Just In
Don't Miss!
- News
"ಕಾಂಗ್ರೆಸ್ ಈಗ ಒಡೆದ ಮನೆ; ಮೂರು ಗುಂಪುಗಳ ನಡುವೆ ನಿರಂತರ ಗುದ್ದಾಟ''
- Finance
30,000 ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲಿದೆ ಕ್ಯಾಪ್ಜೆಮಿನಿ
- Sports
ಶ್ರೀಲಂಕಾ ವಿರುದ್ಧದ ಸರಣಿಗೆ ವಿಂಡೀಸ್ ತಂಡ ಪ್ರಕಟ, ಗೇಲ್ ವಾಪಸ್
- Movies
ರಾಬರ್ಟ್ ಸಂಭ್ರಮ: ವಿನಯದಿಂದ ತೆಲುಗು ಅಭಿಮಾನಿಗಳ ಮನಸು ಕದ್ದ ದರ್ಶನ್
- Lifestyle
ಮಾರ್ಚ್ ತಿಂಗಳಲ್ಲಿ ವಿವಾಹವಾಗಲು ಇಲ್ಲಿದೆ ಶುಭದಿನಾಂಕಗಳು
- Education
RBI Grade B Admit Card 2021: ಪ್ರವೇಶ ಪತ್ರ ಡೌನ್ಲೋಡ್ ಮಾಡುವುದು ಹೇಗೆ ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಕೋವಿಡ್ ವ್ಯಾಕ್ಸಿನ್ ಸಾಗಾಣಿಕೆಗಾಗಿ ಹೊಸ ಮಾದರಿಯ ಟ್ರಕ್ ಸಿದ್ದಪಡಿಸಿದ ಭಾರತ್ ಬೆಂಝ್
ಮಾಹಾಮಾರಿ ಕರೋನಾ ವಿರುದ್ಧದ ಹೋರಾಟಕ್ಕಾಗಿ ದೇಶಾದ್ಯಂತ ವ್ಯಾಕ್ಸಿನ್ ವಿತರಣೆಗೆ ಚಾಲನೆ ನೀಡಲಾಗಿದ್ದು, ಸುರಕ್ಷಿತ ವ್ಯಾಕ್ಸಿನ್ ಸಾಗಾಣಿಕೆಯು ಸಾಕಷ್ಟು ಸವಾಲುಗಳಿಂದ ಕೂಡಿದೆ. ಲಸಿಕೆಯನ್ನು ಸುರಕ್ಷಿತವಾಗಿ ಸಾಗಿಸಲು ಅಗತ್ಯ ಸೌಲಭ್ಯಗಳನ್ನು ಹೊಂದಿರುವ ವಾಹನಗಳ ಬಳಕೆಯು ಅಗತ್ಯವಿದ್ದು, ಪ್ರತ್ಯೇಕವಾಗಿ ವ್ಯಾಕ್ಸಿನ್ ಸಾಗಾಣಿಕೆಗಾಗಿಯೇ ಭಾರತ್ ಬೆಂಝ್ ಕಂಪನಿಯು ವಿಶೇಷ ಟ್ರಕ್ಗಳನ್ನು ಸಿದ್ದಪಡಿಸಿದೆ.

ಡ್ಲೈಮರ್ ಇಂಡಿಯಾ ಕಮರ್ಷಿಯಲ್ ವೆಹಿಕಲ್(ಡಿಐಸಿವಿ) ವಿಭಾಗವು ತನ್ನ ತನ್ನ ಅಂಗಸಂಸ್ಥೆಯಾದ ಭಾರತ್ ಬೆಂಝ್ ಮೂಲಕ ಕೋವಿಡ್ ವ್ಯಾಕ್ಸಿನ್ ಸುರಕ್ಷಿತ ಸಾಗಾಣಿಕೆಗೆ ಅನುಕೂಲಕರವಾಗುವಂತೆ ಹೊಸ ಟ್ರಕ್ಗಳನ್ನು ಸಿದ್ದಪಡಿಸಿದ್ದು, ಹೊಸ ಟ್ರಕ್ ಮಾದರಿಗೆ ಕಂಪನಿಯು 'ಬಿ ಸೇಫ್ ಎಕ್ಸ್ಪ್ರೆಸ್' ಎಂದು ಕರೆದಿದೆ. ಲಸಿಕೆಯನ್ನು ಸುರಕ್ಷಿತವಾಗಿ ಸಾಗಿಸಲು ಅಗತ್ಯ ಸೌಲಭ್ಯ ಹೊಂದಿರುವ ಹೊಸ ಟ್ರಕ್ ಮಾದರಿಯು ಕೇಂದ್ರ ಸರ್ಕಾರದ ಮಾರ್ಗಸೂಚಿ ಅನುಸಾರವಾಗಿ ಸಿದ್ದಗೊಂಡಿದೆ.

ವ್ಯಾಕ್ಸಿನ್ ಸಾಗಾಣಿಕೆಗಳಿಗೆ ಕೇಂದ್ರ ಸರ್ಕಾರವು ಹೊಸ ಮಾರ್ಗಸೂಚಿಗಳನ್ನು ನೀಡಿದ್ದು, ಹೊಸ ಮಾರ್ಗಸೂಚಿ ಅನುಸಾರವಾಗಿ ಭಾರತ್ ಬೆಂಝ್ ಕಂಪನಿಯು ಬಿ ಸೇಫ್ ಎಕ್ಸ್ಪ್ರೆಸ್ ಟ್ರಕ್ ಅಭಿವೃದ್ದಿಗೊಳಿಸಿದೆ.

ಲಸಿಕೆ ಸಾಗಾಣಿಕೆಯ ಸಮಯದಲ್ಲಿ ಸೂಕ್ತವಾದ ತಾಪಮಾನದ ಅವಶ್ಯವಿದ್ದು, ನಿಗದಿತ ತಾಪಮಾನವನ್ನು ಕಾಪಾಡಿಕೊಳ್ಳಲು ಹೊಸದಾಗಿ ಅಭಿವೃದ್ಧಿಪಡಿಸಿದ ಶೈತ್ಯೀಕರಣ ಘಟಕಗಳನ್ನು ಬಿ ಸೇಫ್ ಎಕ್ಸ್ಪ್ರೆಸ್ ಟ್ರಕ್ನಲ್ಲಿ ಅಳವಡಿಸಲಾಗಿದೆ.

ಜೊತೆಗೆ ಕಂಟೇನರ್ ನಿರ್ಮಾಣದಲ್ಲಿ ವಿಶೇಷವಾದ ಗ್ಲಾಸ್ ರೀನ್ಫೋರ್ಸ್ಡ್ ಪ್ಲಾಸ್ಟಿಕ್ (ಜಿಆರ್ಪಿ) ಮತ್ತು ಎಕ್ಸ್ಪಿಎಸ್ ಫೋಮ್ ಅನ್ನು ಬಳಕೆ ಮಾಡಲಾಗಿದ್ದು, ಇದು ಲಸಿಕೆಯನ್ನು ಗರಿಷ್ಠ ಸುರಕ್ಷತೆಯೊಂದಿಗೆ ಸಾಗಾಣಿಕೆ ಮಾಡಲು ಅನುಕೂಲಕವಾಗಿದೆ. ಹಾಗೆಯೇ ಹೊಸ ಕಂಟೇನರ್ನಲ್ಲಿ ವಾಟರ್ ರೆಸಿಸ್ಟಂಟ್ ಮತ್ತು ರೋಗ ನಿರೋಧಕ ಅಂಶಗಳನ್ನು ಜೋಡಣೆ ಮಾಡಲಾಗಿದ್ದು, ಕೇವಲ 96 ಗಂಟೆಗಳಲ್ಲಿ ಕಂಟೇನರ್ ಅನ್ನು ಮರು ಜೋಡಣೆ ಮಾಡಬಹುದಾಗಿದೆ.

ಇದರೊಂದಿಗೆ ಭಾರತ್ ಬೆಂಝ್ ಕಂಪನಿಯು ವ್ಯಾಕ್ಸಿನ್ ಸಾಗಿರುವ ಬಿ ಸೇಫ್ ಎಕ್ಸ್ಪ್ರೆಸ್ ಟ್ರಕ್ಗಳಿಗೆ ಕನೆಕ್ಟೆಡ್ ಟೆಕ್ನಾಲಜಿಗಳನ್ನು ಅಳವಡಿಸಲಾಗಿದ್ದು, ಟ್ರಕ್ ಚಲನೆಯ ಮೇಲೆ ಸಂಪೂರ್ಣವಾಗಿ ನಿಗಾ ಇಡಬಹುದಾಗಿದೆ.
MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಭಾರತ್ ಬೆಂಝ್ ಕಂಪನಿಯ ಜೊತೆಗೂಡಿರುವ ಮದರ್ಸನ್ ಗ್ರೂಪ್ ಕಂಪನಿಯು ವ್ಯಾಕ್ಸಿನ್ ಸಾಗಾಣಿಕೆಯ ತಂತ್ರಜ್ಞಾನ ಅಳವಡಿಕೆಯ ಜವಾಬ್ದಾರಿ ಹೊತ್ತಿದ್ದು, ವ್ಯಾಕ್ಸಿನ್ ಸಾಗಿಸುವ ಪ್ರತಿ ಟ್ರಕ್ಗೂ ಸರ್ಪೊಟಿವ್ ರಿಫೇರಿ ವಾಹನಗಳನ್ನು ನಿಯೋಜಿಸಲಾಗಿದೆ.

ಭಾರತದಲ್ಲಿ ಸದ್ಯ ಮೇಡ್ ಇನ್ ಇಂಡಿಯಾ ನಿರ್ಮಾಣದ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಲಸಿಕೆ ನೀಡಲಾಗುತ್ತಿದ್ದು, ಇದುವರೆಗೆ ಭಾರತದಲ್ಲಿ ಸುಮಾರು 12 ಲಕ್ಷ ಫ್ರಂಟ್ ವಾರಿರ್ಯಸ್ಗೆ ಲಸಿಕೆ ನೀಡಲಾಗಿದೆ. ಶೀಘ್ರದಲ್ಲೇ ಎರಡನೇ ಹಂತದ ಲಸಿಕೆ ವಿತರಣೆಗೆ ಸಿದ್ದತೆ ನಡೆಸಲಾಗುತ್ತಿದ್ದು, ಎರಡನೇ ಹಂತದ ಯಶಸ್ವಿಗಾಗಿ ಸಾಕಷ್ಟು ತಯಾರಿ ನಡೆಯುತ್ತಿದೆ.
MOST READ: ಪ್ರತಿ ಚಾರ್ಜ್ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್ಯುವಿ..!

ಇದಕ್ಕೆ ಪೂರಕವಾಗಿ ಕೇಂದ್ರ ಸರ್ಕಾರ ಮಾರ್ಗಸೂಚಿಯೆಂತೆ ಆಟೋ ಉತ್ಪಾದನಾ ಕಂಪನಿಗಳು ವ್ಯಾಕ್ಸಿನ್ ಸಾಗಾಣಿಕೆ ವಾಹನಗಳನ್ನು ಅಗತ್ಯ ಸೌಲಭ್ಯಗಳೊಂದಿಗೆ ಸಿದ್ದಪಡಿಸುತ್ತಿದ್ದು, ವ್ಯಾಕ್ಸಿನ್ ಸುರಕ್ಷಿತವಾಗಿ ತಲುಪಲು ಹೊಸ ಮಾದರಿಯ ವಾಹನಗಳು ಸಾಕಷ್ಟು ಸಹಕಾರಿಯಾಗಲಿವೆ.