2021ರ ಅವಧಿಯಲ್ಲಿ ಒಟ್ಟು 25 ಹೊಸ ಕಾರುಗಳನ್ನು ಬಿಡುಗಡೆ ಮಾಡಲಿದೆ ಬಿಎಂಡಬ್ಲ್ಯು ಇಂಡಿಯಾ

ಬಿಎಂಡಬ್ಲ್ಯು ಇಂಡಿಯಾ ಕಂಪನಿಯು ಭಾರತದಲ್ಲಿನ ತನ್ನ ಹೊಸ ಕಾರು ಮಾರಾಟವನ್ನು ತೀವ್ರಗೊಳಿಸುತ್ತಿದ್ದು, ಮರ್ಸಿಡಿಸ್ ಬೆಂಝ್ ಕಂಪನಿಗೆ ಪೈಪೋಟಿಯಾಗಿ ಮತ್ತಷ್ಟು ಹೊಸ ಕಾರುಗಳನ್ನು ಭಾರತದಲ್ಲಿ ಬಿಡುಗಡೆಗೊಳಿಸುವ ಸಿದ್ದತೆಯಲ್ಲಿದೆ.

25 ಹೊಸ ಕಾರುಗಳನ್ನು ಬಿಡುಗಡೆ ಮಾಡಲಿದೆ ಬಿಎಂಡಬ್ಲ್ಯು ಇಂಡಿಯಾ

3 ಸೀರಿಸ್ ಗ್ರ್ಯಾನ್ ಲಿಮೊಸಿನ್ ಬಿಡುಗಡೆಯ ಮೂಲಕ ಹೊಸ ಕಾರುಗಳ ಬಿಡುಗಡೆಯ ಯೋಜನೆಗೆ ಚಾಲನೆ ನೀಡಿರುವ ಬಿಎಂಡಬ್ಲ್ಯು ಇಂಡಿಯಾ ಕಂಪನಿಯು ಒಟ್ಟು 25 ಹೊಸ ಕಾರುಗಳನ್ನು ಬಿಡುಗಡೆ ಮಾಡುವ ಸಿದ್ದತೆಯಲ್ಲಿದ್ದು, ಐಷಾರಾಮಿ ಕಾರುಗಳ ಮಾರಾಟದಲ್ಲಿ ಸದ್ಯ ಅಗ್ರಸ್ಥಾನದಲ್ಲಿರುವ ಮರ್ಸಿಡಿಸ್ ಬೆಂಝ್ ಕಂಪನಿಗೆ ಹೊಸ ಕಾರು ಮಾದರಿಗಳ ಮೂಲಕ ಮತ್ತಷ್ಟು ಪೈಪೋಟಿ ನೀಡಲು ಬಿಎಂಡಬ್ಲ್ಯು ಉತ್ಸುಕವಾಗಿದೆ.

25 ಹೊಸ ಕಾರುಗಳನ್ನು ಬಿಡುಗಡೆ ಮಾಡಲಿದೆ ಬಿಎಂಡಬ್ಲ್ಯು ಇಂಡಿಯಾ

ಭಾರತದಲ್ಲಿ ಸದ್ಯ ಐಷಾರಾಮಿ ಕಾರುಗಳ ಮಾರಾಟ ವಿಭಾಗದಲ್ಲಿ ಮರ್ಸಿಡಿಸ್ ಬೆಂಝ್ ಕಂಪನಿಗೆ ಮತ್ತು ಬಿಎಂಡಬ್ಲ್ಯು ಕಂಪನಿಯ ನಡುವೆ ಸಾಕಷ್ಟು ಪೈಪೋಟಿ ನಡೆಯುತ್ತಿದ್ದು, ಬಿಎಂಡಬ್ಲ್ಯು ಹೊಸ ಕಾರು ಉತ್ಪನ್ನಗಳು ಮರ್ಸಿಡಿಸ್‌ಗೆ ಪೈಪೋಟಿ ನೀಡುವ ತವಕದಲ್ಲಿವೆ.

25 ಹೊಸ ಕಾರುಗಳನ್ನು ಬಿಡುಗಡೆ ಮಾಡಲಿದೆ ಬಿಎಂಡಬ್ಲ್ಯು ಇಂಡಿಯಾ

ಬಿಎಂಡಬ್ಲ್ಯು ಇಂಡಿಯಾ ಕಂಪನಿಯು ಭಾರತದಲ್ಲಿ 2021ರ ಅವಧಿಗಾಗಿ 8 ಹೊಚ್ಚ ಹೊಸ ಕಾರು ಮಾದರಿಗಳನ್ನು, 9 ಫೇಸ್‌ಲಿಫ್ಟ್ ಕಾರು ಮಾದರಿಗಳನ್ನು ಮತ್ತು 8 ಹೊಸ ವೆರಿಯೆಂಟ್‌ಗಳನ್ನು ಪರಿಚಯಿಸಲಾಗುತ್ತಿದ್ದು, ಹೊಸ ಕಾರುಗಳ ಐಷಾರಾಮಿ ವಿಭಾಗದಲ್ಲಿ ಮತ್ತಷ್ಟು ಗ್ರಾಹಕರನ್ನು ಸೆಳೆಯಲಿವೆ.

25 ಹೊಸ ಕಾರುಗಳನ್ನು ಬಿಡುಗಡೆ ಮಾಡಲಿದೆ ಬಿಎಂಡಬ್ಲ್ಯು ಇಂಡಿಯಾ

ಹೊಸ ಕಾರುಗಳ ಕುರಿತಂತೆ ಪಿಟಿಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿರುವ ಬಿಎಂಡಬ್ಲ್ಯು ಇಂಡಿಯಾ ಕಂಪನಿಯ ಎಂಡಿ ವಿಕ್ರಮ್ ಪವಾಹ್ ಅವರು 'ಕೋವಿಡ್ 19 ಪರಿಣಾಮ ತಗ್ಗಿದ್ದ ಹೊಸ ವಾಹನಗಳ ಮಾರಾಟವು ಸಂಪೂರ್ಣವಾಗಿ ನೆಲಕಚ್ಚಿತ್ತು. ಇದೀಗ ಪರಿಸ್ಥಿತಿ ಸುಧಾರಣೆಗೊಳ್ಳುತ್ತಿರುವ ಹಿನ್ನಲೆ ಆಟೋ ಉದ್ಯಮ ಕೂಡಾ ಸಾಕಷ್ಟು ಸುಧಾರಣೆ ಕಾಣುತ್ತಿದೆ. ಮುಂಬರುವ ದಿನಗಳಲ್ಲಿ ಐಷಾರಾಮಿ ವಾಹನಗಳ ಮಾರಾಟವು ಸಾಕಷ್ಟು ಚೇತರಿಕೆ ಕಾಣುವ ವಿಶ್ವಾಸದೊಂದಿಗೆ ಹೊಸ ಉತ್ಪನ್ನಗಳನ್ನು ಬಿಡುಗಡೆಗೆ ಕಂಪನಿಯು ಉತ್ಸುಕವಾಗಿದೆ' ಎಂದಿದ್ದಾರೆ.

25 ಹೊಸ ಕಾರುಗಳನ್ನು ಬಿಡುಗಡೆ ಮಾಡಲಿದೆ ಬಿಎಂಡಬ್ಲ್ಯು ಇಂಡಿಯಾ

ಜೊತೆಗೆ ಭಾರತದಲ್ಲಿ ಪ್ರಮುಖ ಕಾರು ಮಾದರಿಗಳ ಉತ್ಪಾದನೆ ಆರಂಭಿಸಿರುವುದು ಹೊಸ ಯೋಜನೆಗೆ ಪೂರಕವಾಗಿದೆ ಎಂದಿರುವ ವಿಕ್ರಮ್ ಪವಾಹ್ ಅವರು ಈ ವರ್ಷದ ಕಾರು ಮಾರಾಟದಲ್ಲಿ ಪ್ರಬಲವಾದ ಬೆಳವಣಿಗೆಯ ನಿರೀಕ್ಷೆಯಲ್ಲಿದ್ದೆವೆ ಎಂದಿದ್ದಾರೆ.

25 ಹೊಸ ಕಾರುಗಳನ್ನು ಬಿಡುಗಡೆ ಮಾಡಲಿದೆ ಬಿಎಂಡಬ್ಲ್ಯು ಇಂಡಿಯಾ

ಭಾರತದಲ್ಲಿ ಸದ್ಯ ವಿವಿಧ ಸರಣಿಗಳಲ್ಲಿ ಒಟ್ಟು 16 ಕಾರುಗಳ ಮಾರಾಟ ಹೊಂದಿರುವ ಬಿಎಂಡಬ್ಲ್ಯು ಕಂಪನಿಯು ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ಕಾರುಗಳನ್ನು ಬಿಡುಗಡೆ ಮಾಡುವ ಸಿದ್ದತೆಯಲ್ಲಿದ್ದು, ಎಸ್‌ಯುವಿ ಕಾರು ಮಾದರಿಗಳ ಮೇಲೆ ಹೆಚ್ಚಿನ ನೀರಿಕ್ಷೆಯಿಟ್ಟುಕೊಂಡಿದೆ.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

25 ಹೊಸ ಕಾರುಗಳನ್ನು ಬಿಡುಗಡೆ ಮಾಡಲಿದೆ ಬಿಎಂಡಬ್ಲ್ಯು ಇಂಡಿಯಾ

ಹೊಸ ಯೋಜನೆಗೆ ಪೂರಕವಾಗಿ ದೇಶದ ಪ್ರಮುಖ ನಗರಗಳಲ್ಲಿ ಹೊಸ ಮಾರಾಟ ಮಳಿಗೆಗಳ ಸಂಖ್ಯೆಯನ್ನು ಕೂಡಾ ಹೆಚ್ಚಿಸುತ್ತಿದ್ದು, ಹೊಸ ಕಾರು ಮಾರಾಟ ಮಳಿಗೆಗಳ ಮೂಲಕ ಗ್ರಾಹಕರಿಗೆ ವಿನೂತನ ಮಾದರಿಯ ಸೇವೆಗಳನ್ನು ಒದಗಿಸುತ್ತಿದೆ.

25 ಹೊಸ ಕಾರುಗಳನ್ನು ಬಿಡುಗಡೆ ಮಾಡಲಿದೆ ಬಿಎಂಡಬ್ಲ್ಯು ಇಂಡಿಯಾ

ಇನ್ನು ನಿನ್ನೆಯಷ್ಟೇ ಬಿಡುಗಡೆಯಾಗಿರುವ 3 ಸೀರಿಸ್ ಗ್ರ್ಯಾನ್ ಲಿಮೊಸಿನ್ ಕಾರು ಮಾದರಿಯು ಹಲವಾರು ವಿಶೇಷತೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದ್ದು, ಹೊಸ ಕಾರು ಗ್ರಾಹಕರ ಬೇಡಿಕೆಯೆಂತೆ ಪ್ರಮುಖ ಮೂರು ವೆರಿಯೆಂಟ್‌ಗಳೊಂದಿಗೆ ಖರೀದಿಗೆ ಲಭ್ಯವಿದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

25 ಹೊಸ ಕಾರುಗಳನ್ನು ಬಿಡುಗಡೆ ಮಾಡಲಿದೆ ಬಿಎಂಡಬ್ಲ್ಯು ಇಂಡಿಯಾ

3 ಸೀರಿಸ್ ಗ್ರ್ಯಾನ್ ಲಿಮೊಸಿನ್ ಕಾರು ಮಾದರಿಯು 330ಎಲ್ಐ ಲಗ್ಷುರಿ ಲೈನ್, 330ಎಲ್ ಎಂ ಸ್ಪೋರ್ಟ್ ಮತ್ತು 320ಎಲ್‌ಡಿ ಲಗ್ಷುರಿ ಲೈನ್ ಹೊಂದಿದ್ದು, ಪ್ಯಾನ್ ಇಂಡಿಯಾ ಎಕ್ಸ್‌ಶೋರೂಂ ಪ್ರಕಾರ ಆರಂಭಿಕ ಕಾರು ಮಾದರಿಯು ರೂ.51.50 ಲಕ್ಷಕ್ಕೆ ಮತ್ತು ಟಾಪ್ ಎಂಡ್ ಮಾದರಿಯು ರೂ. 53.90 ಲಕ್ಷಕ್ಕೆ ಖರೀದಿಗೆ ಲಭ್ಯವಿದೆ.

Most Read Articles

Kannada
English summary
BMW to launch 25 new cars in India this year. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X