ಅಲ್ಟ್ರಾ ಎಕ್ಸ್‌ಕ್ಲೂಸಿವ್ ಎಕ್ಸ್7 ಡಾರ್ಕ್ ಶ್ಯಾಡೋ ಎಡಿಷನ್ ಬಿಡುಗಡೆಗೊಳಿಸಲಿದೆ ಬಿಎಂಡಬ್ಲ್ಯು

ಜರ್ಮನ್ ಮೂಲದ ಐಷಾರಾಮಿ ಕಾರು ತಯಾರ ಕಂಪನಿಯಾದ ಬಿಎಂಡಬ್ಲ್ಯು ಭಾರತೀಯ ಮಾರುಕಟ್ಟೆಯಲ್ಲಿ ಅಲ್ಟ್ರಾ ಎಕ್ಸ್‌ಕ್ಲೂಸಿವ್ ಎಕ್ಸ್7 ಡಾರ್ಕ್ ಶ್ಯಾಡೋ ಎಡಿಷನ್ ಎಸ್‍ಯುವಿಯನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ. ಈ ಹೊಸ ಐಷಾರಾಮಿ ಬಿಎಂಡಬ್ಲ್ಯು ಎಸ್‍ಯುವಿಯು ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆ ಪ್ರವೇಶಿಸಲಿದೆ.

ಅಲ್ಟ್ರಾ ಎಕ್ಸ್‌ಕ್ಲೂಸಿವ್ ಎಕ್ಸ್7 ಡಾರ್ಕ್ ಶ್ಯಾಡೋ ಎಡಿಷನ್ ಬಿಡುಗಡೆಗೊಳಿಸಲಿದೆ ಬಿಎಂಡಬ್ಲ್ಯು

ಬಿಎಂಡಬ್ಲ್ಯುನ ಪ್ರಮುಖ ಎಸ್‍ಯುವಿಯಾದ ಡಾರ್ಕ್ ಶ್ಯಾಡೋ ಎಡಿಷನ್ ಅನ್ನು 2020ರಲ್ಲಿ ಪರಿಚಯಿಸಲಾಯಿತು. ಇದರ ಅಲ್ಟ್ರಾ ಎಕ್ಸ್‌ಕ್ಲೂಸಿವ್ ಎಕ್ಸ್7 ಡಾರ್ಕ್ ಶ್ಯಾಡೋ ಎಡಿಷನ್ ಅನ್ನು ವಿಶ್ವದಾದ್ಯಂತ ಕೇವಲ 500 ಯುನಿಟ್ ಗಳಾಗಿ ಸೀಮಿತವಾಗಿ ಬಿಡುಗಡೆಗೊಳಿಸಲಿದೆ. ಇದರ ರೇಂಜ್-ಟಾಪಿಂಗ್ M50ಐ ರೂಪಾಂತರವನ್ನು ಆಧರಿಸಿದೆ, ಇದು ಆಕರ್ಷಕವಾದ ಬ್ಲ್ಯಾಕ್ ಬಣ್ಣದ ಥೀಮ್ ಅನ್ನು ಒಳಗೊಂಡಿದೆ. ಭಾರತದಲ್ಲಿ ಈ ಅಲ್ಟ್ರಾ ಎಕ್ಸ್‌ಕ್ಲೂಸಿವ್ ಎಕ್ಸ್7 ಡಾರ್ಕ್ ಶ್ಯಾಡೋ ಎಡಿಷನ್ ಅನ್ನು ಸರಿಸುಮಾರು ಎಕ್ಸ್ ಶೋರೂಂ ಪ್ರಕಾರ ರೂ.1 ಕೋಟಿಗಿಂತ ಹೆಚ್ಚಿನ ಬೆಲೆಯನ್ನು ಹೊಂದಿರಬಹುದು.

ಅಲ್ಟ್ರಾ ಎಕ್ಸ್‌ಕ್ಲೂಸಿವ್ ಎಕ್ಸ್7 ಡಾರ್ಕ್ ಶ್ಯಾಡೋ ಎಡಿಷನ್ ಬಿಡುಗಡೆಗೊಳಿಸಲಿದೆ ಬಿಎಂಡಬ್ಲ್ಯು

ಹೊಸ ಬಿಎಂಡಬ್ಲ್ಯು ಅಲ್ಟ್ರಾ ಎಕ್ಸ್‌ಕ್ಲೂಸಿವ್ ಎಕ್ಸ್7 ಡಾರ್ಕ್ ಶ್ಯಾಡೋ ಎಡಿಷನ್ ಎಸ್‍ಯುವಿಯು ಕಿಡ್ನಿ ಗ್ರಿಲ್, ರೂಫ್ ರೈಲ್ ಮತ್ತು ಟೈಲ್‌ಪೈಪ್‌ಗಳ ಮೇಲೆ ಬ್ಲ್ಯಾಕ್ ಟ್‌ಗಳನ್ನು ಪಡೆಯುತ್ತದೆ. ಇದು 22 ಇಂಚಿನ ವಿ-ಸ್ಪೋಕ್ ಎಂ ಲೈಟ್-ಅಲಾಯ್ ವ್ಹೀಲ್ ಗಳ ಬೆಸ್ಪೋಕ್ ಸೆಟಪ್ ಅನ್ನು ಒಂದಿದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಅಲ್ಟ್ರಾ ಎಕ್ಸ್‌ಕ್ಲೂಸಿವ್ ಎಕ್ಸ್7 ಡಾರ್ಕ್ ಶ್ಯಾಡೋ ಎಡಿಷನ್ ಬಿಡುಗಡೆಗೊಳಿಸಲಿದೆ ಬಿಎಂಡಬ್ಲ್ಯು

ಇದು ಜೆಟ್ ಬ್ಲ್ಯಾಕ್ ಮ್ಯಾಟ್ ಫಿನಿಶ್ ಅನ್ನು ಅದರ ಡಾರ್ಕ್ ಬಾಡಿ ಥೀಮ್ಗೆ ಪೂರಕವಾಗಿ ಅಲಂಕರಿಸಲಾಗಿದೆ. ಇನ್ನು ಈ ಐಷಾರಾಮಿ ಎಸ್‍ಯುವಿಯ ಒಳಭಾಗದಲ್ಲಿ ಬ್ಲೂ ಮತ್ತು ಬ್ಲ್ಯಾಕ್ ಬಣ್ಣದ ಥೀಮ್ ಹೊಂದಿರುವ ಕ್ಯಾಬಿನ್ ಇದೆ.

ಅಲ್ಟ್ರಾ ಎಕ್ಸ್‌ಕ್ಲೂಸಿವ್ ಎಕ್ಸ್7 ಡಾರ್ಕ್ ಶ್ಯಾಡೋ ಎಡಿಷನ್ ಬಿಡುಗಡೆಗೊಳಿಸಲಿದೆ ಬಿಎಂಡಬ್ಲ್ಯು

ಇದು ಕ್ಲಾಸಿ-ಕಾಣುವ ಮೆರಿನೊ ಲೆದರ್ ಅಪ್ಹೋಲ್ಸ್ಟರಿ ಮತ್ತು ನಪ್ಪಾ ಲೆದರ್ ಅನ್ನು ಹೊಂದಿದೆ, ಇದನ್ನು ಕಾರಿನ ಮೇಲಿನ ಡ್ಯಾಶ್‌ಬೋರ್ಡ್, ಡೋರ್ ಪ್ಯಾನೆಲ್‌ಗಳು ಮತ್ತು ಆರ್ಮ್‌ಸ್ಟ್ರೆಸ್‌ಗಳಲ್ಲಿ ಕಾಣಬಹುದು ಇದರ ಇತರ ಟ್ವೀಕ್‌ಗಳಲ್ಲಿ ಬ್ಲ್ಯಾಕ್ ಮೆರಿನೊ ಲೆದರ್ ಇದೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಅಲ್ಟ್ರಾ ಎಕ್ಸ್‌ಕ್ಲೂಸಿವ್ ಎಕ್ಸ್7 ಡಾರ್ಕ್ ಶ್ಯಾಡೋ ಎಡಿಷನ್ ಬಿಡುಗಡೆಗೊಳಿಸಲಿದೆ ಬಿಎಂಡಬ್ಲ್ಯು

ಹೊಸ ಬಿಎಂಡಬ್ಲ್ಯು ಅಲ್ಟ್ರಾ ಎಕ್ಸ್‌ಕ್ಲೂಸಿವ್ ಎಕ್ಸ್7 ಡಾರ್ಕ್ ಶ್ಯಾಡೋ ಎಡಿಷನ್ ಎಸ್‍ಯುವಿಯಲ್ಲಿ ಪ್ರಮುಖ ಕ್ಯಾಬಿನ್ ಮುಖ್ಯಾಂಶಗಳು ಬೋವರ್ಸ್ & ವಿಲ್ಕಿನ್ಸ್ ಡೈಮಂಡ್ ಸರೌಂಡ್ ಸೌಂಡ್ ಸಿಸ್ಟಂ, ಪನರೋಮಿಕ್ ಸನ್‌ರೂಫ್, ಹೆಡ್-ಅಪ್ ಡಿಸ್ ಪ್ಲೇ ಮತ್ತು ಮುಂಭಾಗದ ಸೀಟುಗಳಲ್ಲಿ ಮಸಾಜ್ ಫಂಕ್ಷನ್ ಅನ್ನು ಹೊಂದಿದೆ.

ಅಲ್ಟ್ರಾ ಎಕ್ಸ್‌ಕ್ಲೂಸಿವ್ ಎಕ್ಸ್7 ಡಾರ್ಕ್ ಶ್ಯಾಡೋ ಎಡಿಷನ್ ಬಿಡುಗಡೆಗೊಳಿಸಲಿದೆ ಬಿಎಂಡಬ್ಲ್ಯು

ಇನ್ನು ಅಲ್ಟ್ರಾ ಎಕ್ಸ್‌ಕ್ಲೂಸಿವ್ ಆದ ಈ ಬಿಎಂಡಬ್ಲ್ಯು ಎಸ್‍ಯುವಿಯಲ್ಲಿ 4.4-ಲೀಟರ್, ಟ್ವಿನ್-ಟರ್ಬೊ ವಿ 8 ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 530 ಬಿಹೆಚ್‍ಪಿ ಪವರ್ ಮತ್ತು 750 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಅಲ್ಟ್ರಾ ಎಕ್ಸ್‌ಕ್ಲೂಸಿವ್ ಎಕ್ಸ್7 ಡಾರ್ಕ್ ಶ್ಯಾಡೋ ಎಡಿಷನ್ ಬಿಡುಗಡೆಗೊಳಿಸಲಿದೆ ಬಿಎಂಡಬ್ಲ್ಯು

ಈ ಎಂಜಿನ್ ಅನ್ನು 8-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಇನ್ನು ಈ ಎಸ್‍ಯುವಿಯಲ್ಲಿ ಬಿಎಂಡಬ್ಲ್ಯು ಸ್ಪೋರ್ಟ್ಸ್ ಎಕ್ಸಾಸ್ಟ್ ಸಿಸ್ಟಂ ಅನ್ನು ಸಹ ಹೊಂದಿದೆ. ಅಲ್ಲದೇ ಈ ಎಸ್‍ಯುವಿಯಲ್ಲಿ ಹಲವಾರು ಸುಧಾರಿತ ತಂತ್ರಜ್ಙಾನಗಳನ್ನು ಹೊಂದಿರುತ್ತದೆ.

ಅಲ್ಟ್ರಾ ಎಕ್ಸ್‌ಕ್ಲೂಸಿವ್ ಎಕ್ಸ್7 ಡಾರ್ಕ್ ಶ್ಯಾಡೋ ಎಡಿಷನ್ ಬಿಡುಗಡೆಗೊಳಿಸಲಿದೆ ಬಿಎಂಡಬ್ಲ್ಯು

ಹೊಸ ಬಿಎಂಡಬ್ಲ್ಯು ಅಲ್ಟ್ರಾ ಎಕ್ಸ್‌ಕ್ಲೂಸಿವ್ ಎಕ್ಸ್7 ಡಾರ್ಕ್ ಶ್ಯಾಡೋ ಎಡಿಷನ್ ಎಸ್‍ಯುವಿಯು ಕೇವಲ 4.7 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಇನ್ನು ಈ ಎಸ್‍ಯುವಿಯು 250 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ. ಈ ಐಷಾರಾಮಿ ಬಿಎಂಡಬ್ಲ್ಯು ಎಸ್‍ಯುವಿಯು ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ.

Most Read Articles

Kannada
English summary
Ultra-exclusive Bmw X7 Dark Shadow Edition Launch Soon. Read In Kananda.
Story first published: Saturday, May 29, 2021, 20:11 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X