಲ್ಲಿ ಮಾರಾಟವಾಗುತ್ತಿರುವ ಜನಪ್ರಿಯ ಕಾರುಗಳಿವು

ರೆನಾಲ್ಟ್ ಕ್ವಿಡ್

ಫ್ರೆಂಚ್ ಮೂಲದ ವಾಹನ ಉತ್ಪಾದನಾ ಕಂಪನಿಯ ರೆನಾಲ್ಟ್ ಕ್ವಿಡ್ ಭಾರತೀಯ ಮಾರುಕಟ್ಟೆಯಲ್ಲಿ ಕೈಗೆಟುಕುವ ದರದಲ್ಲಿ ಲಭ್ಯವಿರುವ ಕಾರುಗಳಲ್ಲಿ ಒಂದಾಗಿದೆ. ಈ ಬಿಎಸ್-6 ರೆನಾಲ್ಟ್ ಕ್ವಿಡ್ ಕಾರಿಗೆ ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.4.07 ಲಕ್ಷಗಳಾಗಿದೆ.

ಭಾರತದಲ್ಲಿ ಕೈಗೆಟುಕುವ ದರದಲ್ಲಿ ಮಾರಾಟವಾಗುತ್ತಿರುವ ಜನಪ್ರಿಯ ಕಾರುಗಳಿವು

ರೆನಾಲ್ಟ್ ಕಂಪನಿಯ ಕಾರುಗಳ ಸರಣಿಯಲ್ಲಿ ಕ್ವಿಡ್ ಹ್ಯಾಚ್‌ಬ್ಯಾಕ್ ಜನಪ್ರಿಯ ಎಂಟ್ರಿ ಲೆವೆಲ್ ಮಾದರಿಯಾಗಿದೆ. ಈ ಹ್ಯಾಚ್‍‍ಬ್ಯಾಕ್‍‍ನಲ್ಲಿ ಎರಡೂ ಪೆಟ್ರೋಲ್ ಎಂಜಿನ್ ಆಯ್ಕೆಗಳನ್ನು ನೀಡಲಾಗಿದೆ. ಇದರಲ್ಲಿ 0.8 ಲೀಟರ್ ಮೂರು ಸಿಲಿಂಡರ್ ಪೆಟ್ರೋಲ್ ಎಂಜಿನ್ 54 ಬಿ‍‍ಹೆಚ್‍ಪಿ ಪವರ್ ಮತ್ತು 72 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍ನೊಂದಿಗೆ 5 ಸ್ಪೀಡ್ ಆಟೋಮ್ಯಾಟಿಕ್ ಮತ್ತು ಮ್ಯಾನುವಲ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ.

Engine 999cc
Mileage 23.0 kmpl
Max Power 53.3bhp
Max Torque 72Nm
Transmission Manual
Top Speed 135 kmph
Fuel Type Petrol
Seating Capacity 5
Air-Con No
Power Steering No
Colour Options Outback Bronze, Planet Grey, Fiery Black, Moonlight Silver, Ice Cool White, Fiery Red
ಭಾರತದಲ್ಲಿ ಕೈಗೆಟುಕುವ ದರದಲ್ಲಿ ಮಾರಾಟವಾಗುತ್ತಿರುವ ಜನಪ್ರಿಯ ಕಾರುಗಳಿವು

ದಟ್ಸನ್ ರೆಡಿ ಗೋ

ದಟ್ಸನ್ ಕಂಪನಿಯು ತನ್ನ ಎಂಟ್ರಿ ಲೆವೆಲ್ ರೆಡಿ ಗೋ ಫೇಸ್‍‍ಲಿಫ್ಟ್ ಮಾದರಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗಿದೆ. ಈ ರೆಡಿ-ಗೊ ಫೇಸ್‌ಲಿಫ್ಟ್ ಮಾದರಿಯ ಪ್ರಾರಂಭಿಕ ಬೆಲೆಯು ಎಕ್ಸ್‌ಶೋರೂಂ ಪ್ರಕಾರ ರೂ.3 ಲಕ್ಷಕ್ಕಿಂತ ಕಡಿಮೆ ಬೆಲೆಯಾಗಿದೆ. ಇದು ರೆನಾಲ್ಟ್ ಕ್ವಿಡ್‌ಗೆ ಕಠಿಣ ಪ್ರತಿಸ್ಪರ್ಧಿಯಾಗಿದೆ.

ಭಾರತದಲ್ಲಿ ಕೈಗೆಟುಕುವ ದರದಲ್ಲಿ ಮಾರಾಟವಾಗುತ್ತಿರುವ ಜನಪ್ರಿಯ ಕಾರುಗಳಿವು

ದಟ್ಸನ್ ರೆಡಿ ಗೋ ಕಾರಿನಲ್ಲಿ 800ಸಿಸಿ ಎಂಜಿನ್ 54 ಬಿಹೆಚ್‌ಪಿ ಹಾಗೂ 72 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನು 1.0 ಲೀಟರ್ ಎಂಜಿನ್ 68 ಬಿಹೆಚ್‌ಪಿ ಹಾಗೂ 91 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

Engine 799cc
Mileage 25.2 kmpl
Max Power 53.2bhp
Max Torque 72Nm
Transmission Manual
Top Speed 140 kmph
Fuel Type Petrol
Seating Capacity 5
Air-Con Yes
Power Steering No
Colour Options Lime, Silver, Grey, Ruby, White
ಭಾರತದಲ್ಲಿ ಕೈಗೆಟುಕುವ ದರದಲ್ಲಿ ಮಾರಾಟವಾಗುತ್ತಿರುವ ಜನಪ್ರಿಯ ಕಾರುಗಳಿವು

ಮಾರುತಿ ಎಸ್-ಪ್ರೆಸ್ಸೊ

ಭಾರತದ ಅತಿದೊಡ್ಡ ಕಾರು ತಯಾರಕ ಕಂಪನಿ ಮಾರುತಿ ಸುಜುಕಿ ಹಲವಾರು ಎಂಟ್ರಿ ಲೆವಲ್ ಕಾರುಗಳನ್ನು ಹೊಂದಿದ್ದು, ಕೈಗೆಟುಕುವ ದರ ಹೊಂದಿರುವ ಕಾರುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಖರೀದಿಸುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಆಲ್ಟೊ ಹಾಗೂ ಎಸ್-ಪ್ರೆಸೊ ಕಾರುಗಳ ಮಾರಾಟವು ಹೆಚ್ಚಾಗುವ ಸಾಧ್ಯತೆಗಳಿವೆ.

ಭಾರತದಲ್ಲಿ ಕೈಗೆಟುಕುವ ದರದಲ್ಲಿ ಮಾರಾಟವಾಗುತ್ತಿರುವ ಜನಪ್ರಿಯ ಕಾರುಗಳಿವು

ಈ ಮಾರುತಿ ಎಸ್-ಪ್ರೆಸ್ಸೊ ಮಿನಿ ಎಸ್‍‍ಯು‍ವಿ 998 ಸಿಸಿ ಪೆಟ್ರೋಲ್ ಎಂಜಿನ್‌ ‌67 ಬಿಎಚ್‌ಪಿ ಪವರ್ ಮತ್ತು 90 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಆರಂಭಿಕ ಕಾರು ಮಾದರಿಯಲ್ಲಿ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು ಹೈ ಎಂಡ್ ಮಾದರಿಯಲ್ಲಿ 5-ಸ್ಪೀಡ್ ಆಟೋ ಗೇರ್ ಶಿಫ್ಟ್(ಎಜಿಎಸ್) ಆಯ್ಕೆಯನ್ನು ಹೊಂದಿದೆ.

Engine 998cc
Mileage 21.4 kmpl
Max Power 58.33bhp
Max Torque 90Nm
Transmission Manual And Automatic
Top Speed 140 kmph
Fuel Type Petrol
Seating Capacity 4 or 5
Air-Con No
Power Steering No
Colour Options Solid Sizzle Orange, Pearl Starry Blue, Metallic Granite Grey, Solid Fire Red, Metallic Silky Silver, Solid White
ಭಾರತದಲ್ಲಿ ಕೈಗೆಟುಕುವ ದರದಲ್ಲಿ ಮಾರಾಟವಾಗುತ್ತಿರುವ ಜನಪ್ರಿಯ ಕಾರುಗಳಿವು

ಮಾರುತಿ ಸುಜುಕಿ ಆಲ್ಟೋ

ಸಹಜವಾಗಿ, ಭಾರತದ ಅತ್ಯಂತ ಪ್ರೀತಿಯ ಕಾರುಗಳಲ್ಲಿ ಒಂದಾದ ಆಲ್ಟೋ ಆಗಿದೆ, ಈ ಕಾರಿಗೆ ಕೈಗೆಟುಕುವ ಬೆಲೆ ಮತ್ತು ಮೈಲೇಜ್ ಮತ್ತು ಫ್ಯಾಮಿಲಿ ಹ್ಯಾಚ್‌ಬ್ಯಾಕ್ ಆಗಿ ಜನಪ್ರಿಯ ಆಯ್ಕೆಯಾಗಿದೆ. ಆದರೆ ನಾವು ಭರವಸೆಯ ಅಪ್‌ಗ್ರೇಡ್‌ಗಾಗಿ ಎದುರು ನೋಡುತ್ತಿದ್ದೇವೆ.

ಭಾರತದಲ್ಲಿ ಕೈಗೆಟುಕುವ ದರದಲ್ಲಿ ಮಾರಾಟವಾಗುತ್ತಿರುವ ಜನಪ್ರಿಯ ಕಾರುಗಳಿವು

ಮಾರುತಿ ಸುಜುಕಿ ಆಲ್ಟೋ ಕಾರಿನಲ್ಲಿ 800 ಸಿಸಿ ಮಾದರಿಯು 48 ಬಿಹೆಚ್‍ಪಿ ಪವರ್ ಮತ್ತು 69 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ ಮತ್ತು 5-ಸ್ಪೀಡ್ ಮ್ಯಾನುವಲ್‌ಗೆ ಮಾತ್ರ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ.

Engine 796cc
Mileage 32.0 kmpl
Max Power 40.36bhp
Max Torque 69Nm
Transmission Manual And Automatic
Top Speed 140 kmph
Fuel Type Petrol and CNG
Seating Capacity 5
Air-Con Yes
Power Steering Yes
Colour Options Solid White, Silky Silver, Granite Grey, Mojito Green, Cerulean Blue, Uptown Red
ಭಾರತದಲ್ಲಿ ಕೈಗೆಟುಕುವ ದರದಲ್ಲಿ ಮಾರಾಟವಾಗುತ್ತಿರುವ ಜನಪ್ರಿಯ ಕಾರುಗಳಿವು

ಹ್ಯುಂಡೈ ಸ್ಯಾಂಟ್ರೋ

ಹ್ಯುಂಡೈ ಸ್ಯಾಂಟ್ರೋ ಭಾರತದ ಮತ್ತೊಂದು ನೆಚ್ಚಿನ ಬಜೆಟ್ ವಾಹನವಾಗಿದೆ. ಸ್ಯಾಂಟ್ರೋ 1998 ರಿಂದಲೂ ಮಾರಾಟದಲ್ಲಿದೆ, ವಿಶಾಲವಾದ ಒಳಾಂಗಣ, ಉತ್ತಮ ನಿರ್ಮಾಣ ಗುಣಮಟ್ಟ ಮತ್ತು ಉತ್ತಮ ಮೈಲೇಜ್ ನಿಂದ ಎರಡು ದಶಕಗಳಿಂದ ಹೆಚ್ಚಿನ ಗ್ರಾಹಕರನ್ನು ಸೆಳೆದುಕೊಂಡಿದೆ.

Engine 1086cc
Mileage 20.3 kmpl
Max Power 68.05bhp
Max Torque 99.04Nm
Transmission Manual
Top Speed 156 kmph
Fuel Type Petrol
Seating Capacity 5
Air-Con Yes
Power Steering Yes
Colour Options Typhoon Silver, Polar White, Titan Grey, Imperial Beige, Alpha Blue, Fiery Red, Diana Green
ಭಾರತದಲ್ಲಿ ಕೈಗೆಟುಕುವ ದರದಲ್ಲಿ ಮಾರಾಟವಾಗುತ್ತಿರುವ ಜನಪ್ರಿಯ ಕಾರುಗಳಿವು

ಇದರಲ್ಲಿ ಹೊಸ ಎಂಜಿನ್‌ನಿಂದಾಗಿ ಎಂಜಿನ್ ಕಾರ್ಯಕ್ಷಮತೆ ಹೆಚ್ಚಿರುವುದಲ್ಲದೇ ಮೈಲೇಜ್ ಪ್ರಮಾಣದಲ್ಲೂ ಸಾಕಷ್ಟು ಸುಧಾರಣೆಯಾಗಿದೆ. ಇನ್ನು 2021ರ ಹ್ಯುಂಡೈ ಸ್ಯಾಂಟ್ರೋ ಫೇಸ್ ಲಿಫ್ಟ್ ಮಾದರಿಯು ಟಾಟಾ ಟಿಯಾಗೊ ಮತ್ತು ಮಾರುತಿ ಸೆಲೆರಿಯೊಗಳಂತಹ ಬೆಲೆ ಪಟ್ಟಿಯಲ್ಲಿ ಹೆಚ್ಚಿನ ಕಾರುಗಳೊಂದಿಗೆ ಪೈಪೋಟಿ ನೀಡಲು ಸಜ್ಜುಗೊಳಿಸುತ್ತಿದೆ.

Most Read Articles

Kannada
English summary
Best affordable cars to buy in indian market details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X