ಕಾರುಗಳ ಬೆಲೆಯನ್ನು ಲಕ್ಷಾಂತರ ರೂಪಾಯಿಗಳಷ್ಟು ಏರಿಕೆ ಮಾಡಿದ ಬಿಎಂಡಬ್ಲ್ಯು

ಐಷಾರಾಮಿ ಕಾರು ತಯಾರಕ ಕಂಪನಿಯಾದ ಬಿಎಂಡಬ್ಲ್ಯು ಇಂಡಿಯಾ ದೇಶಿಯ ಮಾರುಕಟ್ಟೆಯಲ್ಲಿರುವ ತನ್ನ ಕಾರುಗಳ ಬೆಲೆಯನ್ನು ಹೆಚ್ಚಿಸಿದೆ. ಮಾಹಿತಿಗಳ ಪ್ರಕಾರ ಬಿಎಂಡಬ್ಲ್ಯು ಕಂಪನಿಯು 3 ಸೀರಿಸ್, 2 ಸೀರಿಸ್ ಗ್ರ್ಯಾನ್ ಕೂಪೆ, ಎಕ್ಸ್ 1, ಎಕ್ಸ್ 3, ಎಕ್ಸ್ 4, ಎಕ್ಸ್ 5 ಹಾಗೂ ಎಕ್ಸ್ 7ಕಾರುಗಳ ಬೆಲೆಯನ್ನು ಹೆಚ್ಚಿಸಿದೆ.

ಕಾರುಗಳ ಬೆಲೆಯನ್ನು ಲಕ್ಷಾಂತರ ರೂಪಾಯಿಗಳಷ್ಟು ಏರಿಕೆ ಮಾಡಿದ ಬಿಎಂಡಬ್ಲ್ಯು

ಹೊಸ ಬೆಲೆಗಳು ಏಪ್ರಿಲ್ 8ರಿಂದ ಜಾರಿಗೆ ಬರಲಿವೆ. ಬಿಎಂಡಬ್ಲ್ಯು 2 ಸೀರಿಸ್ ಗ್ರ್ಯಾನ್ ಕೂಪೆ ದೇಶಿಯ ಮಾರುಕಟ್ಟೆಯಲ್ಲಿರುವ ಕಂಪನಿಯ ಎಂಟ್ರಿ ಲೆವೆಲ್ ಸೆಡಾನ್ ಕಾರ್ ಆಗಿದೆ. ಕಂಪನಿಯು ಮೊದಲ ಬಾರಿಗೆ ಈ ಕಾರಿನ ಬೆಲೆ ಹೆಚ್ಚಿಸಿದೆ. ಈ ಕಾರಿನ 220 ಡಿ ಸ್ಪೋರ್ಟ್‌ಲೈನ್ ಹಾಗೂ 220 ಐಎಂ ಸ್ಪೋರ್ಟ್‌ ಮಾದರಿಗಳ ಬೆಲೆಯನ್ನು ಕ್ರಮವಾಗಿ ರೂ.80,000 ಹಾಗೂ ರೂ.60,000ಗಳಷ್ಟು ಹೆಚ್ಚಿಸಲಾಗಿದೆ.

ಕಾರುಗಳ ಬೆಲೆಯನ್ನು ಲಕ್ಷಾಂತರ ರೂಪಾಯಿಗಳಷ್ಟು ಏರಿಕೆ ಮಾಡಿದ ಬಿಎಂಡಬ್ಲ್ಯು

ಇತ್ತೀಚೆಗೆ ಬಿಡುಗಡೆಯಾದ 220 ಐ ಸ್ಪೋರ್ಟ್ ಮಾದರಿಯನ್ನು ಪರಿಚಯಾತ್ಮಕ ಬೆಲೆಯಲ್ಲಿ ಬಿಡುಗಡೆಗೊಳಿಸಿರುವುದರಿಂದ ಅವರ ಬೆಲೆಯನ್ನು ಹೆಚ್ಚಿಸಲಾಗಿಲ್ಲ.ಬಿಎಂಡಬ್ಲ್ಯು 3 ಸೀರಿಸ್ ಕಾರ್ ಅನ್ನು ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ಮಾರಾಟ ಮಾಡಲಾಗುತ್ತದೆ.

MOSTREAD: ವಿಮಾನಗಳು ಹಾರಾಟ ನಡೆಸುವಾಗ, ಲ್ಯಾಂಡಿಂಗ್ ಆಗುವಾಗ ಉಂಟಾಗುವ ಶಬ್ದಗಳಿವು

ಕಾರುಗಳ ಬೆಲೆಯನ್ನು ಲಕ್ಷಾಂತರ ರೂಪಾಯಿಗಳಷ್ಟು ಏರಿಕೆ ಮಾಡಿದ ಬಿಎಂಡಬ್ಲ್ಯು

3 ಸೀರಿಸ್ ಕಾರಿನ ಪೆಟ್ರೋಲ್ ಮಾದರಿಗಳಾದ 330 ಐ ಸ್ಪೋರ್ಟ್ ಹಾಗೂ 330 ಐ ಸ್ಪೋರ್ಟ್‌ ಬೆಲೆಯನ್ನು ಕ್ರಮವಾಗಿ ರೂ.1,00,000 ಹಾಗೂ ರೂ.60,000ಗಳಷ್ಟು ಹೆಚ್ಚಿಸಿದೆ. 320 ಡಿ ಐಷಾರಾಮಿ ಮಾದರಿಯ ಬೆಲೆಯನ್ನು ರೂ.60,000 ಗಳಷ್ಟು ಹೆಚ್ಚಿಸಲಾಗಿದೆ.

ಕಾರುಗಳ ಬೆಲೆಯನ್ನು ಲಕ್ಷಾಂತರ ರೂಪಾಯಿಗಳಷ್ಟು ಏರಿಕೆ ಮಾಡಿದ ಬಿಎಂಡಬ್ಲ್ಯು

ಈ ವರ್ಷದ ಆರಂಭದಲ್ಲಿ 320 ಡಿ ಸ್ಪೋರ್ಟ್ ಮಾದರಿಯನ್ನು ಕಂಪನಿಯ ಅಧಿಕೃತ ವೆಬ್‌ಸೈಟ್‌ನಿಂದ ತೆಗೆದುಹಾಕಲಾಗಿದೆ. ಕಂಪನಿಯು ಬೇಬಿ ಎಸ್‌ಯುವಿ ಎಂದು ಕರೆಯಲಾಗುವ ಬಿಎಂಡಬ್ಲ್ಯು ಎಕ್ಸ್ 1 ಎಸ್‌ಡ್ರೈವ್ 20 ಐ ಸ್ಪೋರ್ಟ್‌ಎಕ್ಸ್ ಹಾಗೂ ಎಸ್‌ಡ್ರೈವ್ 20 ಐ ಎಕ್ಸ್‌ಎಲ್ ಬೆಲೆಯನ್ನು ಕ್ರಮವಾಗಿ ರೂ.1,30,000 ಹಾಗೂ ರೂ.90,000ಗಳಷ್ಟು ಹೆಚ್ಚಿಸಿದೆ.

MOSTREAD: ಪ್ರವಾಸದ ಹುಚ್ಚಿಗಾಗಿ ವಾಹನ ಕದಿಯುತ್ತಿದ್ದ ಎಂಜಿನಿಯರಿಂಗ್ ಪದವೀಧರ ಕೊನೆಗೂ ಲಾಕ್

ಕಾರುಗಳ ಬೆಲೆಯನ್ನು ಲಕ್ಷಾಂತರ ರೂಪಾಯಿಗಳಷ್ಟು ಏರಿಕೆ ಮಾಡಿದ ಬಿಎಂಡಬ್ಲ್ಯು

ಈ ಕಾರಿನ ಡೀಸೆಲ್ ಮಾದರಿಯಾದ ಎಸ್‌ಆರ್‌ಡಿ 20 ಐ ಎಕ್ಸ್‌ಲೈನ್‌ ಬೆಲೆಯನ್ನು ರೂ.1,10,000ಗಳಷ್ಟು ಹೆಚ್ಚಿಸಲಾಗಿದೆ. ಬಿಎಂಡಬ್ಲ್ಯು ಎಕ್ಸ್ 3 ಕಾರಿನ ಎಕ್ಸ್‌ಡ್ರೈವ್ 30 ಐ ಸ್ಪೋರ್ಟ್‌ಎಕ್ಸ್‌ ಬೆಲೆಯನ್ನು ರೂ.1,00,000 ಹಾಗೂ ಎಕ್ಸ್‌ಡ್ರೈವ್ 30 ಐ ಐಷಾರಾಮಿ ಮಾದರಿಯ ದರವನ್ನು ರೂ.90,000 ಗಳಷ್ಟು ಹೆಚ್ಚಿಸಲಾಗಿದೆ.

ಕಾರುಗಳ ಬೆಲೆಯನ್ನು ಲಕ್ಷಾಂತರ ರೂಪಾಯಿಗಳಷ್ಟು ಏರಿಕೆ ಮಾಡಿದ ಬಿಎಂಡಬ್ಲ್ಯು

ಎಕ್ಸ್‌ಡ್ರೈವ್ 20 ಡಿ ಮಾದರಿಯ ಬೆಲೆಯನ್ನು ರೂ.1,20,000ಗಳಷ್ಟು ಹೆಚ್ಚಿಸಲಾಗಿದೆ. ಕಂಪನಿಯ ಮತ್ತೊಂದು ಎಸ್‌ಯು‌ವಿಯಾದ ಬಿಎಂಡಬ್ಲ್ಯು ಎಕ್ಸ್ 4 ಕಾರಿನ ಎಕ್ಸ್‌ಡ್ರೈವ್ 30 ಐ ಸ್ಪೋರ್ಟ್ ಎಕ್ಸ್ ಮಾದರಿಯ ಬೆಲೆಯನ್ನು ರೂ.80,000 ಗಳಷ್ಟು ಹೆಚ್ಚಿಸಲಾಗಿದೆ.

MOSTREAD: ಭಾರತದಲ್ಲಿ ಹೆಚ್ಚು ಕಾರು ಮಾರಾಟವಾಗುವ ಹತ್ತು ಪ್ರಮುಖ ನಗರಗಳಿವು

ಕಾರುಗಳ ಬೆಲೆಯನ್ನು ಲಕ್ಷಾಂತರ ರೂಪಾಯಿಗಳಷ್ಟು ಏರಿಕೆ ಮಾಡಿದ ಬಿಎಂಡಬ್ಲ್ಯು

ಎಕ್ಸ್‌ಡ್ರೈವ್ 30 ಡಿಎಂ ಸ್ಪೋರ್ಟ್ ಎಕ್ಸ್ ಮಾದರಿಯ ಬೆಲೆಯನ್ನು ರೂ.1,00,000 ಗಳಷ್ಟು ಹೆಚ್ಚಿಸಲಾಗಿದೆ. ಬಿಎಂಡಬ್ಲ್ಯು ಎಕ್ಸ್ 5 ಎಸ್‌ಯುವಿಯ ಎರಡೂ ಡೀಸೆಲ್ ಮಾದರಿಗಳ ಬೆಲೆಯನ್ನು ರೂ.1,00,000 ಗಳವರೆಗೆ ಹೆಚ್ಚಿಸಲಾಗಿದೆ.

ಕಾರುಗಳ ಬೆಲೆಯನ್ನು ಲಕ್ಷಾಂತರ ರೂಪಾಯಿಗಳಷ್ಟು ಏರಿಕೆ ಮಾಡಿದ ಬಿಎಂಡಬ್ಲ್ಯು

ಎಕ್ಸ್‌ಡ್ರೈವ್ 40 ಐ ಸ್ಪೋರ್ಟ್‌ ಮಾದರಿಯ ಬೆಲೆಯನ್ನು ರೂ.60,000ಗಳಷ್ಟು ಏರಿಕೆ ಮಾಡಲಾಗಿದೆ. ಎಕ್ಸ್‌7 ಎಸ್‌ಯುವಿಯ ಎಕ್ಸ್‌ಡ್ರೈವ್ 40 ಐಎಂ ಸ್ಪೋರ್ಟ್ ಮಾದರಿಯ ಬೆಲೆಯನ್ನು ರೂ.2.5 ಲಕ್ಷಗಳಷ್ಟು ಹೆಚ್ಚಿಸಲಾಗಿದ್ದರೆ, ಡಿಪಿಇ ಹಾಗೂ ಡಿಪಿಇ ಸಿಗ್ನೇಚರ್ ಡೀಸೆಲ್ ಮಾದರಿಗಳ ಬೆಲೆಯನ್ನು ಕ್ರಮವಾಗಿ ರೂ.2.90 ಲಕ್ಷ ಹಾಗೂ ರೂ.3.80 ಲಕ್ಷಗಳಷ್ಟು ಏರಿಕೆ ಮಾಡಲಾಗಿದೆ.

Most Read Articles

Kannada
English summary
BMW India increases price of few cars in Indian market. Read in Kannada.
Story first published: Thursday, April 29, 2021, 17:05 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X