ಬಿಡುಗಡೆಯ ಮೊದಲ ದಿನವೇ ಬಿಎಂಡಬ್ಲ್ಯು ಐಎಕ್ಸ್ ಇವಿ ಕಾರು ಸೋಲ್ಡ್ ಔಟ್

ಬಿಎಂಡಬ್ಲ್ಯು ಇಂಡಿಯಾ ಕಂಪನಿಯು ತನ್ನ ಬಹುನೀರಿಕ್ಷಿತ ಐಎಕ್ಸ್ ಎಲೆಕ್ಟ್ರಿಕ್ ಎಸ್‌ಯುವಿ ಮಾದರಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದ್ದು, ಹೊಸ ಕಾರು ಬಿಡುಗಡೆಯಾದ ಮೊದಲ ದಿನವೇ ಖರೀದಿಗೆ ಲಭ್ಯವಿದ್ದ ನೂರು ಯುನಿಟ್‌ಗಳಿಗೂ ಬುಕ್ಕಿಂಗ್ ಸಲ್ಲಿಕೆಯಾಗಿದೆ.

ಬಿಡುಗಡೆಯ ಮೊದಲ ದಿನವೇ ಬಿಎಂಡಬ್ಲ್ಯು ಐಎಕ್ಸ್ ಇವಿ ಕಾರು ಸೋಲ್ಡ್ ಔಟ್

ಹೊಚ್ಚ ಹೊಸ ಐಎಕ್ಸ್(iX) ಎಲೆಕ್ಟ್ರಿಕ್ ಎಸ್‌ಯುವಿ ಮಾದರಿಯು ದೇಶಿಯ ಮಾರುಕಟ್ಟೆಯಲ್ಲಿನ ಬೇಡಿಕೆ ಹಲವಾರು ಹೊಸ ವೈಶಿಷ್ಟ್ಯತೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದ್ದು, ಎಕ್ಸ್‌ಡ್ರೈವ್40 ಎನ್ನುವ ಒಂದೇ ವೆರಿಯೆಂಟ್‌ನಲ್ಲಿ ಖರೀದಿಗೆ ಲಭ್ಯವಿರುವ ಹೊಸ ಕಾರು ಪ್ಯಾನ್ ಇಂಡಿಯಾ ಎಕ್ಸ್‌ಶೋರೂಂ ಪ್ರಕಾರ ರೂ. 1.16 ಕೋಟಿ ಬೆಲೆ ಹೊಂದಿದೆ. ಹೊಸ ಕಾರು ದುಬಾರಿ ಬೆಲೆ ನಡುವೆಯೂ ಮೊದಲ ಹಂತದಲ್ಲಿ ಖರೀದಿಗೆ ಲಭ್ಯವಿದ್ದ ನೂರು ಯುನಿಟ್‌ಗಳು ಮಾರಾಟಗೊಂಡಿದ್ದು, 2022ರ ಏಪ್ರಿಲ್ ನಂತರ ಮುಂದಿನ ಯುನಿಟ್‌ಗಳ ಖರೀದಿಗಾಗಿ ಬುಕ್ಕಿಂಗ್ ಆರಂಭವಾಗಲಿದೆ.

ಬಿಡುಗಡೆಯ ಮೊದಲ ದಿನವೇ ಬಿಎಂಡಬ್ಲ್ಯು ಐಎಕ್ಸ್ ಇವಿ ಕಾರು ಸೋಲ್ಡ್ ಔಟ್

ಹೊಸ ಐಎಕ್ಸ್ ಕಾರು ಮಾದರಿಯು ಸಂಪೂರ್ಣವಾಗಿ ವಿದೇಶಿ ಮಾರುಕಟ್ಟೆಗಳಲ್ಲಿ ಅಭಿವೃದ್ದಿಗೊಂಡಿರುವುದರಿಂದ ಭಾರತದಲ್ಲಿ ಸಿಬಿಯು ಆಮದು ಮಾದರಿಯಾಗಿ ಮಾರಾಟಗೊಳ್ಳಲಿದ್ದು, ಹೊಸ ಕಾರು ಹಲವಾರು ಅತ್ಯಾಧುನಿಕ ತಂತ್ರಜ್ಞಾನ ಪ್ರೇರಣೆ ಹೊಂದಿದೆ.

ಬಿಡುಗಡೆಯ ಮೊದಲ ದಿನವೇ ಬಿಎಂಡಬ್ಲ್ಯು ಐಎಕ್ಸ್ ಇವಿ ಕಾರು ಸೋಲ್ಡ್ ಔಟ್

ಬಿಎಂಡಬ್ಲ್ಯು ಕಂಪನಿಯು ಐಎಕ್ಸ್ ಎಕ್ಸ್‌ಡ್ರೈವ್40 ಮಾದರಿಯಲ್ಲಿ ಆಲ್ ವ್ಹೀಲ್ ಡ್ರೈವ್ ಸಿಸ್ಟಂ ಜೊತೆ ಡ್ಯುಯಲ್ ಎಲೆಕ್ಟ್ರಿಕ್ ಮೋಟಾರ್ ಜೋಡಣೆ ಮಾಡಿದ್ದು, ಇದಕ್ಕಾಗಿ ಕಂಪನಿಯು ಹೊಸ ಕಾರಿನಲ್ಲಿ 76.6kWh ಬ್ಯಾಟರಿ ಪ್ಯಾಕ್ ನೀಡಲಾಗಿದೆ.

ಬಿಡುಗಡೆಯ ಮೊದಲ ದಿನವೇ ಬಿಎಂಡಬ್ಲ್ಯು ಐಎಕ್ಸ್ ಇವಿ ಕಾರು ಸೋಲ್ಡ್ ಔಟ್

ಬಿಎಂಡಬ್ಲ್ಯು ಕಂಪನಿಯು ಐಎಕ್ಸ್ ಎಲೆಕ್ಟ್ರಿಕ್ ಕಾರು ಮಾದರಿಯನ್ನು ವಿಶ್ವದ ಪ್ರಮುಖ ರಾಷ್ಟ್ರಗಳಲ್ಲಿ ಈಗಾಗಲೇ ಮಾರಾಟ ಮಾಡುತ್ತಿದ್ದು, ಹೊಸ ಕಾರನ್ನು ಗ್ರಾಹಕರ ಬೇಡಿಕೆಯೆಂತೆ ಎಕ್ಸ್‌ಡ್ರೈವ್40 ಮತ್ತು ಎಕ್ಸ್‌ಡ್ರೈವ್50 ವೆರಿಯೆಂಟ್‌ಗಳಲ್ಲಿ ಮಾರಾಟ ಮಾಡುತ್ತಿದೆ.

ಬಿಡುಗಡೆಯ ಮೊದಲ ದಿನವೇ ಬಿಎಂಡಬ್ಲ್ಯು ಐಎಕ್ಸ್ ಇವಿ ಕಾರು ಸೋಲ್ಡ್ ಔಟ್

ಎಕ್ಸ್‌ಡ್ರೈವ್40 ಮಾದರಿಯು 76.6kWh ಬ್ಯಾಟರಿ ಪ್ಯಾಕ್ ಮೂಲಕ ಗರಿಷ್ಠ 425 ಕಿ.ಮೀ ಮೈಲೇಜ್ ರೇಂಜ್ ಹೊಂದಿದ್ದರೆ ಎಕ್ಸ್‌ಡ್ರೈವ್50 ಮಾದರಿಯು ಪ್ರತಿ ಚಾರ್ಜ್‌ಗೆ 611 ಕಿ.ಮೀ ಮೈಲೇಜ್ ರೇಂಜ್ ಪಡೆದುಕೊಂಡಿದೆ. ಆದರೆ ಬಿಎಂಡಬ್ಲ್ಯು ಕಂಪನಿಯು ಸದ್ಯಕ್ಕೆ ಭಾರತದಲ್ಲಿ ಎಕ್ಸ್‌ಡ್ರೈವ್40 ಮಾದರಿಯನ್ನು ಮಾತ್ರವೇ ಮಾರಾಟ ಮಾಡಲು ನಿರ್ಧರಿಸಿದ್ದು, ಮುಂಬರುವ ದಿನಗಳಲ್ಲಿ ಗ್ರಾಹಕರ ಬೇಡಿಕೆ ಆಧರಿಸಿ ಹೈ ಎಂಡ್ ಮಾದರಿಯನ್ನು ಸಹ ಬಿಡುಗಡೆ ಮಾಡುವ ಯೋಜನೆಯಲ್ಲಿದೆ.

ಬಿಡುಗಡೆಯ ಮೊದಲ ದಿನವೇ ಬಿಎಂಡಬ್ಲ್ಯು ಐಎಕ್ಸ್ ಇವಿ ಕಾರು ಸೋಲ್ಡ್ ಔಟ್

ಹೊಸ ಐಎಕ್ಸ್ ಎಕ್ಸ್‌ಡ್ರೈವ್40 ಮಾದರಿಯು ಸದ್ಯ ಭಾರತದಲ್ಲಿ ಖರೀದಿಗೆ ಲಭ್ಯವಿದ್ದು, ಹೊಸ ಕಾರು ಬಿಡುಗಡೆಯೊಂದಿಗೆ ಬುಕ್ಕಿಂಗ್ ಪ್ರಕ್ರಿಯೆಗೆ ಚಾಲನೆ ನೀಡಿರುವ ಬಿಎಂಡಬ್ಲ್ಯು ಕಂಪನಿಯು ಹೊಸ ಕಾರನ್ನು ಮುಂಬರುವ 2022ರ ಏಪ್ರಿಲ್‌ನಿಂದ ವಿತರಣೆ ಮಾಡುವುದಾಗಿ ಹೇಳಿಕೊಂಡಿದೆ.

ಬಿಡುಗಡೆಯ ಮೊದಲ ದಿನವೇ ಬಿಎಂಡಬ್ಲ್ಯು ಐಎಕ್ಸ್ ಇವಿ ಕಾರು ಸೋಲ್ಡ್ ಔಟ್

ಐಎಕ್ಸ್ ಎಕ್ಸ್‌ಡ್ರೈವ್40 ಮಾದರಿಗಾಗಿ ಬಿಎಂಡಬ್ಲ್ಯು ಮೂರು ಮಾದರಿಯ ಚಾರ್ಜಿಂಗ್ ಸರ್ಪೊಟ್ ನೀಡಿದ್ದು, ಗ್ರಾಹಕರು 150kW ಡಿಸಿ ಫಾಸ್ಟ್ ಚಾರ್ಜ್‌ರ್, 50kW ಡಿಸಿ ಚಾರ್ಜ್‌ರ್ ಮತ್ತು 11 kW ಹೋಂ ಚಾರ್ಜರ್ ಆಯ್ಕೆ ನೀಡಿದೆ. 150kW ಡಿಸಿ ಫಾಸ್ಟ್ ಚಾರ್ಜ್‌ರ್ ಮೂಲಕ ಶೇ.80 ಚಾರ್ಜ್‌ಗೆ 31 ನಿಮಿಷ ತೆಗೆದುಕೊಂಡರೆ, 50kW ಡಿಸಿ ಚಾರ್ಜ್‌ರ್ ಮೂಲಕ ಚಾರ್ಜ್ ಮಾಡಲು 73 ನಿಮಿಷ ಮತ್ತು 11 kW ಹೋಂ ಚಾರ್ಜರ್ ಮೂಲಕ ಪೂರ್ತಿಯಾಗಿ ಚಾರ್ಜ್ ಮಾಡಲು ಗರಿಷ್ಠ 7 ಗಂಟೆಗಳ ಕಾಲಾವಕಾಶ ತೆಗದುಕೊಳ್ಳುತ್ತದೆ.

ಬಿಡುಗಡೆಯ ಮೊದಲ ದಿನವೇ ಬಿಎಂಡಬ್ಲ್ಯು ಐಎಕ್ಸ್ ಇವಿ ಕಾರು ಸೋಲ್ಡ್ ಔಟ್

ಬಿಎಂಡಬ್ಲ್ಯು ಕಂಪನಿಯು ತನ್ನ ಹೊಸ ಕ್ಲಾರ್(CLAR) ಪ್ಲ್ಯಾಟ್‌ಫಾರ್ಮ್ ಅಡಿಯಲ್ಲಿ ಐಎಕ್ಸ್ ಮಾದರಿಯನ್ನು ಅಭಿವೃದ್ದಿಪಡಿಸಿದ್ದು, ಹೊಸ ಕಾರು ಬಹುತೇಕ ಬಿಡಿಭಾಗಗಳು ಅಲ್ಯುನಿಯಂ ಮತ್ತು ಕಾರ್ಬನ್ ಫೈಬರ್ ಒಳಗೊಂಡಿದೆ.

ಬಿಡುಗಡೆಯ ಮೊದಲ ದಿನವೇ ಬಿಎಂಡಬ್ಲ್ಯು ಐಎಕ್ಸ್ ಇವಿ ಕಾರು ಸೋಲ್ಡ್ ಔಟ್

ಅಲ್ಯುನಿಯಂ ಮತ್ತು ಕಾರ್ಬನ್ ಫೈಬರ್ ಅಂಶಗಳಿಂದಾಗಿ ಕಾರಿನ ತೂಕ ಇಳಿಕೆಯಾಗುವುದರ ಜೊತೆ ಪರ್ಫಾಮೆನ್ಸ್ ಹೆಚ್ಚಳವಾಗಲೂ ಸಹಕಾರಿಯಾಗಿದ್ದು, ಹೊಸ ಕಾರು ವಿವಿಧ ಡ್ರೈವ್ ಮೋಡ್‌ಗಳ ಮೂಲಕ 326 ಬಿಎಚ್‌ಪಿ, 630 ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಕೇವಲ 6.1 ಸೆಕೆಂಡುಗಳಲ್ಲಿ ಸೊನ್ನೆಯಿಂದ ನೂರು ಕಿ.ಮೀ ವೇಗಪಡೆದುಕೊಂಡು ಪ್ರತಿ ಗಂಟೆಗೆ 200 ಕಿ.ಮೀ ಟಾಪ್ ಸ್ಪೀಡ್ ತಲುಪಬಲ್ಲದು.

ಬಿಡುಗಡೆಯ ಮೊದಲ ದಿನವೇ ಬಿಎಂಡಬ್ಲ್ಯು ಐಎಕ್ಸ್ ಇವಿ ಕಾರು ಸೋಲ್ಡ್ ಔಟ್

ಬಿಎಂಡಬ್ಲ್ಯು ಐಎಕ್ಸ್‌ನಲ್ಲಿರುವ ದೊಡ್ಡ ಕಿಡ್ನಿ ಗ್ರಿಲ್ ಅನ್ನು ಇಂಟಿಲಿಜಿಟೆಂಡ್ ಡ್ರೈವ್ಸ್ ಅಸಿಸ್ಟೆನ್ಸ್ ಟೆಕ್ನಾಲಜಿಗೆ ನೆರವಾಗುವಂತೆ ಅಳವಡಿಸಲಾಗಿದ್ದು, ಇದರಲ್ಲಿರುವ ರಾಡಾರ್ ಸಿಸ್ಟಂ, ಸೆನ್ಸಾರ್ ಗಳು ಮತ್ತು ಕ್ಯಾಮೆರಾಗಳು ಕಾರಿಗೆ ಗರಿಷ್ಠ ಸುರಕ್ಷತೆ ನೀಡಲಿವೆ.

ಬಿಡುಗಡೆಯ ಮೊದಲ ದಿನವೇ ಬಿಎಂಡಬ್ಲ್ಯು ಐಎಕ್ಸ್ ಇವಿ ಕಾರು ಸೋಲ್ಡ್ ಔಟ್

ಹೊಸ ಬಿಎಂಡಬ್ಲ್ಯು ಐಎಕ್ಸ್ ವಿನ್ಯಾಸವು ವಿಶಿಷ್ಟವಾದ ಸಂರಚನೆಯೊಂದಿಗೆ ಭವಿಷ್ಯದ ಆಧಾರಿತ ಸ್ಟೈಲಿಂಗ್ ಹೊಂದಿದ್ದು, 3ಡಿ ಬ್ಯಾನೆಟ್, ವಿಶಿಷ್ಠ ವಿನ್ಯಾಸದ ವ್ಹೀಲ್ ಆರ್ಚ್, ಹೊಸ ಐಎಕ್ಸ್ ಬ್ರ್ಯಾಂಡ್‌ನ ಹೊಸ ಸ್ಕೇಲೆಬಲ್ ಆರ್ಕಿಟೆಕ್ಚರ್ ಜೊತೆ ಆಕರ್ಷಕ ಇಂಟಿರಿಯರ್ ಅನ್ನು ಸಹ ನೀಡಲಾಗಿದೆ.

ಬಿಡುಗಡೆಯ ಮೊದಲ ದಿನವೇ ಬಿಎಂಡಬ್ಲ್ಯು ಐಎಕ್ಸ್ ಇವಿ ಕಾರು ಸೋಲ್ಡ್ ಔಟ್

ಬಿಎಂಡಬ್ಲ್ಯು ಇಂಡಿಯಾ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ತನ್ನ ಹೊಸ ಕಾರು ಮಾರಾಟವನ್ನು ತೀವ್ರಗೊಳಿಸುತ್ತಿದ್ದು, ಮರ್ಸಿಡಿಸ್ ಬೆಂಝ್ ಕಂಪನಿಗೆ ಪೈಪೋಟಿಯಾಗಿ ಮತ್ತಷ್ಟು ಹೊಸ ಕಾರುಗಳನ್ನು ಭಾರತದಲ್ಲಿ ಬಿಡುಗಡೆಗೊಳಿಸುವ ಸಿದ್ದತೆಯಲ್ಲಿದೆ. ಭಾರತದಲ್ಲಿ ಸದ್ಯ ವಿವಿಧ ಸರಣಿಗಳಲ್ಲಿ ಒಟ್ಟು 16 ಕಾರುಗಳ ಮಾರಾಟ ಹೊಂದಿರುವ ಬಿಎಂಡಬ್ಲ್ಯು ಕಂಪನಿಯು ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ಕಾರುಗಳನ್ನು ಬಿಡುಗಡೆ ಮಾಡುವ ಸಿದ್ದತೆಯಲ್ಲಿದ್ದು, ಹೊಸ ಕಾರುಗಳಲ್ಲಿ ಎಲೆಕ್ಟ್ರಿಕ್ ಕಾರು ಮಾದರಿಗಳು ಸಹ ಪ್ರಮುಖ ಆಕರ್ಷಣೆಯಾಗಿವೆ.

ಬಿಡುಗಡೆಯ ಮೊದಲ ದಿನವೇ ಬಿಎಂಡಬ್ಲ್ಯು ಐಎಕ್ಸ್ ಇವಿ ಕಾರು ಸೋಲ್ಡ್ ಔಟ್

ಭಾರತದಲ್ಲಿ ಮೊದಲ ಹಂತವಾಗಿ ಐಎಕ್ಸ್ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆ ಮಾಡಿರುವ ಬಿಎಂಡಬ್ಲ್ಯು ಕಂಪನಿಯು ಎರಡನೇ ಕಾರು ಮಾದರಿಯಾಗಿ ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್ ಮತ್ತು ಮೂರನೇ ಕಾರು ಮಾದರಿಯಾಗಿ ಐ4 ಎಲೆಕ್ಟ್ರಿಕ್ ಸೆಡಾನ್ ಮಾದರಿಯನ್ನು ಬಿಡುಗಡೆ ಮಾಡಲಿದೆ.

Most Read Articles

Kannada
English summary
Bmw ix electric suv completely sold out on launch details
Story first published: Tuesday, December 14, 2021, 11:24 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X