ಭಾರತದಲ್ಲಿ ಹೊಸ BMW 530i M Sport ‘Carbon Edition’ ಬಿಡುಗಡೆ

ಜರ್ಮನಿ ಮೂಲದ ಐಷಾರಾಮಿ ಕಾರು ತಯಾರಕ ಕಂಪನಿಯಾದ ಬಿಎಂಡಬ್ಲ್ಯು ತನ್ನ ಹೊಸ 5 ಸಿರೀಸ್ ಎಂ ಸ್ಪೋರ್ಟ್ 'ಕಾರ್ಬನ್ ಎಡಿಷನ್' ಅನ್ನು ಬಿಡುಗಡೆಗೊಳಿಸಿದೆ. ಈ ಹೊಸ ಬಿಎಂಡಬ್ಲ್ಯು 530ಐ ಎಂ ಸ್ಪೋರ್ಟ್ 'ಕಾರ್ಬನ್ ಎಡಿಷನ್(BMW 530i M Sport 'Carbon Edition') ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.66.30 ಲಕ್ಷಗಳಾಗಿದೆ.

ಭಾರತದಲ್ಲಿ ಹೊಸ BMW 530i M Sport ‘Carbon Edition’ ಬಿಡುಗಡೆ

ಈ ಹೊಸ ಕಾರನ್ನು ಸ್ಥಳೀಯವಾಗಿ ಭಾರತದಲ್ಲಿ ಕಂಪನಿಯ ಚೆನ್ನೈ ಸ್ಥಾವರದಲ್ಲಿ ಉತ್ಪಾದಿಸಲಾಗುತ್ತದೆ. ಇನ್ನು ಬಿಎಂಡಬ್ಲ್ಯು 530ಐ ಎಂ ಸ್ಪೋರ್ಟ್ 'ಕಾರ್ಬನ್ ಎಡಿಷನ್ ಮಾದರಿಯ ಖರೀದಿಗಾಗಿ ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಬುಕ್ಕಿಂಗ್ ಪ್ರಾರಂಭಿಸಲಾಗಿದೆ. ಈ ಹೊಸ ಬಿಎಂಡಬ್ಲ್ಯು 530ಐ ಎಂ ಸ್ಪೋರ್ಟ್ 'ಕಾರ್ಬನ್ ಎಡಿಷನ್ ಹಲವಾರು ಆಕರ್ಷಕ ಬಾಹ್ಯ ಅಂಶಗಳೊಂದಿಗೆ ಸಂಯೋಜಿಸಲ್ಪಟ್ಟಿದೆ. ಇದು ಕಿಡ್ನಿ ಗ್ರಿಲ್ ಮತ್ತು ಸ್ಪ್ಲಿಟರ್‌ಗಳ ಮೇಲೆ ಕಾರ್ಬನ್ ಫೈಬರ್ ಅಂಶವನ್ನು ಹೊಂದಿದೆ. ಅದರ ಜೊತೆಗೆ ಹೊರಗಿನ ಮೀರರ್ಸ್ ಕ್ಯಾಪ್‌ಗಳು ಕಾರ್ಬನ್ ಫೈಬರ್ ಜೊತೆಗೆ ಕಾರ್ಬನ್ ಫೈಬರ್ ಹಿಂಭಾಗದ ಸ್ಪೋಲಿಯರ್‌ನೊಂದಿಗೆ ಕೂಡ ಬರುತ್ತವೆ.

ಭಾರತದಲ್ಲಿ ಹೊಸ BMW 530i M Sport ‘Carbon Edition’ ಬಿಡುಗಡೆ

ಇನ್ನು ಈ ಹೊಸ ಬಿಎಂಡಬ್ಲ್ಯು 530ಐ ಎಂ ಸ್ಪೋರ್ಟ್ 'ಕಾರ್ಬನ್ ಎಡಿಷನ್' ಕಾರಿನಲ್ಲಿ ಡಾರ್ಕ್ ಥೀಮ್ ಅನ್ನು 662ಎಂ 18-ಇಂಚಿನ ಜೆಟ್ ಬ್ಲ್ಯಾಕ್ ಅಲಾಯ್ ವ್ಹೀಲ್ ಗಳೊಂದಿಗೆ ಸೈಡ್ ಪ್ರೊಫೈಲ್‌ಗೆ ಸಾಗಿಸಲಾಗುತ್ತದೆ. ಇನ್ನು ಈ ಕಾರ್ಬನ್ ಎಡಿಷನ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಆಲ್ಪೈನ್ ವೈಟ್ ಪೇಂಟ್ ವರ್ಕ್ ನಲ್ಲಿ ಪರಿಚಯಿಸಲಾಗಿದೆ. ಕಾರ್ ಕಾಂಟ್ರಾಕ್ಟ್ ಸ್ಟಿಚಿಂಗ್‌ನೊಂದಿಗೆ ಕಾಗ್ನ್ಯಾಕ್/ಕಪ್ಪು ಬಣ್ಣದ ಸಂಯೋಜನೆಯಲ್ಲಿ ಸೆನ್ಸಾಟೆಕ್ ಟ್ರಿಮ್ ಅನ್ನು ಪಡೆಯುತ್ತದೆ.

ಭಾರತದಲ್ಲಿ ಹೊಸ BMW 530i M Sport ‘Carbon Edition’ ಬಿಡುಗಡೆ

ಈ ಹೊಸ ಬಿಎಂಡಬ್ಲ್ಯು 530ಐ ಎಂ ಸ್ಪೋರ್ಟ್ 'ಕಾರ್ಬನ್ ಎಡಿಷನ್' ಮಾದರಿಯಲ್ಲಿ 2 ಲೀಟರ್ 4-ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 252 ಬಿಹೆಚ್‍ಪಿ ಪವರ್ ಮತ್ತು 350 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಈ ಕಾರು 6.1 ಸೆಕೆಂಡುಗಳಲ್ಲಿ 0-100 ಕಿಮೀ ವೇಗವನ್ನು ಪಡೆದುಕೊಳ್ಳುತ್ತದೆ.

ಭಾರತದಲ್ಲಿ ಹೊಸ BMW 530i M Sport ‘Carbon Edition’ ಬಿಡುಗಡೆ

ಬಿಎಂಡಬ್ಲ್ಯು ಗ್ರೂಪ್ ಇಂಡಿಯಾದ ಅಧ್ಯಕ್ಷರಾದ ವಿಕ್ರಮ್ ಪವಾಹ್ ಅವರು ಮಾತನಾಡಿ, ಬಿಎಂಡಬ್ಲ್ಯು 530 ಸೀರಿಸ್ ಭಾರತದ ಅತ್ಯಂತ ಯಶಸ್ವಿ ಪ್ರೀಮಿಯಂ ಎಕ್ಸಿಕ್ಯುಟಿವ್ ಸೆಡಾನ್ ಗಳಲ್ಲಿ ಒಂದಾಗಿದೆ. ಈ ಟೈಮ್‌ಲೆಸ್ ಯಂತ್ರ ಯಾವಾಗಲೂ ನಮ್ಮ ಗ್ರಾಹಕರನ್ನು ಆಕರ್ಷಿಸುತ್ತದೆ. ಇದೀಗ ಹೊಸ 'ಕಾರ್ಬನ್ ಎಡಿಷನ್' ಯೊಂದಿಗೆ, ಬಿಎಂಡಬ್ಲ್ಯು 5 ಸೀರಿಸ್ ತನ್ನ ವಿಭಾಗದಲ್ಲಿ ಮತ್ತೊಮ್ಮೆ ಉತ್ಸಾಹವನ್ನು ಹೆಚ್ಚಿಸಿದೆ.

ಭಾರತದಲ್ಲಿ ಹೊಸ BMW 530i M Sport ‘Carbon Edition’ ಬಿಡುಗಡೆ

ವಿಭಿನ್ನ ಡಾರ್ಕ್ ಕಾರ್ಬನ್ ಬಾಹ್ಯ ಅಂಶಗಳುಸ್ಪೋರ್ಟಿ ಡ್ರೈವಿಂಗ್ ಅನುಭವದ ಭಾವನೆಗಳನ್ನು ಮೂಡಿಸುತ್ತದೆ. ಬಿಎಂಡಬ್ಲ್ಯು 530 ಐ ಎಂ ಸ್ಪೋರ್ಟ್‌ನ ಅತ್ಯಂತ ಕ್ರಿಯಾತ್ಮಕ ಪೆಟ್ರೋಲ್ ಎಂಜಿನ್ ಮತ್ತು ನವೀನ ತಂತ್ರಜ್ಞಾನದ ವೈಶಿಷ್ಟ್ಯಗಳೊಂದಿಗೆ ಸೇರಿ, ಇದು ಮರೆಯಲಾಗದ ಡ್ರೈವ್ ಅನ್ನು ಭರವಸೆ ನೀಡುತ್ತದೆ ಎಂದು ಹೇಳಿದರು.

ಭಾರತದಲ್ಲಿ ಹೊಸ BMW 530i M Sport ‘Carbon Edition’ ಬಿಡುಗಡೆ

ಬಿಎಂಡಬ್ಲ್ಯು 5 ಸೀರಿಸ್ ಕಾರಿನ ಒಳಭಾಗದಲ್ಲಿ ಆಕರ್ಷಕ ಕ್ಯಾಬಿನ್‌ನೊಂದಿಗೆ ಸುಧಾರಿತ ತಂತ್ರಜ್ಞಾನ ಪ್ರೇರಿತ ಡ್ಯಾಶ್‌ಬೋರ್ಡ್ ಸೌಲಭ್ಯಗಳನ್ನು ಒಳಗೊಂಡಿದೆ.ಇದರಲ್ಲಿ ಇನ್ಪೋಟೈನ್‌ಮೆಂಟ್ ಡಿಸ್‌ಪ್ಲೇ, ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಆಂಡ್ರಾಯಿಡ್ ಆಟೋ ಮತ್ತು ಆಟೋ ಕಾರ್‌ಪ್ಲೇ ಕನೆಕ್ಟಿವಿಟಿ, ಸ್ಪೋರ್ಟ್ ಸ್ಟ್ರೀರಿಂಗ್ ಮೌಂಟೆಡ್ ಕಂಟ್ರೋಲ್ ಸೌಲಭ್ಯಗಳಿವೆ.

ಭಾರತದಲ್ಲಿ ಹೊಸ BMW 530i M Sport ‘Carbon Edition’ ಬಿಡುಗಡೆ

ಜೊತಗೆ ಹೊಸ ಕಾರಿನಲ್ಲಿ ಡ್ಯುಯಲ್ ಜೋನ್ ಕ್ಲೈಮೆಟ್ ಕಂಟ್ರೋಲ್, ಪನರೊಮಿಕ್ ಸನ್‌ರೂಫ್, ವೆಂಟಿಲೆಟೆಡ್ ಆಸನಗಳು, ರಿಯರ್ ಎಸಿ ವೆಂಟ್ಸ್, ಆ್ಯಂಬಿಯೆಂಟ್ ಲೈಟಿಂಗ್ಸ್, ಹರ್ಮನ್ ಕಾರ್ಡನ್ ಸರೌಂಡ್ ಸೌಂಡ್ ಸಿಸ್ಟಂ ಮತ್ತು ಬಿಎಂಡಬ್ಲ್ಯು ವರ್ಚುವಲ್ ಕಂಟ್ರೋಲ್ ಅಸಿಸ್ಟ್ ಹೊಂದಿದೆ.

ಭಾರತದಲ್ಲಿ ಹೊಸ BMW 530i M Sport ‘Carbon Edition’ ಬಿಡುಗಡೆ

ಸುರಕ್ಷತೆಗಾಗಿ ಹೊಸ ಕಾರಿನಲ್ಲಿ ಬಿಎಂಡಬ್ಲ್ಯು ಕಂಪನಿಯು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಫ್ರಂಟ್ ಕೂಲಿಷನ್ ವಾರ್ನಿಂಗ್, ಎಮರ್ಜೆನ್ಸಿ ಬ್ರೇಕ್ ಅಸಿಸ್ಟ್, ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ, ರಿಯರ್ ಕೂಲಿಷನ್ ವಾರ್ನಿಂಗ್, 360 ಡಿಗ್ರಿ ಕ್ಯಾಮೆರಾ, 8 ಏರ್‌ಬ್ಯಾಗ್, ಎಬಿಎಸ್ ಜೊತೆ ಇಬಿಡಿ, ಕಾರ್ನರಿಂಗ್ ಬ್ರೇಕ್ ಕಂಟ್ರೋಲ್, ಡೈನಾಮಿಕ್ ಟ್ರಾಕ್ಷನ್ ಕಂಟ್ರೋಲ್ ಸೇರಿದಂತೆ ಹಲವಾರು ಸುರಕ್ಷತಾ ಫೀಚರ್ಸ್ ಗಳಾಗಿವೆ.

ಭಾರತದಲ್ಲಿ ಹೊಸ BMW 530i M Sport ‘Carbon Edition’ ಬಿಡುಗಡೆ

ಇನ್ನು ಬಿಎಂಡಬ್ಲ್ಯು ಕಂಪನಿಯು ತನ್ನ 3 ಸೀರಿಸ್ ಗ್ರ್ಯಾನ್ ಲಿಮೋಸಿನ್ ಐಕಾನಿಕ್ ಎಡಿಷನ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಈ ಹೊಸ ಬಿಎಂಡಬ್ಲ್ಯು 3 ಸೀರಿಸ್ ಗ್ರ್ಯಾನ್ ಲಿಮೋಸಿನ್ ಐಕಾನಿಕ್ ಎಡಿಷನ್ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.53.50 ಲಕ್ಷಗಳಾಗಿದೆ.ಈ ಹೊಸ 3 ಸೀರಿಸ್ ಗ್ರ್ಯಾನ್ ಲಿಮೋಸಿನ್ ಐಕಾನಿಕ್ ಎಡಿಷನ್ ಮಾದರಿಯನ್ನು ಚೆನ್ನೈನ ಬಿಎಂಡಬ್ಲ್ಯು ಗ್ರೂಪ್ ಘಟಕದಲ್ಲಿ ಉತ್ಪಾದಿಸಲಾಗಿದೆ. ಲಾಂಗ್-ವೀಲ್‌ಬೇಸ್ ಗ್ರ್ಯಾನ್ ಲಿಮೋಸಿನ್ ಐಕಾನಿಕ್ ಎಡಿಶನ್ ಅನ್ನು ಪೆಟ್ರೋಲ್ ಮತ್ತು ಡೀಸೆಲ್ ವೆರಿಯಂಟ್‌ಗಳಲ್ಲಿ ದೇಶದಲ್ಲಿ ಲಭ್ಯವಾಗಲಿದೆ.

ಭಾರತದಲ್ಲಿ ಹೊಸ BMW 530i M Sport ‘Carbon Edition’ ಬಿಡುಗಡೆ

ಈ ಐಕಾನಿಕ್ ಸ್ಪೆಷಲ್ ಎಡಿಷನ್ ಮಾದರಿಯು ಆಕರ್ಷಕ ವಿನ್ಯಾಸ, ಅತ್ಯಾಧುನಿಕ ಫೀಚರ್ಸ್ ಮತ್ತು ತಂತ್ರಜ್ಙಾನಗಳನ್ನು ಒಳಗೊಂಡಿದೆ.ಈ ಹೊಸ ಐಕಾನಿಕ್ ಎಡಿಷನ್ ನರಲ್ ವೈಟ್, ಕಾರ್ಬನ್ ಬ್ಲ್ಯಾಕ್ ಮತ್ತು ಕ್ಯಾಶ್ಮೀರ್ ಸಿಲ್ವರ್ ಈ ಮೂರು ಬಣ್ನಗಳ ಆಯ್ಕೆಯಲ್ಲಿ ಲಭ್ಯವಿರುತ್ತದೆ, ಬಿಎಂಡಬ್ಲ್ಯು 3 ಸೀರಿಸ್ ಗ್ರ್ಯಾನ್ ಲಿಮೋಸಿನ್ ಐಕಾನಿಕ್ ಎಡಿಷನ್ 110 ಎಂಎಂ ಉದ್ದದ ವೀಲ್‌ಬೇಸ್ ಅನ್ನು ಪಡೆಯುತ್ತದೆ, ಇದು ದೊಡ್ಡ ಹೊಳೆಯುವ ಮುಂಭಾಗದ ಗ್ರಿಲ್, ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಸಣ್ಣ ಓವರ್‌ಹ್ಯಾಂಗ್‌ಗಳು, ಉದ್ದವಾದ ಬಾನೆಟ್, 3 ಡಿ ಎಲ್-ಆಕಾರದ ಎಲ್‌ಇಡಿ ಟೈಲ್‌ಲೈಟ್‌ಗಳು ಮತ್ತು ಎರಡು ದೊಡ್ಡ ಫ್ರೀಫಾರ್ಮ್ ಟೈಲ್‌ಪೈಪ್‌ಗಳು ಇತ್ಯಾದಿಗಳನ್ನು ಪಡೆಯುತ್ತದೆ.

ಭಾರತದಲ್ಲಿ ಹೊಸ BMW 530i M Sport ‘Carbon Edition’ ಬಿಡುಗಡೆ

ಹೊಸ ಬಿಎಂಡಬ್ಲ್ಯು 530ಐ ಎಂ ಸ್ಪೋರ್ಟ್ 'ಕಾರ್ಬನ್ ಎಡಿಷನ್ ಮಾದರಿಯು ಹೆಚ್ಚಿನ ಗ್ರಾಹಕರನ್ನು ಸೆಳೆಯಬಹುದು. ಇನ್ನು ಹಬ್ಬದ ಈ ಸೀಸನ್ ನಲ್ಲಿ ಮಾರಾಟದ ವೇಗವನ್ನು ಹೆಚ್ಚಿಸಲು ಸಹಾಯವಾಗುತ್ತದೆ. ಇನ್ನು ಬಿಎಂಡಬ್ಲ್ಯು 5-ಸೀರಿಸ್ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಆಡಿ ಎ6, ಮರ್ಸಿಡಿಸ್ ಬೆಂಝ್ ಇ-ಕ್ಲಾಸ್, ಜಾಗ್ವಾರ್ ಎಕ್ಸ್‌ಎಫ್ ಮತ್ತು ವೋಲ್ವೋ ಎಸ್90 ಕಾರುಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
English summary
Bmw launched 530i m sport carbon edition in india price features find here details
Story first published: Friday, October 22, 2021, 10:22 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X