ಪರಿಸರ ಸ್ನೇಹಿ ವಾಹನ ಬಳಕೆಯಲ್ಲಿ ಬ್ಲ್ಯೂ ಸ್ಮಾರ್ಟ್ ಕಂಪನಿಯಿಂದ ಹೊಸ ದಾಖಲೆ

ಮಾಲಿನ್ಯ ತಡೆಗೆ ಮತ್ತು ಸಾರಿಗೆ ವೆಚ್ಚಗಳನ್ನು ತಗ್ಗಿಸಲು ಎಲೆಕ್ಟ್ರಿಕ್ ವಾಹನಗಳು ವರವಾಗಿ ಪರಿಣಮಿಸಿದ್ದು, ಟ್ಯಾಕ್ಸಿ ಸೇವೆಗಳಲ್ಲಿ ಮುಂಚೂಣಿ ಸಾಧಿಸುತ್ತಿರುವ ಬ್ಲ್ಯೂ ಸ್ಮಾರ್ಟ ಕಂಪನಿಯು ಸಹ ಪರಿಸರ ಸ್ನೇಹಿ ವಾಹನ ಬಳಕೆಯಲ್ಲಿ ಹೊಸ ದಾಖಲೆಗೆ ಕಾರಣವಾಗಿದೆ.

ಪರಿಸರ ಸ್ನೇಹಿ ವಾಹನ ಬಳಕೆಯಲ್ಲಿ ಬ್ಲ್ಯೂ ಸ್ಮಾರ್ಟ್ ಕಂಪನಿಯಿಂದ ಹೊಸ ದಾಖಲೆ

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಇವಿ ವಾಹನ ನೀತಿ ಪರಿಣಾಮ ಎಲೆಕ್ಟ್ರಿಕ್ ವಾಹನಗಳ ಬಳಕೆ ಹೆಚ್ಚಳವಾಗುತ್ತಿದ್ದು, ಕೇವಲ ವ್ಯಯಕ್ತಿಕ ಬಳಕೆಗಾಗಿ ಮಾತ್ರವಲ್ಲ ಟ್ಯಾಕ್ಸಿ ವಿಭಾಗದಲ್ಲೂಇವಿ ಕಾರುಗಳು ಸದ್ದು ಮಾಡುತ್ತಿವೆ. ಎಲೆಕ್ಟ್ರಿಕ್ ಕಾರುಗಳ ಟ್ಯಾಕ್ಸಿ ಕಂಪನಿಯಾಗಿರುವ ಬ್ಲ್ಯೂ ಸ್ಮಾರ್ಟ್ ಕಂಪನಿಯು ಸಹ ಎಲೆಕ್ಟ್ರಿಕ್ ಕಾರುಗಳ ಬಳಕೆಯಲ್ಲಿ ಹೊಸ ದಾಖಲೆಗೆ ಕಾರಣವಾಗಿದೆ.

ಪರಿಸರ ಸ್ನೇಹಿ ವಾಹನ ಬಳಕೆಯಲ್ಲಿ ಬ್ಲ್ಯೂ ಸ್ಮಾರ್ಟ್ ಕಂಪನಿಯಿಂದ ಹೊಸ ದಾಖಲೆ

2019ರಲ್ಲಿ ಮೊದಲ ಬಾರಿಗೆ ಎಲೆಕ್ಟ್ರಿಕ್ ಕಾರುಗಳ ಟ್ಯಾಕ್ಸಿ ಸೇವೆ ಆರಂಭಿಸಿದ ಬ್ಲ್ಯೂ ಸ್ಮಾರ್ಟ್ ಕಂಪನಿಯು ದೆಹಲಿ ಮತ್ತು ಎನ್‌ಸಿಆರ್ ಸುತ್ತಮುತ್ತ ಚಾರ್ಜಿಂಗ್ ಸೌಲಭ್ಯಗಳಿಗೆ ಅನುಗುಣವಾಗಿ ಸೇವೆಗಳನ್ನು ಒದಗಿಸುತ್ತಿದ್ದು, ಇದುವರೆಗೆ 1.60 ಕೋಟಿ ಕಿ.ಮೀ ಮಾಲಿನ್ಯ ರಹಿತ ಟ್ಯಾಕ್ಸಿ ಸೇವೆಗಳನ್ನು ನೀಡಿದೆ.

ಪರಿಸರ ಸ್ನೇಹಿ ವಾಹನ ಬಳಕೆಯಲ್ಲಿ ಬ್ಲ್ಯೂ ಸ್ಮಾರ್ಟ್ ಕಂಪನಿಯಿಂದ ಹೊಸ ದಾಖಲೆ

ಎಲೆಕ್ಟ್ರಿಕ್ ವಾಹನಗಳ ಬಳಕೆಯಲ್ಲಿ ಕಳೆದ ಒಂದು ವರ್ಷದಿಂದ ಸಾಕಷ್ಟು ಏರಿಕೆಯಾಗಿದ್ದು, ತನ್ನ ಸಾವಿರಾರು ಎಲೆಕ್ಟ್ರಿಕ್ ಕಾರುಗಳ ಮೂಲಕ ಬ್ಲ್ಯೂ ಸ್ಮಾರ್ಟ್ ಕಂಪನಿಯು ಒಟ್ಟು 1.60 ಕೋಟಿ ಕಿ.ಮೀ ಟ್ಯಾಕ್ಸಿ ಸೇವೆಯನ್ನು ಮಾಲಿನ್ಯ ರಹಿತ ಮಾಡುವಲ್ಲಿ ಯಶಸ್ವಿಯಾಗಿದೆ.

ಪರಿಸರ ಸ್ನೇಹಿ ವಾಹನ ಬಳಕೆಯಲ್ಲಿ ಬ್ಲ್ಯೂ ಸ್ಮಾರ್ಟ್ ಕಂಪನಿಯಿಂದ ಹೊಸ ದಾಖಲೆ

1.60 ಕೋಟಿ ಕಿ.ಮೀ ಮಾಲಿನ್ಯ ರಹಿತ ಟ್ಯಾಕ್ಸಿ ಸೇವೆಗಳ ಚಾಲನೆಯಿಂದ ಪರೋಕ್ಷವಾಗಿ ಅರ್ಧಕ್ಕಿಂತಲೂ ಹೆಚ್ಚು ನಿರ್ವಹಣಾ ವೆಚ್ಚ ತಗ್ಗಿಲ್ಲದ್ದದೆ, ಶಬ್ದ ಮಾಲಿನ್ಯ ಮತ್ತು ವಾಯು ಮಾಲಿನ್ಯ ತಡೆಯಲು ಇದು ಸಾಕಷ್ಟು ಸಹಕಾರಿಯಾಗಿದೆ. ಮಾಹಿತಿಗಳ ಪ್ರಕಾರ ಬ್ಲ್ಯೂ ಸ್ಮಾರ್ಟ್ ಇವಿ ಕ್ಯಾಬ್ ಸೇವೆಗಳಿಂದ ಸುಮಾರು 1.08 ಬಿಲಿಯನ್ ಗ್ರಾಂ ನಷ್ಟು ಮಾಲಿನ್ಯ ಪ್ರಮಾಣ ತಡೆಯಲು ಕಾರಣವಾಗಿದ್ದು, ನಗರದಲ್ಲಿನ ಮಾಲಿನ್ಯ ಉತ್ಪತ್ತಿಗೆ ಸಾಕಷ್ಟು ಸಹಕಾರಿಯಾಗಿದೆ.

ಪರಿಸರ ಸ್ನೇಹಿ ವಾಹನ ಬಳಕೆಯಲ್ಲಿ ಬ್ಲ್ಯೂ ಸ್ಮಾರ್ಟ್ ಕಂಪನಿಯಿಂದ ಹೊಸ ದಾಖಲೆ

ಇದಕ್ಕಾಗಿ ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ಮಾದರಿಯ ಇವಿ ಟ್ಯಾಕ್ಸಿ ಸೌಲಭ್ಯಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದ್ದು, ಮಾರಕವಾಗಿ ಪರಿಣಮಿಸುತ್ತಿರುವ ಮಾಲಿನ್ಯ ಪ್ರಮಾಣವನ್ನು ತಗ್ಗಿಸಲು ಇವಿ ವಾಹನಗಳಿಂದ ಮಾತ್ರ ಸಾಧ್ಯ ಎಂಬುವುದರಲ್ಲಿ ಎರಡು ಮಾತಿಲ್ಲ.

ಪರಿಸರ ಸ್ನೇಹಿ ವಾಹನ ಬಳಕೆಯಲ್ಲಿ ಬ್ಲ್ಯೂ ಸ್ಮಾರ್ಟ್ ಕಂಪನಿಯಿಂದ ಹೊಸ ದಾಖಲೆ

ಇನ್ನು ದುಬಾರಿ ಇಂಧನ ದರ ಮತ್ತು ಹೆಚ್ಚುತ್ತಿರುವ ಮಾಲಿನ್ಯ ಪ್ರಮಾಣವನ್ನು ಪರಿಣಾಮಕಾರಿಯಾಗಿ ತಗ್ಗಿಸುವ ನಿಟ್ಟಿನಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವಾರು ಹೊಸ ಯೋಜನೆಗಳನ್ನು ಜಾರಿಗೆ ತಂದಿದ್ದು, ಹೊಸ ಯೋಜನೆಗಳ ಪರಿಣಾಮ ಇವಿ ವಾಹನ ಮಾರಾಟದಲ್ಲಿ ಸಾಕಷ್ಟು ಏರಿಕೆಯಾಗಿದೆ.

MOST READ: ಲಾಕ್‌ಡೌನ್ ಹಿನ್ನಲೆ ವಾಹನ ದಾಖಲೆಗಳ ಮಾನ್ಯತಾ ಅವಧಿ ಕುರಿತು ಸಾರಿಗೆ ಇಲಾಖೆಯಿಂದ ಹೊಸ ಆದೇಶ

ಪರಿಸರ ಸ್ನೇಹಿ ವಾಹನ ಬಳಕೆಯಲ್ಲಿ ಬ್ಲ್ಯೂ ಸ್ಮಾರ್ಟ್ ಕಂಪನಿಯಿಂದ ಹೊಸ ದಾಖಲೆ

ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳ ಬದಲಾಗಿ ಎಲೆಕ್ಟ್ರಿಕ್ ವಾಹನಗಳನ್ನು ಅಳವಡಿಸಿಕೊಳ್ಳುವ ವಾಹನ ಮಾಲೀಕರಿಗೆ ಹೆಚ್ಚಿನ ಮಟ್ಟದ ಪ್ರೋತ್ಸಾಹ ನೀಡುತ್ತಿರುವುದು ಹೊಸ ಬದಲಾವಣೆಗೆ ಕಾರಣವಾಗಿದ್ದು, 2020-21ರ ಹಣಕಾಸು ವರ್ಷದಲ್ಲಿ ಒಟ್ಟು 1.35 ಲಕ್ಷ ಯುನಿಟ್ ಎಲೆಕ್ಟ್ರಿಕ್ ವಾಹನಗಳು ನೋಂದಣಿಯಾಗಿರುವುದು ಮಹತ್ವದ ಬದಲಾವಣೆಯಾಗಿದೆ.

ಪರಿಸರ ಸ್ನೇಹಿ ವಾಹನ ಬಳಕೆಯಲ್ಲಿ ಬ್ಲ್ಯೂ ಸ್ಮಾರ್ಟ್ ಕಂಪನಿಯಿಂದ ಹೊಸ ದಾಖಲೆ

ಕಳೆದ 10 ವರ್ಷಗಳ ಅವಧಿಯಲ್ಲೇ ಮೊದಲ ಬಾರಿಗೆ 2020-21 ಹಣಕಾಸು ವರ್ಷದಲ್ಲಿ ಹೆಚ್ಚಿನ ಮಟ್ಟದ ಎಲೆಕ್ಟ್ರಿಕ್ ವಾಹನಗಳು ಮಾರಾಟಗೊಂಡಿದ್ದು, ಕಳೆದ ಹತ್ತುಅವಧಿಯಲ್ಲಿ ಸುಮಾರು 6.38 ಲಕ್ಷ ಎಲೆಕ್ಟ್ರಿಕ್ ವಾಹನಗಳು ನೋಂದಣಿಯಾಗಿವೆ.

MOST READ: ಸೆಕೆಂಡ್ ಹ್ಯಾಂಡ್ ಎಲೆಕ್ಟ್ರಿಕ್ ವಾಹನ ಖರೀದಿಸುವ ಮುನ್ನ ತಿಳಿದಿರಬೇಕಾದ ಪ್ರಮುಖ ಅಂಶಗಳಿವು

ಪರಿಸರ ಸ್ನೇಹಿ ವಾಹನ ಬಳಕೆಯಲ್ಲಿ ಬ್ಲ್ಯೂ ಸ್ಮಾರ್ಟ್ ಕಂಪನಿಯಿಂದ ಹೊಸ ದಾಖಲೆ

ಸಿಇಇ-ಸಿಇಎಫ್ ಎಲೆಕ್ಟ್ರಿಕ್ ಮೊಬಿಲಿಟಿ ವರದಿಯ ಪ್ರಕಾರ, 2020-21ರಲ್ಲಿನ ಒಟ್ಟು ವಾಹನಗಳ ನೋಂದಣಿಯಲ್ಲಿ ಎಲೆಕ್ಟ್ರಿಕ್ ವಾಹನಗಳು ಶೇಕಡಾ 0.88 ರಷ್ಟನ್ನು ನೋಂದಣಿ ಹೊಂದಿದ್ದು, ಇದು ಈ ವರ್ಷದ ವಾಹನ ಮಾರಾಟದಲ್ಲಿ ಮತ್ತಷ್ಟು ಹೆಚ್ಚಳವಾಗುವ ನೀರಿಕ್ಷೆಯಲ್ಲಿದೆ.

Most Read Articles

Kannada
English summary
Blu-Smart’s Electric Taxis Complete 1.6 Crore Emission-Free Kilometres. Read in Kannada.
Story first published: Wednesday, June 9, 2021, 20:56 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X