ಡಿಸೆಂಬರ್ 13ರಂದು ಭಾರತದಲ್ಲಿ ಅನಾವರಣಗೊಳ್ಳಲಿದೆ ಬಿಎಂಡಬ್ಲ್ಯು ಐಎಕ್ಸ್ ಇವಿ ಕಾರು

ಹೊಸ ಎಲೆಕ್ಟ್ರಿಕ್ ಕಾರು ಮಾದರಿಗಳ ಬಿಡುಗಡೆಗಾಗಿ ಬೃಹತ್ ಯೋಜನೆ ರೂಪಿಸಿರುವ ಬಿಎಂಡಬ್ಲ್ಯು ಇಂಡಿಯಾ(BMW India) ಕಂಪನಿಯು ಮುಂದಿನ ಆರು ತಿಂಗಳ ಅವಧಿಯಲ್ಲಿ ವಿವಿಧ ಸೆಗ್ಮೆಂಟ್‌ಗಳಲ್ಲಿ ಮೂರು ಹೊಸ ಎಲೆಕ್ಟ್ರಿಕ್ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದ್ದು, ಕಂಪನಿಯು ಮೊದಲ ಹಂತದಲ್ಲಿ ಐಎಕ್ಸ್ ಎಸ್‌ಯುವಿ ಬಿಡುಗಡೆಯ ಸುಳಿವು ನೀಡಿದೆ.

ಡಿಸೆಂಬರ್ 13ರಂದು ಭಾರತದಲ್ಲಿ ಅನಾವರಣಗೊಳ್ಳಲಿದೆ ಬಿಎಂಡಬ್ಲ್ಯು ಐಎಕ್ಸ್ ಇವಿ ಕಾರು

ಹೊಚ್ಚ ಹೊಸ ಐಎಕ್ಸ್ ಎಲೆಕ್ಟ್ರಿಕ್ ಎಸ್‌ಯುವಿ ಮಾದರಿಯ ಉತ್ಪಾದನಾ ಆವೃತ್ತಿಯನ್ನು ಈಗಾಗಲೇ ಜಾಗತಿಕವಾಗಿ ಅನಾವರಣಗೊಳಿಸಿರುವ ಬಿಎಂಡಬ್ಲ್ಯು ಕಂಪನಿಯು ಮುಂದಿನ ತಿಂಗಳು ಡಿಸೆಂಬರ್ 13 ರಂದು ಭಾರತದಲ್ಲೂ ಹೊಸ ಕಾರಿನ ಉತ್ಪಾದನಾ ಮಾದರಿಯನ್ನು ಅನಾವರಣಗೊಳಿಸುವ ಸಿದ್ದತೆಯಲ್ಲಿದ್ದು, ಬಿಎಂಡಬ್ಲ್ಯು ಇಂಡಿಯಾ ಕಂಪನಿಯು ಹೊಸ ಕಾರಿನ ಮೊದಲ ಟೀಸರ್ ಚಿತ್ರಗಳನ್ನು ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ.

ಡಿಸೆಂಬರ್ 13ರಂದು ಭಾರತದಲ್ಲಿ ಅನಾವರಣಗೊಳ್ಳಲಿದೆ ಬಿಎಂಡಬ್ಲ್ಯು ಐಎಕ್ಸ್ ಇವಿ ಕಾರು

ಹೊಸ ಐಎಕ್ಸ್ ಎಲೆಕ್ಟ್ರಿಕ್ ಎಸ್‍ಯುವಿಯು ಪ್ರಸ್ತುತ ಮಾರುಕಟ್ಟೆಯಲ್ಲಿನ ಎಕ್ಸ್6 ಎಸ್‌ಯುವಿ ಮಾದರಿಗೆ ಸರಿಸಮನಾದ ವಿನ್ಯಾಸದೊಂದಿಗೆ ಅಭಿವೃದ್ದಿಗೊಂಡಿದ್ದು, ಅತ್ಯಾಧುನಿಕ ಪ್ಲಾಟ್‌ಫಾರ್ಮ್ ಆಧರಿಸಿರುವ ಐಎಕ್ಸ್ ಕಾರು ಸುಧಾರಿತ ತಂತ್ರಜ್ಞಾನ ಪ್ರೇರಿತ ಕೆನಕ್ಟಿವಿಟಿ ಸೌಲಭ್ಯಗಳನ್ನು ಹೊಂದಿರಲಿದೆ.

ಡಿಸೆಂಬರ್ 13ರಂದು ಭಾರತದಲ್ಲಿ ಅನಾವರಣಗೊಳ್ಳಲಿದೆ ಬಿಎಂಡಬ್ಲ್ಯು ಐಎಕ್ಸ್ ಇವಿ ಕಾರು

ಬಿಎಂಡಬ್ಲ್ಯು ಐಎಕ್ಸ್‌ನಲ್ಲಿರುವ ದೊಡ್ಡ ಕಿಡ್ನಿ ಗ್ರಿಲ್ ಅನ್ನು ಇಂಟಿಲಿಜಿಟೆಂಡ್ ಡ್ರೈವ್ಸ್ ಅಸಿಸ್ಟೆನ್ಸ್ ಟೆಕ್ನಾಲಜಿಗೆ ನೆರವಾಗುವಂತೆ ಅಳವಡಿಸಲಾಗಿದ್ದು, ಇದರಲ್ಲಿರುವ ರಾಡಾರ್ ಸಿಸ್ಟಂ, ಸೆನ್ಸಾರ್ ಗಳು ಮತ್ತು ಕ್ಯಾಮೆರಾಗಳು ಕಾರಿಗೆ ಗರಿಷ್ಠ ಸುರಕ್ಷತೆ ನೀಡಲಿವೆ.

ಡಿಸೆಂಬರ್ 13ರಂದು ಭಾರತದಲ್ಲಿ ಅನಾವರಣಗೊಳ್ಳಲಿದೆ ಬಿಎಂಡಬ್ಲ್ಯು ಐಎಕ್ಸ್ ಇವಿ ಕಾರು

ಹೊಸ ಬಿಎಂಡಬ್ಲ್ಯು ಐಎಕ್ಸ್ ವಿನ್ಯಾಸವು ವಿಶಿಷ್ಟವಾದ ಸಂರಚನೆಯೊಂದಿಗೆ ಭವಿಷ್ಯದ ಆಧಾರಿತ ಸ್ಟೈಲಿಂಗ್ ಹೊಂದಿದ್ದು, ಹೊಸ ಐಎಕ್ಸ್ ಬ್ರ್ಯಾಂಡ್‌ನ ಹೊಸ ಸ್ಕೇಲೆಬಲ್ ಆರ್ಕಿಟೆಕ್ಚರ್ ಅನ್ನು ಸಹ ಪರಿಚಯಿಸುತ್ತದೆ. ಜೊತೆಗೆ ಕಾರಿನ ತೂಕವನ್ನು ಕಡಿತಗೊಳಿಸಲ ಅಲ್ಯುಮಿನಿಯಂ ಸ್ಪೇಸ್-ಫ್ರೇಮ್ ಮತ್ತು ಟಾರ್ಶನಲ್ ಜೋಡಿಸಲಾಗಿದ್ದು, ಆಕರ್ಷಕ ಇಂಟಿರಿಯರ್ ಅನ್ನು ಸಹ ಹೊಂದಿದೆ.

ಡಿಸೆಂಬರ್ 13ರಂದು ಭಾರತದಲ್ಲಿ ಅನಾವರಣಗೊಳ್ಳಲಿದೆ ಬಿಎಂಡಬ್ಲ್ಯು ಐಎಕ್ಸ್ ಇವಿ ಕಾರು

ಯುರೋಪಿಯನ್ ಡಬ್ಲ್ಯುಎಲ್‌ಟಿಪಿ ವ್ಹೀಲ್ ಪ್ರಕಾರ ಬಿಎಂಡಬ್ಲ್ಯು ಐಎಕ್ಸ್ ಸಿಂಗಲ್ ಚಾರ್ಜ್‌ನಲ್ಲಿ ಗರಿಷ್ಠ 600 ಕಿಲೋಮೀಟರ್ ಚಲಿಸುವಷ್ಟು ಸಮರ್ಥವಾಗಿದೆ ಎಂದು ಹೇಳಲಾಗಿದ್ದು, ಹೊಸ ಐಎಕ್ಸ್ ಎಲೆಕ್ಟ್ರಿಕ್ ಎಸ್‌ಯುವಿ ಎರಡು ಎಲೆಕ್ಟ್ರಿಕ್ ಮೋಟರ್‌ಗಳನ್ನು ಒಳಗೊಂಡಿರಲಿದೆ.

ಡಿಸೆಂಬರ್ 13ರಂದು ಭಾರತದಲ್ಲಿ ಅನಾವರಣಗೊಳ್ಳಲಿದೆ ಬಿಎಂಡಬ್ಲ್ಯು ಐಎಕ್ಸ್ ಇವಿ ಕಾರು

ಡ್ಯುಯಲ್ ಎಲೆಕ್ಟ್ರಿಕ್ ಮೋಟಾರ್ ಮೂಲಕ ಪ್ರತಿ ಚಕ್ರಕ್ಕೂ ಪ್ರತ್ಯೇಕ ಪವರ್ ಒದಗಿಸಲಾಗಿದ್ದು, ವಿವಿಧ ಹಂತ ಡ್ರೈವ್ ಮೋಡ್‌ಗಳೊಂದಿಗೆ ಇದು ಗರಿಷ್ಠ 503 ಬಿಹೆಚ್‍ಪಿ ಪವರ್ ಉತ್ಪಾದನೆ ಮಾಡಬಲ್ಲದು.

ಡಿಸೆಂಬರ್ 13ರಂದು ಭಾರತದಲ್ಲಿ ಅನಾವರಣಗೊಳ್ಳಲಿದೆ ಬಿಎಂಡಬ್ಲ್ಯು ಐಎಕ್ಸ್ ಇವಿ ಕಾರು

ಹೊಸ ಬಿಎಂಡಬ್ಲ್ಯು ಐಎಕ್ಸ್ ಆಲ್-ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆಯ ನಂತರ ಮರ್ಸಿಡಿಸ್ ಬೆಂಝ್ ಇಕ್ಯೂಸಿ 400, ಆಡಿ ಇ-ಟ್ರಾನ್ ಮತ್ತು ಜಾಗ್ವಾರ್ ಐ-ಪೇಸ್ ಎಲೆಕ್ಟ್ರಿಕ್ ಕಾರುಗಳಿಗೆ ಉತ್ತಮ ಪೈಪೋಟಿ ನೀಡುವ ನೀರಿಕ್ಷೆಯಲ್ಲಿದ್ದು, ಹೊಸ ಕಾರು ರೂ. 1 ಕೋಟಿಗೂ ಅಧಿಕ ಮೊತ್ತ ಹೊಂದಿರಬಹುದಾದ ಸಾಧ್ಯತೆಗಳಿವೆ.

ಡಿಸೆಂಬರ್ 13ರಂದು ಭಾರತದಲ್ಲಿ ಅನಾವರಣಗೊಳ್ಳಲಿದೆ ಬಿಎಂಡಬ್ಲ್ಯು ಐಎಕ್ಸ್ ಇವಿ ಕಾರು

ಭಾರತದಲ್ಲಿ ಸದ್ಯ ಐಷಾರಾಮಿ ಕಾರುಗಳ ಮಾರಾಟ ವಿಭಾಗದಲ್ಲಿ ಮರ್ಸಿಡಿಸ್ ಬೆಂಝ್ ಕಂಪನಿಗೆ ಮತ್ತು ಬಿಎಂಡಬ್ಲ್ಯು ಕಂಪನಿಯ ನಡುವೆ ಸಾಕಷ್ಟು ಪೈಪೋಟಿ ನಡೆಯುತ್ತಿದ್ದು, ಬಿಎಂಡಬ್ಲ್ಯು ಹೊಸ ಕಾರು ಉತ್ಪನ್ನಗಳು ಮರ್ಸಿಡಿಸ್‌ಗೆ ಪೈಪೋಟಿ ನೀಡುವ ತವಕದಲ್ಲಿವೆ. ಬಿಎಂಡಬ್ಲ್ಯು ಇಂಡಿಯಾ ಕಂಪನಿಯು ಭಾರತದಲ್ಲಿ 2021ರ ಅವಧಿಗಾಗಿ 8 ಹೊಚ್ಚ ಹೊಸ ಕಾರು ಮಾದರಿಗಳನ್ನು, 9 ಫೇಸ್‌ಲಿಫ್ಟ್ ಕಾರು ಮಾದರಿಗಳನ್ನು ಮತ್ತು 8 ಹೊಸ ವೆರಿಯೆಂಟ್‌ಗಳನ್ನು ಪರಿಚಯಿಸಲಾಗುತ್ತಿದ್ದು, ಹೊಸ ಕಾರುಗಳ ಐಷಾರಾಮಿ ವಿಭಾಗದಲ್ಲಿ ಮತ್ತಷ್ಟು ಗ್ರಾಹಕರನ್ನು ಸೆಳೆಯಲಿವೆ.

ಡಿಸೆಂಬರ್ 13ರಂದು ಭಾರತದಲ್ಲಿ ಅನಾವರಣಗೊಳ್ಳಲಿದೆ ಬಿಎಂಡಬ್ಲ್ಯು ಐಎಕ್ಸ್ ಇವಿ ಕಾರು

ಭಾರತದಲ್ಲಿ ಸದ್ಯ ವಿವಿಧ ಸರಣಿಗಳಲ್ಲಿ ಒಟ್ಟು 16 ಕಾರುಗಳ ಮಾರಾಟ ಹೊಂದಿರುವ ಬಿಎಂಡಬ್ಲ್ಯು ಕಂಪನಿಯು ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ಕಾರುಗಳನ್ನು ಬಿಡುಗಡೆ ಮಾಡುವ ಸಿದ್ದತೆಯಲ್ಲಿದ್ದು, ಹೊಸ ಕಾರುಗಳಲ್ಲಿ ಎಲೆಕ್ಟ್ರಿಕ್ ಕಾರು ಮಾದರಿಗಳು ಸಹ ಪ್ರಮುಖ ಆಕರ್ಷಣೆಯಾಗಿವೆ.

ಡಿಸೆಂಬರ್ 13ರಂದು ಭಾರತದಲ್ಲಿ ಅನಾವರಣಗೊಳ್ಳಲಿದೆ ಬಿಎಂಡಬ್ಲ್ಯು ಐಎಕ್ಸ್ ಇವಿ ಕಾರು

ಹೆಚ್ಚುತ್ತಿರುವ ಮಾಲಿನ್ಯ ತಡೆಗಾಗಿ ವಿವಿಧ ರಾಷ್ಟ್ರಗಳು 2030ರಿಂದಲೇ ಸಂಪೂರ್ಣವಾಗಿ ಡೀಸೆಲ್ ಮತ್ತು ಪೆಟ್ರೋಲ್ ಚಾಲಿತ ಕಾರುಗಳ ಮಾರಾಟವನ್ನು ಪೂರ್ಣಪ್ರಮಾಣದಲ್ಲಿ ಸ್ಥಗಿತಗೊಳಿಸುವ ನಿರ್ಣಯ ಕೈಗೊಂಡಿದ್ದು, ಇದಕ್ಕೆ ಪೂರಕವಾಗಿ ಪರಿಸರ ಸ್ನೇಹಿ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಸಹ ಹೆಚ್ಚಿಸಲಾಗುತ್ತಿದೆ.

ಡಿಸೆಂಬರ್ 13ರಂದು ಭಾರತದಲ್ಲಿ ಅನಾವರಣಗೊಳ್ಳಲಿದೆ ಬಿಎಂಡಬ್ಲ್ಯು ಐಎಕ್ಸ್ ಇವಿ ಕಾರು

ಜರ್ಮನ್ ಕಾರು ಉತ್ಪಾದನಾ ಕಂಪನಿಯಾಗಿರುವ ಬಿಎಂಡಬ್ಲ್ಯು ಕೂಡಾ ಈಗಾಗಲೇ ವಿವಿಧ ಮಾದರಿಗಳಲ್ಲಿ ಎಲೆಕ್ಟ್ರಿಕ್ ಕಾರುಗಳ ಬಿಡುಗಡೆಗೆ ಸಜ್ಜುಗೊಂಡಿದ್ದು, 2022ರ ವೇಳೆಗೆ ಶೇ.20 ರಷ್ಟು ಕಾರುಗಳಲ್ಲಿ ಎಲೆಕ್ಟ್ರಿಕ್ ಮಾದರಿಗಳ ಮಾರಾಟವನ್ನು ಹೊಂದಿರುವುದಾಗಿ ಸ್ಪಷ್ಟಪಡಿಸಿದೆ.

ಡಿಸೆಂಬರ್ 13ರಂದು ಭಾರತದಲ್ಲಿ ಅನಾವರಣಗೊಳ್ಳಲಿದೆ ಬಿಎಂಡಬ್ಲ್ಯು ಐಎಕ್ಸ್ ಇವಿ ಕಾರು

ಬಿಎಂಡಬ್ಲ್ಯು ಕಂಪನಿಯು ಭಾರತದಲ್ಲಿ ಮೊದಲ ಹಂತವಾಗಿ ಐಎಕ್ಸ್ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆ ಮಾಡಲಿದ್ದು, ಎರಡನೇ ಕಾರು ಮಾದರಿಯಾಗಿ ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್ ಮತ್ತು ಮೂರನೇ ಕಾರು ಮಾದರಿಯಾಗಿ ಐ4 ಎಲೆಕ್ಟ್ರಿಕ್ ಸೆಡಾನ್ ಮಾದರಿಯನ್ನು ಬಿಡುಗಡೆ ಮಾಡಲಿದೆ.

ಡಿಸೆಂಬರ್ 13ರಂದು ಭಾರತದಲ್ಲಿ ಅನಾವರಣಗೊಳ್ಳಲಿದೆ ಬಿಎಂಡಬ್ಲ್ಯು ಐಎಕ್ಸ್ ಇವಿ ಕಾರು

ಹೊಸ ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಯು ಜರ್ಮನಿಯ ಡಿಂಗೋಲ್ಫಿಂಗ್ ಘಟಕದಲ್ಲಿ ಆರಂಭವಾಗಿದ್ದು, ಹೊಸ ಇವಿ ಕಾರುಗಳನ್ನು ಬಿಎಂಡಬ್ಲ್ಯು ಕಂಪನಿಯು ಸದ್ಯ ಸಿಬಿಯು ಆಮದು ನೀತಿ ಅಡಿಯಲ್ಲಿಯೇ ಭಾರತಕ್ಕೆ ಆಮದು ಮಾಡಿಕೊಂಡು ಮಾರಾಟ ಮಾಡಲಿದೆ.

Most Read Articles

Kannada
English summary
Bmw india ix electric suv unveil on 13th december details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X