2 ಸೀರಿಸ್ ಗ್ರ್ಯಾನ್ ಕೂಪೆ ಮಾದರಿಯಲ್ಲಿ 220ಐ ಸ್ಪೋರ್ಟ್ ವೆರಿಯೆಂಟ್ ಬಿಡುಗಡೆ ಮಾಡಿದ ಬಿಎಂಡಬ್ಲ್ಯು

ಬಿಎಂಡಬ್ಲ್ಯು ಇಂಡಿಯಾ ಕಂಪನಿಯು ತನ್ನ ಎಂಟ್ರಿ ಲೆವಲ್ ಸೆಡಾನ್ ಕಾರು ಮಾದರಿಯಾದ 2 ಸೀರಿಸ್ ಗ್ರ್ಯಾನ್ ಕೂಪೆ ಮಾದರಿಯಲ್ಲಿ ಹೊಸದಾಗಿ 220ಐ ಸ್ಪೋರ್ಟ್ ವೆರಿಯೆಂಟ್ ಬಿಡುಗಡೆ ಮಾಡಿದ್ದು, ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 37.90 ಲಕ್ಷ ಬೆಲೆ ಹೊಂದಿದೆ.

2 ಸೀರಿಸ್ ಗ್ರ್ಯಾನ್ ಕೂಪೆ ಮಾದರಿಯಲ್ಲಿ 220ಐ ಸ್ಪೋರ್ಟ್ ವೆರಿಯೆಂಟ್ ಬಿಡುಗಡೆ ಮಾಡಿದ ಬಿಎಂಡಬ್ಲ್ಯು

2 ಸೀರಿಸ್ ಗ್ರ್ಯಾನ್ ಕೂಪೆ ಮಾದರಿಯಲ್ಲಿ ಕಳೆದ ಕೆಲ ತಿಂಗಳ ಹಿಂದಷ್ಟೇ ಪೆಟ್ರೋಲ್ ಮಾದರಿಯನ್ನು ಬಿಡುಗಡೆ ಮಾಡಿದ್ದ ಬಿಎಂಡಬ್ಲ್ಯು ಕಂಪನಿಯು ಇದೀಗ ಹೊಸದಾಗಿ ಪೆಟ್ರೋಲ್ ಎಂಜಿನ್ ಆಯ್ಕೆಯೊಂದಿಗೆ 220ಐ ಸ್ಪೋರ್ಟ್ ವೆರಿಯೆಂಟ್ ಬಿಡುಗಡೆ ಮಾಡಿದೆ. 2 ಸೀರಿಸ್ ಗ್ರ್ಯಾನ್ ಕೂಪೆ ಆವೃತ್ತಿಯಲ್ಲಿ ಎಂಟ್ರಿ ಲೆವಲ್ ಮಾದರಿಯಾಗಿ ಮಾರಾಟಗೊಳ್ಳಲಿರುವ ಹೊಸ 220ಐ ಸ್ಪೋರ್ಟ್ ವೆರಿಯೆಂಟ್ ಮಧ್ಯಮ ಗಾತ್ರದ ಸೆಡಾನ್ ಕಾರುಗಳಿಂದ ಅಪ್‌ಡೆಟ್ ಬಯಸುವ ಗ್ರಾಹಕರನ್ನು ಸೆಳೆಯಲಿದೆ.

2 ಸೀರಿಸ್ ಗ್ರ್ಯಾನ್ ಕೂಪೆ ಮಾದರಿಯಲ್ಲಿ 220ಐ ಸ್ಪೋರ್ಟ್ ವೆರಿಯೆಂಟ್ ಬಿಡುಗಡೆ ಮಾಡಿದ ಬಿಎಂಡಬ್ಲ್ಯು

ಹೊಸ 2 ಸೀರಿಸ್ ಗ್ರ್ಯಾನ್ ಕೂಪೆ ಕಾರು ಮಾದರಿಯಲ್ಲಿ ಈಗಾಗಲೇ ಪೆಟ್ರೋಲ್ ಆವೃತ್ತಿಯು 220ಐ ಎಂ ಸ್ಪೋರ್ಟ್ ಮತ್ತು ಡೀಸೆಲ್ ಮಾದರಿಯು 220ಡಿ ಸ್ಪೋರ್ಟ್ ಮತ್ತು 220ಡಿ ಎಂ ಸ್ಪೋರ್ಟ್ ವೆರಿಯೆಂಟ್‌ಗಳನ್ನು ಪಡೆದುಕೊಂಡಿದ್ದು, ಹೊಸ 220ಐ ಸ್ಪೋರ್ಟ್ ವೆರಿಯೆಂಟ್ ಆರಂಭಿಕ ಕಾರು ಮಾದರಿಯಾಗಿದೆ.

2 ಸೀರಿಸ್ ಗ್ರ್ಯಾನ್ ಕೂಪೆ ಮಾದರಿಯಲ್ಲಿ 220ಐ ಸ್ಪೋರ್ಟ್ ವೆರಿಯೆಂಟ್ ಬಿಡುಗಡೆ ಮಾಡಿದ ಬಿಎಂಡಬ್ಲ್ಯು

ಹೊಸ ಕಾರು ಬಿಎಂಡಬ್ಲ್ಯು ಕಂಪನಿಯು ಭಾರತದಲ್ಲೇ ಸಂಪೂರ್ಣವಾಗಿ ಉತ್ಪಾದನೆ ಮಾಡಲಾಗುತ್ತಿರುವ 11ನೇ ಕಾರು ಮಾದರಿಯಾಗಿದ್ದು, 2 ಸೀರಿಸ್ ಗ್ರ್ಯಾನ್ ಕೂಪೆ ಮಾದರಿಯು ಬಿಎಂಡಬ್ಲ್ಯು ಉತ್ಪಾದನೆಯ ಕಾರುಗಳಲ್ಲೇ ಎಂಟ್ರಿ ಲೆವಲ್ ಸೆಡಾನ್ ಮಾದರಿಯಾಗಿದೆ.

2 ಸೀರಿಸ್ ಗ್ರ್ಯಾನ್ ಕೂಪೆ ಮಾದರಿಯಲ್ಲಿ 220ಐ ಸ್ಪೋರ್ಟ್ ವೆರಿಯೆಂಟ್ ಬಿಡುಗಡೆ ಮಾಡಿದ ಬಿಎಂಡಬ್ಲ್ಯು

ಬಿಎಂಡಬ್ಲ್ಯು ಕಂಪನಿಯು ಹೊಸ ಕಾರನ್ನ ಎಫ್ಎಎಆರ್ ಪ್ಲ್ಯಾಟ್‌ಫಾರ್ಮ್ ಅಡಿ ನಿರ್ಮಾಣ ಮಾಡುತ್ತಿದ್ದು, ಹೊಸ ಕಾರು 8 ಸೀರಿಸ್ ಗ್ರ್ಯಾನ್ ಕೂಪೆ ಮಾದರಿಯಿಂದ ಹಲವಾರು ತಾಂತ್ರಿಕ ಅಂಶಗಳನ್ನು ಎರವಲು ಪಡೆದುಕೊಂಡಿದೆ. 2 ಸೀರಿಸ್ ಗ್ರ್ಯಾನ್ ಕೂಪೆ ಕಾರು ಮಾದರಿಯಲ್ಲಿ ಆಕರ್ಷಕವಾದ ಗ್ರಿಲ್, ಫುಲ್ ಎಲ್ಇಡಿ ಹೆಡ್‌ಲ್ಯಾಂಪ್, ಇಂಟ್ರಾಗ್ರೆಟೆಡ್ ಎಲ್ಇಡಿ ಡಿಆರ್‌ಎಸ್, ಸ್ಟೈಲಿಷ್ ಆಗಿರುವ ಅಲಾಯ್ ವೀಲ್ಹ್, ವಿಸ್ತರಿತ ಎಲ್ಇಡಿ ಟೈಲ್‌ಲೈಟ್ಸ್, 8 ಸೀರಿಸ್ ಗ್ರ್ಯಾನ್ ಕೂಪೆ ಮಾದರಿಯ ಇಳಿಜಾರಿನಂತಿರುವ ರೂಫ್ ಲೈನ್ ಸೌಲಭ್ಯವು ಕೂಪೆ ವೈಶಿಷ್ಟ್ಯತೆಗೆ ಪೂರಕವಾಗಿವೆ.

2 ಸೀರಿಸ್ ಗ್ರ್ಯಾನ್ ಕೂಪೆ ಮಾದರಿಯಲ್ಲಿ 220ಐ ಸ್ಪೋರ್ಟ್ ವೆರಿಯೆಂಟ್ ಬಿಡುಗಡೆ ಮಾಡಿದ ಬಿಎಂಡಬ್ಲ್ಯು

ಹಾಗೆಯೇ ಹೊಸ ಕಾರಿನಲ್ಲಿ ಹಲವಾರು ಸುಧಾರಿತ ತಂತ್ರಜ್ಞಾನ ಪ್ರೇರಿತ ಸೌಲಭ್ಯಗಳನ್ನು ಬಳಕೆ ಮಾಡಲಾಗಿದ್ದು, ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಇನ್ಪೋಟೈನ್‌ಮೆಂಟ್ ಕ್ಲಸ್ಟರ್, ರಿಯರ್ ಎಸಿ ವೆಂಟ್ಸ್, ಪನೋರಮಿಕ್ ಸನ್‌ರೂಫ್, ವೈರ್‌ಲೆಸ್ ಚಾರ್ಜರ್ ಮತ್ತು ಆ್ಯಂಬಿಯೆಂಟ್ ಲೈಟಿಂಗ್ಸ್ ಸೌಲಭ್ಯಗಳಿವೆ.

MOST READ: ಭಾರತದಲ್ಲಿ ಅತಿ ಹೆಚ್ಚು ರಿಸೇಲ್ ವ್ಯಾಲ್ಯೂ ಹೊಂದಿರುವ ಕಾರುಗಳಿವು!

2 ಸೀರಿಸ್ ಗ್ರ್ಯಾನ್ ಕೂಪೆ ಮಾದರಿಯಲ್ಲಿ 220ಐ ಸ್ಪೋರ್ಟ್ ವೆರಿಯೆಂಟ್ ಬಿಡುಗಡೆ ಮಾಡಿದ ಬಿಎಂಡಬ್ಲ್ಯು

ಎಂಜಿನ್ ಮತ್ತು ಪರ್ಫಾಮೆನ್ಸ್

2 ಸೀರಿಸ್ ಗ್ರ್ಯಾನ್ ಕೂಪೆ ಮಾದರಿಯಲ್ಲಿ ಪೆಟ್ರೋಲ್ ಮಾದರಿಯು 2.0-ಲೀಟರ್ ಟ್ವಿನ್ ಟರ್ಬೊ ಎಂಜಿನ್‌ನೊಂದಿಗೆ 188-ಬಿಎಚ್‌ಪಿ, 280-ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದ್ದಲ್ಲಿ 2.0-ಲೀಟರ್ ಟ್ವಿನ್ ಟರ್ಬೋ ಡೀಸೆಲ್ ಎಂಜಿನ್ ಮಾದರಿಯು ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಯೊಂದಿಗೆ 190-ಬಿಎಚ್‌ಪಿ ಮತ್ತು 400-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದೆ.

2 ಸೀರಿಸ್ ಗ್ರ್ಯಾನ್ ಕೂಪೆ ಮಾದರಿಯಲ್ಲಿ 220ಐ ಸ್ಪೋರ್ಟ್ ವೆರಿಯೆಂಟ್ ಬಿಡುಗಡೆ ಮಾಡಿದ ಬಿಎಂಡಬ್ಲ್ಯು

ಬಿಎಂಡಬ್ಲ್ಯು ಕಂಪನಿಯು ಹೊಸ ಎಂಜಿನ್ ಮತ್ತು ವಿವಿಧ ವೆರಿಯೆಂಟ್‌ಗಳು ಮೂಲಕ ಐಷಾರಾಮಿ ಕಾರು ಖರೀದಿದಾರರನ್ನು ಸೆಳೆಯಲಿದ್ದು, ಹೊಸ ಎಂಜಿನ್ ಮಾದರಿಯು 7.5 ಸೆಕೆಂಡುಗಳಲ್ಲಿ ಸೊನ್ನೆಯಿಂದ 100 ಕಿ.ಮೀ ವೇಗ ಸಾಧಿಸುತ್ತದೆ.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

2 ಸೀರಿಸ್ ಗ್ರ್ಯಾನ್ ಕೂಪೆ ಮಾದರಿಯಲ್ಲಿ 220ಐ ಸ್ಪೋರ್ಟ್ ವೆರಿಯೆಂಟ್ ಬಿಡುಗಡೆ ಮಾಡಿದ ಬಿಎಂಡಬ್ಲ್ಯು

ಈ ಮೂಲಕ ಮಾರುಕಟ್ಟೆಯಲ್ಲಿರುವ ಜನಪ್ರಿಯವಾಗಿರುವ ಮರ್ಸಿಡಿಸ್ ಬೆಂಝ್ ಎ ಕ್ಲಾಸ್ ಸೆಡಾನ್ ಮಾದರಿಗೆ ಭರ್ಜರಿ ಪೈಟೋಟಿ ನೀಡಲಿದ್ದು, ಹೊಸ ಕಾರು ಚೆನ್ನೈನಲ್ಲಿರುವ ಘಟಕದಲ್ಲೇ ಪೂರ್ಣ ಪ್ರಮಾಣದಲ್ಲಿ ನಿರ್ಮಾಣಗೊಳ್ಳುವುದರೊಂದಿಗೆ ಮೇಡ್ ಇನ್ ಇಂಡಿಯಾ ಕಾರು ಮಾದರಿಯಾಗಿ ಹೊರಹೊಮ್ಮಿದೆ.

Most Read Articles

Kannada
English summary
BMW 220i Sport Launched In India At Rs 37.90 Lakh. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X