ಪರಿಸರ ಸ್ನೇಹಿ ಟಯರ್‌ಗಳೊಂದಿಗೆ ಬಿಡುಗಡೆಯಾಗಲಿವೆ ಬಿಎಂಡಬ್ಲ್ಯು ಕಾರುಗಳು

ಬಿಎಂಡಬ್ಲ್ಯು, ಬಾಳಿಕೆ ಬರುವ ಟಯರ್‌ಗಳೊಂದಿಗೆ ತನ್ನ ಕಾರುಗಳನ್ನು ಸಜ್ಜುಗೊಳಿಸಿದ ಮೊದಲ ಕಾರು ತಯಾರಕ ಕಂಪನಿಯಾಗಿದೆ. ಕಂಪನಿಯು ಟಯರ್‌ಗಳಲ್ಲಿ ನೈಸರ್ಗಿಕ ರಬ್ಬರ್ ಹಾಗೂ ರೇಯಾನ್ ಬಳಸುತ್ತಿದೆ.

ಪರಿಸರ ಸ್ನೇಹಿ ಟಯರ್‌ಗಳೊಂದಿಗೆ ಬಿಡುಗಡೆಯಾಗಲಿವೆ ಬಿಎಂಡಬ್ಲ್ಯು ಕಾರುಗಳು

ನೈಸರ್ಗಿಕ ರಬ್ಬರ್ ಹಾಗೂ ರೇಯಾನ್ ಟಯರ್‌ಗಳನ್ನು ಬಲಪಡಿಸಲು ಬಳಸುವ ಮರದ ಆಧಾರಿತ ವಸ್ತುಗಳಾಗಿವೆ. ಕಂಪನಿಯು 22 ಇಂಚಿನ ಟಯರ್‌ಗಳನ್ನು ಪಿರೆಲ್ಲಿಯಿಂದ ಪಡೆಯಲಿದೆ. ಈ ಟಯರ್‌ಗಳನ್ನು ಈ ವರ್ಷದ ಆಗಸ್ಟ್‌ನಿಂದ ಬಿಎಂಡಬ್ಲ್ಯು ಎಕ್ಸ್ 5 ಎಕ್ಸ್‌ಡ್ರೈವ್ 45 ಇ ಪ್ಲಗ್ ಇನ್ ಹೈಬ್ರಿಡ್‌ ಕಾರಿನಲ್ಲಿ ಬಳಸಲಾಗುತ್ತದೆ.

ಪರಿಸರ ಸ್ನೇಹಿ ಟಯರ್‌ಗಳೊಂದಿಗೆ ಬಿಡುಗಡೆಯಾಗಲಿವೆ ಬಿಎಂಡಬ್ಲ್ಯು ಕಾರುಗಳು

ಪ್ರಮಾಣೀಕೃತ ನೈಸರ್ಗಿಕ ರಬ್ಬರ್‌ನಿಂದ ಮಾಡಿದ ಟಯರ್‌ಗಳ ಬಳಕೆ ನಮ್ಮ ಉದ್ಯಮಕ್ಕೆ ಪ್ರಮುಖ ಕೊಡುಗೆಯಾಗಿದೆ ಎಂದು ಬಿಎಂಡಬ್ಲ್ಯು ಕಂಪನಿ ಹೇಳಿದೆ. ಈ ಮೂಲಕ ಹವಾಮಾನ ಬದಲಾವಣೆಯನ್ನು ಎದುರಿಸಲು ಜೀವವೈವಿಧ್ಯತೆ ಹಾಗೂ ಕಾಡುಗಳನ್ನು ಸಂರಕ್ಷಿಸಲು ನೆರವಾಗುತ್ತಿರುವುದಾಗಿ ಕಂಪನಿ ತಿಳಿಸಿದೆ.

MOST READ:ವಾಹನ ಖರೀದಿಸುವವರಿಗೆ, ಮಾರಾಟ ಮಾಡುವವರಿಗೆ ನೆರವಾಗುವ ಆರ್‌ಟಿಒ ಫಾರಂಗಳಿವು!

ಪರಿಸರ ಸ್ನೇಹಿ ಟಯರ್‌ಗಳೊಂದಿಗೆ ಬಿಡುಗಡೆಯಾಗಲಿವೆ ಬಿಎಂಡಬ್ಲ್ಯು ಕಾರುಗಳು

ಹೊಸ 22 ಇಂಚಿನ ಪಿ ಝೀರೋ ಟಯರ್‌ಗಳು ಈಗ ಫಾರೆಸ್ಟ್ ಸ್ಟೆವಾರ್ಡ್‌ಶಿಪ್ ಕೌನ್ಸಿಲ್ (ಎಫ್‌ಎಸ್‌ಸಿ) ಲೇಬಲ್ ಪಡೆದ ವಿಶ್ವದ ಮೊದಲ ಟಯರ್‌ಗಳಾಗಿವೆ. ಎಫ್‌ಎಸ್‌ಸಿ ಸ್ವತಂತ್ರ ಸಂಸ್ಥೆಯಾಗಿದ್ದು, ನೈಸರ್ಗಿಕ ರಬ್ಬರ್‌ನಿಂದ ತಯಾರಿಸಿದ ಉತ್ಪನ್ನಗಳಿಗೆ ಪ್ರಮಾಣೀಕರಣ ಮಾನದಂಡಗಳನ್ನು ಒದಗಿಸುತ್ತದೆ.

ಪರಿಸರ ಸ್ನೇಹಿ ಟಯರ್‌ಗಳೊಂದಿಗೆ ಬಿಡುಗಡೆಯಾಗಲಿವೆ ಬಿಎಂಡಬ್ಲ್ಯು ಕಾರುಗಳು

ಈ ಪ್ರಮಾಣೀಕರಣವನ್ನು ಪಡೆಯಲು ಪಿರೆಲ್ಲಿ ತನ್ನ ಅಮೆರಿಕಾದ ಘಟಕಗಳಲ್ಲಿ ಎಫ್‌ಎಸ್‌ಸಿ ಪ್ರಮಾಣೀಕೃತ ನೈಸರ್ಗಿಕ ರಬ್ಬರ್ ಹಾಗೂ ರೇಯಾನ್ ಬಳಸಿ ಟಯರ್‌ಗಳನ್ನು ಉತ್ಪಾದಿಸಿದೆ.

MOST READ:ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಿಗೂ ಮುನ್ನ ಪರಿಶೀಲಿಸಬೇಕಾದ ಸಂಗತಿಗಳಿವು

ಪರಿಸರ ಸ್ನೇಹಿ ಟಯರ್‌ಗಳೊಂದಿಗೆ ಬಿಡುಗಡೆಯಾಗಲಿವೆ ಬಿಎಂಡಬ್ಲ್ಯು ಕಾರುಗಳು

ಬಿಎಂಡಬ್ಲ್ಯುಗೆ ವಿತರಿಸಲಾಗಿರುವ ಟಯರ್‌ಗಳು ಆಟೋ ಮೊಬೈಲ್ ಕಂಪನಿಯ ಕಟ್ಟುನಿಟ್ಟಾದ ಕಾರ್ಯಕ್ಷಮತೆಯ ಅವಶ್ಯಕತೆಗಳನ್ನು ಪೂರೈಸುತ್ತವೆ. ಅದರಲ್ಲೂ ವಿಶೇಷವಾಗಿ ಕಡಿಮೆ ರೋಲಿಂಗ್ ರೆಸಿಸ್ಟೆನ್ಸ್ ಹಾಗೂ ಲೋ ಲೆವೆಲ್ ಶಬ್ದಗಳನ್ನು ಪೂರೈಸುತ್ತವೆ.

ಪರಿಸರ ಸ್ನೇಹಿ ಟಯರ್‌ಗಳೊಂದಿಗೆ ಬಿಡುಗಡೆಯಾಗಲಿವೆ ಬಿಎಂಡಬ್ಲ್ಯು ಕಾರುಗಳು

ಕಂಪನಿಯು ಹಲವು ವರ್ಷಗಳಿಂದ ಎಫ್‌ಎಸ್‌ಸಿಯೊಂದಿಗೆ ಕಾರ್ಯ ನಿರ್ವಹಿಸುತ್ತಿದೆ. ಬಿಎಂಡಬ್ಲ್ಯು ಐ 3ನಲ್ಲಿ ಎಫ್‌ಎಸ್‌ಸಿ ಪ್ರಮಾಣೀಕೃತ ಮರವನ್ನು ಬಳಸಲಾಗಿದೆ. ಇದನ್ನು ಮೊದಲು 2013ರಲ್ಲಿ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಯಿತು.

MOST READ:10 ಲಕ್ಷ ಬೆಲೆಯ ಕಾರಿಗೆ 20 ಲಕ್ಷದ ಬಿಲ್ ನೀಡಿದ ಸರ್ವೀಸ್ ಸೆಂಟರ್

ಪರಿಸರ ಸ್ನೇಹಿ ಟಯರ್‌ಗಳೊಂದಿಗೆ ಬಿಡುಗಡೆಯಾಗಲಿವೆ ಬಿಎಂಡಬ್ಲ್ಯು ಕಾರುಗಳು

ಮುಂಬರುವ ಬಿಎಂಡಬ್ಲ್ಯು ಐಎಕ್ಸ್‌ನಲ್ಲಿಯೂ ಪ್ರಮಾಣೀಕೃತ ಮರವನ್ನು ಬಳಸಲಾಗುತ್ತದೆ. ಬಿಎಂಡಬ್ಲ್ಯು ಎಕ್ಸ್ 5ನಲ್ಲಿ ಕಂಪನಿಯು ಬಿಎಂಡಬ್ಲ್ಯು ಎಕ್ಸ್ 5 ಎಕ್ಸ್‌ಡ್ರೈವ್ 45 ಇ ಕಾರಿಗಾಗಿ ಫುಲ್ ಸೈಕಲ್ ಸಿಒ 2 ಪ್ರಮಾಣೀಕರಣವನ್ನು ಪೂರ್ಣಗೊಳಿಸಿರುವುದಾಗಿ ತಿಳಿಸಿದೆ.

ಪರಿಸರ ಸ್ನೇಹಿ ಟಯರ್‌ಗಳೊಂದಿಗೆ ಬಿಡುಗಡೆಯಾಗಲಿವೆ ಬಿಎಂಡಬ್ಲ್ಯು ಕಾರುಗಳು

ಪ್ರತಿಯೊಂದು ದೊಡ್ಡ ಕಾರು ತಯಾರಕ ಕಂಪನಿಗಳು ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳೊಂದಿಗೆ ವಿಭಿನ್ನ ತಂತ್ರಜ್ಞಾನವನ್ನು ತರುತ್ತಿವೆ. ಈ ತಂತ್ರಜ್ಞಾನಗಳನ್ನು ಅನೇಕ ಸಣ್ಣ ಕಂಪನಿಗಳು ಸಹ ನಿಧಾನವಾಗಿ ಅಳವಡಿಸಿಕೊಳ್ಳುತ್ತಿವೆ.

Most Read Articles

Kannada
English summary
BMW to use sustainable eco friendly tyres in its cars. Read in Kannada.
Story first published: Tuesday, May 25, 2021, 20:52 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X